ಕೊರೊನಾ ವೈರಸ್‌ ಭೀತಿ: ಮೊಬೈಲ್ ವರ್ಲ್ಡ್‌ ಕಾಂಗ್ರೆಸ್‌-2020 ಕಾರ್ಯಕ್ರಮ ಡೌಟ್‌!

|

ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ ಇತರೆ ರಾಷ್ಟ್ರಗಳಲ್ಲಿಯೂ ಭೀತಿ ಹುಟ್ಟಿಸಿದೆ. ಕೊರೊನಾ ವೈರಸ್‌ ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಆದರೂ ಕೊರೊನಾ ವೈರಸ್‌ ಎಫೆಕ್ಟ್ ಚೀನಾ ವಾಣಿಜ್ಯ ವಹಿವಾಟುಗಳ ಮೇಲೂ ತಟ್ಟಿದೆ. ಅದರ ಪರಿಣಾಮವಾಗಿ ಈ ಬಾರಿಯ 'ಮೊಬೈಲ್ ವರ್ಲ್ಡ್ ಕಾಂಗ್ರೆಸ್‌' (MWC-2020) ಕಾರ್ಯಕ್ರಮ ರದ್ದಾಗುವ ಲಕ್ಷಣಗಳು ಗೋಚರವಾಗಿವೆ.

ಮೊಬೈಲ್ ವರ್ಲ್ಡ್‌ ಕಾಂಗ್ರೆಸ್‌

ಹೌದು, ಈ ಬಾರಿಯ ಮೊಬೈಲ್ ವರ್ಲ್ಡ್‌ ಕಾಂಗ್ರೆಸ್‌ ಕಾರ್ಯಕ್ರಮವು ಬಾರ್ಸಿಲೋನಾದಲ್ಲಿ ಇದೇ ಫೆಬ್ರವರಿ 24ರಿಂದ ನಡೆಯಬೇಕಿದೆ. ಆದರೆ ಈ ವಿಶ್ವ ಮಟ್ಟದ ಟೆಕ್ ಕಾರ್ಯಕ್ರಮಕ್ಕೆ ಕೊರೊನಾ ವೈರಸ್‌ ಭೀತಿ ಹುಟ್ಟಿಸಿದೆ. ಹೀಗಾಗಿ ಬಹುತೇಕ ಪ್ರತಿಷ್ಠಿತ ಟೆಕ್ ಕಂಪನಿಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂದೆಟು ಹಾಕುತ್ತಿಲ್ಲ. ಇನ್ನು ಕೆಲವು ಸಂಸ್ಥೆಗಳು ಈ ಬಾರಿಯ ಮೊಬೈಲ್ ವರ್ಲ್ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನುಮಾನ ಎಂದು ಹೇಳಿವೆ.

ಚೀನಾದ ಟೆಕ್ ಕಂಪನಿ

ಕೊರೊನಾ ವೈರಸ್‌ ಮೂಲ ಚೀನಾ ಆಗಿದ್ದು, ಅಲ್ಲಿಯ ಟೆಕ್ ಕಂಪನಿಗಳು ಸಹ ಮೊಬೈಲ್ ವರ್ಲ್ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಹಿಂದೆಟು ಹಾಕುವ ಸಾಧ್ಯತೆಗಳಿವೆ. GSMA ಸಂಸ್ಥೆಯ ವರದಿ ಪ್ರಕಾರ ಕಳೆದ ಎರಡು ತಿಂಗಳಿನಲ್ಲಿ ಚೀನಾದಲ್ಲಿ ಸುಮಾರು 40,000 ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿದೆ ಎನ್ನಲಾಗಿದೆ. ಹಾಗೂ 1000 ಜನರು ಕೊರೊನಾ ವೈರಸ್‌ನಿಂದ ಸಾವಿಗೀಡಾಗಿದ್ದಾರೆ.

ಅಸೋಶಿಯೇಷನ್ GSMA

ವಿಶ್ವ ಮೊಬೈಲ್ ಆಪರೇಟರ್ಸ್‌ ಅಸೋಶಿಯೇಷನ್ GSMA ಇದೇ ಶುಕ್ರವಾರ ಸಭೆ ಕರೆದು ಈ ಬಾರಿ ಮೊಬೈಲ್ ವರ್ಲ್ಡ್ ಕಾಂಗ್ರಸ್‌ ಕಾರ್ಯಕ್ರಮ ನಡೆಸುವುದೊ ಅಥವಾ ರದ್ದು ಮಾಡುವುದೊ ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಸ್ಪಾನಿಶ್ ಸೈಟ್ La Vanguardia ವರದಿ ಮಾಡಿದೆ. ಈ GSMA ಅಸೋಶಿಯೇಷನ್‌ನಲ್ಲಿ ಸುಮಾರು 750 ಮೊಬೈಲ್ ಆಪರೇಟರ್ಸ್‌ ಸದಸ್ಯರಾಗಿದ್ದಾರೆ.

ಇಂಟೆಲ್, ಅಮೆಜಾನ್

ಸೋನಿ, TCL, ವಿವೋ, ಇಂಟೆಲ್, ಅಮೆಜಾನ್, NTT Docomo, Nvidia, ಎರಿಕ್‌ಸನ್, ZTE, ಎಲ್‌ಜಿ, Umidigi, Amdocs, ಮತ್ತು ಗಿಗಾಸೆಟ್‌ ಸಂಸ್ಥೆಗಳು ಈ ಬಾರಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಹೇಳಿಕೊಂಡಿವೆ. ಇನ್ನು ಕೆಲವು ಸಂಸ್ಥೆಗಳು ಚೀನಾ ಉದ್ಯೋಗಿಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಕಳುಹಿಸಲ್ಲ ಎಂದು ಹೇಳಿವೆ.

ಅತಿಥಿಗಳು ಭಾಗವಹಿಸು

ಇನ್ನು ಕಳೆದ ಬಾರಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 109,000 ಅತಿಥಿಗಳು ಭಾಗವಹಿಸಿದ್ದರು. ಈ ಬಾರಿ ಸುಮಾರು 110,000 ಅತಿಥಿಗಳು ಭಾಗವಹಿಸುವ ನಿರೀಕ್ಷೆ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಕಾರ್ಯಕ್ರಮ ನಡೆಯುವುದು ಅನುಮಾನ ಆಗಿದೆ.

Best Mobiles in India

English summary
The biggest mobile show of the year might be canceled, which would be a first in the long history of the Mobile World Congress.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X