ಕೆಲವೇ ದಿನಗಳಲ್ಲಿ ಜಿಯೋ ಸೇರಿದಂತೆ, ಟೆಲಿಕಾಂ ಸೇವೆ ದರ ಭಾರಿ ಹೆಚ್ಚಳ!!

Written By:

ಜಿಯೋ ಬಂದ ನಂತರ ಟೆಲಿಕಾಂನಲ್ಲಿ ಟೆಲಿಕಾಂ ಸೇವೆಗಳ ಬೆಲೆ ಭಾರಿ ಇಳಿಕೆಯಾಗಿರುವುದು ಎಲ್ಲರಿಗೂ ಗೊತ್ತು.! ಆದರೆ, ಇನ್ನೆರಡು ತಿಂಗಳ ನಂತರ ಟೆಲಿಕಾಂ ಸೇವೆಗಳ ಬೆಲೆ ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ!..ಬದಲಾಗಿ ಟೆಲಿಕಾಂ ಸೇವೆಗಳ ಬೆಲೆ ಹೆಚ್ಚಾಗುತ್ತದೆ.!!

ಹೌದು, ಭಾರತದಲ್ಲಿ ದೂರಸಂಪರ್ಕ ಸೇವೆಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣ ಕಡಿಮೆ ಮಾಡಬೇಕೆಂಬ ಟೆಲಿಕಾಂ ಕಂಪೆನಿಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ.!! ಹಾಗಾಗಿ, ಟೆಲಿಕಾಂ ಕಂಪೆನಿಗಳು ನೀಡುವ ಸೇವೆಯ ಬೆಲೆಗಳು ಭಾರಿ ಹೆಚ್ಚಾಗುವ ಸಂಭವವಿದೆ.!!

ಕೆಲವೇ ದಿನಗಳಲ್ಲಿ ಜಿಯೋ ಸೇರಿದಂತೆ, ಟೆಲಿಕಾಂ ಸೇವೆ ದರ ಭಾರಿ ಹೆಚ್ಚಳ!!

ಪ್ರಸ್ತುತ ಶೇ 15ರಷ್ಟು ಟೆಲಿಕಾಂ ಸೇವಾ ತೆರಿಗೆ ಇದ್ದು, ಜಿಎಸ್‌ಟಿ ನಂತರ ಇದು ಶೇ 18ರಷ್ಟಾಗುತ್ತದೆ. ಹೊಸ ದರಗಳು ಜಾರಿಗೆ ಬರುತ್ತಿದ್ದಂತೆ ಗ್ರಾಹಕರ ಪಾಲಿಗೆ ದೂರಸಂಪರ್ಕ ಸೇವೆಗಳು ದುಬಾರಿಯಾಗಿ ಪರಿಣಮಿಸಲಿವೆ ಎಂಬ ಟೆಲಿಕಾಂ ಕಂಪೆನಿಗಳಿಗಳು ಅಹವಾಲು ಸಲ್ಲಿಸಿದ್ದವು.!

ಕೆಲವೇ ದಿನಗಳಲ್ಲಿ ಜಿಯೋ ಸೇರಿದಂತೆ, ಟೆಲಿಕಾಂ ಸೇವೆ ದರ ಭಾರಿ ಹೆಚ್ಚಳ!!

ಅವಶ್ಯಕ ಸೇವೆಗಳಿಗೆ ವಿಧಿಸಿರುವಂತೆಯೇ ಶೇ 5ರಷ್ಟು ತೆರಿಗೆಯನ್ನು ಮೊಬೈಲ್‌ ಸೇವೆಗೂ ಅನ್ವಯಿಸಬೇಕು ಎಂದು ಮೊಬೈಲ್‌ ಸೇವಾ ಸಂಸ್ಥೆಗಳ ಸಂಘ (ಸಿಒಎಐ) ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದ್ದವು.!! ಅಹವಾಲಿಗೆ ಸ್ಪಂದಿಸದೆ ಈಗ ನಿಗದಿ ಮಾಡಿರುವ ದರಗಳು ಬಹುತೇಕ ಅಂತಿಮ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.!!

ಓದಿರಿ: ವಾಟ್ಸ್‌ಆಪ್ ಮೆಸೇಜ್ ಓದಿದರೂಸಹ ಕಳಿಸಿದವರಿಗೆ ಗೊತ್ತಾಗಬಾರದೇ? ಹೀಗೆ ಮಾಡಿ!!

English summary
India is currently the world’s second-largest telecommunications market. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot