Subscribe to Gizbot

ಭಾರತದ ಈ ಧೀರೆಯರಿಗೆ ಒಂದು ಸಲಾಮ್‌ ಹೇಳಿ

Posted By:

ಯಶಸ್ವಿ ಪುರುಷರ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಒಂದು ಮಾತಿದೆ. ಆದರೆ ಭಾರತದಲ್ಲಿ ಮಹಿಳೆಗೆ ಸರಿಯಾದ ಶಿಕ್ಷಣ ಮತ್ತು ಅವರ ಸಾಧನೆಗೆ ಪ್ರೋತ್ಸಾಹ ನೀಡಿದರೆ ಪುರುಷರನ್ನು ಹಿಂದಿಕ್ಕಿ ಹೋಗುತ್ತಾಳೆ ಎನ್ನುವುದಕ್ಕೆ ಈ ಕೆಳಗೆ ನೀಡಲಾಗಿರುವ ಯಶಸ್ವಿ ಮಹಿಳೆಯರೇ ಸಾಕ್ಷಿ.ಪುರುಷರಿಗೆ ಸರಿ ಸಮಾನವಾಗುವಂತೆ ಕೆಲಸ ಮಾಡಿ, ಟೆಕ್‌ ಕ್ಷೇತ್ರದ ದಿಗ್ಗಜ ಕಂಪೆನಿಗಳಲ್ಲಿ ದೊಡ್ಡ ಹುದ್ದೆಯನ್ನು ಏರಿ ಮಹತ್ತರವಾದ ಜವಾಬ್ದಾರಿಯನ್ನು ನಿಭಾಯಿಸಿದ ಧೀರೆಯರು ಇವರು. ಅಂತರಾಷ್ಟ್ರೀಯ ಕಂಪೆನಿಗಳೇ ಇವರ ಸಾಧನೆಯನ್ನು ಗುರುತಿ ಕೊಂಡಾಡಿವೆ. ಹೀಗಾಗಿ ಅವರ ಕಿರು ಪರಿಚಯ ಮತ್ತು ಸಾಧನೆಗಳನ್ನು ಗಿಜ್ಬಾಟ್‌ ತನ್ನ ಓದುಗರಿಗಾಗಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೋಗಿ.

ಲಿಂಕ್‌ : ವಿಶ್ವದ ಟಾಪ್‌ 5 ಪ್ರಭಾವಿ ಟೆಕ್ ಮಹಿಳೆಯರು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪದ್ಮಶ್ರೀ ವಾರಿಯರ್‌

ಪದ್ಮಶ್ರೀ ವಾರಿಯರ್‌

ಮುಖ್ಯ ತಂತ್ರಜ್ಞಾನ ಮತ್ತು ಕಾರ್ಯತಂತ್ರ ಅಧಿಕಾರಿ, ಸಿಸ್ಕೋ ಸಿಸ್ಟಂ
ಅಂತರಾಷ್ಟೀಯ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುವಾಸಿಯಾದ ಮಹಿಳೆ ಪದ್ಮಶ್ರೀ ವಾರಿಯರ್‌.ಪಾನ್ ಏಶಿಯನ್‌ ಪ್ರಶಸ್ತಿ, ವೈಎಂಸಿಎ ಪ್ರಶಸ್ತಿ ಪಡೆದಿದ್ದಾರೆ. ಅಂತರಾಷ್ಟೀಯ ಮಟ್ಟದಲ್ಲಿ 2007ರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಾಲ್‌ಆಫ್‌ ಫೇಮ್‌ ಲಿಸ್ಟ್‌ಗೆ ಆಯ್ಕೆ.

ಐಐಟಿಯಲ್ಲಿ ಕೆಮಿಕಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ,ಕಾರ್ನಲ್‌ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್‌ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಕೀರ್ತಿಗಾ ರೆಡ್ಡಿ

ಕೀರ್ತಿಗಾ ರೆಡ್ಡಿ

ಆನ್‌ಲೈನ್‌ ವಿಭಾಗದ ಮಖ್ಯಸ್ಥೆ ಮತ್ತು ನಿರ್ದೇಶಕಿ,ಫೇಸ್‌ಬುಕ್‌ ಇಂಡಿಯಾ

ಫೇಸ್‌ಬುಕ್‌ ಕಂಪೆನಿಯ ನಿರ್ದೇಶಕಿಯಾಗಿ ಆಯ್ಕೆಯಾಗುವ ಮೊದಲು Phoenix Technologie ಉದ್ಯೋಗ.ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ, Syracuse ವಿಶವಿದ್ಯಾಲಯದಿಂದ ಕಂಪ್ಯೂಟರ್‌ನಲ್ಲಿ ಎಂಎಸ್‌ ಪದವಿ, ಅಂಬೇಡ್ಕರ್‌ ವಿವಿಯಿಂದ ಬಿ.ಇ ಪದವಿ ಪಡೆದಿದ್ದಾರೆ.

ನೀಲಂ ಧವನ್‌

ನೀಲಂ ಧವನ್‌

ಆಡಳಿತ ನಿರ್ದೇಶಕಿ ,ಎಚ್‌ಪಿ ಇಂಡಿಯಾ
ಎಚ್‌ಪಿ ಕಂಪೆನಿ ಆಡಳಿತ ನಿರ್ದೇಶಕಿಯಾಗುವ ಮೊದಲು ಮೈಕ್ರೋಸಾಫ್ಟ್‌ ಇಂಡಿಯಾದಲ್ಲಿ ಉದ್ಯೋಗ. 2005 ರಿಂದ 2008ರವರಗೆ ಆಡಳಿತ ನಿರ್ದೇಶಕಿಯಾಗಿ ಸೇವೆ.ನೀಲಂ ಧವನ್‌, ಸೈಂಟ್‌. ಸ್ಟೀಫನ್‌ ಕಾಲೇಜ್‌ನ ಅರ್ಥಶಾಸ್ತ್ರದಲ್ಲಿ ಪದವಿ, ದೆಹಲಿ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ.

ಅರುಣಾ ಜಯಂತಿ

ಅರುಣಾ ಜಯಂತಿ

ಸಿಇಒ.ಕ್ಯಾಪ್‌ಜಿಮಿನಿ ಇಂಡಿಯಾ
Capegemin ಇಂಡಿಯಾದ ಔಟ್‌ಸೋರ್ಸಿಂಗ್‌ ಸೇವೆಯ ಗುಣಮಟ್ಟ ಹೆಚ್ಚಿಸಿದ ಸಾಧನೆಗಾರ್ತಿ.ಇವರ ಸಾಧನೆಗೆ ಫಾರ್ಚೂನ್‌ ಇಂಡಿಯಾದವರು ನಡೆಸಿದ ಯಶಸ್ವಿ ಭಾರತೀಯ ಮಹಿಳಾ ಉದ್ಯಮಿ ಪಟ್ಟಿಯಲ್ಲಿ 3ನೇ ಸ್ಥಾನ, ಬ್ಯುಸಿನೆಸ್‌ ಟುಡೇ 2012ರಲ್ಲಿ ಅತ್ಯಂತ ಪ್ರಭಾವಶಾಲಿ ಮಹಿಳಾ ಉದ್ಯಮಿ ಎಂಬ ಸ್ಥಾನವನ್ನು ನೀಡಿದೆ.

ದೆಬ್‌ಜನಿ ಘೋಷ್‌

ದೆಬ್‌ಜನಿ ಘೋಷ್‌

ಸೇಲ್ಸ್‌ ಮತ್ತು ಮಾರುಕಟ್ಟೆ ವಿಭಾಗದ ಮ್ಯಾನೇಜಿಂಗ್‌ ಡೈರೆಕ್ಟರ್‌, ಇಂಟೆಲ್‌ ದಕ್ಷಿಣ ಏಷ್ಯಾ
ದಕ್ಷಿಣ ಏಷ್ಯಾದಲ್ಲಿ ಇಂಟೆಲ್‌ ಮಾರುಕಟ್ಟೆಯನ್ನು ಹೆಚ್ಚಿಸಿ, ಸರ್ಕಾರ ಮತ್ತು ಟೆಕ್ನಾಲಜಿ ಕ್ಷೇತ್ರದ ಸಂಬಂಧವನ್ನು ಉತ್ತಮ ಪಡಿಸಿದ ಸಾಧನೆಗಾರ್ತಿ. ಸದ್ಯ ಇಂಡೋನೇಷ್ಯಾ, ಸಿಂಗಾಪೂರ್‌,ಮಲೇಷ್ಯಾ, ಥೈಲೆಂಡ್, ಪಿಲಿಫೈನ್ಸ್‌,ವಿಯೇಟ್ನಾಂ, ಲಾವೋಸ್‌ ದೇಶಗಳ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದಾರೆ.ಘೋಷ್‌ ಮುಂಬೈ ಎಸ್‌ಪಿ ಜೈನ್‌ ಕಾಲೇಜ್‌ನಲ್ಲಿ ಮಾರ್ಕೇಟಿಂಗ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

 ರೇಖಾ ಎಂ ಮೆನನ್‌

ರೇಖಾ ಎಂ ಮೆನನ್‌

ಕಾರ್ಯನಿರ್ವಾಹಕ ನಿರ್ದೇಶಕಿ, ಅಸೆಂಚರ್‌
ಯಾವುದೇ ಒಂದು ಕಂಪೆನಿ ಯಶಸ್ವಿಯಾಗಲು ಅದಕ್ಕೆ ದಕ್ಷ ಉದ್ಯೋಗಿಗಳ ನೇಮಕವಾಗಬೇಕು. ಹಾಗಾಗಿ ಅಸೆಂಚರ್‌ ಕಂಪೆನಿಯನ್ನು ಗುಣಮಟ್ಟದ ಉದ್ಯೋಗಿಗಳನ್ನು ನೇಮಕ ಮಾಡಿ ಭಾರತದಲ್ಲಿ ಅಸೆಂಚರ್‌ನ್ನು ಯಶಸ್ವಿ ಕಂಪೆನಿಯನ್ನಾಗಿ ಮಾಡಿದ ಕೀರ್ತಿ ರೇಖಾ ಎಂ ಮೆನನ್‌ಗೆ ಸಲ್ಲುತ್ತದೆ. ಸದ್ಯ ಮಾನವ ಸಂಪನ್ಮೂಲ,ಮಾರ್ಕೆಟಿಂಗ್ ಫೈನಾನ್ಸ್‌ ನೋಡಿಕೊಳ್ಳುತ್ತಿದ್ದಾರೆ.

ಐಟಿ ಉದ್ಯಮದಲ್ಲಿ 20 ವರ್ಷಗಳ ಅನುಭವ ರೇಖಾ ಮೆನನ್ ಅವರಿಗಿದೆ. ಈ ಹಿಂದೆ Levis Strauss, Akzo Nobel, Cargill ,Talisma Corporation ಸಂಸ್ಥೆಯಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ.
XLRI ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ಚಿನ್ನದ ಪದಕದೊಂದಿಗೆ ಎಂಬಿಎ ಪದವಿಯನ್ನು ಪಡೆದಿದ್ದಾರೆ.

ರೂಪಾ ಕುಡ್ವಾ

ರೂಪಾ ಕುಡ್ವಾ

ಸಿಇಒ ಮತ್ತು ಮ್ಯಾನೇಜಿಂಗ್‌ ಡೈರೆಕ್ಟರ್‌,ಕ್ರಿಸಿಲ್‌
1992ರಲ್ಲಿ CRISIL ಕಂಪೆನಿಗೆ ರೂಪಾ ಕುಡ್ವಾ ನೇಮಕ.CRISIL ಸೇರುವ ಮೊದಲು ಐಡಿಬಿಐ ಬ್ಯಾಂಕ್‌ನಲ್ಲಿ ಪ್ರೊಜೆಕ್ಟ್‌ ಫೈನಾನ್ಸ್‌ ವಿಭಾಗದಲ್ಲಿ ಉದ್ಯೋಗಿ ಸೇವೆ ಸಲ್ಲಿಸಿದ್ದರು.ಸಂಖ್ಯಾಶಾಸ್ತ್ರ (Statistics)ನಲ್ಲಿ ಪದವಿ, ಅಹಮದಾಬಾದ್‌ ಐಐಎಂನಿಂದ ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ರೂಪಾ ಕುಡ್ವಾ ಪಡೆದಿದ್ದಾರೆ.

ವನಿತಾ ನಾರಾಯಣನ್‌

ವನಿತಾ ನಾರಾಯಣನ್‌

ಮ್ಯಾನೇಜಿಂಗ್‌ ಡೈರೆಕ್ಟರ್‌,ಐಬಿಎಂ ಇಂಡಿಯಾ
ವನಿತಾ ನಾರಾಯಣನ್‌ ಐಬಿಎಂ ಕಂಪೆನಿಯ ಭಾರತ ಮತ್ತು ದಕ್ಷಿಣ ಏಷ್ಯಾ ದೇಶಗಳ ಸೇಲ್ಸ್‌,ಮಾರುಕಟ್ಟೆಯ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡುತ್ತಿದ್ದಾರೆ, ಐಟಿ ಉದ್ಯಮದಲ್ಲಿ 25 ವರ್ಷಗಳ ಅನುಭವ ವನಿತಾ ನಾರಾಯಣನ್‌ಗೆ ಇದೆ.ಮಾರ್ಕೆಟಿಂಗ್‌ನಲ್ಲಿ ಮದ್ರಾಸ್‌ ವಿವಿಯಿಂದ ಎಂಬಿಎ ಪದವಿಯನ್ನು ವನಿತಾ ನಾರಾಯಣನ್‌ ಪಡೆದಿದ್ದಾರೆ.

 ರೋಷನಿ ನಡರ್‌

ರೋಷನಿ ನಡರ್‌

ಸಿಇಒ,ಎಚ್‌ಸಿಎಲ್‌
ರೋಷನಿ ನಡರ್‌ ಎಚ್‌ಸಿಎಸಲ್‌ ಕಂಪೆನಿಯ ಸಂಸ್ಥಾಪಕ ಶಿವ ನಡಾರ್‌ ಅವರ ಏಕೈಕ ಪುತ್ರಿ,ತಂದೆಯಂತೆ ಮಗಳು ಸಹ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಾನ್‌ ಸಾಧನೆ ಮಾಡುತ್ತಿದ್ದಾರೆ. ಸದ್ಯ ಎಚ್‌ಸಿಎಲ್‌ ಇನ್ಫೋ ಸಿಸ್ಟಂ,ಎಚ್‌ಸಿಎಲ್‌ ಟೆಕ್ನಾಲಜಿಸ್‌ನ ಸಿಇಒ ಮತ್ತು ಎಕ್ಸ್‌ಕ್ಯೂಟಿವ್‌ ಡೈರೆಕ್ಷರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot