ಭಾರತದಲ್ಲಿ 5G ನೆಟ್‌ವರ್ಕ್ ಇನ್ನಷ್ಟು ತಡೆ ಆಗಲಿದೆ!..ಕಾರಣ ಏನು ಗೊತ್ತೆ?

|

ಭಾರತದಲ್ಲಿ ಬಳಕೆದಾರರು 5G ನೆಟ್‌ವರ್ಕ್‌ಗಾಗಿ ಕಾಯುವಿಕೆ ವಿಸ್ತರಣೆ ಆಗಲಿದೆ. ಸದ್ಯ, ದೈತ್ಯ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವಿ ಟೆಲಿಕಾಂ (ವೊಡಾಫೋನ್ ಐಡಿಯಾ) ಸೇರಿದಂತೆ ಟೆಲಿಕಾಂ ಆಪರೇಟರ್‌ಗಳು 5G ಪ್ರಾಯೋಗಿಕ ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸಲು ಟೆಲಿಕಾಂ ಇಲಾಖೆಯನ್ನು ಕೇಳಿದೆ ಎಂದು ವರದಿಯಾಗಿದೆ.

ಭಾರತದಲ್ಲಿ 5G ನೆಟ್‌ವರ್ಕ್ ಇನ್ನಷ್ಟು ತಡೆ ಆಗಲಿದೆ!..ಕಾರಣ ಏನು ಗೊತ್ತೆ?

ಮೇ ತಿಂಗಳಲ್ಲಿ, ಸರ್ಕಾರವು ಟೆಲಿಕಾಂ ಸಂಸ್ಥೆಗಳಿಗೆ 700 Mhz ಬ್ಯಾಂಡ್, 3.3-3.6 ಗಿಗಾಹರ್ಟ್ಜ್ (Ghz) ಬ್ಯಾಂಡ್ ಮತ್ತು 24.25-28.5 Ghz ಬ್ಯಾಂಡ್‌ಗಳನ್ನು ಆರು ತಿಂಗಳ ಕಾಲ ಪ್ರಯೋಗಗಳಿಗಾಗಿ ಹಂಚಿಕೆ ಮಾಡಿತು. ಪ್ರಸ್ತುತ 'ದೇಶದ ಎಲ್ಲಾ ಟೆಲಿಕಾಂ ಕಂಪನಿಗಳು 5G ಪ್ರಯೋಗಗಳನ್ನು ಇನ್ನೂ 6 ತಿಂಗಳವರೆಗೆ ವಿಸ್ತರಿಸಲು ಕೇಳಿಕೊಂಡಿವೆ' ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಟೆಲಿಕಾಂ ಇಲಾಖೆ (DoT) ಸ್ಪೆಕ್ಟ್ರಮ್ ಹರಾಜಿನ ಬೆಲೆ ಮತ್ತು ವಿಧಾನದ ಕುರಿತು ಟೆಲಿಕಾಂ ನಿಯಂತ್ರಕ ಟ್ರಾಯ್‌ ನ ದೃಷ್ಟಿಕೋನವನ್ನು ಪಡೆಯುವ ಮೂಲಕ 5G ಯ ವಾಣಿಜ್ಯ ರೋಲ್‌ಔಟ್‌ ಗಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಹರಾಜಿನ ಟೈಮ್‌ಲೈನ್‌ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲದಿದ್ದರೂ, ಇದು ಏಪ್ರಿಲ್-ಜೂನ್ 2022 ಅವಧಿಯಲ್ಲಿ ನಡೆಯಲಿದೆ ಎಂದು ಉದ್ಯಮದ ಮೂಲಗಳು ನಿರೀಕ್ಷಿಸುತ್ತವೆ.

ಭಾರತದಲ್ಲಿ 5G ನೆಟ್‌ವರ್ಕ್ ಇನ್ನಷ್ಟು ತಡೆ ಆಗಲಿದೆ!..ಕಾರಣ ಏನು ಗೊತ್ತೆ?

ಮೇ 4 ರಂದು, ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಎಂಟಿಎನ್‌ಎಲ್‌ನಿಂದ ಚೀನಾ ಕಂಪನಿಗಳ ತಂತ್ರಜ್ಞಾನಗಳನ್ನು ಬಳಸದೆ 5G ಪ್ರಯೋಗಗಳನ್ನು ನಡೆಸಲು DoT ಅರ್ಜಿಗಳನ್ನು ತೆರವುಗೊಳಿಸಿತು. ಎರಿಕ್‌ಸನ್‌, ನೋಕಿಯಾ, ಸ್ಯಾಮ್‌ಸಂಗ್ ಮತ್ತು C-DOT ನೊಂದಿಗೆ 5G ಪ್ರಯೋಗಗಳನ್ನು DoT ಅನುಮೋದಿಸಿತ್ತು. ಇದಲ್ಲದೆ, ರಿಲಯನ್ಸ್ ಜಿಯೋ ಇನ್ಫೋಕಾಮ್ ತನ್ನದೇ ಆದ ಸ್ವದೇಶಿ ತಂತ್ರಜ್ಞಾನ ಮತ್ತು ಸ್ಯಾಮ್‌ಸಂಗ್ ಗೇರ್‌ಗಳನ್ನು ಬಳಸಿಕೊಂಡು ಪ್ರಯೋಗಗಳನ್ನು ನಡೆಸುತ್ತಿದೆ.

DoT ಪ್ರಕಾರ, 5G ತಂತ್ರಜ್ಞಾನವು 4G ಗಿಂತ ಹತ್ತು ಪಟ್ಟು ಉತ್ತಮವಾದ ಡೌನ್‌ಲೋಡ್ ವೇಗವನ್ನು ಮತ್ತು ಮೂರು ಪಟ್ಟು ಹೆಚ್ಚಿನ ಸ್ಪೆಕ್ಟ್ರಮ್ ದಕ್ಷತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

5G ನೆಟ್‌ವರ್ಕ್‌ ಬಗ್ಗೆ ನಿರೀಕ್ಷೆ
5G ನೆಟ್‌ವರ್ಕ್‌ ಹೆಚ್ಚಿನ ಇಂಟರ್‌ನೆಟ್‌ ವೇಗಕ್ಕಾಗಿ ಅತಿ ಅವಶ್ಯಕ ಎನಿಸಿದೆ. ಇದು ಹೆಚ್ಚಿನ ಮಲ್ಟಿ-GBPS ಗರಿಷ್ಠ ಡೇಟಾ ವೇಗವನ್ನು ತಲುಪಿಸಲು ವಿನ್ಯಾಸಗೊಳಿಸಲಾಗಿದೆ. ಅಲ್ಟ್ರಾ ಲೋ ಲೆಟೆನ್ಸಿ, ಕ್ರಿಯೆ ಮತ್ತು ಪ್ರತಿಕ್ರಿಯೆಯ ನಡುವಿನ ಹೆಚ್ಚಿನ ನೆಟ್‌ವರ್ಕ್ ವಿಶ್ವಾಸಾರ್ಹತೆಯನ್ನು ಹೊಂದಿದೆ. ಹೆಚ್ಚಿನ ಜನರನ್ನು ಮತ್ತು ಹೆಚ್ಚಿನ ಸಾಧನಗಳನ್ನು ಬೆಂಬಲಿಸುವ ಬೃಹತ್ ನೆಟ್‌ವರ್ಕ್ ಸಾಮರ್ಥ್ಯ ಇದರಲ್ಲಿದೆ. ಯಾವುದೇ ಸಮಯದಲ್ಲಿ ಅನೇಕ ಉದ್ಯಮ ಅಪ್ಲಿಕೇಶನ್‌ಗಳು ಮತ್ತು ಬಳಕೆದಾರರನ್ನು ಬೆಂಬಲಿಸುವ ಲಭ್ಯತೆ ಹೆಚ್ಚಾಗಲಿದೆ.

ಇನ್ನು 5G ಆಂಟೆನಾಗಳು ಅಸ್ತಿತ್ವದಲ್ಲಿರುವ ಶಕ್ತಿಗಳಿಗಿಂತ ಗಮನಾರ್ಹವಾಗಿ ಕಡಿಮೆ ಶಕ್ತಿಯನ್ನು ಬಳಸುತ್ತವೆ, ಇದು ಸಣ್ಣ ಬ್ಯಾಟರಿ-ಚಾಲಿತ ಸಾಧನಗಳಿಗೆ ಉತ್ತಮ ತಂತ್ರಜ್ಞಾನವಾಗಿದೆ. ಇದು ಕೈಗಾರಿಕೆಗಳಿಗೆ ಮತ್ತು ಗ್ರಾಹಕರಿಗೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ 5 ಜಿ ಯನ್ನು ತೆಗೆದುಕೊಳ್ಳುವುದು ಕೇವಲ ಸ್ಮಾರ್ಟ್‌ಫೋನ್‌ಗಳ ಬಳಕೆದಾರರಿಂದ ಮಾತ್ರವಲ್ಲದೆ ಕೈಗಾರಿಕೆಗಳು ಮತ್ತು ಅಪ್ಲಿಕೇಶನ್‌ಗಳ ವ್ಯಾಪಕ ಹರವುಗಳಿಂದ ಕೂಡಿದೆ.

ಭಾರತದಲ್ಲಿ 5G ನೆಟ್‌ವರ್ಕ್ ಇನ್ನಷ್ಟು ತಡೆ ಆಗಲಿದೆ!..ಕಾರಣ ಏನು ಗೊತ್ತೆ?

ಹಾಗೆಯೇ 5G ನೆಟ್‌ವರ್ಕ್‌ ಕೆಲಸ, ಕಲಿಕೆ, ಸಾಮಾಜಿಕ ಸಂವಹನ ಮತ್ತು ಮನರಂಜನೆ ಸೇರಿದಂತೆ ನಮ್ಮ ಮನೆಗಳಲ್ಲಿ ಸಹ ಉದ್ಯಮ ದರ್ಜೆಯ ಸಂಪರ್ಕವನ್ನು ಹೊಂದಿರುವುದು ಮುಖ್ಯವಾಗಿದೆ. ಈ ಅಗತ್ಯಗಳಿಗೆ 5G ಸೂಕ್ತವಾಗಿದೆ.ಇದು ರಿಯಲ್‌-ಟೈಂ ಸೆನ್ಸಾರ್‌ ಗುಣಮಟ್ಟವನ್ನು ಸುಧಾರಿಸುತ್ತದೆ. 5G ಯ ಪ್ರಭಾವವು ಎಲ್ಲಾ ರೀತಿಯ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಹಾಗೂ ಸಾರ್ವಜನಿಕ, ಖಾಸಗಿ ಮತ್ತು ಸರ್ಕಾರಗಳಲ್ಲಿ ಕಂಡುಬರುತ್ತದೆ. ಆನ್‌ಲೈನ್ ಸಮಾಲೋಚನೆಗಳ ಸಂಖ್ಯೆ ಮತ್ತು ದಕ್ಷತೆಯು ಸದ್ಯ ಹೆಚ್ಚುತ್ತಿದೆ. 5G ಯ ಪರಿಚಯವು ಅಭೂತಪೂರ್ವ ಪ್ರಮಾಣದಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ (IOT), ಟೆಲಿಮೆಡಿಸಿನ್ ಮತ್ತು ಆರೋಗ್ಯ ಸೇವೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಅನುಮತಿಸುತ್ತದೆ.

IOT 5G ಎಂದರೆ ಏನು?
IOTಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು 5G ಉತ್ತಮ ಅಡಿಪಾಯವಾಗಿದೆ. 5G ಕೈಗಾರಿಕೆಗಳು ಮತ್ತು ವ್ಯವಹಾರಗಳಿಗೆ ಶಕ್ತಿ ತುಂಬುವ ಸಾಮರ್ಥ್ಯ ಹೊಂದಿದೆ. ಇದು ಹೆಚ್ಚಿನ ತಂತ್ರಜ್ಞಾನ ಪ್ರಗತಿಯ ತಳಪಾಯವನ್ನು ರೂಪಿಸುತ್ತದೆ. ಅದರಲ್ಲೂ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ 5G ಆಗಮನ ಹೆಚ್ಚಿನ ಅವಕಾಶವನ್ನು ಜನರಿಗೆ ಲಭ್ಯವಾಗಲಿದೆ. ಅಲ್ಲದೆ ಕೈಗಾರಿಕಾ ಮಟ್ಟದಲ್ಲಿಯೂ ಸಹ 5G ಮತ್ತು IOT ಸಂಯೋಜಿಸಿ ಕೈಗಾರಿಕಾ ಇಂಟರ್ನೆಟ್ ಆಫ್ ಥಿಂಗ್ಸ್ (ಐಐಒಟಿ) ಅನ್ನು ಸಕ್ರಿಯಗೊಳಿಸಲು ಸಾಧ್ಯವಾಗಲಿದೆ.

Best Mobiles in India

English summary
Telecom Operators Want 6 Month Extension Of 5G Trial Period.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X