Home
ಸುದ್ದಿಜಾಲ

app: 2023 ರಲ್ಲಿ ಅತೀ ಹೆಚ್ಚು ಡಿಲೀಟ್ ಮಾಡಲಾದ ಆಪ್ ಇದು! ಇದರ ಮೇಲೇಕೆ ಜನರಿಗೆ ಅಷ್ಟು ಕೋಪ..?

ಸ್ಮಾರ್ಟ್‌ಫೋನ್‌ (Smartphone) ಹೊಂದಿರುವ ಯಾರೇ ಆದರೂ ಅವರಿಗೆ ಅಗತ್ಯ ಎನಿಸುವ ಹತ್ತಾರು ಆಪ್‌ಗಳನ್ನು (app) ಬಳಕೆ ಮಾಡುವುದು ಸಾಮಾನ್ಯ. ಈ ಮೂಲಕ ಮಾಹಿತಿ ಹಾಗೂ ಮನರಂಜನೆಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಅದಾಗ್ಯೂ ಕೆಲವು ದುರುದ್ದೇಶಪೂರಿತ ಆಪ್‌ಗಳು ಸಹ ಹಲವರಿಗೆ ತೊಂದರೆ ಕೊಟ್ಟಿದ್ದು, ಅವುಗಳನ್ನು ಪ್ಲೇ ಸ್ಟೋರ್‌ನಿಂದ (Play Store) ಹೊರದಬ್ಬುವ ಕೆಲಸವೂ ಆಗಿದೆ.

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಆಪ್‌ಗಳು ಅತ್ಯಂತ ಪ್ರಮುಖವಾಗಿವೆ. ಕರೆ ಹಾಗೂ ಇನ್ನಿತರೆ ಸಾಮಾನ್ಯ ಬಳಕೆ ಹೊರತುಪಡಿಸಿ, ಮಾಹಿತಿ ಹಾಗೂ ಮನರಂಜನೆ, ಮೆಸೆಜ್‌, ಬ್ಯಾಂಕಿಂಗ್‌ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಪಡೆದುಕೊಳ್ಳಲು ಆಪ್‌ಗಳು ಅನಿವಾರ್ಯ ಆಗಿದೆ. ಈ ಬೆಳವಣಿಗೆ ನಡುವೆ 2023 ರಲ್ಲಿ ಅತೀ ಹೆಚ್ಚು ಅನ್‌ಇನ್‌ಸ್ಟಾಲ್‌(Uninstall) ಮಾಡಲಾದ ಬಹಳ ಜನಪ್ರಿಯ ಆಪ್‌ ಬಗ್ಗೆ ಮಾಹಿತಿ ತಿಳಿದುಬಂದಿದೆ. ಹಾಗಿದ್ರೆ, ಯಾವುದು ಈ ಆಪ್‌?, ಎಷ್ಟು ಬಾರಿ ಅನ್‌ಇನ್‌ಸ್ಟಾಲ್ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

2023 ರಲ್ಲಿ ಅತೀ ಹೆಚ್ಚು ಡಿಲೀಟ್ ಮಾಡಲಾದ ಆಪ್ ಇದು!

ಹೆಚ್ಚು ಅನ್‌ಇನ್‌ಸ್ಟಾಲ್‌ ಆದ ಆಪ್‌: ಯುಎಸ್‌ ಆಧಾರಿತ ಟೆಕ್ ಫರ್ಮ್ TRG ಡೇಟಾಸೆಂಟರ್ಸ್‌ನ ಇತ್ತೀಚಿನ ವರದಿಯ ಪ್ರಕಾರ, 2023 ರಲ್ಲಿ ಪ್ರಪಂಚದಾದ್ಯಂತ 1 ಮಿಲಿಯನ್‌ಗಿಂತಲೂ ಹೆಚ್ಚು ಜನರು ನನ್ನ ಇನ್‌ಸ್ಟಾಗ್ರಾಮ್‌ (Instagram) ಖಾತೆಯನ್ನು ಅಳಿಸುವುದು ಹೇಗೆ ಎಂದು ಸರ್ಚ್‌ ಮಾಡಿದ್ದಾರೆ. ಅಂದರೆ ಈ ಮೂಲಕ ಜಾಗತಿಕವಾಗಿ ಹೆಚ್ಚು ಅನ್‌ಇನ್‌ಸ್ಟಾಲ್‌ ಮಾಡಲಾದ ಆಪ್‌ ಆಗಿ ಇದು ಗುರುತಿಸಿಕೊಂಡಿದೆ.

ಅರೇ ಅದೇಗೆ ಸಾಧ್ಯ ಯಾರು ತಾನೆ ಈ ಆಪ್‌ ಅನ್ನು ಡಿಲೀಟ್‌ ಮಾಡುತ್ತಾರೆ. ಇದರಲ್ಲಿ ಉತ್ತಮವಾದ ಮಾಹಿತಿ ಹಾಗೂ ಮನರಂಜನೆ ಸಿಗುತ್ತಲ್ಲವೇ ಎಂದು ನೀವು ಅಂದುಕೊಂಡಿರಬಹುದು. ಆದರೆ ಬಳಕೆದಾರರು ಹಲವಾರು ರೀತಿಯ ಕಾರಣಗಳನ್ನು ಮುಂದಿಟ್ಟುಕೊಂಡು ಈ ಆಪ್‌ ಅನ್ನು ಡಿಲೀಟ್‌ ಮಾಡಿದ್ದಾರಂತೆ. ಜೊತೆಗೆ ಬಳಕೆದಾರರು ಜಾಗತಿಕವಾಗಿ ತಮ್ಮ ಖಾತೆಗಳನ್ನು ಡಿಲೀಟ್‌ ಮಾಡಲು ಇಚ್ಚಿಸುತ್ತಿರುವುದರಿಂದ ಇನ್‌ಸ್ಟಾಗ್ರಾಮ್‌ ದೊಡ್ಡ ಮಟ್ಟದ ಕುಸಿತವನ್ನು ಎದುರಿಸುತ್ತಿದೆ.

2023 ರಲ್ಲಿ ಅತೀ ಹೆಚ್ಚು ಡಿಲೀಟ್ ಮಾಡಲಾದ ಆಪ್ ಇದು!

ಇನ್ನು 12 ತಿಂಗಳ ಟ್ರೆಂಡ್‌ಗಳನ್ನು ವಿಶ್ಲೇಷಿಸಿ ಈ ವರದಿ ನೀಡಲಾಗಿದೆ. ಅದರಂತೆ ಬರೋಬ್ಬರಿ 10,20,000 ಜನರು ಇನ್‌ಸ್ಟಾಗ್ರಾಮ್‌ ಡಿಲೀಟ್‌ ಮಾಡಿರುವುದಾಗಿ ತಿಳಿಸಿದ್ದಾರೆ. ಉಳಿದಂತೆ ಇತರೆ ಆಪ್‌ಗಳನ್ನು ಸಹ ಡಿಲೀಟ್‌ ಮಾಡಿದ್ದಾರೆ. ಆದರೆ ಇದರ ಪ್ರಮಾಣ ಕಡಿಮೆ ಇದೆ. ಅಂದರೆ ಸ್ನ್ಯಾಪ್‌ಚಾಟ್ (Snapchat) 1,28,500, ಟ್ವಿಟರ್ (Twitter) 12,300, ಟೆಲಿಗ್ರಾಮ್ (Telegram) 71,700, ಫೇಸ್‌ಬುಕ್ (Facebook) 49,000, ಟಿಕ್‌ಟಾಕ್ (Tiktok) 24,900, ಯೂಟ್ಯೂಬ್(YouTube) 12,500, ವಾಟ್ಸಾಪ್ (Whatsapp) 4,950, ಮತ್ತು ವೀಚಾಟ್ ಅನ್ನು 2,090 ಜನರು ಡಿಲೀಟ್‌ ಮಾಡಿದ್ದಾರೆ ಅಥವಾ ಮಾಡಲು ಇಚ್ಚಿಸಿದ್ದಾರಂತೆ.

ಈ ಸಂಬಂಧ TRG ಡೇಟಾ ಸೆಂಟರ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಕ್ರಿಸ್ ಹಿಂಕಲ್ ಮಾಹಿತಿ ನೀಡಿ, 2023 ರಲ್ಲಿ ಹೆಚ್ಚು ಅಳಿಸಲಾದ ಅಪ್ಲಿಕೇಶನ್‌ ವಿಭಾಗದಲ್ಲಿ ಇನ್‌ಸ್ಟಾಗ್ರಾಮ್‌ ಮೊದಲ ಸ್ಥಾನದಲ್ಲಿದ್ದು, ಸಾಮಾಜಿಕ ಮಾಧ್ಯಮದ ಆದ್ಯತೆಗಳಲ್ಲಿ ಬದಲಾಗುತ್ತಿರುವ ಭೂದೃಶ್ಯವನ್ನು ಇದು ಪ್ರತಿಧ್ವನಿಸುತ್ತದೆ. ಬಳಕೆದಾರರ ಆದ್ಯತೆಗಳಲ್ಲಿ ಕ್ರಿಯಾತ್ಮಕ ಬದಲಾವಣೆಯನ್ನು ಇದು ತೋರಿಸುತ್ತದೆ. ಹಾಗೆಯೇ ಹೆಚ್ಚು ಅಧಿಕೃತವಾಗಿ ಮತ್ತು ಪ್ರತಿಧ್ವನಿಸುವ ಪ್ಲಾಟ್‌ಫಾರ್ಮ್‌ಗಳಿಗೆ ಬೇಡಿಕೆಯನ್ನು ಈ ಮೂಲಕ ಸೂಚಿಸುತ್ತದೆ ಎಂದಿದ್ದಾರೆ.

2023 ರಲ್ಲಿ ಅತೀ ಹೆಚ್ಚು ಡಿಲೀಟ್ ಮಾಡಲಾದ ಆಪ್ ಇದು!

ಇನ್ನು ಇನ್‌ಸ್ಟಾಗ್ರಾಮ್ ವಿಶ್ವಾದ್ಯಂತ 2 ಶತಕೋಟಿ ಬಳಕೆದಾರರನ್ನು ಹೊಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪ್ಲಾಟ್‌ಫಾರ್ಮ್‌ನಲ್ಲಿ ಅತಿಯಾದ ಜಾಹೀರಾತುಗಳು ಹಾಗೂ ಬ್ರ್ಯಾಂಡ್ ಪ್ರಚಾರಗಳು ಹೆಚ್ಚಾಗುತ್ತಿದ್ದು, ಇದು ಸಾಮಾನ್ಯ ಬಳಕೆದಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆಯಂತೆ. ಇದೇ ಕಾರಣಕ್ಕೆ ಜನರು ಈ ಆಪ್‌ಗೆ ವಿದಾಯ ಹೇಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಪ್ರತಿ ತಿಂಗಳು ಒಂದು ಮಿಲಿಯನ್ ಜನರು ಈ ಆಪ್‌ ಅನ್ನು ಡಿಲೀಟ್ ಮಾಡುವ ಪ್ರವೃತ್ತಿಯು ಮುಂದುವರಿದರೆ, ಒಮ್ಮೆ ಜನಪ್ರಿಯವಾದ ಆಪ್‌ಗೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, 2011 ರಲ್ಲಿ ಪ್ರಾರಂಭವಾದ ಸ್ನ್ಯಾಪ್‌ಚಾಟ್ ಗಣನೀಯ ಸಂಖ್ಯೆಯ ಬಳಕೆದಾರರನ್ನು ಪಡೆದುಕೊಳ್ಳುತ್ತಿದೆ. ಈ ಆಪ್‌ ಅನ್ನು ತಿಂಗಳಿಗೆ 1,30,000 ಜನರು ತಮ್ಮ ಖಾತೆಗಳನ್ನು ಅಳಿಸಲು ಮುಂದಾಗುತ್ತಿದ್ದರೂ ಸಹ ಪ್ರಪಂಚದಾದ್ಯಂತ ಸುಮಾರು 750 ಮಿಲಿಯನ್ ಬಳಕೆದಾರರನ್ನು ಇದು ಹೊಂದಿದೆ.

Best Mobiles in India

English summary
According to a recent report by US-based tech firm TRG Datacenters, more than 1 million people worldwide searched for how to delete my Instagram app account in 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+