Home
ಸುದ್ದಿಜಾಲ

ಈ ಎಂಟ್ರಿ ಲೆವೆಲ್‌ ಮೊಬೈಲ್‌ಗೆ ಈಗ ಬಿಗ್ ಡಿಸ್ಕೌಂಟ್‌!..ಅಗ್ಗದ ಬೆಲೆಗೆ ಲಭ್ಯ!

ಟೆಕ್ನೋ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಅಗ್ಗದ ಮೊಬೈಲ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಅದಾಗ್ಯೂ, ಟೆಕ್ನೋ ಸಂಸ್ಥೆಯು ಗ್ರಾಹಕರಿಗೆ ಭಿನ್ನ ಶ್ರೇಣಿಯ ಫೋನ್‌ಗಳ ಆಯ್ಕೆ ನೀಡಿದ್ದು, ಅವುಗಳಲ್ಲಿ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ವಿಭಾಗದಲ್ಲಿ ಅಟ್ರ್ಯಾಕ್ಟ್‌ ಮಾಡಿದೆ. ಇದೀಗ ಈ ಮೊಬೈಲ್‌ ಸಖತ್‌ ಡಿಸ್ಕೌಂಟ್‌ ಪಡೆದಿದ್ದು, ಗ್ರಾಹಕರು ಅಚ್ಚರಿಯಲ್ಲಿ ನೋಡುವಂತೆ ಆಗಿದೆ.

ಹೌದು, ಇ ಕಾಮರ್ಸ್‌ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 35% ರಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಫೋನ್‌ 4GB RAM + 64GB ಸ್ಟೋರೇಜ್‌ ವೇರಿಯಂಟ್‌ 11,499ರೂ. ಬೆಲೆ ಪಡೆದಿದ್ದು, ಇದೀಗ ಕೊಡುಗೆಯಲ್ಲಿ 7,499ರೂ. ಗಳಿಗೆ ಲಭ್ಯ. ಅಲ್ಲದೇ ಇತರೆ ಆಫರ್‌ ಮೂಲಕ ಗ್ರಾಹಕರು ಈ ಫೋನ್‌ ಅನ್ನು 6,749ರೂ. ಗಳ ವಿಶೇಷ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಈ ಎಂಟ್ರಿ ಲೆವೆಲ್‌ ಮೊಬೈಲ್‌ಗೆ ಈಗ ಬಿಗ್ ಡಿಸ್ಕೌಂಟ್‌!..ಅಗ್ಗದ ಬೆಲೆಗೆ ಲಭ್ಯ!

ಅಂದಹಾಗೆ ಟೆಕ್ನೋ ಸ್ಪಾರ್ಕ್‌ 9 ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಹೆಚ್ಚುವರಿಯಾಗಿ 7GB ವರ್ಚುವಲ್ RAM ಆಯ್ಕೆ ಸಹ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಆಗಿ ಕಾಣಿಸಿಕೊಂಡಿದೆ. ಹಾಗೆಯೇ ಈ ಮೊಬೈಲ್‌ನ ಬ್ಯಾಟರಿ 5,000 mAh ಸಾಮರ್ಥ್ಯದ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ನ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಸ್ಪಾರ್ಕ್‌ 9 ಡಿಸ್‌ಪ್ಲೇ ಮಾಹಿತಿ : ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ 6.6 ಇಂಚಿನ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದಿದೆ. ಅಲ್ಲದೇ ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 266 ppi ಪಿಕ್ಸೆಲ್‌ ಸಾಂದ್ರತೆಯನ್ನು ಪಡೆದಿದೆ. ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಪಡೆದಿದೆ.

ಟೆಕ್ನೋ ಸ್ಪಾರ್ಕ್‌ 9 ಪ್ರೊಸೆಸರ್‌ ಕಾರ್ಯವೈಖರಿ : ಟೆಕ್ನೋ ಸ್ಪಾರ್ಕ್‌ 9 ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ ಪವರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ 4GB RAM + 64GB, 6GB RAM + 128GB ಹಾಗೂ 3GB RAM + 64GB ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಅಲ್ಲದೇ ವರ್ಚುವಲ್‌ RAM ಫೀಚರ್ಸ್‌ ಪಡೆದಿದೆ.

ಟೆಕ್ನೋ ಸ್ಪಾರ್ಕ್‌ 9 ಕ್ಯಾಮೆರಾ ಸೆನ್ಸಾರ್ ವಿಶೇಷ : ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ನಲ್ಲಿದೆ ಮತ್ತು AI ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ ಈ ಕ್ಯಾಮೆರಾ LED ಫ್ಲ್ಯಾಶ್ ಅನ್ನು ಪಡೆದಿದೆ. ತನ್ನ ವರ್ಗದಲ್ಲೆ ಉತ್ತಮ ಸೆಲ್ಫಿ ಕ್ಯಾಮೆರಾ ಸಹ ಪಡೆದಿದೆ.

ಟೆಕ್ನೋ ಸ್ಪಾರ್ಕ್‌ 9 ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ : ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದ್ದು, ಉತ್ತಮ ಚಾರ್ಜಿಂಗ್ ಸೌಲಬ್ಯ ಪಡೆದಿದೆ. ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಮತ್ತು ಬ್ಲೂಟೂತ್ 5.0. GPS, GNSS, ಗೆಲಿಲಿಯೋ, ಬೀಡೌ ಮತ್ತು 4G LTE ಆಯ್ಕೆ ಪಡೆದಿದೆ.

ಟೆಕ್ನೋ ಸ್ಪಾರ್ಕ್‌ 9 ಸ್ಟೋರೇಜ್‌ ಮತ್ತು ಬಣ್ಣದ ಆಯ್ಕೆ : ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ 4GB + 64GB ಸ್ಟೋರೇಜ್‌ ಹಾಗೂ 6GB RAM + 128GB ಸ್ಟೋರೇಜ್‌ ಆಯ್ಕೆಗಳನ್ನು ಹೊಂದಿದೆ. ಈ ಫೋನ್‌ ಅನ್ನು ನೀವು ಇನ್ಫಿನಿಟಿ ಬ್ಲಾಕ್ ಮತ್ತು ಸ್ಕೈ ಮಿರರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Tecno Spark 9 received Huge price cut on Amazon. price, offer, specification and all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+