Home
ಸುದ್ದಿಜಾಲ

AI teddy Bears: ಟೆಡ್ಡಿ ಬೇರ್‌ಗಳು ಶೀಘ್ರದಲ್ಲೇ ಮಾತನಾಡುತ್ತವೆ, ಮಕ್ಕಳು ಮಲಗಲು ಕಥೆ ಹೇಳುತ್ತವೆ!

ಮನೆಯಲ್ಲಿ ವಯಸ್ಕರು ತಮ್ಮ ಚಿಕ್ಕ ಮಕ್ಕಳಿಗೆ ಮಾತು ಕಲಿಸಲು ಅಥವಾ ಅವರನ್ನು ಚಟುವಟಿಕೆಯಿಂದ ಇರಿಸಲು ಕಥೆಗಳನ್ನು ಹೇಳುವುದು, ಚಂದಾಮಾಮನನ್ನು ತೋರಿಸಿ ಊಟ ಮಾಡಿಸುವ ಕೆಲಸ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳ ಜ್ಞಾನ ವೃದ್ಧಿಯಾಗುವುದಲ್ಲದೇ, ಅವರ ಯೋಚನಾ ಶಕ್ತಿಯೂ ಹೆಚ್ಚುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು. ಆದರೆ, ಬದಲಾದ ಕಾಲಘಟ್ಟದಲ್ಲಿ ಮಕ್ಕಳನ್ನು ಬೆಳೆಸುವ ಆಲೋಚನೆ ಸಹ ಆಧುನಿಕತೆಯಿಂದ ಕೂಡಿದೆ.

ಹೌದು, ಗ್ರಾಮೀಣ ಭಾಗದಲ್ಲಿ ಚಿಕ್ಕ ಮಕ್ಕಳು ಮನೆಯಲ್ಲಿದ್ದರೆ ಅಜ್ಜಿ, ತಾತ ಅವರಿಗೆ ಮಾತು ಕಲಿಸುವ ಉದ್ದೇಶದಿಂದ ಕಥೆ ಹೇಳುತ್ತಿದ್ದರು. ಆದರೀಗ ಲೈಫ್ ಸ್ಟೈಲ್ ಬದಲಾದಂತೆ ಮಕ್ಕಳು ಸ್ಮಾರ್ಟ್ ಫೋನ್ ನೊಂದಿಗೆ ಆಟವಾಡುತ್ತಿದ್ದಾರೆ. ಈ ನಡುವೆ ಅತ್ಯಾಧುನಿಕ ತಂತ್ರಜ್ಞಾನವಾಗಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮಕ್ಕಳಿಗೆ ನೇರವಾಗಿ ಕಥೆಗಳನ್ನು ಹೇಳಿ ಪದಗಳನ್ನು ಕಲಿಸಲಿದೆ. ಅದೂ ಸಹ ಮಕ್ಕಳಿಗೆ ಇಷ್ಟವಾದ ಟೆಡ್ಡಿ ಬೇರ್‌ ಮೂಲಕ. ಹಾಗಿದ್ರೆ, ಏನಿದು ಹೊಸ ಅನ್ವೇಷಣೆ?, ಮಕ್ಕಳಿಗೆ ಇದು ಹೇಗೆ ಪದಗಳನ್ನು ಕಲಿಸಿಕೊಡುತ್ತದೆ ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

ಟೆಡ್ಡಿ ಬೇರ್‌ಗಳು ಶೀಘ್ರದಲ್ಲೇ ಮಾತನಾಡುತ್ತವೆ, ಮಕ್ಕಳು ಮಲಗಲು ಕಥೆ ಹೇಳುತ್ತವೆ!

ಚಾಟ್‌ ಜಿಪಿಟಿ ಬಳಕೆ : ಓಪನ್‌ಎಐ ಚಾಟ್‌ಜಿಪಿಟಿಯನ್ನು ಜಗತ್ತನ್ನು ಪರಿಚಯಿಸಿದಾಗಿನಿಂದ ಮಾನವ ರೀತಿಯಲ್ಲಿ ಪ್ರತಿಕ್ರಿಯಿಸುವ ಎಐ ಚಾಟ್‌ಬಾಟ್ ಹೆಚ್ಚಾಗುತ್ತಿವೆ. ಹಲವಾರು ಜನರು ಇದನ್ನು ಅನೇಕ ಕಾರ್ಯಗಳಿಗಾಗಿ ಬಳಕೆ ಮಾಡುತ್ತಿದ್ದಾರೆ. ಅಂದರೆ ಸಂಗೀತ ಸಂಯೋಜನೆ ಮಾಡುವುದರಿಂದ ಹಿಡಿದು ಕವನ ಬರೆಯಲು ಅಥವಾ ಪ್ರೇಮ ಪತ್ರಗಳನ್ನು ಬರೆಯಲು ಸಹ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಒಂದೆಡೆ ಮೆಚ್ಚುಗೆ ವ್ಯಕ್ತವಾದರೆ ಇನ್ನೂ ಕೆಲವೆಡೆ ಇದರ ವಿರುದ್ಧದ ಮಾತುಗಳು ಕೇಳಿಬರುತ್ತಿವೆ.

ಮಕ್ಕಳಿಗೆ ಸಹಾಯಕವಾಗಲಿದೆ ಈ ಎಐ: ಭವಿಷ್ಯದಲ್ಲಿ ಮಕ್ಕಳು ಸಹ ಚಿಕ್ಕ ವಯಸ್ಸಿನಿಂದಲೇ ಎಐ ಚಾಟ್‌ಬಾಟ್‌ನೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಬಹುದು ಎನ್ನಲಾಗಿದೆ. ಅದರಂತೆ 2028ರ ವೇಳೆಗೆ ಚಾಟ್‌ಜಿಪಿಟಿಯಂತಹ ತಂತ್ರಜ್ಞಾನವನ್ನು ಆಟಿಕೆ ಉದ್ಯಮದಲ್ಲಿ ಅಳವಡಿಸಬಹುದಾಗಿದ್ದು, ಸ್ಮಾರ್ಟ್ ಆಟಿಕೆಗಳು ಮಕ್ಕಳೊಂದಿಗೆ ಸಂವಹನ ನಡೆಸಲು ಎಐ ಅನ್ನು ಬಳಕೆ ಮಾಡುತ್ತವೆ ಎಂದು ಎಲೆಕ್ಟ್ರಾನಿಕ್ ಆಟಿಕೆ ತಯಾರಕ ಸಂಸ್ಥೆಯಾದ ವಿಟೆಕ್ ಹೋಲ್ಡಿಂಗ್ಸ್‌ನ ಸಹ-ಸಂಸ್ಥಾಪಕ ಅಲನ್ ವಾಂಗ್ ಹೇಳಿದ್ದಾರೆ.

ಭವಿಷ್ಯದಲ್ಲಿ AI-ಚಾಲಿತ ಟೆಡ್ಡಿ ಬೇರ್‌ಗಳು: ಬ್ಯುಸಿನೆಸ್ ಇನ್‌ಸೈಡರ್ ವರದಿಯ ಪ್ರಕಾರ ಮಕ್ಕಳಿಗಾಗಿ ಕಸ್ಟಮೈಸ್ ಮಾಡಿದ ಕಥೆಗಳನ್ನು ಓದಲು ಎಐ ಅನ್ನು ಬಳಸಬಹುದು.ಇದರರ್ಥ ಎಐ ಚಾಲಿತ ಆಟಿಕೆಗಳು ನಿಮ್ಮ ಮಕ್ಕಳಿಗೆ ಕಥೆಗಳನ್ನು ಹೇಳುತ್ತವೆ. ಅಷ್ಟು ಮಾತ್ರವಲ್ಲದೆ ಪ್ರತಿ ಮಗುವಿನ ಆದ್ಯತೆಗೆ ಅನುಗುಣವಾಗಿ ಕಥೆಗಳನ್ನು ಹೇಳುವ ಸಾಮರ್ಥ್ಯ ಪಡೆಯುತ್ತವೆ ಎಂದು ಉಲ್ಲೇಖಿಸಿದೆ.ಇದರೊಂದಿಗೆ ಈ ಸ್ಮಾರ್ಟ್ ಆಟಿಕೆಗಳು ಮಕ್ಕಳ ಬಗ್ಗೆ ಅವರ ಶಾಲೆ, ಅವರ ಸ್ನೇಹಿತರ ಹೆಸರುಗಳು ಇತ್ಯಾದಿಗಳ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಸಹ ನೀಡುತ್ತವಂತೆ.

ಮಗುವಿನ ಹೆಸರನ್ನು ಮಾತ್ರವಲ್ಲದೆ ಮಗುವಿನ ದೈನಂದಿನ ಚಟುವಟಿಕೆಗಳನ್ನು ಇದರಲ್ಲಿ ಆಡ್‌ ಮಾಡಬಹುದು. ಜೊತೆಗೆ ಯಾವ ಶಾಲೆಗೆ ಹೋಗುತ್ತಾರೆ, ಸ್ನೇಹಿತರು ಯಾರು ಎಂಬೆಲ್ಲಾ ಮಾಹಿತಿಯನ್ನು ನೀಡಲಿದ್ದು, ಈ ಮೂಲಕ ಅದು ಉತ್ತಮವಾದ ಕಥೆಯನ್ನು ಹೇಳುತ್ತದೆ. ಜೊತೆಗೆ ಉತ್ತಮ ಸ್ನೇಹಿತನಂತೆ ಸಂವಹನ ನಡೆಸುತ್ತದೆ ಎಂದು ಎಐ ಆಧಾರಿತ ಗೊಂಬೆಗಳ ಬಗ್ಗೆ ವಾಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಟೆಡ್ಡಿ ಬೇರ್‌ಗಳು ಶೀಘ್ರದಲ್ಲೇ ಮಾತನಾಡುತ್ತವೆ, ಮಕ್ಕಳು ಮಲಗಲು ಕಥೆ ಹೇಳುತ್ತವೆ!

ವಾಸ್ತವವಾಗಿ ಎಐ ಚಾಟ್‌ಬಾಟ್‌ಗಳು ಮನುಷ್ಯರಿಗಿಂತ ಉತ್ತಮವಾಗಿ ಕಥೆಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಆದರೆ, ಮಕ್ಕಳು ಮೊಬೈಲ್‌ ಅನ್ನು ನೋಡದೆ ಇರುವಂತೆ ಮಾಡಲು ಇದು ಸಹಾಯಕವಾಗಿವೆ. ಇದರೊಂದಿಗೆಹೆತ್ತವರು ದೂರವಿರುವಾಗ ಈ ಎಐ ಆಧಾರಿತ ಆಟಿಕೆಗಳು ಮಕ್ಕಳಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸುತ್ತವೆ. ಒಂದೆಡೆ ಈ ಎಐ ಆಧಾರಿತ ಟೂಲ್ಸ್‌ ಜನಪ್ರಿಯವಾಗುತ್ತಿದಂತೆ ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಅಂತರ ಹೆಚ್ಚಾಗುವುದನ್ನು ಸಹ ಯಾರೂ ಅಲ್ಲಗಳೆಯುವಂತಿಲ್ಲ.

Best Mobiles in India

English summary
In rural areas, if small children were at home, grandmothers, grandfathers used to tell them stories with the purpose of teaching them speech. However, as the lifestyle has changed, children are playing with smart phones. Meanwhile, chat GPT based teddy bears will tell stories to children.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+