Home
ಸುದ್ದಿಜಾಲ

ಬರೋಬ್ಬರಿ 50 ಸಾವಿರ ಜನರಿಗೆ ಉಚಿತ 55 ಇಂಚಿನ 4K ಟಿವಿ...ಯಾರಿಗುಂಟು ಯಾರಿಗಿಲ್ಲ!

ನೀವು ಈಗೇನಾದರೂ ಹೊಸ 4K ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಜಿಸುತ್ತಿದ್ದೀರಾ? ಸ್ವಲ್ಪ ಇರಿ ಯಾಕೆಂದರೆ ಈ ಟಿವಿಯನ್ನು ನೀವು ಉಚಿತವಾಗಿಯೇ ಪಡೆದುಕೊಳ್ಳಬಹುದು. ಯಾಕೆಂದರೆ ಟೆಲ್ಲಿ (Telly) ಎಂಬ ಹೆಸರಿನ ಎಲೆಕ್ಟ್ರಾನಿಕ್ಸ್ ಕಂಪೆನಿಯು 50,000 ಉಚಿತ ಟಿವಿಗಳನ್ನು ನೀಡುತ್ತಿದೆ. ಉಚಿತವಾಗಿ ನೀಡಲಾಗುತ್ತಿರುವ ಟಿವಿ ಸೆಟ್‌ಗಳು ಡ್ಯುಯಲ್ ಸ್ಕ್ರೀನ್‌ಗಳೊಂದಿಗೆ ಪ್ಯಾಕ್‌ ಆಗಿವೆ.

ಹೌದು, ನಮ್ಮ ಮನೆಯಲ್ಲಿ ಎಷ್ಟೇ ಎಲೆಕ್ಟ್ರಾನಿಕ್ಸ್ ಡಿವೈಸ್‌ಗಳಿದ್ದರೂ ಸಹ ಸ್ಮಾರ್ಟ್‌ಟಿವಿಗೆ ಇರುವ ಸ್ಥಾನಮಾನವನ್ನು ಅವುಗಳು ತುಂಬಲು ಸಾಧ್ಯವೇ ಇಲ್ಲ. ಟಿವಿ ನಮ್ಮ ಮನಸ್ಸಿಗೆ ಮುದ ನೀಡುವ ಸ್ಮಾರ್ಟ್‌ಡಿವೈಸ್‌ ಆಗಿದೆ. ಜೊತೆಗೆ ಮನೆಗೆ ಆಕರ್ಷಣೆಯನ್ನೂ ಸಹ ಹೆಚ್ಚಿಗೆ ಮಾಡಲಿದೆ. ಈ ಕಾರಣಕ್ಕಾಗಿಯೇ ಜನರು ವಿವಿಧ ರೀತಿಯ ಫೀಚರ್ಸ್‌ ಇರುವ ಸ್ಮಾರ್ಟ್‌ಟಿವಿ ಖರೀದಿಗೆ ಮುಂದಾಗಿದ್ದಾರೆ. ಈ ನಡುವೆ ಉಚಿತವಾಗಿ ಟಿವಿ ಸಿಕ್ಕರೆ ಹೇಗೆ ಎಂದು ಒಮ್ಮೆ ಆಲೋಚಿಸಿ.

ಬರೋಬ್ಬರಿ 50 ಸಾವಿರ ಜನರಿಗೆ ಉಚಿತ 55 ಇಂಚಿನ 4K ಟಿವಿ...ಯಾರಿಗುಂಟು ಯಾರಿಗಿಲ್ಲ!

55 ದೊಡ್ಡ ಡಿಸ್‌ಪ್ಲೇ ಹೊಂದಿರುವ ಅದರಲ್ಲೂ 4K ಸಾಮರ್ಥ್ಯದ ಸ್ಮಾರ್ಟ್‌ಟಿವಿ ಖರೀದಿಸುವುದು ಬಹಳ ಜನರಿಗೆ ಕನಸು. ಆದರೆ ಹಲವರಿಗೆ ಇದನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಈ ಸಾಮರ್ಥ್ಯದ ಟಿವಿಗಳು ಸಾಮಾನ್ಯವಾಗಿ ದುಬಾರಿ ಬೆಲೆ ಹೊಂದಿರುತ್ತವೆ. ಆದರೆ, ಇಲ್ಲೊಂದು ಜಾಹೀರಾತು ಜನರ ನಿದ್ದೆಗೆಡಿಸಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ 50 ಸಾವಿರ ಜನರಿಗೆ ಉಚಿತ ಟಿವಿ ವಿತರಣೆ ಎಂದು ತೋರಿಸಲಾಗುತ್ತಿದೆ.

ಡ್ಯುಯಲ್‌ ಸ್ಕ್ರೀನ್‌ ಆಯ್ಕೆ: ಪ್ಲುಟೊ ಟಿವಿಯ ಸಹ ಸಂಸ್ಥಾಪಕರಾದ ಇಲ್ಯಾ ಪೊಜಿನ್ ಅವರ ಟೆಲ್ಲಿ ಕಂಪೆನಿಯ ಟಿವಿಗಳು ಇವಾಗಿದ್ದು, ಇವರು ಉಚಿತವಾಗಿ ನೀಡಲಾಗುತ್ತಿರುವ ಟಿವಿ ಸೆಟ್‌ಗಳು ಡ್ಯುಯಲ್ ಸ್ಕ್ರೀನ್‌ಗಳೊಂದಿಗೆ ಕಂಡುಬರುತ್ತಿವೆ. ಅಂದರೆ, ಒಂದು ಸ್ಕ್ರೀನ್‌ನಲ್ಲಿ ನಿಮ್ಮಿಷ್ಟದ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದಾಗಿದ್ದು, ಮತ್ತೊಂದು ಸ್ಕ್ರೀನ್‌ನಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ.

ಈ ಜಾಹೀರಾತುಗಳನ್ನು ಸ್ಮಾರ್ಟ್ ಡಿಸ್‌ಪ್ಲೇ ಎಂದು ಕರೆಯಲಾಗುವ ಎರಡನೇ ಅಥವಾ ಚಿಕ್ಕ ಡಿಸ್‌ಪ್ಲೇನಲ್ಲಿ ಪ್ರದರ್ಶಿಸಲಾಗುತ್ತದೆ. ಈ ಚಿಕ್ಕ ಡಿಸ್‌ಪ್ಲೇಯನ್ನು ಮುಖ್ಯ ಟಿವಿಯಿಂದ ಹಾಗೂ ಸೌಂಡ್‌ಬಾರ್‌ನಿಂದ ಪ್ರತ್ಯೇಕಿಸಲಾಗಿದ್ದು, ಇದು ಕ್ರೀಡಾ ಸ್ಕೋರ್‌ಗಳು, ಸುದ್ದಿ ಟಿಕರ್‌ಗಳು, ಹವಾಮಾನ ಮತ್ತು ಸ್ಟಾಕ್ ಬೆಲೆಗಳಂತಹ ಮೋಜಿನ ವಿಜೆಟ್‌ಗಳ ಗುಂಪನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಬರೋಬ್ಬರಿ 50 ಸಾವಿರ ಜನರಿಗೆ ಉಚಿತ 55 ಇಂಚಿನ 4K ಟಿವಿ...ಯಾರಿಗುಂಟು ಯಾರಿಗಿಲ್ಲ!

ಎಷ್ಟು ಜನರಿಗೆ ಈ ಫ್ರೀ ಟಿವಿ: ಕಂಪನಿಯ ಸ್ಮಾರ್ಟ್ ಟಿವಿಗಳನ್ನು ಜನಸಾಮಾನ್ಯರಿಗೆ ದೊಡ್ಡ ಮಟ್ಟದಲ್ಲಿ ತಲುಪಿಸಲು ಮತ್ತು ಮಾರಾಟದಿಂದ ಭಾರಿ ಲಾಭವನ್ನು ಪಡೆಯಲು ಇಲ್ಯಾ ಪೊಜಿನ್ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲು ನಿರ್ಧರಿಸಿದ್ದಾರೆ. ಅದರ ಆಧಾರದ ಮೇಲೆಯೇ 50 ಮಂದಿಗೆ 55 ಇಂಚಿನ 4K ಸ್ಮಾರ್ಟ್ ಟಿವಿ ನೀಡುವುದಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಜನರಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ಈ ಸ್ಮಾರ್ಟ್‌ಟಿವಿಗಳು ಟೆಲ್ಲಿಓಎಸ್‌ನಲ್ಲಿ ರನ್‌ ಆಗಲಿದ್ದು, ಅಮೆಜಾನ್‌ ಪ್ರೈಮ್‌,ಡಿಸ್ನಿ+ ಹಾಟ್‌ಸ್ಟಾರ್ ರೀತಿಯ ಥರ್ಡ್-ಪಾರ್ಟಿ ಸ್ಟ್ರೀಮಿಂಗ್ ಆಪ್‌ಗಳು ಸಹ ಈ ಟಿವಿಯಲ್ಲಿ ಇರಲಿವೆ.ಇದರೊಂದಿಗೆ ರೋಕು, ಅಮೆಜಾನ್ ಫೈರ್‌ ಸ್ಟಿಕ್‌ ಹಾಗೂ ಆಪಲ್‌ ಟಿವಿ ಅನ್ನು ಸಹ ಬಳಕೆ ಮಾಡಬಹುದಾಗಿದ್ದು, ಇವುಗಳನ್ನು ಆಂಡ್ರಾಯ್ಡ್ ಲೈನ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಮೂರು ಹೆಚ್‌ಡಿಎಮ್‌ಐ ಇನ್‌ಪುಟ್‌ಗಳು ಮತ್ತು ಎರಡು ಯುಎಸ್‌ಬಿ ಇನ್‌ಪುಟ್‌ ಆಯ್ಕೆ ಇದರಲ್ಲಿದ್ದು, ಈ ಟಿವಿಯ ಬೆಲೆ ಸುಮಾರು 50ಸಾವಿರ ರೂ.ಗಳಿಗೂ ಅಧಿಕ ಎನ್ನಲಾಗಿದೆ.

ಬರೋಬ್ಬರಿ 50 ಸಾವಿರ ಜನರಿಗೆ ಉಚಿತ 55 ಇಂಚಿನ 4K ಟಿವಿ...ಯಾರಿಗುಂಟು ಯಾರಿಗಿಲ್ಲ!

ಈ ಉಚಿತ ಟಿವಿಯನ್ನು ಯಾರು ಹಾಗೂ ಹೇಗೆ ಪಡೆಯುವುದು ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ತಿಳಿಸಿಲ್ಲ. ಅದಾಗ್ಯೂ ಟೆಲ್ಲಿ ವೆಬ್‌ಸೈಟ್‌ನಲ್ಲಿ ಕಂಡು ಬರುವಂತೆ ಅದರಲ್ಲಿ ಮೊದಲು ನಿಮ್ಮ ಹೆಸರು,ಫೋನ್ ನಂಬರ್‌ ಹಾಗೂ ಇಮೇಲ್‌ ವಿಳಾಸವನ್ನು ಭರ್ತಿ ಮಾಡಬೇಕು.ತದನಂತರ ನಿಮ್ಮನ್ನು ಟೆಲ್ಲಿ ಆಪ್‌ ಇನ್‌ಸ್ಟಾಲ್‌ ಮಾಡಲು ಕೇಳುತ್ತದೆ.ಆದರೆ,ಇದನ್ನು ಯುಎಸ್‌ ಬಳಕೆದಾರರಿಗೆ ಮಾತ್ರ ಮೀಸಲಿರಿಸಲಾಗಿದೆ.ಬದಲಾಗಿ ನಮ್ಮ ದೇಶವೂ ಸೇರಿದಂತೆ ಇತರೆ ದೇಶಗಳಲ್ಲಿ ಯಾವಾಗ ಉಚಿತ ಟಿವಿ ನೀಡಲಾಗುತ್ತದೆಯೇ ಎಂಬುದು ತಿಳಿದಿಲ್ಲ.

Best Mobiles in India

English summary
Pluto TV co-founder Ilya Pozin's telly company is offering new 55-inch 4K Smart TVs for free. For now only people in the US can get this TV for free.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+