ಇಂಗ್ಲಿಷ್‌ ಶಿಕ್ಷಕರಾಗಿದ್ದ 'ಜಾಕ್‌ ಮಾ' ವಿಶ್ವವೇ ತಿರುಗಿ ನೋಡುವ ಉದ್ಯಮಿಯಾಗಿ ಬೆಳೆದ ರೋಚಕ ಕಥೆ!

|

ಅಲಿಬಾಬಾ ಸಂಸ್ಥೆಯ ಸ್ಥಾಪಕ, ಕೆಂಪು ರಾಷ್ಟ್ರದ ಉದ್ಯಮಿ ಜಾಕ್ ಮಾ ಅವರು ಕಾಣೆಯಾಗಿರುವ ಸುದ್ದಿ ಇಡೀ ವಿಶ್ವಕ್ಕೆ ದೊಡ್ಡ ಅಚ್ಚರಿ ಅನಿಸಿತು. ಅಸಲಿಗೆ ಅವರು ಚೀನಾ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಮಾತನಾಡಿದ್ದೇ, ಅವರ ವಿರುದ್ಧ ಚೀನಾ ಸರಕಾರ ಮುಗಿಬೀಳಲು ಕಾರಣ ಎಂದು ಹೇಳಲಾಗಿತ್ತು. ಆದ್ರೇ ಜಾಕ್‌ ಮಾ ಅವರೇ ಯಾರಿಗೂ ಕಾಣಿಸಿಕೊಳ್ಳದೆ ಇರಲು ಇಚ್ಛಿಸಿದ್ದಾರೆ ಎನ್ನುವ ಸಂಗತಿಗಳು ವರದಿಗಳಿಂದ ತಿಳಿದುಬಂದಿದೆ.

ಸೃಷ್ಠಿಕರ್ತ

ಅಲಿಬಾಬಾ ಇ-ಕಾಮರ್ಸ್ ಸೃಷ್ಠಿಕರ್ತ 56 ವರ್ಷದ ಜಾಕ್‌ ಮಾ ಮಿಸ್ಸಿಂಗ್ ಸ್ಟೋರಿ ಜಾಗತೀಕ ಉದ್ಯಮ ವಲಯದಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ಇಂಗ್ಲಿಷ್‌ ಶಿಕ್ಷಕರಾಗಿದ್ದ ಜಾಕ್‌ ಮಾ ಅವರು ಇಡೀ ವಿಶ್ವವೇ ತಿರುಗಿ ನೋಡುವ ದೊಡ್ಡ ಉದ್ಯಮಿಯಾಗಿ ಬೆಳೆದಿರುವುದು ಕುತೂಹಲವೇ ಸರಿ. ಕೆಂಪು ರಾಷ್ಟ್ರ ಚೀನಾದ ಶ್ರೀಮಂತ ದೊರೆ ಜಾಕ್ ಮಾ ಅವರ ಜೀವನದ ರೋಚಕ ತಿರುವುದುಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಾಕ್ ಮಾ ಅವರ ಮೊದಲ ಹೆಸರು ಮಾ ಯುನ್

ಜಾಕ್ ಮಾ ಅವರ ಮೊದಲ ಹೆಸರು ಮಾ ಯುನ್

ಜಾಕ್ ಮಾ ಅವರ ಮೊದಲ ಹೆಸರು ಮಾ ಯುನ್ ಎಂದು. ಆದರೆ, ಅವರು ಇಂಗ್ಲೀಷ್ ಕಲಿಯಲು ಪ್ರವಾಸಿಗರ ಬಳಿ ತೆರಳುತ್ತಿದ್ದಾಗ ಹಲವರು ಮಾ ಯುನ್ ಎಂಬ ಹೆಸರನ್ನು ಉಚ್ಚರಿಸಲು ಕಷ್ಟವಾಗಿ ಜಾಕ್ ಮಾ ಎಂದು ಕರೆಯಲು ಪ್ರಾರಂಭಿಸಿದರು. ನಂತರ ಜಾಕ್ ಮಾ ಎಂಬ ಹೆಸರೇ ರೂಡಿಯಾಯಿತು.

ಜಾಕ್ ಮಾ-ಸೈಕಲ್ ಸವಾರಿ

ಜಾಕ್ ಮಾ-ಸೈಕಲ್ ಸವಾರಿ

ಬಡ ಕುಟುಂಬದಲ್ಲಿ ಹುಟ್ಟಿ ಹನ್ನೆರಡರ ಪೋರ ಮಾ ಯುನ್‌ಗೆ ಇಂಗ್ಲಿಷ್ ಕಲಿಯುವ ಆಸೆ ಹೆಚ್ಚಿತ್ತು. ಹಾಗಾಗಿ, ತನ್ನೂರಿನ ಹತ್ತಿರದ ನಗರವೊಂದಕ್ಕೆ ಆತ ನಲವತ್ತು ನಿಮಿಷಗಳ ಕಾಲ ಸೈಕಲ್ ತುಳಿದುಕೊಂಡು ಬರುತ್ತಿದ್ದ. ಅಲ್ಲಿಗೆ ಬರುತ್ತಿದ್ದ ವಿದೇಶಿ ಯಾತ್ರಿಗಳಿಗೆ ಹಣ ಪಡೆಯದೇ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದ.

ಇಂಗ್ಲೀಷ್ ಮಾಸ್ತರ್

ಇಂಗ್ಲೀಷ್ ಮಾಸ್ತರ್

ಜಾಕ್ ಮಾಗೆ ಇಂಗ್ಲೀಷ್ ಕಲಿಯುವ ಕನಸಿತ್ತು. ಅದರಂತೆಯೇ ಜಾಕ್ ಮಾ ಇಂಗ್ಲಿಷ್​ನಲ್ಲಿ ಪದವಿ ಪಡೆದ. ಇಂಗ್ಲಿಷ್​ನಲ್ಲಿ ಪದವಿ ಪಡೆದ ನಂತರ ಕಾಲೇಜೊಂದರಲ್ಲಿ ಕೆಲಸ ಸಿಕ್ಕಿತು. ರಾತ್ರಿ ತರಗತಿಗಳನ್ನೂ ತೆಗೆದುಕೊಳ್ಳುತ್ತಿದ್ದ ಜಾಕ್ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುಕೊಡುವ ಕೆಲಸ ಮಾಡುತ್ತಿದ್ದ.

ಭಾಷಾಂತರಕಾರನಾಗಿ ಜಾಕ್‌ ಮಾ

ಭಾಷಾಂತರಕಾರನಾಗಿ ಜಾಕ್‌ ಮಾ

ಮೊದಲೇ ಹೇಳಿದಂತೆ ಜಾಕ್‌ಮಾನ ಇಂಗ್ಲೀಷ್ ಕಲಿಕೆಯೇ ಅವನನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿತು ಎನ್ನಬಹುದು. 1995ರಲ್ಲಿ ಅಮೆರಿಕದ ಹೂಡಿಕೆದಾರನೊಬ್ಬನಿಗೆ ಭಾಷಾಂತರಕಾರನಾಗಿ ಜಾಕ್ ಅಮೆರಿಕಕ್ಕೆ ಕಳುಹಿಸಲ್ಪಟ್ಟ. ಜಾಕ್ ಇಂಗ್ಲಿಷ್​ನಲ್ಲಿ ಪರಿಣಿತನೇ ಹೊರತು ಕಂಪ್ಯೂಟರ್​ನಲ್ಲ. ಹಾಗಾಗಿ, ಅವನು ಅಲ್ಲಿ ಕಂಪ್ಯೂಟರ್ ಭವಿಷ್ಯವನ್ನು ತಿಳಿದುಕೊಂಡನು.

ಇಂಟರ್‌ನೆಟ್ 'ಜಾಕ್‌ ಮಾ'ನ ಹಾದಿ ಬದಲಿಸಿತು

ಇಂಟರ್‌ನೆಟ್ 'ಜಾಕ್‌ ಮಾ'ನ ಹಾದಿ ಬದಲಿಸಿತು

ಇಂಟರ್​ನೆಟ್​ನಲ್ಲಿ ಶಬ್ದವೊಂದನ್ನು ಹುಡುಕುವಾಗ ಚೀನಾಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲದಿರುವುದು ಆತನ ಗಮನಕ್ಕೆ ಬಂತು. ಜಾಕ್​ಗೆ ಆ ಕ್ಷಣವೇ ತನ್ನ ಮುಂದಿನ ಹಾದಿ ಗೋಚರಿಸಿತು. ಅಂತರ್ಜಾಲದ ಅಪಾರ ಸಾಮರ್ಥ್ಯದ ಬಗ್ಗೆ ನಂಬಿಕೆ ಮೂಡಿದ್ದರಿಂದ ಇಂಟರ್‌ನೆಟ್ ಅವನ ತಲೆಕೆಡಿಸಿತು.

ಅಲಿಬಾಬ ಇ-ಕಾಮರ್ಸ್ ಸಾಮ್ರಾಜ್ಯಕ್ಕೆ ಅಡಿಪಾಯ

ಅಲಿಬಾಬ ಇ-ಕಾಮರ್ಸ್ ಸಾಮ್ರಾಜ್ಯಕ್ಕೆ ಅಡಿಪಾಯ

18 ಜನರ ಟೀಮ್ ತಮ್ಮ ಉಳಿತಾಯದ 60,000 ಡಾಲರ್​ಗಳನ್ನು ಕೂಡಿಸಿದ ನಂತರ ಜಾಕ್ ಮಾ ನೇತೃತ್ವದಲ್ಲಿ 1999ರಲ್ಲಿ ಅಲಿಬಾಬ.ಕಾಮ್ ಶುರುವಾಯಿತು. ನಾವೊಂದು ಐತಿಹಾಸಿಕ ಇ-ಕಾಮರ್ಸ್ ಕಂಪನಿಯನ್ನು ಸ್ಥಾಪಿಸಲಿದ್ದೇವೆ. ಆ ಇ-ಕಾಮರ್ಸ್ ಸಂಸ್ಥೆ ಕನಿಷ್ಠ 100 ವರ್ಷಗಳ ಕಾಲ ಅದು ಬಾಳಬೇಕು. ವಿಶ್ವದ ಅಂತರ್ಜಾಲ ಸೈಟ್​ಗಳಲ್ಲಿ ಮೊದಲ ಹತ್ತರೊಳಗಿರಬೇಕು ಎಂದು ಹೇಳಿದ. ಅದೇ ರೀತಿ ವಿಶ್ವದ ಟಾಪ್ 10 ಅಂತರ್ಜಾಲ ಸೈಟ್‌ಗಳಲ್ಲಿ ಒಂದಾದ ಅಲಿಬಾಬ.ಕಾಮ್ ಅನ್ನು ಜಾಕ್ ಮಾ ರೂಪಿಸಿದ.

Best Mobiles in India

Read more about:
English summary
The Inspiring Life Story Of Alibaba Founder Jack Ma.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X