ದೇವಸ್ಥಾನಗಳಲ್ಲಿನ ಪೂಜೆ ಆನ್‌ಲೈನ್‌ನಲ್ಲಿ ನೇರ ಪ್ರಸಾರ; ಮನೆಗೆ ಪ್ರಸಾದ!

|

ಕಿಲ್ಲರ್ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದಾಗಿಂದ ದೇವಸ್ಥಾನಗಳ ಬಾಗಿಲು ಬಂದ್‌ ಮಾಡಲಾಗಿದೆ. ಸದ್ಯ ಜಾರಿಯಲ್ಲಿರುವ ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲ ಸಡಿಲಿಕೆ ಇದ್ದರೂ, ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಸರ್ಕಾರ ಅವಕಾಶ ನೀಡಿಲ್ಲ. ಆದ್ರೆ ಭಕ್ತರಿಗೆ ದೇವರ ದರ್ಶನ ಮಾಡಲು ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಲು ಮುಂದಾಗಿದೆ.

ಆನ್‌ಲೈನ್‌ ಮೂಲಕವೇ ದೇವರ ದರ್ಶನ

ಹೌದು, ಭಕ್ತರಿಗೆ ಆನ್‌ಲೈನ್‌ ಮೂಲಕವೇ ದೇವರ ದರ್ಶನ ಮಾಡಿಸಲು ರಾಜ್ಯ ಮುಜರಾಯಿ ಇಲಾಖೆ ವ್ಯವಸ್ಥೆ ಮಾಡುತ್ತಿದೆ. ಇದೇ ತಿಂಗಳ ಅಂತ್ಯದೊಳಗೆ ಈ ಸೌಲಭ್ಯ ಜಾರಿ ಮಾಡುವ ಯೋಜನೆ ಇದೆ ಎಂದು ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ. ಇನ್ನು ದೇವರಿಗೆ ಪೂಜಾ ಕಾರ್ಯಗಳನ್ನು ಮಾಡಿಸುವ ಭಕ್ತರು ಆನ್‌ಲೈನ್ ಮೂಲಕವೇ ಪೂಜೆಯ ವೆಚ್ಚ ಪಾವತಿಸಬಹುದಾಗಿದೆ. ಹಾಗೂ ಆನ್‌ಲೈನ್ ಮೂಲಕ ಪೂಜೆ ವೀಕ್ಷಿಸಬಹುದಾಗಿದೆ.

ನೇರ ಪ್ರಸಾರ

ನೇರ ಪ್ರಸಾರ

ದೇವಾಲಯದ ವೆಬ್‌ಸೈಟ್‌ಗಳು ಮತ್ತು ಫೇಸ್‌ಬುಕ್‌ನಲ್ಲಿ ಸುಮಾರು 15 ಜಿಲ್ಲೆಗಳಲ್ಲಿ ಪೂಜೆಗಳ ನೇರ ಪ್ರಸಾರವನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಅವರು ಹೇಳಿದರು. ಹಾಗೆಯೇ ಆನ್‌ಲೈನ್‌ನಲ್ಲಿ ಪೂಜೆಗಳನ್ನು ಕಾಯ್ದಿರಿಸುವ ಭಕ್ತರ ಮನೆಗೆ ಪ್ರಸಾದ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.

15 ಬಗೆಯ ಪೂಜೆಗಳು

15 ಬಗೆಯ ಪೂಜೆಗಳು

ಆನ್‌ಲೈನ್‌ನಲ್ಲಿ ಮಂಗಳಾರಥಿ, ಅರ್ಚನೆ, ಪುಷ್ಪಲಂಕರ ಪೂಜೆ, ಮತ್ತು ಅಷ್ಟೋಥರ ಪೂಜೆ ಸೇರಿದಂತೆ 15 ಬಗೆಯ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಇನ್ನು ಈ ಪೂಜೆಗಳನ್ನು ಮಾಡಿಸಲಿಚ್ಛಿಸುವ ಭಕ್ತರು ಮೊದಲೇ ಆನ್‌ಲೈನ್‌ನಲ್ಲಿ ಕಾಯ್ದಿರಿಸುವ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡುವ ಯೋಜನೆ ಇದೆ ಎಂದಿದ್ದಾರೆ.

ಈ ದೇವಸ್ಥಾನಗಳಲ್ಲಿ ಆನ್‌ಲೈನ್‌ ಪೂಜೆ

ಈ ದೇವಸ್ಥಾನಗಳಲ್ಲಿ ಆನ್‌ಲೈನ್‌ ಪೂಜೆ

ದೇವಾಲಯದ ವೆಬ್‌ಸೈಟ್‌ಗಳು ಮತ್ತು ಫೇಸ್‌ಬುಕ್‌ನಲ್ಲಿ ಸುಮಾರು 15 ಜಿಲ್ಲೆಗಳಲ್ಲಿ ಪೂಜೆಗಳ ನೇರ ಪ್ರಸಾರವನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಅವರು ಹೇಳಿದರು. ಆನ್‌ಲೈನ್‌ನಲ್ಲಿ ಪೂಜೆಗಳನ್ನು ಕಾಯ್ದಿರಿಸುವವರ ಮನೆಗಳಿಗೆ ‘ಪ್ರಸಾದ' ತಲುಪಿಸಲಾಗುವುದು ಎಂದರು. ಮಂಗಳಾರಥಿ, ಅರ್ಚೇನ್, ಪುಷ್ಪಲಂಕರ ಪೂಜೆ, ಮತ್ತು ಅಷ್ಟೋಥರ ಸೇರಿದಂತೆ 15 ಬಗೆಯ ಪೂಜೆಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಸದ್ಯದಲ್ಲಿಯೇ ಆನ್‌ಲೈನ್ ದರ್ಶನ

ಸದ್ಯದಲ್ಲಿಯೇ ಆನ್‌ಲೈನ್ ದರ್ಶನ

ಆನ್‌ಲೈನ್‌ ಮೂಲಕ ರಾಜ್ಯ ಮುಜರಾಯಿ ವ್ಯಾಪ್ತಿಯ ದೇಗುಲಗಳ ದೇವರ ದರ್ಶನ ಮಾಡಿಸುವ ಯೋಜನೆಯನ್ನು ಸದ್ಯದಲ್ಲಿಯೇ ಆರಂಭ ಮಾಡಲಾಗುತ್ತದೆ. ಇನ್ನು ಇದೇ ಮೇ ತಿಂಗಳ ಅಂತ್ಯದೊಳಗೆ ಭಕ್ತರಿಗೆ ದೇವಸ್ಥಾನಗಳಲ್ಲಿನ ದೇವರ ಪೂಜೆಯ ದರ್ಶನ ಸಿಗಲಿದೆ.

Most Read Articles
Best Mobiles in India

English summary
Government was planning to introduce live telecast of pujas in nearly 15 districts on temple websites and Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X