ಅಗ್ಗದ ಬೆಲೆಗೆ ಟೆಕ್ನೋ 'ಸ್ಪಾರ್ಕ್‌ ಗೋ' ಮತ್ತು 'ಸ್ಪಾರ್ಕ್‌ 4 ಏರ್‌' ಲಾಂಚ್!

|

ದೇಶಿಯ ಮೊಬೈಲ್ ಮಾರುಕಟ್ಟೆ ವಿಸ್ತಾರವಾಗಿ ಬೆಳೆಯುತ್ತಿದ್ದು, ಅಗ್ಗದ ಬೆಲೆಯಿಂದ ದುಬಾರಿ ಬೆಲೆಯವರೆಗಿನ ಎಲ್ಲ ಫೋನ್‌ಗಳಿಗೂ ಬೇಡಿಕೆ ಇದ್ದೆ ಇದೆ. ಈ ನಿಟ್ಟಿನಲ್ಲಿ ಹಲವು ಕಂಪನಿಗಳು ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಆ ಪೈಕಿ ಹಾಂಗ್‌ಕಾಂಗ್ ಮೂಲದ 'ಟೆಕ್ನೋ' ಸಂಸ್ಥೆಯು ಸಹ ಒಂದಾಗಿದ್ದು, ಈ ಸಂಸ್ಥೆಯು ಇದೀಗ ಎರಡು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಸುದ್ದಿಯಲ್ಲಿದೆ.

ಅಗ್ಗದ ಬೆಲೆಗೆ ಟೆಕ್ನೋ 'ಸ್ಪಾರ್ಕ್‌ ಗೋ' ಮತ್ತು 'ಸ್ಪಾರ್ಕ್‌ 4 ಏರ್‌' ಲಾಂಚ್!

ಹೌದು, ಟೆಕ್ನೋ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಈಗ 'ಸ್ಪಾರ್ಕ್‌ ಗೋ' ಮತ್ತು 'ಸ್ಪಾರ್ಕ್‌ 4 ಏರ್‌' ಹೆಸರಿನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಫೇಸ್‌ ಅನ್‌ಲಾಕ್‌ ಮತ್ತು ಆಯಂಟಿ ಆಯಿಲ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಫೀಚರ್ಸ್‌ ಹೊಂದಿದ್ದು, ಈ ಫೋನ್‌ ಖರೀದಿಸುವ ಗ್ರಾಹಕರಿಗೆ ಆರಂಭಿಕ ಕೊಡುಗೆಯಾಗಿ 700ರೂ. ಮೌಲ್ಯದ ಇಯರ್‌ಫೋನ್ ಲಭ್ಯವಾಗಲಿದೆ. ಹಾಗಾದರೇ 'ಸ್ಪಾರ್ಕ್‌ ಗೋ' ಮತ್ತು 'ಸ್ಪಾರ್ಕ್‌ 4 ಏರ್‌' ಸ್ಮಾರ್ಟ್‌ಫೋನ್‌ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಜಿಯೋ ಗಿಗಾಫೈಬರ್ ಸೆಟ್‌ಅಪ್‌ನ ಬಾಕ್ಸ್‌ ಫಸ್ಟ್‌ ಲುಕ್ ಲೀಕ್!ಓದಿರಿ : ಜಿಯೋ ಗಿಗಾಫೈಬರ್ ಸೆಟ್‌ಅಪ್‌ನ ಬಾಕ್ಸ್‌ ಫಸ್ಟ್‌ ಲುಕ್ ಲೀಕ್!

ಸ್ಪಾರ್ಕ್‌ ಗೋ ಫೀಚರ್ಸ್‌

ಸ್ಪಾರ್ಕ್‌ ಗೋ ಫೀಚರ್ಸ್‌

ಟೆಕ್ನೋ ಸ್ಪಾರ್ಕ್‌ ಗೋ 6.1 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಮೀಡಿಯಾ ಟೆಕ್ ಹಿಲಿಯೊ A22 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. HiOS 5.0 ಆಧಾರಿತ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲ ಸಹ ಇದ್ದು, ಜೊತೆಗೆ 2GB RAM ಮತ್ತು 16GB ಆಂತರಿಕ ಸ್ಟೋರೇಜ್ ಪಡೆದಿದೆ. ಹಿಂಬದಿಯಲ್ಲಿ 8ಎಂಪಿ ಮತ್ತು ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾ ನೀಡಲಾಗಿದ್ದು, 3,000mAh ಬ್ಯಾಟರಿ ಪವರ್‌ ಹೊಂದಿದೆ.

ಸ್ಪಾರ್ಕ್‌ 4 ಏರ್‌ ಫೀಚರ್ಸ್‌

ಸ್ಪಾರ್ಕ್‌ 4 ಏರ್‌ ಫೀಚರ್ಸ್‌

ಟೆಕ್ನೋ ಸ್ಪಾರ್ಕ್‌ 4 ಏರ್‌ ಸಹ 6.1 ಇಂಚಿನ ಹೆಚ್‌ಡಿ ಪ್ಲಸ್‌ Dot ನಾಚ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಮೀಡಿಯಾ ಟೆಕ್ ಹಿಲಿಯೊ A22 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. HiOS 5.0 ಆಧಾರಿತ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲ ಸಹ ಇದ್ದು, ಜೊತೆಗೆ 3GB RAM ಮತ್ತು 32GB ಆಂತರಿಕ ಸ್ಟೋರೇಜ್ ಪಡೆದಿದೆ. ಹಿಂಬದಿಯಲ್ಲಿ 13ಎಂಪಿ +VGA ಕ್ಯಾಮೆರಾ ನೀಡಿದ್ದು, ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾ ನೀಡಲಾಗಿದೆ. 3,000mAh ಬ್ಯಾಟರಿ ಶಕ್ತಿಯನ್ನು ಪಡೆದಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಟೆಕ್ನೋ ಕಂಪನಿಯ ಸ್ಪಾರ್ಕ್‌ ಸರಣಿಯ ಈ ಎರಡು ಸ್ಮಾರ್ಟ್‌ಫೋನ್‌ಗಳು ಅಗ್ಗದ ಪ್ರೈಸ್‌ಟ್ಯಾಗ್‌ ಹೊಂದಿದ್ದರೂ ಸಹ ಅಗತ್ಯ ಫೀಚರ್ಸ್‌ಗಳನ್ನು ಹೊಂದಿವೆ. ಈ ಎರಡು ಫೋನಿಗಳು ಫೇಸ್‌ ಅನ್‌ಲಾಕ್‌ ಫೀಚರ್‌ ಪಡೆದಿದ್ದು, ಅದರೊಂದಿಗೆ ಆಯಂಟಿ ಆಯಿಲ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಪಡೆದಿವೆ. AI ಆಧಾರಿತ ಕ್ಯಾಮೆರಾ, ಬ್ಯೂಟಿ ಮೋಡ್‌, AR ಸ್ಟಿಕ್ಕರ್‌, ಫೀಚರ್ಸ್‌ಗಳನ್ನು ಒಳಗೊಂಡಿವೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಸ್ಪಾರ್ಕ್‌ ಗೋ' ಮತ್ತು 'ಸ್ಪಾರ್ಕ್‌ 4 ಏರ್‌ ಸ್ಮಾರ್ಟ್‌ಫೋನ್‌ಗಳು 3,000mAh ಬ್ಯಾಟರಿ ಬಲವನ್ನು ಪಡೆದುಕೊಂಡಿದ್ದು, ದೀರ್ಘಕಾಲ ಬಾಳಿಕೆ ಒದಗಿಸಲಿವೆ. ನಿರಂತರ 15 ಗಂಟೆ ಮ್ಯೂಸಿಕ್ ಪ್ಲೇ ಒದಗಿಸುವ ಸಾಮರ್ಥ್ಯ ಪಡೆದಿದೆ. ಮೈಕ್ರೋ ಯುಎಸ್‌ಬಿ ಪೋರ್ಟ್‌ ಆಯ್ಕೆಯನ್ನು ಹೊಂದಿದ್ದು, ಎರಡು ಫೋನ್‌ಗಳು ನೆಬೂಲ್ಲಾ ಬ್ಲೂ ಮತ್ತು ರಾಯಲ್‌ ಪರ್ಪಲ್ ಬಣ್ಣಗಳ ಆಯ್ಕೆಗಳನ್ನು ಹೊಂದಿದ್ದು, ಹಾಗೂ ಆಂಡ್ರಾಯ್ಡ್‌ 9 ಪೈ ಆಪರೇಟಿಂಗ್ ಸಿಸ್ಟಮ್‌ನ ಸಪೋರ್ಟ್‌ ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಟೆಕ್ನೋ ಕಂಪನಿಯ 'ಸ್ಪಾರ್ಕ್‌ ಗೋ' ಸ್ಮಾರ್ಟ್‌ಫೋನ್‌ 5,499ರೂ. ಬೆಲೆಯನ್ನು ಹೊಂದಿದ್ದು, ಹಾಗೆಯೇ 6,999ರೂ.ಗಳಿಗೆ 'ಸ್ಪಾರ್ಕ್‌ 4 ಏರ್‌' ಸ್ಮಾರ್ಟ್‌ಫೋನ್‌ ಲಭ್ಯವಾಗಲಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಆಫ್‌ಲೈನ್‌ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯ ಇವೆ. ಆರಂಭಕ ಕೊಡುಗೆಯಾಗಿ 799ರೂ.ಮೌಲ್ಯದ ಬ್ಲೂಟೂತ್ ಇಯರ್‌ಫೋನ್ ಉಚಿತವಾಗಿ ಗ್ರಾಹಕರಿಗೆ ದೊರೆಯಲಿದೆ.

ಓದಿರಿ : ರಿಲೀಸ್‌ ಆಯ್ತು 'ರೆಡ್ಮಿ'ಯ ಹೊಸ 70 ಇಂಚಿನ ಸ್ಮಾರ್ಟ್‌ಟಿವಿ!ಓದಿರಿ : ರಿಲೀಸ್‌ ಆಯ್ತು 'ರೆಡ್ಮಿ'ಯ ಹೊಸ 70 ಇಂಚಿನ ಸ್ಮಾರ್ಟ್‌ಟಿವಿ!

Best Mobiles in India

Read more about:
English summary
Tecno Spark Go, this Spark 4 Air both has MediaTek Helio A22 quad-core chipset. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X