ಟೆಕ್ನೋ ಸಂಸ್ಥೆಯ ಈ ಮೊಬೈಲ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್!
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಟೆಕ್ನೋ ಮೊಬೈಲ್ ಕಂಪನಿಯು ಅಗ್ಗದ ಸರಣಿಯಲ್ಲಿ ಸ್ಮಾರ್ಟ್‌ಫೋನ್ ಪರಿಚಯಿಸಿ ಜನಪ್ರಿಯತೆ ಪಡೆದಿದೆ. ಆ ಪೈಕಿ ಟೆಕ್ನೋ ಸಂಸ್ಥೆಯ ಟೆಕ್ನೋ ಸ್ಪಾರ್ಕ್ 9 ಮೊಬೈಲ್ ಸಹ ಸೇರಿದೆ. ಈ ಫೋನ್ ಇದೀಗ ಅಮೆಜಾನ್ ತಾಣದಲ್ಲಿ ಬಿಗ್ ರಿಯಾಯಿತಿ ಸೌಲಭ್ಯ ಪಡೆದಿದ್ದು, ಗ್ರಾಹಕರ ಖುಷಿ ಆಗುವಂತೆ ಮಾಡಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಟೆಕ್ನೋ ಸ್ಪಾರ್ಕ್ 9 ಫೋನ್ ಶೇ. 45% ರಷ್ಟು ನೇರ ರಿಯಾಯಿತಿ ಹೊಂದಿದೆ. ಈ ಮೊಬೈಲ್ (4GB + 6BGB) ಬೆಲೆ 11,499ರೂ. ಆಗಿದ್ದು, ಸದ್ಯ 6,299ರೂ. ಗಳ ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ನೋ ಕಾಸ್ಟ್ ಇಎಮ್‌ಐ ಅವಕಾಶವು ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸಹ ದೊರೆಯುತ್ತದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ 9 ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಟೆಕ್ನೋ ಸ್ಪಾರ್ಕ್ 9 - ಫೀಚರ್ಸ್ ಹೀಗಿವೆ
ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್‌ಫೋನ್ 6.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು, 266 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಈ ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ಶೈಲಿಯನ್ನು ಪಡೆದಿದ್ದು, ವೀಡಿಯೋ ವೀಕ್ಷಣೆಗೆ ಹಾಗೂ ವೀಡಿಯೋ ಕರೆಗಳಿಗೆ ಸೂಕ್ತ ಮಾದರಿಯನ್ನು ಪಡೆದುಕೊಂಡಿದೆ.

ಟೆಕ್ನೋ ಸ್ಪಾರ್ಕ್ 9 ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G37 SoC ಪ್ರೊಸೆಸರ್ ಪವರ್ ಪಡೆದಿದ್ದು, ಪೂರಕವಾಗಿ ಆಂಡ್ರಾಯ್ಡ್ 12 ಸಪೋರ್ಟ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM + 64GB, 6GB RAM + 128 GB ಹಾಗೂ 3GB RAM + 64GB ಸ್ಟೋರೇಜ್ ಸಾಮರ್ಥ್ಯದ ಮೂರು ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ನೀವು ವರ್ಚುವಲ್ RAM ಫೀಚರ್ಸ್ ಮೂಲಕ 5GB RAM ವರೆಗೆ RAM ವಿಸ್ತರಿಸಬಹುದು.
ಟೆಕ್ನೋ ಸ್ಪಾರ್ಕ್ 9 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಮತ್ತು AI ಕ್ಯಾಮೆರಾವನ್ನು ಒಳಗೊಂಡಿದೆ. ಈ ಕ್ಯಾಮೆರಾ LED ಫ್ಲ್ಯಾಷ್ ಸಹ ಪಡೆದಿದೆ. ಇದರ ಜೊತೆಗೆ ಪೂರಕವಾಗದ ಸೆಲ್ಫಿ ಕ್ಯಾಮೆರಾ ಸಹ ಈ ಫೋನ್ ಪಡೆದಿದೆ.

ಟೆಕ್ನೋ ಸ್ಪಾರ್ಕ್ 9 ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಮತ್ತು ಬ್ಲೂಟೂತ್ 5.0. GPS, GNSS, ಗೆಲಿಲಿಯೋ, ಬೀಡೌ ಮತ್ತು 4G LTE ಅನ್ನು ಪಡೆದಿದೆ. ಇದಲ್ಲದೆ ಈ ಮೊಬೈಲ್ DTS ಬೆಂಬಲಿಸುವ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದರ ಜೊತೆಗೆ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಆಕ್ಸಿಲೆರೊಮೀಟರ್ ಅನ್ನು ಸಹ ಇದು ಪಡೆದುಕೊಂಡಿದೆ.
ದೇಶೀಯ ಮಾರುಕಟ್ಟೆಯಲ್ಲಿ ಟೆಕ್ನೋ ಸ್ಪಾರ್ಕ್ 9 ಮೊಬೈಲ್ 4GB + 64GB ಸ್ಟೋರೇಜ್ ವೇರಿಯಂಟ್ ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಈ ಫೋನ್ ಅನ್ನು ನೀವು ಇನ್ಫಿನಿಟಿ ಬ್ಲಾಕ್ ಮತ್ತು ಸ್ಕೈ ಮಿರರ್ ಬಣ್ಣಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ.


Click it and Unblock the Notifications