ಇಂದು ಟೆಕ್ನೋ ಸ್ಪಾರ್ಕ್ ಗೋ 2024 ಫೋನ್ ಸೇಲ್!..ಅಗ್ಗದ ಬೆಲೆಗೆ ಲಭ್ಯ!
ಬಜೆಟ್ ದರದ ಸ್ಮಾರ್ಟ್‌ಫೋನ್‌ಗಳ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಟೆಕ್ನೋ ಕಂಪನಿಯು ಹಲವು ಎಂಟ್ರಿ ಲೆವೆಲ್ ಮೊಬೈಲ್ ಆಯ್ಕೆ ಹೊಂದಿದೆ. ಅವುಗಳಲ್ಲಿ ಒಂದಾಗಿರುವ ಟೆಕ್ನೋ ಸ್ಪಾರ್ಕ್ ಗೋ (2024) ಈಗಾಗಲೇ ಬೆಲೆ ಹಾಗೂ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್ ಇಂದು (ಫೆಬ್ರವರಿ 9 ರಂದು) ಅಮೆಜಾನ್ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ.
ಹೌದು, ಟೆಕ್ನೋ ಕಂಪನಿಯ ಇತ್ತೀಚಿನ ಟೆಕ್ನೋ ಸ್ಪಾರ್ಕ್ ಗೋ (2024) ಮೊಬೈಲ್ ಇಂದು ಮಾರಾಟ ಶುರು ಮಾಡಲಿದ. ಅಂದಹಾಗೆ ಈ ಮೊಬೈಲ್ 8GB RAM + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, ಈ ಫೋನಿನ ಆರಂಭಿಕ ಬೆಲೆ 6,799ರೂ. ಆಗಿದೆ. ಅಮೆಜಾನ್ ತಾಣದಲ್ಲಿ ಕೆಲವು ರಿಯಾಯಿತಿ ಆಯ್ಕೆಗಳು ಸಹ ಲಭ್ಯ ಆಗಲಿವೆ.

ಇನ್ನು ಈ ಎಂಟ್ರಿ ಲೆವೆಲ್ ಮೊಬೈಲ್ ಪ್ರಾಥಮಿಕ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ 5,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಕೂಡಾ ಒಳಗೊಂಡಿದೆ. ಈ ಮೊಬೈಲ್ ಗ್ರ್ಯಾವಿಟಿ ಬ್ಲ್ಯಾಕ್ ಹಾಗೂ ಮಿಸ್ಟರಿ ವೈಟ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಟೆಕ್ನೋ ಸ್ಪಾರ್ಕ್ ಗೋ (2024) ಫೀಚರ್ಸ್ ಹೀಗಿವೆ
ಈ ಮೊಬೈಲ್ ಫೋನ್ 6.56 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇ 720 x 1,612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಸಪೋರ್ಟ್ ಇದ್ದು, ಪಾಂಡ ಸ್ಕ್ರೀನ್ ಪ್ರೊಟೆಕ್ಷನ್ ಪಡೆದಿದೆ. ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಕಾರ್ಯ

ಟೆಕ್ನೋ ಸಂಸ್ಥೆಯ ಈ ಮೊಬೈಲ್ ಆಕ್ಟಾ ಕೋರ್ ಯುನಿಸೊಕ್ T606 SoC ಪ್ರೊಸೆಸರ್ ಪವರ್ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್ 13 (Go Edition) ಆಧಾರಿತ HiOS 13 ನಲ್ಲಿ ಕೆಲಸ ನಿರ್ವಹಿಸುತ್ತದೆ. 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಹೊಂದಿದೆ. ಇದಲ್ಲದೆ ಬಳಕೆದಾರರಿಗೆ ಬಳಕೆಯಾಗದ ಸಂಗ್ರಹಣೆಯನ್ನು ವರ್ಚುವಲ್ RAM ಆಗಿ ಬಳಸಿಕೊಳ್ಳಲು ಅನುಮತಿಸುತ್ತದೆ. ಇದರೊಂದಿಗೆ ಮೆಮೊರಿ ಕಾರ್ಡ್ ಸಪೋರ್ಟ್‌ನೊಂದಿಗೆ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ.
ಟೆಕ್ನೋ ಸ್ಪಾರ್ಕ್ ಗೋ (2024) ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಮತ್ತು ಡ್ಯುಯಲ್ ಫ್ಲ್ಯಾಷ್ ಜೊತೆಗೆ AI ಲೆನ್ಸ್ ಅನ್ನು ಪಡೆದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.
ಟೆಕ್ನೋ ಸ್ಪಾರ್ಕ್ ಗೋ (2024) ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಒಳಗೊಂಡಿದ್ದು, ಇದು 10W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಈ ಫೋನ್ ಹೊಂದಿದೆ.
ಇನ್ನು ಮೊಬೈಲ್ ಬಯೋಮೆಟ್ರಿಕ್ ಅನ್‌ಲಾಕಿಂಗ್‌ಗಾಗಿ ಫಿಂಗರ್‌ಪ್ರಿಂಟ್ ಸೆನ್ಸಾರ್, ಹಾಗೆಯೇ DTS ಸೌಂಡ್ ತಂತ್ರಜ್ಞಾನದ ಸೌಲಭ್ಯದ ಜೊತೆಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳ ಆಯ್ಕೆ ಪಡೆದಿದೆ. ಅಲ್ಲದೇ ಇದು ಗ್ರಾವಿಟಿ ಬ್ಲಾಕ್ ಮತ್ತು ಮಿಸ್ಟರಿ ವೈಟ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ದೊರೆಯುತ್ತದೆ.


Click it and Unblock the Notifications








