Subscribe to Gizbot

ಜಿಯೋ ಬಳಸದಿದ್ದರೂ ಎಲ್ಲರೂ ಅಂಬಾನಿಗೆ ಥ್ಯಾಂಕ್ಸ್ ಹೇಳಲೇಬೇಕು: ಯಾಕೆ ಗೊತ್ತಾ..?

Written By:

ಜಿಯೋ ಬಳಕೆದಾರರಲ್ಲದಿದ್ದರೂ ಜಿಯೋಗೆ ನಾವು-ನೀವು ಥ್ಯಾಂಕ್ಸ್ ಹೇಳಲೇ ಬೇಕು. ಇದು ಕೇವಲ ಒಬ್ಬರ ಅಭಿಪ್ರಾಯವಲ್ಲ, ಸದ್ಯ ದೇಶದಲ್ಲಿ ಮೊಬೈಲ್ ಡೇಟಾ ಮತ್ತು ಬ್ರಾಡ್ ಬ್ಯಾಂಡ್ ಇಂಟರ್‌ನೆಟ್ ಸೇವೆಯನ್ನು ಪಡೆಯುತ್ತಿರುವ ಹಲವರ ಅಭಿಪ್ರಾಯವಾಗಿದೆ. ಕಾರಣ ಇಷ್ಟೆ ಜಿಯೋ ಮಾರುಕಟ್ಟೆಗೆ ಕಾಲಿಟ್ಟ ನಂತರದಲ್ಲಿ ಕೇವಲ ತಾನು ಮಾತ್ರ ಕಡಿಮೆ ಬೆಲೆಗೆ ಸೇವೆಯನ್ನು ನೀಡುವುದಲ್ಲದೇ ಇತರೇ ಕಂಪನಿಗಳು ಬೆಲೆ ಕಡಿಮೆ ಮಾಡುವಂತೆ ಮಾಡಿದೆ.

ಜಿಯೋ ಬಳಸದಿದ್ದರೂ ಎಲ್ಲರೂ ಅಂಬಾನಿಗೆ ಥ್ಯಾಂಕ್ಸ್ ಹೇಳಲೇಬೇಕು: ಯಾಕೆ ಗೊತ್ತಾ..?

ಓದರಿ: ಇಂದು ಮತ್ತೇ ಫ್ಲಾಷ್ ಸೇಲ್ ನಲ್ಲಿ ಶಿಯೋಮಿ ರೆಡ್ಮಿ 4A ಲಭ್ಯ: ಅಮೆಜಾನ್ ನಲ್ಲಿ ಮಾತ್ರ..!!!

ಹೀಗಾಗಿ ಜಿಯೋ ಸೇವೆಯನ್ನು ಪಡೆಯದೇ ಹೊದರೂ ಸಹ ದೇಶದ ಟೆಲಿಕಾಂ ಸೇವೆಯನ್ನು ಬಳಸುತ್ತಿರುವ ಗ್ರಾಹಕರೇಲ್ಲರೂ ಜಿಯೋನಿಂದ ಒಂದಲ್ಲಾ ಒಂದು ರೀತಿಯಲ್ಲಿ ಲಾಭವನ್ನು ಮಾಡಿಕೊಡಿದ್ದಾರೆ. ಇದಕ್ಕೆ ಉದಾಹರಣೆಯೂ ನಮ್ಮ ಕಣ್ಣಮುಂದೇಯೇ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಮೊದಲು, ಜಿಯೋ ನಂತರ:

ಜಿಯೋ ಮೊದಲು, ಜಿಯೋ ನಂತರ:

ನಾವು ಇತಿಹಾಸವನ್ನು ಅಧ್ಯಾಯನ ಮಾಡುವ ಸಂದರ್ಭದಲ್ಲಿ ಕ್ರಿಸ್ತ ಪೂರ್ಣ ಮತ್ತು ಕ್ರಿಸ್ತ ಶಕ ಬಗ್ಗೆ ತಿಳಿಯುವಂತೆ ಭಾರತೀಯ ಟೆಲಿಕಾಂ ಇತಿಹಾಸವನ್ನು ಕೆದಕಿದರೇ ಅದರಲ್ಲಿ ಜಿಯೋ ಮೊದಲು ಮತ್ತು ಜಿಯೋ ನಂತರ ಎಂಬ ಎರಡು ವಿಭಾಗವಗಳನ್ನು ಕಾಣಬಹುದಾಗಿದೆ. ಜಿಯೋ ಹಿಂದೆ ಇದ್ದ ಕಂಪನಿಗಳು ಗ್ರಾಹಕರಿಂದ ಅಧಿಕ ಹಣವನ್ನು ವಸೂಲಿ ಮಾಡುತ್ತಿದ್ದವೂ, ಆದರೆ ಜಿಯೋ ಉಚಿತ ಸೇವೆಯನ್ನು ನೀಡಿ ಎಲ್ಲರಿಗೂ ಶಾಕ್ ನೀಡಿತ್ತು.

ಉದಾಹರಣೆ ನೀಡುವುದಾರೇ:

ಉದಾಹರಣೆ ನೀಡುವುದಾರೇ:

ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಜಿಯೋ ಮುಂಚೆ ಏರ್‌ಟೆಲ್ ಬಳಕೆದಾರರೊಬ್ಬರು ಪ್ರತಿ ತಿಂಗಳು 45GB ಡೇಟಾವನ್ನು 30Mbps ವೇಗದಲ್ಲಿ ಪಡೆಯಲು ರೂ.5500ಗಳನ್ನು ಪಾವತಿ ಮಾಡುತ್ತಿದ್ದರೂ ಎನ್ನಲಾಗಿದೆ. ಅದೇ ಜಿಯೋ ನಂತರ ಇದೇ ಏರ್‌ಟೆಲ್ ತಿಂಗಳಿಗೆ 140GB ಡೇಟಾವನ್ನು ಅದುವೇ 100Mbps ವೇಗದಲ್ಲಿ ಕೇವಲ ರೂ.1300ಕ್ಕೆ ನೀಡಲು ಮುಂದಾಗಿದೆ. ನಿವೇ ಗಮನಿಸಿ ಎಷ್ಟು ಪ್ರಯಾಣವ ವ್ಯತ್ಯಾಸ ಇದೇ ಎಂಬುದನ್ನು.

ಜಿಯೋ ದಿಂದ ಸಿಗುತ್ತಿದೆ ಉಚಿತ ವೈಫೈ:

ಜಿಯೋ ದಿಂದ ಸಿಗುತ್ತಿದೆ ಉಚಿತ ವೈಫೈ:

ಈ ಹಿಂದೆ ಮಾರುಕಟ್ಟೆ ಇಲ್ಲವೇ ಸಿನಿಮಾ ಹಾಲ್ ಗಳಿಗೆ ಹೊದರೆ ನೂರಾರು ವೈಫೈಗಳು ಕಾಣಸಿಗುತ್ತಿದ್ದವೂ ಆದರೆ ಎಲ್ಲವೂ ಕ್ಲೋಸ್ಡ್ ಅಂದರೆ ಪಾಸ್ ವರ್ಡ್ ಇದ್ದರೇ ಮಾತ್ರವೇ ಬಳಸಲು ಸಾಧ್ಯವಾಗುವಂತಹದ್ದು, ಆದರೆ ಜಿಯೋ ಬಂದಮೇಲೆ ಎಲ್ಲರೂ ಓಪನ್ ಹಾಟ್ ಸ್ಪಾಟ್ ಅನ್ ಮಾಡಿದ್ದು, ಯಾರು ಬೇಕಾದರೂ ಬಳಸಿಕೊಳ್ಳುವ ಅವಕಾಶವನ್ನು ಮಾಡಿಕೊಡುತ್ತಿದ್ದಾರೆ. ಥ್ಯಾಂಕ್ಯು ಜಿಯೋ.

ಒಂದು ನಿಮಿಷ ಮಾತನಾಡದವರೂ ಗಂಟೆಗಟ್ಟಲೇ ಮಾತನಾಡುತ್ತಾರೆ:

ಒಂದು ನಿಮಿಷ ಮಾತನಾಡದವರೂ ಗಂಟೆಗಟ್ಟಲೇ ಮಾತನಾಡುತ್ತಾರೆ:

ಜಿಯೋ ಬರುವದಕ್ಕೂ ಮುನ್ನ ಎರಡು ಮೂರು ನಿಮಿಷದಲ್ಲೇ ಮುಗಿಯುತ್ತಿದ್ದ ಫೋನ್ ಮಾತುಕತೆ ಉಚಿತ ಸೇವೆಯ ನಂತರ ಗಂಟೆಗಟ್ಟಲೆ ಮುಂದುವರೆಯೂತ್ತಿದೆ. ಇದಕ್ಕೆ ಕಾರಣ ಜಿಯೋ, ತಾನು ಉಚಿತ ಕರೆ ಮಾಡುವ ಸೇವೆಯನ್ನು ನೀಡುವುದಲ್ಲದೇ ಇತರೇ ಕಂಪನಿಗಳು ಉಚಿತ ಸೇವೆಯನ್ನು ನೀಡುವಂತೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
have never used Jio, I thank Jio for helping consumers across India to fight monopoly business practices of telecom companies. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot