Home
ಸುದ್ದಿಜಾಲ

ಅಗ್ಗದ ಟೆಕ್ನೋ ಸ್ಪಾರ್ಕ್‌ ಗೋ 2020 ಸ್ಮಾರ್ಟ್‌ಫೋನ್‌ ಬಿಡುಗಡೆ!

ಹಾಂಗ್‌ಕಾಂಗ್ ಮೂಲದ 'ಟೆಕ್ನೋ' ಸಂಸ್ಥೆಯು ಈಗಾಗಲೇ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಫೋನ್ ಸರಣಿಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಇದೀಗ ಸಂಸ್ಥೆಯು ಟೆಕ್ನೋ ಸ್ಪಾರ್ಕ್‌ ಗೋ 2020 ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ಸಹ ಅಗ್ಗದ ಬೆಲೆಯನ್ನು ಪಡೆದಿದ್ದು, ಹಾಗೆಯೇ 5,000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ.

ಟೆಕ್ನೋ

ಹೌದು, ಟೆಕ್ನೋ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಈಗ ಸ್ಪಾರ್ಕ್‌ ಗೋ 2020 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೊ A20 ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಪಡೆದಿದೆ. ಇದರೊಂದಿಗೆ ಆಂಡ್ರಾಯ್ಡ್‌ 10 ಓಎಸ್‌ ಸಫೋರ್ಟ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಟೆಕ್ನೋ ಸ್ಪಾರ್ಕ್‌ ಗೋ 2020 ಸ್ಮಾರ್ಟ್‌ಫೋನ್‌ 6.52-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಪ್ಯಾನೆಲ್‌ ಟು ಬಾಡಿ ರೇಶಿಯೋ 89.5% ರಷ್ಟಿದ್ದು ಉತ್ತಮ ಬಾಡಿ ವಿನ್ಯಾಸ ಹೊಂದಿದೆ. ಅಲ್ಲದೆ ಡಿಸ್‌ಪ್ಲೇ ಟು ಬಾಡಿ 20: 9 ಅನುಪಾತವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇಯು 480 nits ಬ್ರೈಟ್‌ನೆಶ್‌ ಅನ್ನ ಹೊಂದಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಟೆಕ್ನೋ ಸ್ಪಾರ್ಕ್‌ ಗೋ 2020 ಸ್ಮಾರ್ಟ್‌ಫೋನ್‌ 2GHz ಮೀಡಿಯಾಟೆಕ್ ಹೆಲಿಯೊ ಎ 22 ಕ್ವಾಡ್-ಕೋರ್ SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ 2GB RAM ಮತ್ತು 32GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 256GB ವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಟೆಕ್ನೋ ಸ್ಪಾರ್ಕ್‌ ಗೋ 2020 ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಕ್ಯಾಮೆರಾ 8 ಮೆಗಾಫಿಕ್ಸೆಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಇನ್ನೊಂದು ಕ್ಯಾಮೆರಾ ಬೇಸಿಕ್ ಸೆನ್ಸಾರ್ ನಲ್ಲಿದೆ. ಜೊತೆಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ಫೋಟೊ ಬ್ರೈಟ್‌ನೆಸ್‌, ಪೊಟ್ರೈಟ್‌ ಮೋಡ್‌, ಹಾಗೂ ಎಡಿಟಿಂಗ್ ಆಯ್ಕೆಗಳನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಟೆಕ್ನೋ ಸ್ಪಾರ್ಕ್‌ ಗೋ 2020 ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಪ್ಯಾಕ್ಆಪ್‌ ಅನ್ನ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ಎಲ್ ಟಿಇ, ವೈ-ಫೈ 802.11 ಬಿ / ಜಿ / ಎನ್, ಮತ್ತು ಬ್ಲೂಟೂತ್ 4.2, ಕನೆಕ್ಟಿವಿಟಿ ಆಯ್ಕೆಗಳನ್ನ ಹೊಂದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಟೆಕ್ನೋ ಸ್ಪಾರ್ಕ್‌ ಗೋ 2020 ಸ್ಮಾರ್ಟ್‌ಫೋನ್‌ 6,499ರೂ. ಗಳಾಗಿದೆ. ಈ ಫೋನ್ ಇದೇ ಸೆಪ್ಟೆಂಬರ್ 7ರಂದು ಫ್ಲಿಪ್‌ಕಾರ್ಟ್‌ ತಾಣದಲ್ಲಿ ಸೇಲ್ ಆರಂಭಿಸಲಿದೆ.

Best Mobiles in India

English summary
Tecno Spark Go 2020 will be available on Flipkart starting September 7 (from 12 noon) for Rs 6,499.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+