ಒನ್‌ಪ್ಲಸ್‌ 8 ಪ್ರೊ ಫೋನಿನ ಐದು ಆಕರ್ಷಕ ಅಂಶಗಳು!

|

ಒನ್‌ಪ್ಲಸ್‌ ಸಂಸ್ಥೆಯು ಇತ್ತೀಚಿಗಷ್ಟೆ ತನ್ನ ಬಹುನಿರೀಕ್ಷಿತ ಒನ್‌ಪ್ಲಸ್‌ 8 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಒನ್‌ಪ್ಲಸ್‌ 8 ಮತ್ತು ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ. ಅವುಗಳಲ್ಲಿ ಒನ್‌ಪ್ಲಸ್‌ 8 ಪ್ರೊ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಕ್ಯಾಮೆರಾ, ಪ್ರೊಸೆಸರ್‌, ಬ್ಯಾಟರಿ ಗಳಲ್ಲದೇ ಇನ್ನು ಕೆಲವು ವಿಶೇಷ ಮತ್ತು ಹೈ ಎಂಡ್‌ ಫೀಚರ್ಸ್‌ಗಳಿಂದ ಸ್ಮಾರ್ಟ್‌ಫೋನ್‌ ಪ್ರಿಯರ ಗಮನ ಸೆಳೆದಿದೆ.

ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್

ಹೌದು, ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್‌ 865 SoC ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 10 ಓಎಸ್‌ ಪಡೆದಿದೆ. ಕ್ವಾಡ್‌ ಕ್ಯಾಮೆರಾ ಸೆಟ್ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್‌ನಲ್ಲಿದೆ. ಎರಡು ವೇರಿಯಂಟ್‌ ಮಾದರಿಗಳನ್ನು ಹೊಂದಿದ್ದು, 8GB+128GB ಸ್ಟೋರೇಜ್‌ನ ಬೇಸ್‌ ವೇರಿಯಂಟ್‌ನ ಒನ್‌ಪ್ಲಸ್‌ 8 ಪ್ರೊ ಫೋನಿನ ಆರಂಭಿಕ ಬೆಲೆಯು 54,999ರೂ. ಆಗಿದೆ. ಇವುಗಳ ಜೊತೆಗೆ ಇನ್ನೂ ಕೆಲವು ಫೀಚರ್ಸ್‌ಗಳು ಟ್ರೆಂಡಿ ಅನಿಸಿವೆ. ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಬ್ರೈಟ್‌ ಡಿಸ್‌ಪ್ಲೇ

ಬ್ರೈಟ್‌ ಡಿಸ್‌ಪ್ಲೇ

ಒನ್‌ಪ್ಲಸ್ 8 ಪ್ರೊ 6.78 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.8:9 ಆಗಿದೆ. ಹಾಗೆಯೇ QHD+ ಪಿಕ್ಸಲ್ ರೆಸಲ್ಯೂಶನ್ ಪಡೆದಿರುವ ಜೊತೆಗೆ 120Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ. ಕಂಫರ್ಟ್‌ ಟ್ಯೂನ್‌ ಎಂಬ ಹೊಸ ಆಯ್ಕೆ ಇದ್ದು, ಪಂಚ್-ಹೋಲ್ ಕ್ಯಾಮೆರಾ ರಚನೆ ಪಡೆದಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಆಯ್ಕೆ ಸಹ ಈ ಫೋನಿನಲ್ಲಿದೆ.

ಪವರ್‌ಫುಲ್ ಸಾಫ್ಟ್‌ವೇರ್

ಪವರ್‌ಫುಲ್ ಸಾಫ್ಟ್‌ವೇರ್

ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ ಪವರ್‌ಫುಲ್‌ ಪ್ರೊಸೆಸರ್‌ ಹೊಂದಿದ್ದು, ಸರಳ ಮತ್ತು ಮೃದು ಕಾರ್ಯವೈಖರಿ ಪಡೆದಿದೆ. ಈ ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 865 SoC ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ Adreno 650 GPU ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಪ್ರೊಸೆಸರ್‌ ಆಂಡ್ರಾಯ್ಡ್‌ 10 ಆಕ್ಸಿಜನ್ ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ಗಳು ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB/12GB RAM ಮತ್ತು 128GB/256GB ಆಗಿವೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ ಹಾಗೂ ಸೆಕೆಂಡರಿ ಕ್ಯಾಮೆರಾ ಎರಡು 48ಎಂಪಿ ಸೆನ್ಸಾರ್ನಲ್ಲಿವೆ. ಹಾಗೆಯೇ ಇನ್ನುಳಿದೆರಡು ಕ್ಯಾಮೆರಾಗಳು 8ಎಂಪಿ ಮತ್ತು 5ಎಂಪಿ ಸೆನ್ಸಾರ್ ಪಡೆದಿವೆ. ಈ ಫೋನ್ ಸಹ ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಪಡೆದಿದೆ.

ವೇಗದ ವಾಯರ್‌ಲೆಸ್‌ ಚಾರ್ಜಿಂಗ್

ವೇಗದ ವಾಯರ್‌ಲೆಸ್‌ ಚಾರ್ಜಿಂಗ್

ಒನ್‌ಪ್ಲಸ್ 8 ಪ್ರೊ ಸ್ಮಾರ್ಟ್‌ಫೋನ್ ವಾಯರ್‌ಲೆಸ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಹಾಗೂ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಇದು ಒಳಗೊಂಡಿದೆ. ಹಾಗೆಯೇ 30w ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಸಹ ಪಡೆದಿದೆ.

ಚಾರ್ಮಿಂಗ್ ಕಲರ್

ಚಾರ್ಮಿಂಗ್ ಕಲರ್

ಒನ್‌ಪ್ಲಸ್‌ 8 ಪ್ರೊ ಸ್ಮಾರ್ಟ್‌ಫೋನ್ ಆಕರ್ಷಕ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಈ ಫೋನ್ ಗ್ಲೇಶಿಯಲ್ ಗ್ರೀನ್ ಮತ್ತು ಮ್ಯಾಟ್ ಫ್ರಾಸ್ಟೆಡ್ ಬ್ಯಾಕ್ ಬಣ್ಣಗಳ ಆಯ್ಕೆ ಹೊಂದಿದೆ. ಈ ಫೋನ್‌ನಲ್ಲಿ ಕ್ಯಾಮೆರಾಗ ರಚನೆಯು ಲಂಬವಾಗಿ ಜೋಡಿಸಲ್ಪಟ್ಟಿದ್ದು, ಸುಂದರ ಲುಕ್‌ ನೀಡಿದೆ.

Best Mobiles in India

English summary
These 5 things increase the demand of OnePlus 8 Pro.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X