ಹೊಸ ಲುಕ್‌ನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಟೆಕ್ನೋ ಸ್ಪಾರ್ಕ್ 8 ಫೋನ್!
ಜನಪ್ರಿಯ ಟೆಕ್ನೋ ಕಂಪೆನಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಟೆಕ್ನೋ ಕಂಪನಿಯ ಸ್ಪಾರ್ಕ್ ಸರಣಿಯ ಕೆಲವು ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆ ಪೈಕಿ ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್ ಫೋನ್ ಸಹ ಒಂದಾಗಿದೆ. ಈ ಫೋನ್ ಅಗ್ಗದ ಪ್ರೈಸ್ ಟ್ಯಾಗ್ ಹೊಂದಿದ್ದು, ಆಕರ್ಷಕ ಫೀಚರ್ಸ್ ಗಳನ್ನು ಒಳಗೊಂಡಿದೆ. ಈ ಫೋನ್ ಹೊಸ ಲುಕ್ ನೊಂದಿಗೆ ಈಗ ರೀ ಎಂಟ್ರಿ ಕೊಟ್ಟಿದೆ.

ಹೌದು, ಟೆಕ್ನೋ ಕಂಪೆನಿಯು ನೂತನವಾಗಿ ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್‌ಫೋನಿನ 3GB RAM ಆವೃತ್ತಿಯ/ ವೇರಿಯಂಟ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದು ಮೀಡಿಯಾ ಟೆಕ್ G25 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಗೇಮಿಂಗ್‌ಗೆ ಪೂರಕ ಅನಿಸಲಿದೆ. ಈ ಹಿಂದಿನ 2GB RAM ವೇರಿಯಂಟ್ ಫೋನ್ ಮೀಡಿಯಾ ಟೆಕ್ ಹಿಲಿಯೋ A25 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ 8 ಹೊಸ ಆವೃತ್ತಿಯ ಇತರೆ ಫೀಚರ್ಸ್ ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ
ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್ ಫೋನ್ 6.52 ಹೆಚ್‌ಡಿ + ಡಾಟ್ ನಾಚ್ ಡಿಸ್‌ಪ್ಲೇ ಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120-Hz ಟಚ್ ರೆಸ್ಪಾನ್ಸ್ ರೇಟ್ ಅನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 88.6% ಬಾಡಿ ಟು ಅನುಪಾತವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 269 PPI ಸ್ಕ್ರೀನ್ ಪಿಕ್ಸೆಲ್ ಸಾಂದ್ರತೆ ಮತ್ತು 480 ನಿಟ್ಸ್ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ ಡಿಜಿಟಲ್ ಜೂಮ್, ಆಟೋ ಫ್ಲಾಶ್, ಫೇಸ್ ಡಿಟೆಕ್ಷನ್ ಅನ್ನು ಹೊಂದಿದೆ.

ಪ್ರೊಸೆಸರ್ ಪವರ್ ಯಾವುದು?
ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್ ಫೋನ್ ಮೀಡಿಯಾ ಟೆಕ್ G25 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಗೋ ಬೆಂಬಲ ದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 64 GB ಹಾಗೂ 3GB RAM + 32GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 256 GB ವರೆಗೆ ಸಂಗ್ರಹ ಸಾಮರ್ಥ್ಯ ವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆನ್ಸಾರ್ ಮತ್ತು ವಿನ್ಯಾಸ
ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್ ಫೋನ್ 16 ಮೆಗಾ ಪಿಕ್ಸೆಲ್ AI ಡ್ಯುಯಲ್ ಹೈ-ರೆಸಲ್ಯೂಶನ್ ಕ್ಯಾಮೆರಾ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಕ್ಯಾಮೆರಾ ಡ್ಯುಯೆಲ್ ಫ್ಲ್ಯಾಷ್ ಉತ್ತಮ ಗುಣಮಟ್ಟದ, ಸ್ಮರಣೀಯ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಈ ಕ್ಯಾಮೆರಾ ಫೀಚರ್ಸ್‌ಗಳಲ್ಲಿ 1080p ಟೈಮ್-ಲ್ಯಾಪ್ಸ್ ಫೋಟೋಗ್ರಫಿ, ಸ್ಮೈಲ್ ಕ್ಯಾಪ್ಚರ್, ಪನೋರಮಾ, ಪೋರ್ಟ್ರೇಟ್ ಮೋಡ್, 120fps ಸ್ಲೋ ಮೋಷನ್ ಪ್ರಯೋಜನ ಸಿಗಲಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, GPS, ಮೈಕ್ರೋ-USB, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ. ಆನ್‌ಬೋರ್ಡ್ ನಲ್ಲಿರುವ ಸಂವೇದಕಗಳು ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಸಾಮೀಪ್ಯ ಸಂವೇದಕ ವನ್ನು ಒಳಗೊಂಡಿವೆ. ಹಾಗೆಯೇ ಹಿಂಭಾಗ ದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್‌ಫೋನ್ ಹೊಸ ಆವೃತ್ತಿ ಯಲ್ಲಿ ಬಿಡುಗಡೆ ಆಗಿದೆ. ಹೊಸ 3GB RAM + 32 GB ಸ್ಟೋರೇಜ್ ವೇರಿಯಂಟ್ ಬೆಲೆಯು 9,299ರೂ. ಆಗಿದೆ. ಹಾಗೆಯೇ 2GB RAM + 64 GB ಸ್ಟೋರೇಜ್ ವೇರಿಯಂಟ್ ದರದವು 7,999ರೂ. ಆಗಿದೆ. ಅಟ್ಲಾಂಟಿಕ್ ಬ್ಲೂ, ಐರಿಸ್ ಪರ್ಪಲ್ ಮತ್ತು ಟರ್ಕೋಯಿಸ್ ಸಯಾನ್ ಬಣ್ಣಗಳ ಆಯ್ಕೆ ಯಲ್ಲಿ ಲಭ್ಯ ಆಗಲಿದೆ.


Click it and Unblock the Notifications








