ಅಗ್ಗದ ಟೆಕ್ನೋ ಸ್ಪಾರ್ಕ್ ಪವರ್ 2 ಸ್ಮಾರ್ಟ್‌ಫೋನ್ ಲಾಂಚ್!..ಜಬರ್ದಸ್ತ್ ಬ್ಯಾಟರಿ!
ಟೆಕ್ನೋ ಕಂಪನಿಯು ಈಗಾಗಲೇ ಹಲವು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ನೆಲೆಯೂರಿದೆ. ಟೆಕ್ನೋ ಸಂಸ್ಥೆಯು ಇದೀಗ ದೇಶಿಯ ಮಾರುಕಟ್ಟೆಗೆ ಟೆಕ್ನೋ ಸ್ಪಾರ್ಕ್ ಪವರ್ 2 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಹೊಂದಿರುವ ಜೊತೆಗೆ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಅನ್ನು ಸಹ ಒಳಗೊಂಡಿದೆ.

ಹೌದು, ಟೆಕ್ನೋ ಕಂಪನಿಯು ಭಾರತೀಯ ಮೊಬೈಲ್ ಮಾರುಕಟ್ಟೆಗೆ ಹೊಸದಾಗಿ 'ಟೆಕ್ನೋ ಸ್ಪಾರ್ಕ್ ಪವರ್ 2' ಹೆಸರಿನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಐಸ್ ಜೇಡೈಟ್ ಮತ್ತು ಮಿಸ್ಟಿ ಗ್ರೇ ಭಿನ್ನ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಈ ಫೋನಿನ ಬೆಲೆಯು 9,999ರೂ.ಗಳಾಗಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ ಪವರ್ 2 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿದೆ
ಟೆಕ್ನೋ ಸ್ಪಾರ್ಕ್ ಪವರ್ 2 ಸ್ಮಾರ್ಟ್‌ಫೋನ್ 720×1640 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ವಾಟರ್ ಡ್ರಾಪ್ ನಾಚ್ ಮಾದರಿಯ ವಿನ್ಯಾಸವನ್ನು ಹೊಂದಿದೆ. ಸ್ಕ್ರೀನ್ ಗಾತ್ರ ವಿಶಾಲವಾಗಿದ್ದು, ವಿಡಿಯೊ ವೀಕ್ಷಣೆಗೆ ಹಾಗೂ ಗೇಮಿಂಗ್‌ಗೆ ಪೂರಕವಾದ ರಚನೆಯನ್ನು ಒಳಗೊಂಡಿದೆ. ಪ್ರಖರತೆಯು ಉತ್ತಮವಾಗಿದೆ.

ಪ್ರೊಸೆಸರ್ ಸಾಮರ್ಥ್ಯ
ಟೆಕ್ನೋ ಸ್ಪಾರ್ಕ್ ಪವರ್ 2 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P22 ಆಕ್ಟಾ ಕೋರ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ಬೆಂಬಲವಾಗಿ ಇತ್ತೀಚಿನ ಆಂಡ್ರಾಯ್ಡ್ ಓಎಸ್ ಸಹ ನೀಡಲಾಗಿದೆ. 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯವಾಗಿ 256GB ವರೆಗೂ ವಿಸ್ತರಿಸಬಹುದಾದ ಅವಕಾಶ ನೀಡಲಾಗಿದೆ.

ಕ್ಯಾಮೆರಾ ಹೇಗಿದೆ
ಟೆಕ್ನೋ ಸ್ಪಾರ್ಕ್ ಪವರ್ 2 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ರಿಯರ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 16ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 5ಎಂಪಿ ಸೆನ್ಸಾರ್ ಹೊಂದಿದ್ದು, ಇನ್ನು ತೃತ್ತೀಯ 2ಎಂಪಿ ಸೆನ್ಸಾರ್ ಹಾಗೂ ನಾಲ್ಕನೇ ಕ್ಯಾಮೆರಾವು AI ಲೆನ್ಸ್ ಸಾಮರ್ಥ್ಯದಲ್ಲಿ ಗುರುತಿಸಿಕೊಂಡಿದೆ. ಸೆಲ್ಫಿಗಾಗಿ ಸಹ 16ಎಂಪಿ ಕ್ಯಾಮೆರಾ ಸೆನ್ಸಾರ್ ನೀಡಲಾಗಿದೆ.

ಬ್ಯಾಟರಿ ಲೈಫ್
ಟೆಕ್ನೋ ಸ್ಪಾರ್ಕ್ ಪವರ್ 2 ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ ಅಂದರೇ ಅದು ಬ್ಯಾಟರಿ ಆಗಿದೆ. ಈ ಫೋನ್ 6,000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಜೊತೆಗೆ ಬ್ಲೂಟೂತ್, ವೈಫೈ, ಕನೆಕ್ಟಿವಿಟಿಗೆ ಅಗತ್ಯ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ
ಟೆಕ್ನೋ ಸ್ಪಾರ್ಕ್ ಪವರ್ 2 ಸ್ಮಾರ್ಟ್‌ಫೋನ್ 4GB RAM ಮತ್ತು 64GB ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಭಾರತದಲ್ಲಿ ಇದರ ಬೆಲೆಯು 9,999ರೂ.ಗಳಾಗಿದೆ. ಇನ್ನು ಈ ಫೋನ್ ಇದೇ ಜೂನ್ 23ರಂದು ಫಸ್ಟ್ ಸೇಲ್ ಆರಂಭಿಸಲಿದೆ. ಐಸ್ ಜೇಡೈಟ್ ಮತ್ತು ಮಿಸ್ಟಿ ಗ್ರೇ ಭಿನ್ನ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.


Click it and Unblock the Notifications