Home
ಸುದ್ದಿಜಾಲ

ಇದೇ ಸೆಪ್ಟೆಂಬರ್ 3 ರಂದು Tecno Spark Go 1 ಸೇಲ್‌!..ವಾವ್‌ ಎನಿಸುವ ಆಫರ್‌ ಬೆಲೆ!

ಟೆಕ್ನೋ (Tecno) ಕಂಪನಿಯ ಹೊಸ ಟೆಕ್ನೋ ಸ್ಪಾರ್ಕ್ ಗೋ 1 (Tecno Spark Go 1) ಮೊಬೈಲ್‌ ಈಗಾಗಲೇ ಅಗ್ಗದ ಬೆಲೆಯ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಫೋನ್ ಇದೇ ಸೆಪ್ಟೆಂಬರ್ 3 ರಂದು ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಸೇಲ್‌ ಪ್ರಾರಂಭ ಮಾಡಲಿದೆ. ಈ ಫೋನ್‌ ಲೈಮ್ ಗ್ರೀನ್, ಗ್ಲಿಟರ್ ವೈಟ್ ಮತ್ತು ಸ್ಟಾರ್ಟ್ರೈಲ್ ಬ್ಲ್ಯಾಕ್‌ ಕಲರ್‌ ಆಯ್ಕೆ ಅನ್ನು ಪಡೆದುಕೊಂಡಿದೆ.

ಹೌದು, ಟೆಕ್ನೋ ಸಂಸ್ಥೆಯ ಟೆಕ್ನೋ ಸ್ಪಾರ್ಕ್ ಗೋ 1 (Tecno Spark Go 1) ಸ್ಮಾರ್ಟ್‌ಫೋನ್‌ ಸೆಪ್ಟೆಂಬರ್ 3 ರಂದು ಅಮೆಜಾನ್‌ ಇ ಕಾಮರ್ಸ್‌ ಮೂಲಕ ಮಾರಾಟ ಶುರು ಮಾಡಲಿದೆ. ಈ ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಅಲ್ಲದೇ ಇದರ ಪ್ರಾಥಮಿಕ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಹಾಗೆಯೇ ಈ ಫೋನಿನ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ.

ಇದೇ ಸೆಪ್ಟೆಂಬರ್ 3 ರಂದು Tecno Spark Go 1 ಸೇಲ್‌!..ವಾವ್‌ ಎನಿಸುವ ಆಫರ್‌ ಬೆಲೆ

ಇನ್ನು ಈ ಮೊಬೈಲ್‌ 4GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಜೊತೆಗೆ 15W ಟರ್ಬೋಪವರ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನಿನ ಪ್ರಾರಂಭಿಕ ವೇರಿಯಂಟ್‌ ಬೆಲೆಯು 7299 ರೂ. ಗಳು ಪ್ರೈಸ್‌ಟ್ಯಾಗ್‌ ಪಡೆದಿದೆ. ಇನ್ನುಳಿದಂತೆ ಟೆಕ್ನೋ ಸ್ಪಾರ್ಕ್ ಗೋ 1 ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಟೆಕ್ನೋ ಸ್ಪಾರ್ಕ್ ಗೋ 1 - ಫೀಚರ್ಸ್‌

ಟೆಕ್ನೋ ಸ್ಪಾರ್ಕ್ ಗೋ 1 ಮೊಬೈಲ್‌ 6.67 ಇಂಚಿನ IPS LCD ಡಿಸ್ಪ್ಲೇ ಹೊಂದಿದೆ. ಪಂಚ್-ಹೋಲ್ ಕಟೌಟ್ ವಿನ್ಯಾಸವು ಇದರ ಮೇಲೆ ಲಭ್ಯವಿದೆ. ಈ ಡಿಸ್ಲ್ಪೇಯು HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ನೀಡುತ್ತದೆ. ಇದು ಮಾತ್ರವಲ್ಲದೆ, ಸಾಧನವು ಡೈನಾಮಿಕ್ ಪೋರ್ಟ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ನೋಟಿಫಿಕೇಶನ್, ಚಾರ್ಜಿಂಗ್ ಸ್ಥಿತಿ ಮತ್ತು ಇತರ ಪ್ರಮುಖ ಮಾಹಿತಿಯನ್ನು ನೋಡಬಹುದು.

ಟೆಕ್ನೋ ಸ್ಪಾರ್ಕ್ ಗೋ 1 ಮೊಬೈಲ್‌ ಯುನಿಸೊಕ್ T615 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಅನ್ನು ನೀಡಿದೆ. ಅಗ್ಗದ ಬಜೆಟ್‌ನಲ್ಲಿ ಇದು ಉತ್ತಮವೆಂದು ಹೇಳಲಾಗುತ್ತಿದೆ. ಇದರೊಂದಿಗೆ ಮಲ್ಟಿ ಟಾಸ್ಕಿಂಗ್ ಸೇರಿದಂತೆ ಗೇಮಿಂಗ್ ಅನ್ನು ಸಹ ಪಡೆಯಬಹುದು.

ಟೆಕ್ನೋ ಸ್ಪಾರ್ಕ್ ಗೋ 1 ಮೊಬೈಲ್‌ 4GB RAM + 4GB ವರ್ಚುವಲ್ RAM ಮತ್ತು 128GB ವರೆಗಿನ ಆಂತರೀಕ ಸ್ಟೋರೇಜ್ ಸೌಲಭ್ಯವನ್ನು ಒದಗಿಸಿದೆ. ನೀವು, ಕಡಿಮೆ ಬೆಲೆಯಲ್ಲಿ 8GB RAM ಅನ್ನು ಬಳಸುವ ಅವಕಾಶವನ್ನು ಪಡೆಯಬಹುದು. ಇದರೊಂದಿಗೆ, ಫೋಟೋಗಳು ಮತ್ತು ವಿಡಿಯೋಗಳು ಸೇರಿದಂತೆ ಫೈಲ್‌ಗಳನ್ನು ಸಂಗ್ರಹಿಸಲು ಮತ್ತು ಅಪ್ಲಿಕೇಶನ್‌ಗಳಿಗೆ ಉತ್ತಮ ಪ್ರಮಾಣದ ಮೆಮೊರಿಯನ್ನು ಒದಗಿಸಲಾಗಿದೆ.

ಟೆಕ್ನೋ ಸ್ಪಾರ್ಕ್ ಗೋ 1 ಮೊಬೈಲ್‌ ಹಿಂಭಾಗದ ಪ್ಯಾನೆಲ್‌ನಲ್ಲಿ 1 LED ಫ್ಲ್ಯಾಷ್‌ನೊಂದಿಗೆ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಟೆಕ್ನೋ ಸ್ಪಾರ್ಕ್ ಗೋ 1 ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದನ್ನು ಚಾರ್ಜ್ ಮಾಡಲು 15W ಚಾರ್ಜಿಂಗ್ ಸಪೋರ್ಟ್‌ ಸಹ ಒದಗಿಸಲಾಗಿದೆ. ಟೈಪ್ ಸಿ-ಪೋರ್ಟ್ ಮೂಲಕ ಬಳಕೆದಾರರು ಫೋನ್ ಅನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತದೆ.

ಟೆಕ್ನೋ ಸ್ಪಾರ್ಕ್ ಗೋ 1 ಮೊಬೈಲ್‌ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ನೀರು ಮತ್ತು ಧೂಳು ನಿರೋಧಕ IP54 ರೇಟಿಂಗ್‌ನಂತಹ ಹಲವು ಫೀಚರ್ಸ್‌ಗಳೊಂದಿಗೆ ಬರುತ್ತದೆ. ಸುಗಮ ಕಾರ್ಯಕ್ಷಮತೆಯೊಂದಿಗೆ ಮೊಬೈಲ್‌ ಅನ್ನು 4 ವರ್ಷಗಳವರೆಗೆ ಬಳಸಬಹುದು ಎಂದು ಕಂಪನಿ ಹೇಳಿದೆ.

Best Mobiles in India

English summary
Tecno Spark Go 1 first sale set for September 3. Check out specifications, Offer Price and more here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+