ಟ್ರಂಪ್ ಕಾರಿನ ಸುರಕ್ಷತೆಯ ಬಗ್ಗೆ ತಿಳಿದ್ರೆ, ಖಂಡಿತ ಅಚ್ಚರಿ ಪಡ್ತಿರಾ!

|

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಮೊಟೆರಾ ಕ್ರಿಡಾಂಗಣದಲ್ಲಿ ನಡೆಯುವ 'ನಮಸ್ತೆ ಟ್ರಂಪ್' ಕಾರ್ಯಕ್ರಮ ಹೆಚ್ಚು ಕುತೂಹಲ ಮೂಡಿಸಿದೆ. ಇದು ಒಂದೆಡೆಯಾದರೇ ಟ್ರಂಪ್ ಭಾರತಕ್ಕೆ ಬರುವ ಮುನ್ನವೇ ಅಧ್ಯಕ್ಷರ ಕಾರು ಭಾರತಕ್ಕೆ ಬಂದಿದ್ದು, ಮತ್ತಷ್ಟು ಅಚ್ಚರಿ ಮೂಡಿಸಿದೆ. ಜೊತೆಗೆ ಟ್ರಂಪ್ ಕಾರಿನ ವಿಶೇಷತೆಗಳು ಏನು ಎನ್ನುವ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲಗಳು ಇವೆ.

Beast-ಬೀಸ್ಟ್‌ ಕಾರು

ಭಾರತ ಪ್ರವಾಸ ಕೈಗೊಂಡಿರುವ ಟ್ರಂಪ್ ಆಕರ್ಷಣೆಯ ಕೇಂದ್ರವಾಗಿದ್ದು, ಅವರ ಕಪ್ಪು ಬಣ್ಣದ Beast-ಬೀಸ್ಟ್‌ ಕಾರು ಮೇಲು ಸಹ ಈಗ ಎಲ್ಲರ ದೃಷ್ಠಿ ಬಿದ್ದಿದೆ. ಅಧ್ಯಕ್ಷರ ಬೀಸ್ಟ್ ಕಾರು ನೋಡಲು ಆಕರ್ಷಕವಾಗಿದ್ದು, ಕಾರಿನ ಸೌಲಭ್ಯಗಳು ಸಹ ಅತೀ ಉನ್ನತ ಮಟ್ಟದಲ್ಲಿವೆ. ಈ ಕಾರು ಎಲ್ಲ ರೀತಿಯಿಂದಲೂ ಸುರಕ್ಷತೆ ಒದಗಿಸುವ ರಚನೆಯನ್ನು ಪಡೆದಿದೆ. ಟ್ರಂಪ್ ಕಾರಿನ ಕುತೂಹಲಕಾರಿ ಅಂಶಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಮುಂದೆ ಓದಿರಿ.

ಕಸ್ಟಮೈಸ್-ಬೀಸ್ಟ್ ಕಾರ

ಕಸ್ಟಮೈಸ್-ಬೀಸ್ಟ್ ಕಾರ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 24, 2018 ರಿಂದ ದಿ ಬೀಸ್ಟ್‌ ಕಾರನ್ನು ಬಳಕೆ ಮಾಡುತ್ತಿದ್ದಾರೆ. ಈ ಕಾರ ಕಸ್ಟಮೈಸ್ ಡಿಸೈನ್/ರಚನೆ ಹೊಂದಿದ್ದು, ಅಧ್ಯಕ್ಷರ ಸುರಕ್ಷತೆಯ ಅನುಕೂಲಕ್ಕೆ ತಕ್ಕಂತೆ ರಚಿಸಲಾಗಿದೆ.

ಕಾರಿನ ಸುರಕ್ಷತೆಯ ಅಂಶಗಳು

ಕಾರಿನ ಸುರಕ್ಷತೆಯ ಅಂಶಗಳು

* ಬೀಸ್ಟ್ ಕಾರಿನಲ್ಲಿ ಸುರಕ್ಷತೆಯ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಾರಿನ ಕಿಡಕಿಯ ಗ್ಲಾಸ್‌ಗಳು ಐದು ಲೇಯರ್‌ಗಳ ಪಾಲಿಕಾರ್ಬೋನೆಟ್‌ ಮತ್ತು ಗ್ಲಾಸ್‌ಗಳ ರಚನೆಯನ್ನು ಹೊಂದಿವೆ.
* ಕಾರು ಸಂಪೂರ್ಣ ಬುಲೆಟ್ ಫ್ರೂಫ್ ರಚನೆಯನ್ನು ಒಳಗೊಂಡಿದೆ.
* ಈ ಕಾರಿನ ತೂಕ 6.4 ಟನ್ ಎಂದು ಹೇಳಲಾಗಿದೆ.
* ಕಾರಿನ ಡ್ರೈವರ್‌ ಬಳಿಯ ಕಿಡಕಿಯು 3 ಇಂಚು ಮಾತ್ರ ತೆರೆಯಬಹುದಾದ ಸೌಲಭ್ಯ ಇದೆ.
* ಕಾರಿನ ಹೊರಭಾಗವು ಅಲ್ಯೂಮಿನಿಯಮ್, ಟೈಟಾನಿಯಮ್, ಸೆರಾಮಿಕ್, ಸ್ಟೀಲ್‌ ಪ್ಲೇಟ್ ನಂತಹ ಮೆಟಲ್‌ಗಳಿಂದ ರಚಿತವಾಗಿದ್ದು, ಬಾಂಬ್‌ಗಳಿಂದ ರಕ್ಷಣೆಯ ಕವಚ ಪಡೆದಿದೆ.

ಕಾರಿನಲ್ಲಿರುವ ಅಸ್ತ್ರಗಳು

ಕಾರಿನಲ್ಲಿರುವ ಅಸ್ತ್ರಗಳು

ಬೀಸ್ಟ್‌ ಕಾರು ಸುರಕ್ಷತೆಯ ರಚನೆ ಪಡೆದಿದೆ ಹಾಗೆಯೇ ರಕ್ಷಣೆಗಾಗಿ ಕೆಲವು ಅಗತ್ಯ ಪರಿಕರಗಳನ್ನು ಇನ್‌ಬಿಲ್ಟ್‌ ಹೊಂದಿದೆ. ಈ ಕಾರಿನಲ್ಲಿ ಆಕ್ಷನ್ ಶಾಟ್‌ಗನ್‌ಗಳಿವೆ. ಟಿಯರ್ ಗ್ಯಾಸ್ ಗ್ರ್ಯಾನೈಡ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಬೆಂಕಿ ತಗುಲದ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಕಾರಿನ ಮೈಲೇಜ್‌ ಎಷ್ಟು?

ಕಾರಿನ ಮೈಲೇಜ್‌ ಎಷ್ಟು?

ಅಮೆರಿಕಾ ಅಧ್ಯಕ್ಷರ ಬೀಸ್ಟ್ ಕಾರಿನಲ್ಲಿ ಒಳಾಂಗಣ ವಿನ್ಯಾಸ, ಗುಣಮಟ್ಟ, ಸೇಫ್ಟಿಗೆ ಅಂಶಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಅಂದಹಾಗೆ ಇಷ್ಟೆಲ್ಲಾ ಫೀಚರ್ಸ್‌ಗಳಿಂದ ಬಲಿಷ್ಠವಾಗಿರುವ ಈ ಕಾರಿನ ಮೈಲೇಜ್ 3 ರಿಂದ 4.5 ಕಿ,ಮೀ ಮಾತ್ರ.

Best Mobiles in India

English summary
Donald Trump will visit three cities during his stay and will use his special car for transport, called the Beast.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X