ಯೂಟ್ಯೂಬ್‌ನಲ್ಲಿ ದಾಖಲೆ ಬರೆದ ಮೊದಲ ಬಾಲಿವುಡ್ ಹಾಡು..!
ಆದಿತ್ಯ ಚೋಪ್ರಾ ನಿರ್ದೇಶನದ ಬೇಫಿಕ್ರೆ’ ಸಿನಿಮಾದ ನಶೆ ಸೇ ’ ಹಾಡು ಯೂಟ್ಯೂಬ್‌ನಲ್ಲಿ 30 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗುವ ಮೂಲಕ ಬಾಲಿವುಡ್ ನಲ್ಲಿ ಹೊಸ ದಾಖಲೆಗೆ ಸಾಕ್ಷಿಯಾಗಿದ್ದು,
ದೇಶದಲ್ಲಿ ಕಡಿಮೆ ಬೆಲೆ ವೇಗದ ಇಂಟರ್‌ನೆಟ್ ಲಭ್ಯವಿರುವ ಕಾರಣ ಮೊಬೈಲ್‌ನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ನೋಡುವ ಸಂಖ್ಯೆ ಅಧಿಕವಾಗಿ ಈ ಹಿನ್ನಲೆಯಲ್ಲಿ ಪ್ರತಿ ವಿಡಿಯೋಗಳು ಹೆಚ್ಚು ವೀಕ್ಷಣೆಯಾಗುತ್ತಿದೆ. ಇದೇ ಸಾಲಿಗೆ ಸೇರಿಕೊಳ್ಳುತ್ತಿದೆ ಬಾಲಿವುಡ್‌ನ ಒಂದು ಸಾಂಗ್.

ಓದಿರಿ: ಲಾಂಚ್‌ಗೂ ಮುನ್ನವೇ ಜಿಯೋದೊಂದಿಗೆ ಐಫೋನ್ 8 ಮತ್ತು 8 ಪ್ಲಸ್: ಬೆಲೆಯಲ್ಲಿ ಭಾರೀ ಕಡಿತ
ಆದಿತ್ಯ ಚೋಪ್ರಾ ನಿರ್ದೇಶನದ ಬೇಫಿಕ್ರೆ' ಸಿನಿಮಾದ ನಶೆ ಸೇ ' ಹಾಡು ಯೂಟ್ಯೂಬ್‌ನಲ್ಲಿ 30 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗುವ ಮೂಲಕ ಬಾಲಿವುಡ್ ನಲ್ಲಿ ಹೊಸ ದಾಖಲೆಗೆ ಸಾಕ್ಷಿಯಾಗಿದ್ದು, ಅತೀ ಹೆಚ್ಚು ವೀಕ್ಷಣೆಯಾದ ಬಾಲಿವುಡ್ ಸಾಂಗ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
ರಣ್‍ವೀರ್ ಸಿಂಗ್ ಡ್ಯಾನ್ಸ್:
ವಿಶಾಲ್ ಮತ್ತು ಶೇಖರ್ ಸಂಗೀತ ಸಂಯೋಜನೆ ಮಾಡಿರುವ ಹಾಡನ್ನು ಅರಿಜಿತ್ ಸಿಂಗ್ ಹಾಡಿದ್ದು, ರಣ್‍ವೀರ್ ಸಿಂಗ್ ಮತ್ತು ವಾಣಿ ಕಪೂರ್ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ.
30 ಕೋಟಿ ವೀಕ್ಷಣೆ:
2016ರ ಅಕ್ಟೋಬರ್ 18ರಂದು ಯೂಟ್ಯೂಬ್‍ನಲ್ಲಿ ಈ ಹಾಡು ಅಪ್ಲೋಡ್ ಆಗಿದ್ದು, 6 ಲಕ್ಷ 67 ಸಾವಿರ ಲೈಕ್ 34,379 ಕಮೆಂಟ್ ಬಂದಿದ್ದು, 300,466,988 ವೀಕ್ಷಣೆ ಪಡೆದುಕೊಂಡಿದೆ.

ಟೈಟಲ್ ಸಾಂಗ್ 2 ಕೋಟಿ ವೀಕ್ಷಣೆ:
ಇದೇ ಚಿತ್ರದ ಟೈಟಲ್ ಸಾಂಗ್ `ಉಡೇ ದಿಲ್ ಬೇಫಿಕ್ರೆ' ಹಾಡು ಇದೂವರೆಗೂ 2 ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಹೊಸ ಮಾದರಿಯ ಪ್ರೇಮ ಕಥೆಯನ್ನು ಹೊಂದಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು.


Click it and Unblock the Notifications








