ವಾಟ್ಸಾಪ್‌ನ ಈ ಎಡವಟ್ಟಿನಿಂದ ಟೆಲಿಗ್ರಾಮ್‌ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ!

|

ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ಇತ್ತೀಚಿಗಷ್ಟೆ ಹೊಸ ರೂಲ್ಸ್‌ಗಳನ್ನು ಕಡ್ಡಾಯವಾಗಿ ಸ್ವೀಕರಿಸುವಂತೆ ತಿಳಿಸಿದೆ. ಸ್ವೀಕರಿಸದ ಬಳಕೆದಾರರ ವಾಟ್ಸಾಪ್ ಖಾತೆ ಕೆಲಸ ಮಾಡಲ್ಲ ಎಂದಿದೆ. ಬಳಕೆದಾರರ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿತ್ತು. ವಾಟ್ಸಾಪ್‌ನ ಈ ಎಡವಟ್ಟಿನಿಂದ ಬಹುತೇಕ ಬಳಕೆದಾರರು ವಾಟ್ಸಾಪ್‌ಗೆ ಪರ್ಯಾಯ ಆಪ್‌ ಹುಡುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಟೆಲಿಗ್ರಾಮ್ ಆಪ್‌ನ ಬಳಕೆದಾರರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಆಗಿದೆ.

ಟೆಲಿಗ್ರಾಮ್‌

ಹೌದು, ಕೇವಲ 72ಗಂಟೆಗಳಲ್ಲಿ ವಿಶ್ವದಲ್ಲಿ ಟೆಲಿಗ್ರಾಮ್‌ ಅಪ್ಲಿಕೇಶನ್‌ಗೆ 25 ಮಿಲಿಯನ್‌ ಹೊಸ ಬಳಕೆದಾರರು ಸೇರ್ಪಡೆಗೊಂಡಿದ್ದಾರೆ ಎಂದು ಕಂಪನಿಯು ಹೇಳಿದೆ. ಇನ್ನು ಹೊಸದಾಗಿ ಸೇರ್ಪಡೆಗೊಂಡ 25 ಮಿಲಿಯನ್ ಬಳಕೆದಾರರಲ್ಲಿ 38% ಏಷ್ಯಾದವರಾಗಿದ್ದಾರೆ. ಲ್ಯಾಟಿನ್ ಅಮೆರಿಕದಿಂದ 21% ಮತ್ತು ಮೆನಾ ಪ್ರದೇಶದಿಂದ 8% ಹೊಸ ಬಳಕೆದಾರರನ್ನು ಸೇರಿಸಲು ಯಶಸ್ವಿಯಾಗಿದೆ ಎಂದು ಟೆಲಿಗ್ರಾಮ್ ಪ್ರಕಟಿಸಿದೆ. ಹಾಗೆಯೇ ಜನವರಿ ಮೊದಲ ವಾರದಲ್ಲಿ ಟೆಲಿಗ್ರಾಮ್ ಜಾಗತಿಕವಾಗಿ 500 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಮೀರಿದೆ ಎಂದು ಘೋಷಿಸಿತು.

ಪಾವೆಲ್

ಟೆಲಿಗ್ರಾಮ್ ಸಿಇಒ ಮತ್ತು ಸ್ಥಾಪಕ ಪಾವೆಲ್ ಡುರೊವ್ ಅವರು ಆಪ್‌ ಸೇರುತ್ತಿರುವ ಬಳಕೆದಾರರನ್ನು ಶ್ಲಾಘಿಸಿದರು. ಹಾಗೆಯೇ ಟೆಲಿಗ್ರಾಮ್ 2020 ರಲ್ಲಿ ಪ್ರತಿದಿನ 1.5 ಮಿಲಿಯನ್ ಹೊಸ ಬಳಕೆದಾರರನ್ನು ಸೇರಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಡೌನ್‌ಲೋಡ್‌ಗಳಲ್ಲಿನ ಪ್ರಸ್ತುತ ಬದಲಾವಣೆ ವಿಭಿನ್ನವಾಗಿದೆ. 'ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುವ ನಮ್ಮ 7 ವರ್ಷಗಳ ಇತಿಹಾಸದುದ್ದಕ್ಕೂ ನಾವು ಮೊದಲು ಡೌನ್‌ಲೋಡ್‌ಗಳನ್ನು ಹೊಂದಿದ್ದೇವೆ. ಆದರೆ ಈ ಸಮಯ ವಿಭಿನ್ನವಾಗಿದೆ' ಎಂದು ಡುರೊವ್ ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಶತಕೋಟಿ

ಟೆಲಿಗ್ರಾಮ್ ಈಗ ಅರ್ಧ ಶತಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ ಮತ್ತು ಕಂಪನಿಯ ಬೆಳವಣಿಗೆ ಮೇಲ್ಮುಖವಾಗಿದೆ. ಗೌಪ್ಯತೆ ಮತ್ತು ಸುರಕ್ಷತೆಗೆ ಬದ್ಧವಾಗಿರುವ ಸಂವಹನ ವೇದಿಕೆಯನ್ನು ಬಯಸುವವರಿಗೆ ಟೆಲಿಗ್ರಾಮ್ ಈಗ ದೊಡ್ಡ ಆಶ್ರಯ ತಾಣದಂತಾಗಿದೆ. ಟೆಲಿಗ್ರಾಮ್ ಇದು ಬಳಕೆದಾರರ ನಂಬಿಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಭವಿಷ್ಯದಲ್ಲಿ ಅದರ ಬಳಕೆದಾರರನ್ನು ಕೆಳಗಿಳಿಸುವುದಿಲ್ಲ ಎಂದು ಭರವಸೆ ನೀಡುತ್ತದೆ.

ಗೂಗಲ್

ಟೆಲಿಗ್ರಾಮ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ 500 ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಸಾಮಾಜಿಕ ಮಾಧ್ಯಮ ವಿಭಾಗಕ್ಕಾಗಿ ಆಪಲ್ ಆಪ್ ಸ್ಟೋರ್‌ನಲ್ಲಿ ಒಟ್ಟಾರೆ ಡೌನ್‌ಲೋಡ್‌ಗಳಲ್ಲಿ ಟೆಲಿಗ್ರಾಮ್ ಎರಡನೇ ಸ್ಥಾನದಲ್ಲಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಸಿಗ್ನಲ್ ಹೆಚ್ಚು ಡೌನ್‌ಲೋಡ್ ಮಾಡಲಾದ ಉಚಿತ ಅಪ್ಲಿಕೇಶನ್‌ ಆಗಲು ಯಶಸ್ವಿಯಾದರೆ, ಟೆಲಿಗ್ರಾಮ್ ನಿಧಾನವಾಗಿ ಏಣಿಯನ್ನು ಏರುತ್ತಿದೆ.

Most Read Articles
Best Mobiles in India

English summary
Telegram has now announced that it gained 25 million new users globally joined its platform in the past 72 hours.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X