Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್‌ಬಡ್ಸ್! ಸಖತ್ ಫೀಚರ್ಸ್...
ಇಯರ್‌ಬಡ್ಸ್‌ಗಳನ್ನು (Earbuds) ಇಂದು ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇವು ಪ್ರತಿದಿನ ಬಳಸುವ ಅಗತ್ಯ ಗ್ಯಾಜೆಟ್‌ಗಳಾಗಿದ್ದು, ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ಟೆಕ್ ಬ್ರ್ಯಾಂಡ್‌ಗಳು ವಿವಿಧ ರೀತಿಯ ಬಳಕೆದಾರರನ್ನು ಪೂರೈಸಲು ಆಡಿಯೊ ವಿಭಾಗದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿವೆ.
ಹೌದು, ಮಾರುಕಟ್ಟೆಯಲ್ಲಿನೀವು ಸಾಕಷ್ಟು ಇಯರ್‌ಬಡ್ಸ್ ಅನ್ನು ಕಾಣಬಹುದು. 500 ರೂ.ಗಳಿಂದ 40,000 ರೂ.ಗಳ ವರೆಗೆ ಇವು ಲಭ್ಯ ಇದ್ದು, ಈ ನಡುವೆ ನೀವು ಎರಡು ಸಾವಿರದ ಬೆಲೆಯ ಒಳಗೆ ಇಯರ್‌ಬಡ್‌ಗಳನ್ನು ಹುಡುಕುತ್ತಿದ್ದರೆ? ಜೊತೆಗೆ ಆಕರ್ಷಕ ಫೀಚರ್ಸ್ ಇರುವ ಬಡ್ಸ್‌ಗಾಗಿ ಕಾಯುತ್ತಿದ್ದರೆ ನಾವಿಲ್ಲಿ ಕೆಲವು ಪ್ರಮುಖ ಇಯರ್‌ಬಡ್ಸ್‌ಗಳ ಬಗ್ಗೆ ಮಾಹಿತಿ ನೀಡಿದ್ದೇವೆ ಓದಿರಿ.

ಒನ್‌ಪ್ಲಸ್ ನಾರ್ಡ್ ಬಡ್ಸ್ 2R: ಅಮೆಜಾನ್‌ನಲ್ಲಿ ಈ ಇಯರ್‌ಬಡ್ಸ್ ಅನ್ನು 1,999ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಗ್ಯಾಜೆಟ್ 8 ಗಂಟೆಗಳವರೆಗೆ ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಹೆಚ್ಚುವರಿ 30 ಗಂಟೆಗಳ ಚಾರ್ಜಿಂಗ್ ಕೇಸ್ ನೀಡಲಿದ್ದು, ಬಡ್ಸ್ 12.4mm ಟೈಟಾನಿಯಂ-ಲೇಪಿತ ಡೈನಾಮಿಕ್ ಡ್ರೈವರ್‌ಗಳೊಂದಿಗೆ ಸಿದ್ಧವಾಗಿವೆ. ಪ್ರತಿ ಇಯರ್‌ಬಡ್‌ನಲ್ಲಿ ಎರಡು ಮೈಕ್ರೊಫೋನ್ ಇದ್ದುಮ ಕರೆಗಳ ಸಮಯದಲ್ಲಿ ಎಐ-ವರ್ಧಿತ ಶಬ್ದ ಕಡಿತವನ್ನು ನೀಡಲಿದೆ. ಇದರ ಜೊತೆಗೆ ಈ ಡಿವೈಸ್ ಬೆವರು ಮತ್ತು ನೀರಿನ ಪ್ರತಿರೋಧಕ್ಕಾಗಿ IP55 ರೇಟಿಂಗ್ ಹೊಂದಿದೆ.
ರಿಯಲ್‌ಮಿ ಬಡ್ಸ್ ಏರ್ 3 ನಿಯೋ: ರಿಯಲ್‌ಮಿ ಬಡ್ಸ್ ಏರ್ 3 ನಿಯೋವನ್ನು ನೀವು 1,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಈ ಡಿವೈಸ್ ಮೇಲೆ ಬ್ಯಾಂಕ್ ರಿಯಾಯಿತಿಗಳನ್ನು ಸಹ ನೀಡುತ್ತಿವೆ. ಫೀಚರ್ಸ್ ವಿಷಯಕ್ಕೆ ಬಂದರೆ 10mm ಡೈನಾಮಿಕ್ ಡ್ರೈವರ್‌ಗಳು, ಟಚ್ ಕಂಟ್ರೋಲ್ ಮತ್ತು ಇಯರ್‌ಪೀಸ್‌ಗಳಲ್ಲಿ ಏಳು ಗಂಟೆಗಳವರೆಗೆ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ ಒಟ್ಟು 30 ಗಂಟೆಗಳವರೆಗೆ ಬ್ಯಾಟರಿ ಸಾಮರ್ಥ್ಯ ನೀಡಲಾಗಿದೆ.

ಬೋಟ್ ನಿರ್ವಾಣ ಐಯಾನ್: ಇದನ್ನೂ ಸಹ 1,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ ಒಟ್ಟು 120 ಗಂಟೆಗಳ ಮ್ಯೂಸಿಲ್ ಪ್ಲೇಬ್ಯಾಕ್, 32dB ವರೆಗೆ ಸಕ್ರಿಯ ಶಬ್ದ ರದ್ದತಿ, 10mm ಡ್ರೈವರ್, ಡ್ಯುಯಲ್ ಇಕ್ಯೂ ಮೋಡ್‌ಗಳು, HIFI DSP 5 ರಿಂದ ಕ್ರಿಸ್ಟಲ್ ಬಯೋನಿಕ್ ಸೌಂಡ್ ಸೇರಿದಂತೆ ಹೆಚ್ಚಿನ ಆಕರ್ಷಕ ಫೀಚರ್ಸ್ ಅನ್ನು ಹೊಂದಿದೆ. ಇಯರ್‌ಬಡ್‌ಗಳು ಒಂದೇ ಚಾರ್ಜ್‌ನಲ್ಲಿ 24 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಟೈಮ್ ಸಾಮರ್ಥ್ಯ ಪಡೆದಿವೆ.
ನಾಯ್ಸ್ ಬಡ್ಸ್ VS104 ಮ್ಯಾಕ್ಸ್: ಇದನ್ನು 1,799 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 25dB ವರೆಗೆ ಸಕ್ರಿಯ ಶಬ್ದ ರದ್ದತಿ (ANC) ಮತ್ತು 45 ಗಂಟೆಗಳವರೆಗೆ ಪ್ಲೇಟೈಮ್‌ನೊಂದಿಗೆ ಬಂದಿದ್ದು, ಸಂಪರ್ಕಕ್ಕಾಗಿ ಬ್ಲೂಟೂತ್ ಆವೃತ್ತಿ 5.3 ಮತ್ತು ಕ್ವಾಡ್ ಮೈಕ್ ಇಎನ್‌ಸಿ ಬೆಂಬಲ ಸಹ ಪಡೆದುಕೊಂಡಿದೆ. ಇದು ಕರೆ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಬೋಟ್ ಏರ್ಡೋಪ್ಸ್ 141 ANC: ಇದನ್ನು 1,799 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಎರಡು ಇಕ್ಯೂ ಮೋಡ್‌ನೊಂದಿಗೆ 10mm ಡ್ರೈವರ್‌ಗಳು ಮತ್ತು ಬೋಟ್ ಸಿಗ್ನೇಚರ್ ಸೌಂಡ್ ತಂತ್ರಜ್ಞಾನದೊಂದಿಗೆ ಕಿವಿಯ ವಿನ್ಯಾಸವನ್ನು ಹೊಂದಿದ್ದು, ಸಕ್ರಿಯ ಶಬ್ದ ರದ್ದತಿ (ANC) ತಂತ್ರಜ್ಞಾನವನ್ನು ನೀಡುತ್ತದೆ. ಹಾಗೆಯೇ ಒಟ್ಟು 42 ಗಂಟೆಗಳ ಪ್ಲೇ ಟೈಮ್ ಸಮಯವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, 50ms ಕಡಿಮೆ ಲೇಟೆನ್ಸಿ ಮೋಡ್, ಟೈಪ್-ಸಿ ಚಾರ್ಜಿಂಗ್ ಬೆಂಬಲ ಮತ್ತು IPX5 ನೀರಿನ ಪ್ರತಿರೋಧವನ್ನು ಪಡೆದಿದೆ.ಈ ಡಿವೈಸ್‌ಗಳು ಅಮೆಜಾನ್‌ನಲ್ಲಿ ವಿಶೇಷ ಆಫರ್ ಬೆಲೆಗೆ ಲಭ್ಯ ಇದ್ದು, ಈ ಮೂಲಕ ನೀವು ಸಿನಿಮಾ ವೀಕ್ಷಣೆಯಲ್ಲಿ ಅಥವಾ ಸಂಗೀತ ಆಲಿಸುವಲ್ಲಿ ಉತ್ತಮವಾದ ಅನುಭವವನ್ನು ಪಡೆಯಬಹುದಾಗಿದೆ.


Click it and Unblock the Notifications








