ಟೆಲಿಕಾಂ ಕಂಪೆನಿಗಳಿಗೆ 58 ಲಕ್ಷ ದಂಡ ವಿಧಿಸಿದ ಸರ್ಕಾರ!..ಕಾರಣ?

|

ಕಾಲ್‌ಡ್ರಾಪ್ ಮೂಲಕ ಜನರ ಸುಲಿಗೆ ಮಾಡುತ್ತಿದ್ದ ಟೆಲಿಕಾಂ ಕಂಪೆನಿಗಳಿಗನ್ನು ನಿಯಂತ್ರಣದಲ್ಲಿಡಲು ಕಂಪೆನಿಗಳು ನೀಡುವ ಫೋನ್ ಕರೆಯ ಗುಣಮಟ್ಟನ್ನು ಅಳೆಯುತ್ತಿರುವ ಸರ್ಕಾರ ಟೆಲಿಕಾಂ ಕಂಪೆನಿಗಳಿಗೆ ದಂಡವಿಧಿಸಿದೆ. ದೂರ ಸಂಪರ್ಕ ಸೇವಾ ಸಂಸ್ಥೆಗಳಾದ ಬಿಎಸ್​ಎನ್​ಎಲ್​, ಐಡಿಯಾ, ಏರ್​ಟೆಲ್​ ಸೇರಿದಂತೆ ಬಹುತೇಕ ಕಂಪನಿ ಕಂಪೆನಿಗಳು ದಂಡ ಪಾವತಿಸಿವೆ.

ರಾಜ್ಯಸಭೆಯಲ್ಲಿ ಇತ್ತೀಚಿಗೆ ನಡೆದ ಅಧಿವೇಶನದ ಪ್ರಶ್ನೋತ್ತರ ವೇಳೆ ಮಾತನಾಡಿದ ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ದೂರ ಸಂಪರ್ಕ ಸೇವಾ ಸಂಸ್ಥೆಗಳಾದ ಬಿಎಸ್​ಎನ್​ಎಲ್​, ಐಡಿಯಾ, ಏರ್​ಟೆಲ್​ ಸೇರಿದಂತೆ ಇತರ ಕಂಪನಿಗಳಿಂದ ಕಾಲ್​ ಡ್ರಾಪ್​ಗೊಳಿಸಿದ್ದಕ್ಕೆ ಒಟ್ಟು ₹ 58 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಟೆಲಿಕಾಂ ಕಂಪೆನಿಗಳಿಗೆ 58 ಲಕ್ಷ ದಂಡ ವಿಧಿಸಿದ ಸರ್ಕಾರ!..ಕಾರಣ?

ಜನವರಿ 2018 ರಿಂದ ಜೂನ್ 2018 ರವರೆಗಿನ ಒಟ್ಟು ಆರು ತಿಂಗಳ ಅವಧಿಯಲ್ಲಿ ಈ ದಂಡ ವಿಧಿಸಲಾಗಿದೆ ಎಂದು ಮನೋಜ್ ಸಿನ್ಹಾ ಅವರು ಮಾಹಿತಿ ನೀಡಿದ್ದು, 2018 ನೇ ವರ್ಷದ ಸಪ್ಟೆಂಬರ್ ತಿಂಗಳ ವೇಳೆಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ವರದಿಯ ಪ್ರಕಾರ ಟೆಲಿಕಾಂ ಸಂಸ್ಥೆಗಳಿಗೆ ಕಾಲ್​ ಡ್ರಾಪ್ ದಂಡವನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ವರದಿಯ ಪ್ರಕಾರ, ಕಾಲ್ ಡ್ರಾಪ್​ ಸಂಬಂಧಿಸಿದಂತೆ ಸರ್ಕಾರಿ ನಿಯಮಿತ ಬಿಎಸ್ಎನ್‌ಎಲ್‌ ಸಂಸ್ಥೆಗೆ 3 ಲಕ್ಷ ಕಾಲ್‌ ಡ್ರಾಪ್‌ ದಂಡವನ್ನು ವಿಧಿಸಲಾಗಿದ್ದರೆ, ಅದೇ ಅವಧಿಯಲ್ಲಿ ಐಡಿಯಾ ಸಂಸ್ಥೆಗೆ 10.5 ಲಕ್ಷ ರೂ.ದಂಡ ಹಾಕಲಾಗಿದೆ. ಇನ್ನು ಟಾಟಾಗೆ ₹ 22.5 ಲಕ್ಷ ಹಾಗೂ ಟೆಲಿನಾರ್ ಕಂಪೆನಿಗಳಿಗೆ ₹ 6 ಲಕ್ಷ ದಂಡ ವಿಧಿಸಲಾಗಿದೆ.

ಟೆಲಿಕಾಂ ಕಂಪೆನಿಗಳಿಗೆ 58 ಲಕ್ಷ ದಂಡ ವಿಧಿಸಿದ ಸರ್ಕಾರ!..ಕಾರಣ?

ಕಾಲ್ ಡ್ರಾಪ್​ ಸಂಬಂಧಿಸಿದಂತೆ ಸರ್ಕಾರ ಸ್ವಯಂ ದೂರು ದಾಖಲಿಸಿಕೊಂಡು ದಂಡ ವಿಧಿಸುವ ಕ್ರಮ ಆರಂಭಿಸಲಾದ ಬಳಿಕ ಕಾಲ್ ಡ್ರಾಪ್ ಸಮಸ್ಯೆ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಒಂದು ವೇಳೆ ಸೇವಾ ಕಂಪೆನಿಗಳ ಲಾಕ್ ಗುಣಮಟ್ಟ ಕಳಪೆಯಾಗಿದ್ದಲ್ಲಿ ಫೋನ್ ಬಳಕೆದಾರರಿಗೆ ಹಣ ವಾಪಸು ನೀಡುವಂತಹ ಕಾನೂನು ರಚಿಸಲು ಸರ್ಕಾರ ಮುಂದಾಗಿದೆ ಎಂದು ಸಹ ಹೇಳಲಾಗಿದೆ.

ಓದಿರಿ: ಚೀನಾದವರು ಕದ್ದು ಬಳಸಿಕೊಂಡಿರುವ ಈ ನಕಲಿ ಬ್ರ್ಯಾಂಡ್ ಹೆಸರುಗಳು ನಗಿಸಿ ಸುಸ್ತಾಗಿಸುತ್ತವೆ!!

Best Mobiles in India

English summary
Financial disincentives of about ₹58 lakh were imposed on telecom companies, including Idea and BSNL, for not complying with the benchmark to measure drop call rate. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X