ಪದೇ ಪದೇ ಭದ್ರತಾ ಲೋಪ ಕಾಣುವ 'ವಾಟ್ಸಪ್' ಎಂದಿಗೂ ಸುರಕ್ಷಿತವಾಗಿರುವುದಿಲ್ಲ!
ವಿಶ್ವದಲ್ಲಿ ಸುಮಾರು 1.5 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಆಪ್ ಇತ್ತೀಚಿಗೆ ಕರೆಗಳ ಮೂಲಕ ಬಳಕೆದಾರರ ಖಾತೆಗಳು ಹ್ಯಾಕ್ ಆಗಿವೆ.ಈ ಕುರಿತು ಪ್ರತಿಕ್ರಿಯಿಸಿರುವ 'ಟೆಲಿಗ್ರಾಂ ಮೆಸೆಂಜರ್ ಸ್ಥಾಪಕ 'ಪಾವೆಲ್ ಡ್ಯುರೊವ್' ಫೇಸ್‌ಬುಕ್ ಒಡೆತನ ವಾಟ್ಸಪ್ ಪದೇ ಪದೇ ಹ್ಯಾಕ್‌ಗೆ ಒಳಗಾಗುತ್ತಲಿದ್ದು, ಹ್ಯಾಕರ್ಸ್‌ಗಳಿಗೆ ಸುಲಭವಾಗಿ ತುತ್ತಾಗುವ ವಾಟ್ಸಪ್ ಎಂದಿಗೂ ಸುರಕ್ಷಿತವಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

ಇತ್ತೀಚಿಗೆ ವಾಟ್ಸಪ್ ಕರೆಗಳ ಮೂಲಕ ಹ್ಯಾಕರ್ಸ್‌ಗಳು ಸ್ವೈವೇರ್ ಹರಿಬಿಟ್ಟು ಖಾಸಗಿ ದಾಖಲೆಗಳಿಗೆ ಕನ್ನಹಾಕಿದ್ದು, ಬಳಕೆದಾರರ ಖಾತೆಗಳು ಎಷ್ಟು ಸುರಕ್ಷಿತ ಎಂಬುದನ್ನು ಪ್ರಶ್ನಿಸುವಂತಾಗಿದೆ. ಟೆಲಿಗ್ರಾಂ ಆಪ್ ನಂತೆ ವಾಟ್ಸಪ್ ಮುಕ್ತವಾದ ಭದ್ರತಾ ಕೋಡ್‌ಗಳನ್ನು ಹೊಂದಿಲ್ಲ ಹೀಗಾಗಿ ಇದು ಭದ್ರತಾ ಸಂಶೋಧಕರಿಗೆ ಅಪ್ಲಿಕೇಶನ ಬ್ಯಾಕ್‌ಡೋರ್ ಬಗ್ಗೆ ತನಿಖೆ ಮಾಡಲು ಆಗದು ಎಂದು ಪಾವೆಲ್ ಹೇಳಿದ್ದಾರೆ.

ರಷ್ಯಾ ಮತ್ತು ಇರಾನ್ ರಾಷ್ಟ್ರಗಳಲ್ಲಿ ಮುಕ್ತವಾಗಿ ಲಭ್ಯವಾಗುತ್ತದೆ ಆದರೆ ಅಲ್ಲಿ ಟೆಲಿಗ್ರಾಂ ಬ್ಯಾನ್ ಮಾಡಲಾಗಿದೆ. ಮೂರು ವರ್ಷದ ಹಿಂದೆ ವಾಟ್ಸಪ್ ಬಳಕೆದಾರರ ಖಾಸಗಿ ಚಾಟಿಂಗ್ ಹೆಚ್ಚು ಸುರಕ್ಷಿತವಾಗಿರಲಿ ಎಂದು 'ಎಂಡ್ ಟು ಎಂಡ್ ಎನ್‌ಕ್ರಿಪ್ಶನ್' ಆಯ್ಕೆಯನ್ನು ಪರಿಚಯಿಸಿತ್ತು. ಅದನ್ನು ಮೂರನೇ ಪಾರ್ಟಿ ಆಕ್ಸ್‌ಸ್ ಮಾಡಲು ಅಸಾಧ್ಯವಾಗಿದೆ. ಹಾಗೆಯೇ ವಾಟ್ಸಪ್ ತನ್ನ ಬಳಕೆದಾರರಿಗೆ ಅವರ ಎಲ್ಲ ಚಾಟ್‌ಗಳನ್ನು ಬ್ಯಾಕ್‌ಅಪ್ ಕ್ಲೌಡ್ ಸ್ಟೋರೇಜ್ ಮಾಡಿಕೊಳ್ಳಲು ಒತ್ತಾಯಿಸಿತ್ತು ಈ ಅಂಶಗಳ ಬಗ್ಗೆಯೂ ಪಾವೆಲ್ ಮಾತನಾಡಿದ್ದಾರೆ.

ಈಗ ವಾಟ್ಸಪ್ ಹ್ಯಾಕ್ ಆಗಿರುವ ಸುದ್ದಿ ಹಬ್ಬಿದ್ದು, ಅದಕ್ಕೆ ಸಂಸ್ಥೆಯು ಹೊಸ ವರ್ಷನ್‌ಗೆ ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚಿಸುತ್ತಿದೆ. ಆದರೆ ಅಪ್‌ಡೇಟ್ ಮಾಡಿಕೊಂಡರೇ ವಾಟ್ಸಪ್ ಸುರಕ್ಷಿತವಾಗಿರಲಿದೆ ಎನ್ನಲಾಗುದು ಎನ್ನುವ ಇಂಗಿತವನ್ನು ಪಾವೆಲ್ ವ್ಯಕ್ತಪಡಿಸಿದ್ದಾರೆ. ಏಕೆದಂರೆ ವಾಟ್ಸಪ್ ಆರಂಭವಾಗಿ ಸುಮಾರು ಹತ್ತು ವರ್ಷಗಳು ಆಗುತ್ತಾ ಬಂದಿದ್ದು, ಹತ್ತು ವರ್ಷದಲ್ಲಿ ಅನೇಕ ಭಾರಿ ಭದ್ರತಾ ಲೋಪ್‌ಗಳು ಕಂಡುಬಂದಿವೆ ಎಂದಿದ್ದಾರೆ.
ಬಹುತೇಕ ಸಂಖ್ಯೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಂಗಳನ್ನು ಬಳಕೆಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ವಾಟ್ಸಪ್ ಜೊತೆಗೆ ಟೆಲಿಗ್ರಾಂ ಆಪ್ ಅನ್ನು ಸಹ ಬಳಕೆಮಾಡುತ್ತಿದ್ದಾರೆ. ಟೆಲಿಗ್ರಾಂ ಸಕ್ರಿಯ ಬಳಕೆದಾರರ ಸಂಖ್ಯೆ 200 ಮಿಲಿಯನ್ ದಾಟಿದ್ದು, ಭವಿಷ್ಯದಲ್ಲಿ ಮುಕ್ತ ಮತ್ತು ಭದ್ರತೆಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವ ನಿಲುವನ್ನು ಅವರು ತಿಳಿಸಿದರು.


Click it and Unblock the Notifications








