ಟೆಲಿಗ್ರಾಮ್‌ನಲ್ಲಿ ಹೊಸ ಫೀಚರ್ಸ್‌ ಸೇರ್ಪಡೆ; ವಿಶೇಷತೆ ಏನು ಗೊತ್ತಾ!?

|

ವಾಟ್ಸಾಪ್‌ಗೆ ಪರ್ಯಾಯವಾಗಿ ಟೆಲಿಗ್ರಾಮ್ ಬಳಕೆ ಮಾಡಲಾಗುತ್ತದೆ. ಅದರಂತೆ ಟೆಲಿಗ್ರಾಮ್‌ ಸಹ ವಿಶೇಷ ಹಾಗೂ ಆಕರ್ಷಕ ಫೀಚರ್ಸ್‌ಗಳನ್ನು ನೀಡುತ್ತಾ ಬರುತ್ತಿದ್ದು, ಇದೀಗ ಮತ್ತೇ ಹೊಸ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಪರಿಚಯಿಸಿದೆ. ಅದರಲ್ಲಿ ಪ್ರಮುಖವಾದುದು ವಾಯ್ಸ್-ಟು-ಟೆಕ್ಸ್ಟ್ ಫಾರ್ ವಿಡಿಯೋ ಮೆಸೆಜ್, ಹೊಸತನದ ನೈಟ್‌ ಮೋಡ್, ಟೆಕ್ಸ್ಟ್‌ ರಿಸೈಜ್ ಆಯ್ಕೆಗಳು.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ನ ಇತ್ತೀಚಿಗೆ ಗ್ರೂಪ್‌ಗಳಿಗೆ ವಿಷಯಗಳನ್ನು ನೀಡಬಹುದಾದ ಆಯ್ಕೆ, ಸಂಗ್ರಹಿಸಬಹುದಾದ ಬಳಕೆದಾರ ಹೆಸರುಗಳು, ವಾಯ್ಸ್‌ ಟು ಟೆಕ್ಸ್ಟ್‌ ಫಾರ್‌ ವಿಡಿಯೋ ಕಾಲ್‌ ಹಾಗೂ iOS ಗಾಗಿ ಮರುವಿನ್ಯಾಸಗೊಳಿಸಲಾದ ನೈಟ್‌ಮೋಡ್‌ ಫೀಚರ್ಸ್‌ ಅನ್ನು ನೀಡಿದೆ. ಅದರಂತೆ ಕಳೆದ ತಿಂಗಳು ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಅವರು, ಬಳಕೆದಾರರು ಈಗ ಫ್ರಾಗ್ಮೆಂಟ್ ಮೂಲಕ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಕಲೆಕ್ಟೆಬಲ್ ಯೂಸರ್‌ನೇಮ್‌ ಅನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು ಎಂದು ತಿಳಿಸಿದ್ದರು.

ಟಾಪಿಕ್ಸ್ ಇನ್‌ ಗ್ರೂಪ್ಸ್

ಟಾಪಿಕ್ಸ್ ಇನ್‌ ಗ್ರೂಪ್ಸ್

ನವೀಕರಣಗೊಂಡ ಟೆಲಿಗ್ರಾಮ್‌ನಲ್ಲಿ ಇದು ಪ್ರಮುಖ ಫೀಚರ್ಸ್‌ ಆಗಿದೆ. ಇದರಲ್ಲಿ ಗ್ರೂಪ್‌ ನಿರ್ವಾಹಕರು 'ಟಾಪಿಕ್ಸ್ ಇನ್‌ ಗ್ರೂಪ್ಸ್ ' ಎಂಬ ಫೀಚರ್ಸ್ ಬಳಸಬಹುದಾಗಿದೆ. 200 ಕ್ಕೂ ಹೆಚ್ಚು ಸದಸ್ಯರು ಇರುವ ಗ್ರೂಪ್‌ಗಳಲ್ಲಿ ಈ ಫೀಚರ್ಸ್‌ ಲಭ್ಯವಾಗಲಿದ್ದು, ಟಾಪಿಕ್ಸ್ ಇನ್‌ ಗ್ರೂಪ್ಸ್ ನಲ್ಲಿ ವೈಯಕ್ತಿಕ ಚಾಟ್‌ಗಳಂತೆಯೇ ಇಲ್ಲೂ ಚಾಟ್‌ ಮಾಡಬಹುದು. ಇದಕ್ಕೆ ಬೇರೆಯದೇ ಆದ ನೋಟಿಫಿಕೇಶನ್‌ ಆಯ್ಕೆಯನ್ನೂ ಸಹ ನೀಡಲಾಗಿದೆ. ಇದರ ಜೊತೆಗೆ ಬಳಕೆದಾರರು ವಿಷಯದ ಕುರಿತು ಮೆಸೆಜ್‌ಗಳನ್ನು ಪಿನ್ ಮಾಡಲು ಅನುವು ಮಾಡಿಕೊಡಲಾಗಿದೆ.

ವಾಯ್ಸ್-ಟು-ಟೆಕ್ಸ್ಟ್ ಫಾರ್ ವಿಡಿಯೋ ಮೆಸೆಜ್

ವಾಯ್ಸ್-ಟು-ಟೆಕ್ಸ್ಟ್ ಫಾರ್ ವಿಡಿಯೋ ಮೆಸೆಜ್

ಟೆಲಿಗ್ರಾಮ್ ಪ್ರೀಮಿಯಂ ಚಂದಾದಾರರಿಗೆ ಮಾತ್ರ ಈ ಫೀಚರ್ಸ್‌ ಪ್ರತ್ಯೇಕವಾಗಿ ಲಭ್ಯವಿದೆ. ಯಾವುದೇ ವಿಡಿಯೋ ಸಂದೇಶಗಳನ್ನು ಒಂದೇ ಬಟನ್‌ನೊಂದಿಗೆ ಪಠ್ಯಕ್ಕೆ ಪರಿವರ್ತಿಸಲು ಈ ಫೀಚರ್ಸ್‌ ಅನುವು ಮಾಡಿಕೊಡುತ್ತದೆ. ನೀವೇನಾದರೂ ಹೆಚ್ಚಿನ ವಿಡಿಯೋ ಕರೆಗಳು ಮತ್ತು ಸಭೆಗಳಿಗೆ ಹಾಜರಾಗುವವರಾಗಿದ್ದರೆ ಹೊಸದಾಗಿ ಪರಿಚಯಿಸಲಾದ ಈ ಫೀಚರ್ಸ್‌ ತುಂಬಾನೆ ಸಹಕಾರಿಯಾಗಲಿದೆ.

ಹೊಸತನದಲ್ಲಿ ನೈಟ್‌ ಮೋಡ್, ಟೆಕ್ಸ್ಟ್‌ ರಿಸೈಜ್

ಹೊಸತನದಲ್ಲಿ ನೈಟ್‌ ಮೋಡ್, ಟೆಕ್ಸ್ಟ್‌ ರಿಸೈಜ್

ಟೆಲಿಗ್ರಾಮ್‌ನ ಈ ಹೊಸ ನೈಟ್‌ ಮೋಡ್ ಫೀಚರ್ಸ್‌ ಆಪಲ್‌ ಬಳಕೆದಾರರಿಗೆ ಲಭ್ಯವಾಗಲಿದೆ. ನೈಟ್‌ ಮೋಡ್ ಅನ್ನು ಮರುವಿನ್ಯಾಸಗೊಳಿಸಲಾಗಿದ್ದು, ಐಒಎಸ್ ಡಿವೈಸ್ ಬಳಕೆದಾರರು ಚಾಟ್‌ಗಳು ಅಥವಾ ಚಾಟ್ ಪಟ್ಟಿಯನ್ನು ಸ್ಕ್ರೋಲ್ ಮಾಡುವಾಗ ಹೆಚ್ಚು ಸಮತೋಲಿತ ಬಣ್ಣಗಳು ಮತ್ತು ಉತ್ತಮ ಬ್ಲರ್‌ ಎಫೆಕ್ಟ್‌ ಇರುವ ನವೀಕರಿಸಿದ ಡಾರ್ಕ್ ಥೀಮ್‌ ನ ಅನುಭವ ಪಡೆಯಬಹುದಾಗಿದೆ. ಇದರ ಜೊತೆಗೆ ಆಂಡ್ರಾಯ್ಡ್ ಬಳಕೆದಾರರು ಈಗ ಚಾಟ್ ಸೆಟ್ಟಿಂಗ್‌ಗಳಲ್ಲಿ ಟೆಕ್ಸ್ಟ್‌ ಗಾತ್ರವನ್ನು ಬದಲಾಯಿಸಬಹುದಾದ ಆಯ್ಕೆಯನ್ನೂ ಪಡೆದುಕೊಂಡಿದ್ದಾರೆ.

ಕಲೆಕ್ಟೆಬಲ್ ಯೂಸರ್‌ ನೇಮ್

ಕಲೆಕ್ಟೆಬಲ್ ಯೂಸರ್‌ ನೇಮ್

ಬಹುಪಾಲು ಜನರು ಟೆಲಿಗ್ರಾಮ್ ಬಳಕೆ ಮಾಡುವುದರಿಂದ ನಿಖರವಾಗಿ ಬೇಕಾದವರನ್ನು ಹುಡುಕಲು ಕಷ್ಟವಾಗುತ್ತಿತ್ತು. ಈ ಕಾರಣಕ್ಕೆ ಈ ಫೀಚರ್ಸ್‌ ಪರಿಚಯಿಸಲಾಗಿದ್ದು, ಹೆಸರಿನ ಜೊತೆಗೆ ಬಹು ಸಂಗ್ರಹ ಯೋಗ್ಯ ಬಳಕೆದಾರ ಹೆಸರುಗಳನ್ನು ಆಡ್‌ ಮಾಡಬಹುದಾಗಿದೆ. ಇದರಿಂದಾಗಿ ಇತರರು ಅವುಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಹುಡುಕಲು ಸುಲಭವಾಗುತ್ತದೆ. ಇನ್ನು TON ನೆಟ್‌ವರ್ಕ್‌ನಿಂದ ಸುರಕ್ಷಿತವಾಗಿರುವ ಈ ಯೂಸರ್‌ ನೇಮ್ಸ್‌ ಗಳನ್ನು ಬಳಕೆದಾರರು ಖರೀದಿ ಮಾಡಬಹುದು ಅಥವಾ ಮಾರಾಟ ಕೂಡ ಮಾಡಬಹುದಾಗಿದೆ.

ಎಮೋಜಿ ಮತ್ತು ಪ್ರತಿಕ್ರಿಯೆಗಳು

ಎಮೋಜಿ ಮತ್ತು ಪ್ರತಿಕ್ರಿಯೆಗಳು

ಟೆಲಿಗ್ರಾಮ್‌ನಲ್ಲಿ ಇತ್ತೀಚೆಗೆ ನಾಲ್ಕು ಹೊಸ ಸಂವಾದಾತ್ಮಕ ಎಮೋಜಿಗಳನ್ನು ಒಂದು ಚಾಟ್‌ನಲ್ಲಿ ಫುಲ್‌ ಡಿಸ್‌ಪ್ಲೇ ಪರಿಣಾಮಗಳೊಂದಿಗೆ ನೀಡಲಾಗಿದೆ. ಹಾಗೆಯೇ 12 ಹೊಸ ಎಮೋಜಿ ಪ್ಯಾಕ್‌ಗಳನ್ನು ಹಾಗೂ ಯಾವುದೇ ಚಾಟ್‌ನಲ್ಲಿ ಬಳಸಬಹುದಾದ ಮೂರು ಹ್ಯಾಲೋವೀನ್ ಥೀಮ್‌ನ ಪ್ರತಿಕ್ರಿಯೆಗಳು ಬಳಕೆದಾರರಿಗೆ ಲಭ್ಯವಾಗಲಿವೆ.

Best Mobiles in India

English summary
Telegram is an encrypted, freemium, cross-platform, cloud-based instant messaging service. Meanwhile, Telegram has introduced new features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X