Home
ಸುದ್ದಿಜಾಲ

ಅಧಿಕ RAM ಸೌಲಭ್ಯದ ಈ ಮೊಬೈಲ್‌ ಈಗ ಕಡಿಮೆ ಬೆಲೆಗೆ ಸಿಗುತ್ತೆ!

ಹೊಸ ಮೊಬೈಲ್‌ ಖರೀದಿಸುವಾಗ ಗ್ರಾಹಕರು ಆನ್‌ಲೈನ್‌ ಹಾಗೂ ಆಫ್‌ಲೈನ್‌ ತಾಣಗಳಲ್ಲಿ ಅತ್ಯುತ್ತಮ ಆಫರ್‌ಗಳ ಇದೆಯಾ ಎಂದು ತಿಳಿಯುತ್ತಾರೆ. ಮುಖ್ಯವಾಗಿ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೊಬೈಲ್‌ಗಳಿಗೆ ಬೆಸ್ಟ್‌ ನೀಡಿರುತ್ತವೆ. ಈ ನಿಟ್ಟಿನಲ್ಲಿ ಇದೀಗ ಅಮೆಜಾನ್ ಪ್ಲಾಟ್‌ಫಾರ್ಮ್ ನೋಕಿಯಾ ಸಂಸ್ಥೆಯ ಟೆಕ್ನೋ ಸ್ಪಾರ್ಕ್‌ 9 ಫೋನ್ ಬಿಗ್ ರಿಯಾಯಿತಿ ತಿಳಿಸಿದೆ.

ಹೌದು, ಜನಪ್ರಿಯ ಅಮೆಜಾನ್ ತಾಣದಲ್ಲಿ ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ ಶೇ. 39% ರಷ್ಟು ರಿಯಾಯಿತಿ ಪಡೆದಿದ್ದು, 6,999ರೂ. ಬೆಲೆಯಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಇತರೆ ಬ್ಯಾಂಕ್ ಹಾಗೂ ಇಎಮ್‌ಐ ಕೊಡುಗೆಗಳು ಸಹ ದೊರೆಯುತ್ತವೆ. ಎಲ್ಲ ಆಫರ್‌ ಮೂಲಕ ಈ ಫೋನ್‌ ಅನ್ನು 6,299ರೂ. ಗಳಿಗೆ ಖರೀದಿಸಲು ಅವಕಾಶ ಇದೆ.

ಅಧಿಕ RAM ಸೌಲಭ್ಯದ ಈ ಮೊಬೈಲ್‌ ಈಗ ಕಡಿಮೆ ಬೆಲೆಗೆ ಸಿಗುತ್ತೆ!

ಅಂದಹಾಗೆ ಈ ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಅಲ್ಲದೇ 5GB RAM ವರೆಗೆ ವರ್ಚುವಲ್ RAM ಸೌಲಭ್ಯ ಸಹ ಸಿಗುತ್ತದೆ. ಹಾಗಾದರೇ ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಹೀಗಿದೆ

ಟೆಕ್ನೋ ಸ್ಪಾರ್ಕ್‌ 9 ಫೋನ್ 6.6 ಇಂಚಿನ ಡಿಸ್‌ಪ್ಲೇಯನ್ನು ಪಡೆದಿದ್ದು, ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು, 266 ppi ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿದೆ. ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಪಡೆದಿದ್ದು, ವೀಡಿಯೋ ವೀಕ್ಷಣೆಗೆ ಹಾಗೂ ವೀಡಿಯೋ ಕರೆಗಳಿಗೆ ಸೂಕ್ತ ಮಾದರಿಯನ್ನು ಒಳಗೊಂಡಿದೆ.

ಅಧಿಕ RAM ಸೌಲಭ್ಯದ ಈ ಮೊಬೈಲ್‌ ಈಗ ಕಡಿಮೆ ಬೆಲೆಗೆ ಸಿಗುತ್ತೆ!

ಪ್ರೊಸೆಸರ್‌ ಪವರ್ ಹೇಗಿದೆ

ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ ಪವರ್ ಪಡೆದಿದ್ದು, ಪೂರಕವಾಗಿ ಆಂಡ್ರಾಯ್ಡ್ 12 ಸಪೋರ್ಟ್‌ ನೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ 4GB RAM + 64GB, 6GB RAM + 128 GB ಹಾಗೂ 3GB RAM + 64GB ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯ. ಇದರಲ್ಲಿ ವರ್ಚುವಲ್‌ RAM ಫೀಚರ್ಸ್‌ ಮೂಲಕ 5GB RAM ವರೆಗೆ RAM ವಿಸ್ತರಿಸಬಹುದು.

ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್ ಮಾಹಿತಿ

ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಪಡೆದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಮತ್ತು AI ಕ್ಯಾಮೆರಾವನ್ನು ಒಳಗೊಂಡಿದೆ. ಈ ಕ್ಯಾಮೆರಾ LED ಫ್ಲ್ಯಾಷ್ ಸಹ ಪಡೆದಿದೆ. ಇದರ ಜೊತೆಗೆ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾ ಸಹ ಈ ಫೋನ್‌ ನೀಡಲಾಗಿದೆ.

ಅಧಿಕ RAM ಸೌಲಭ್ಯದ ಈ ಮೊಬೈಲ್‌ ಈಗ ಕಡಿಮೆ ಬೆಲೆಗೆ ಸಿಗುತ್ತೆ!

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ

ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಕೂಡಾ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಮತ್ತು ಬ್ಲೂಟೂತ್ 5.0. GPS, GNSS, ಗೆಲಿಲಿಯೋ, ಬೀಡೌ ಮತ್ತು 4G LTE ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ DTS ಬೆಂಬಲಿಸುವ ಸ್ಪೀಕರ್‌ಗಳನ್ನು ಒಳಗೊಂಡಿದೆ. ಜೊತೆಗೆ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌, ಆಕ್ಸಿಲೆರೊಮೀಟರ್‌ ಅನ್ನು ಸಹ ಇದು ಪಡೆದುಕೊಂಡಿದೆ.

Best Mobiles in India

English summary
TECNO Spark 9 available at heavy discount on amazon. check offer price, specifications and all other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+