40 ವರ್ಷಗಳ ಇತಿಹಾಸದಲ್ಲಿ ಇವುಗಳೇ ಸೂಪರ್!!
ಕಳೆದ 40 ವರ್ಷಗಳಿಂದ ಟೆಕ್ನಾಲಜಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿದೆ. 40 ವರ್ಷಗಳ ಹಿಂದಿನಿಂದ ಪ್ರತಿವರ್ಷವೂ ಒಂದೊಂದು ಮಹತ್ತರ ಆವಿಷ್ಕಾರ ಮತ್ತು ಸಂಶೋಧನೆಗಳು ಜರುಗಿವೆ. ಇಂದು ಆ ಟೆಕ್ನಾಲಜಿಗಳು ದಿನನಿತ್ಯದ ಅಗತ್ಯತೆಗಳಲ್ಲಿ ಪ್ರಮುಖವಾಗಿವೆ. ಆದರೆ ಎಷ್ಟೊ ಟೆಕ್ನಾಲಜಿಗಳ ಮುಂದಿನ ವರ್ಸನ್‌ಗಳು ಅಭಿವೃದ್ದಿಗೊಂಡಿವೆ.
ಓದಿರಿ: 'ಚೆನ್ನೈ ಹೆದರದಿರಿ' ನಾವಿದ್ದೇವೆ ಎಂದ ಫೇಸ್‌ಬುಕ್ ಟೂಲ್
ಗಿಜ್‌ಬಾಟ್ ಇಂದಿನ ಲೇಖನದಲ್ಲಿ 40 ವರ್ಷಗಳ ಹಿಂದಿನಿಂದ ಪ್ರತಿವರ್ಷ ಆವಿಷ್ಕಾರಗೊಂಡ ಸೂಪರ್ ಟೆಕ್ನಾಲಜಿಗಳಲ್ಲಿ ಕೆಲವನ್ನು ನಿಮ್ಮ ಮುಂದಿ ಇಡುತ್ತಿದೆ. ಆ ಟೆಕ್ನಾಲಜಿಗಳು ಅಂದಿನ ವರ್ಷಗಳ ಅತ್ಯುತ್ತಮ ಸೂಪರ್ ಟೆಕ್ನಾಲಜಿಗಳಾಗಿದ್ದವು. ಅವುಗಳನ್ನು ಲೇಖನದ ಸ್ಲೈಡರ್‌ಗಳಲ್ಲಿ ನೋಡಿ.

ಗೂಗಲ್ ಗ್ಲಾಸ್- 2013
ಗೂಗಲ್ ಗ್ಲಾಸ್ ಹೊಸ ಟೆಕ್ನಾಲಜಿಗೆ ನವೀನ ರೀತಿಯ ಹುಟ್ಟನ್ನು ನೀಡಿದೆ. ಕಣ್ಣಿಗೆ ಕನ್ನಡಕದಂತೆ ಕಂಪ್ಯೂಟರ್ ಅನ್ನು ಇಂದು ನಾವು ಧರಿಸಬಹುದಾಗಿದೆ.

3D ಪ್ರಿಂಟರ್-2012
ಗಿಜ್‌ಬಾಟ್‌ನ ಹಿಂದಿನ ಲೇಖನಗಳಲ್ಲಿ ನಾವು ಈಗಾಗಲೇ ಮನೆಗಳನ್ನು ಕಟ್ಟುವ, ಬ್ರಿಡ್ಜ್‌ಗಳನ್ನು ನಿರ್ಮಿಸುವ ಹಲವು ರೀತಿಯ 3D ಪ್ರಿಂಟರ್‌ಗಳನ್ನು ಪರಿಚಯಿಸಿದ್ದೇವೆ. ಅಂತಹ 3D ಪ್ರಿಂಟರ್ ಯೋಜನೆಯನ್ನು ಮೊಟ್ಟ ಮೊದಲು ಈ ಚಿತ್ರದಲ್ಲಿರುವಂತೆ ನಿರ್ಮಿಸಲಾಗಿದೆ.

ಗೊ ಪ್ರೊ ಕ್ಯಾಮೆರಾ -2011
ಈ ಕ್ಯಾಮೆರಾದಲ್ಲಿ ಅತ್ಯುತ್ತಮ ಪ್ರಕೃತಿಯ ಛಾಯಾಚಿತ್ರಣವನ್ನು ಕ್ಯಾಪ್ಚರ್ ಮಾಡಬಹುದು. ಅಲ್ಲದೇ ಇದನ್ನು ಎಲ್ಲಿ ಬೇಕಾದರೂ ಅಳವಡಿಸಬಹುದಾಗಿದ್ದು, ಸಮುದ್ರದೊಳಗಿನ ಚಿತ್ರಣವನ್ನು ನೀರಿನೊಳಗೆ ಈ ಕ್ಯಾಮೆರಾದಿಂದ ರೆಕಾರ್ಡ್ ಮಾಡಬಹುದಾಗಿದೆ.

ಐಪ್ಯಾಡ್- 2010
ಐಪ್ಯಾಡ್ ಮೊಟ್ಟಮೊದಲ ಟ್ಯಾಬ್ಲೆಟ್ ಕಂಪ್ಯೂಟರ್ ಆಗಿದೆ. ಆದರೆ ಪ್ರಸ್ತುತದಲ್ಲಿ ಹಲವು ಸ್ಪರ್ಧಾಳುಗಳನ್ನು ಎದುರಿಸುತ್ತಿದೆ.

ನಿಂಟೆಂಡೊ ವೈ( Nintendo Wii)- 2009
ನಿಂಟೆಂಡೊ ವೈ ವಿಡಿಯೋ ಗೇಮ್ ದೇಹಕ್ಕೆ ವ್ಯಾಯಾಮ ಮಾಡಿಸುವ ಗೇಮ್ ಆಗಿದೆ. ಇಂದಿಗೂ ಸಹ ಇದು ಅಮ್ಮಂದಿರಿಗೆ ಪ್ರಖ್ಯಾತ ವಿಡಿಯೋ ಗೇಮ್ ಆಗಿದೆ.

ಐಪಾಡ್ ನ್ಯಾನೋ - 2008
2008 ರಲ್ಲಿ ಅಭಿವೃದ್ದಿಗೊಂಡ ಐಪಾಡ್, ಜನರ ಮ್ಯೂಸಿಕ್‌ಗಳನ್ನು ತನ್ನಲ್ಲಿಯೇ ಅಳವಡಿಸಿಕೊಂಡ ಪೋರ್ಟಬಲ್ ಆಗಿ ಅಭಿವೃದ್ದಿಗೊಂಡಿತ್ತು, ಇದು ಅಧಿಕ ತೆಳುವಾದ ಡಿವೈಸ್ ಆಗಿದ್ದು, ಜನರು ತಮ್ಮ ಜೇಬಿನಲ್ಲೇ ಇರಿಸಿಕೊಳ್ಳಬಹುದಾಗಿದೆ.

ಐಫೋನ್ -2007
ಐಫೋನ್ ಬರುವ ಮುಂಚೆ ಸ್ಮಾರ್ಟ್‌ಫೋನ್‌ಗಳು ಕೇವಲ ಕರೆ ಮತ್ತು ಸಂದೇಶಗಳನ್ನು ಕಳುಹಿಸಲು ಮಾತ್ರ ಬಳಕೆಯಾಗುತ್ತಿದ್ದವು. ಆದರೆ ಐಫೋನ್ ಅಭಿವೃದ್ದಿಗೊಂಡ ನಂತರದಲ್ಲಿ ಜನರಿಗೆ ಹಲವು ರೀತಿಯ ಚಟುವಟಿಕೆ ನಿರ್ವಹಿಸಲು ಸಾಧ್ಯವಾಯಿತು.

ಪ್ಲೇಸ್ಟೇಷನ್ 3 -2006
ಪ್ಲೇಸ್ಟೇಷನ್ 3 - 2006 ರ ಪ್ರಖ್ಯಾತ ಗೇಮ್ ಆಗಿದ್ದು, ಅಂದಿನ ದಿನಗಳಿಗೆ ಅದು ಮುಂದಿನ ತಲೆಮಾರಿನ ಹೆಸರುವಾಸಿಯಾದ ಆನ್‌ಲೈನ್ ಗೇಮ್ ಆಗಿತ್ತು.

ಎಕ್ಸ್‌ಬಾಕ್ಸ್ 360 - 2005
ಕಳೆದ ಒಂದು ದಶಕದ ಹಿಂದೆ ಮೈಕ್ರೋಸಾಫ್ಟ್ ನೀಡಿದ್ದ ಗೇಮ್ ಇದಾಗಿದೆ.

Razr ಫೋನ್ಸ್ - 2004
2004 ರಲ್ಲಿ ಕರೆಮಾಡಲು ಮತ್ತು ಸಂದೇಶ ಕಳುಹಿಸಲು ಹೆಚ್ಚು ಪ್ರಖ್ಯಾತವಾಗಿದ್ದ ಫೋನ್‌ಗಳಲ್ಲಿ ಈ ಮೊಟೊರೋಲಾ ಫೋನ್ ಇಂದಿನ ಆಪಲ್‌ನಷ್ಟೆ ಹೆಸರುಗಳಿಸಿತ್ತು.

ಜಿಪಿಎಸ್ -2003
2003 ರಲ್ಲೇ ಮಾರ್ಗ ನಿರ್ಧೇಶನಕ್ಕಾಗಿ ಜಿಪಿಎಸ್‌ಗಳನ್ನು ಕಾರುಗಳ ಡ್ಯಾಶ್‌ಬೋರ್ಡ್‌ಗಳಲ್ಲಿ ಮತ್ತು ಬೈಸಿಕಲ್‌ಗಳಲ್ಲಿ ಬಲಸಲಾಗುತ್ತಿತ್ತು. ಇದು ಅಂದಿನ ಅತಿಪುಟ್ಟ, ಅಧಿಕ ಪ್ರಖ್ಯಾತ ಜಿಪಿಎಸ್ ಆಗಿದೆ.

ಟಿವೊ -2002
ಜನರು ತಮ್ಮ ಬ್ಯುಸಿ ವೇಳೆಯಿಂದ ಮಿಸ್ ಮಾಡಿಕೊಳ್ಳುತ್ತಿದ್ದ ಟಿವಿ ಶೋಗಳನ್ನು ನೋಡಲು 2002 ರಲ್ಲಿ ಬಳಸುತ್ತಿದ್ದ ಟಿವೋ ಟೆಕ್ ಡಿವೈಸ್.

ವೈಫೈ ಹಾಟ್‌ಸ್ಪಾಟ್ಸ್ -2001
ದಶಕದ ಹಿಂದೆ ಉಚಿತ ವೈಫೈ ನೀಡುತ್ತಿದ್ದ ಸ್ಥಳಗಳೇ ಪ್ರಖ್ಯಾತ ಸ್ಥಳಗಳಾಗಿದ್ದವು, ಇಂದು ಮ್ಯಾಕ್‌ಡೊನಾಲ್ಡ್‌ಗಳು ಸಹ ಉಚಿತ ವೈಫೈ ನೀಡುತ್ತಿವೆ.

ಥಂಬ್ ಡ್ರೈವ್ಗಳು -2000
ಹಿಂದೆ ಕೇವಲ 32MB ಡ್ರೈವ್‌ಗಳೇ ಅಧಿಕವಾಗಿದ್ದವು. ಅವುಗಳು ಕೇವಲ ಒಂದು ಡಾಕುಮೆಂಟ್ ಅನ್ನು ಹೊಂದುವ ಸಾಮರ್ಥ್ಯ ಹೊಂದಿದ್ದವು. ಆದರೆ ಇಂದು ಟೆಕ್ ಸಾಮರ್ಥ್ಯ ಹೆಚ್ಚಾಗಿದೆ.

ಡಿಎಸ್ಎಲ್‌ಆರ್ ಕ್ಯಾಮೆರಾಗಳು -1999
1999 ರಲ್ಲಿ ಡಿಎಸ್‌ಎಲ್‌ಆರ್ ಕ್ಯಾಮೆರಾವು ಅಂದಿನ ಫ್ರೊಫೆಸನಲ್ ಫೋಟೋಗ್ರಾಫರ್ ಬಳಸುತ್ತಿದ್ದ ಕ್ಯಾಮೆರಾವಾಗಿತ್ತು. ಆ ವರ್ಷದ ಅತ್ಯುತ್ತಮ ಆವಿಷ್ಕಾರವಾಗಿತ್ತು.


Click it and Unblock the Notifications








