Home
ಸುದ್ದಿಜಾಲ

'ಚೆನ್ನೈ ಹೆದರದಿರಿ' ನಾವಿದ್ದೇವೆ ಎಂದ ಫೇಸ್‌ಬುಕ್ ಟೂಲ್

By Shwetha

ಸಾಮಾಜಿಕ ದೈತ್ಯ ತಾಣ ಫೇಸ್‌ಬುಕ್ ಪ್ರವಾಹ ಪೀಡಿತ ಚೆನ್ನೈನಲ್ಲಿ ಸೇಫ್ಟಿ ಚೆಕ್ ವ್ಯವಸ್ಥೆಯನ್ನು ಕಲ್ಪಿಸಿದೆ. ಗುರುವಾರ ಮುಂಜಾನೆ ಈ ವೆಬ್‌ಸೈಟ್ ಕಾರ್ಯನಿರತವಾಗಿದೆ ಈ ಫೀಚರ್ ಜನರಿಗೆ ತಮ್ಮನ್ನು ಸುರಕ್ಷಿತ ಎಂಬುದಾಗಿ ಮಾರ್ಕ್ ಮಾಡಲು ನೆರವನ್ನು ನೀಡಲಿದೆ.

ಓದಿರಿ: ಚೆನ್ನೈ ಪ್ರವಾಹಕ್ಕೆ ಟ್ವಿಟರ್‌ ನೆರವಿನ ಹಸ್ತ

ಸೇಫ್ಟಿ ಚೆಕ್ ಫೀಚರ್ ನೆರೆಪೀಡಿತ ಪ್ರದೇಶಗಳಲ್ಲಿ ಅವರು ಸುರಕ್ಷಿತರಾಗಿದ್ದೀರಾ ಎಂಬ ಟಿಪ್ಪಣಿಯೊಂದಿಗೆ ಅವರನ್ನು ಸಂಧಿಸುತ್ತಿದೆ. ಮತ್ತು ಬಳಕೆದಾರರು ಹೌದು ನನ್ನ ಸ್ನೇಹಿತರಿಗೆ ತಿಳಿಸಿ ಎಂಬುದನ್ನು ಕ್ಲಿಕ್ ಮಾಡಿದಾಗ ಈ ಟೂಲ್ ಸ್ವಯಂಚಾಲಿತವಾಗಿ ಬಳಕೆದಾರರ ಫೇಸ್‌ಬುಕ್ ಸ್ನೇಹಿತರಿಗೆ ಇದನ್ನು ತಿಳಿಸುತ್ತದೆ.

ಓದಿರಿ: ಮಾರ್ಕ್ ಜುಕರ್ ಬರ್ಗ್ ದಂಪತಿಗಳಿಂದ 99% ಆಸ್ತಿ ದೇಣಿಗೆ

ಎಡೆಬಿಡದೆ ಸುರಿಯುತ್ತಿರುವ ಮಳೆ ಚೆನ್ನೈನಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು ದೇಶದ ಎಲ್ಲೆಡೆಗಳಿಂದ ನೆರವಿನ ಮಹಾಪೂರವೇ ಸಂತ್ರಸ್ತರಿಗೆ ಹರಿದು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ಚೆನ್ನೈ 34.5 ಸೆಮೀ ಮಳೆಗೆ ತನ್ನನ್ನು ಒಡ್ಡಿಕೊಂಡಿದ್ದು, 100 ವರ್ಷಗಳಲ್ಲಿ ಇಂತ ವರ್ಷಧಾರೆಯನ್ನು ನಗರ ಇದೇ ಮೊದಲ ಬಾರಿಗೆ ಸಂಧಿಸಿದೆ.

ಸೇಫ್ಟಿ ಚೆಕ್ ಲಾಂಚ್

ಸೇಫ್ಟಿ ಚೆಕ್ ಲಾಂಚ್

ಫೇಸ್‌ಬುಕ್ ಸೇಫ್ಟಿ ಚೆಕ್ ಫೀಚರ್ ಅನ್ನು ಅಕ್ಟೋಬರ್ 2014 ರಲ್ಲಿ ಲಾಂಚ್ ಮಾಡಿತ್ತು. ಹಲವಾರು ಸಂದರ್ಭಗಳಲ್ಲಿ ಈ ಫೀಚರ್ ನೆರವಿನ ಹಸ್ತವನ್ನು ಚಾಚಿದೆ.

ಪ್ಯಾರೀಸ್ ದುರಂತ

ಪ್ಯಾರೀಸ್ ದುರಂತ

ಪ್ಯಾರೀಸ್ ದುರಂತದ ಸಂದರ್ಭದಲ್ಲೂ ಫೇಸ್‌ಬುಕ್ ಸೇಫ್ಟಿ ಚೆಕ್ ಹೆಚ್ಚುವರಿ ಕಾಳಜಿಯನ್ನು ತೆಗೆದುಕೊಂಡು ಜನರ ಸುರಕ್ಷತೆಗೆ ಶ್ರಮಿಸಿತ್ತು

4 ಮಿಲಿಯನ್ ಜನರು

4 ಮಿಲಿಯನ್ ಜನರು

ಪ್ಯಾರೀಸ್ ದುರಂತ ಸಂದರ್ಭದಲ್ಲಿ 4 ಮಿಲಿಯನ್ ಜನರು ಈ ಪರಿಕರವನ್ನು ಬಳಸಿದ್ದರು.

ಪ್ರೀತಿ ಪಾತ್ರರೊಂದಿಗೆ ಸಂಪರ್ಕಪಡಿಸುವ ಕೆಲಸ

ಪ್ರೀತಿ ಪಾತ್ರರೊಂದಿಗೆ ಸಂಪರ್ಕಪಡಿಸುವ ಕೆಲಸ

ದುರಂತ ಸಮಯದಲ್ಲಿ ನಿಮ್ಮನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಪರ್ಕಪಡಿಸುವ ಕೆಲಸವನ್ನು ಸೇಫ್ಟಿ ಚೆಕ್ ಮಾಡುತ್ತದೆ.

ನೈಸರ್ಗಿಕ ವಿಕೋಪ

ನೈಸರ್ಗಿಕ ವಿಕೋಪ

ನೈಸರ್ಗಿಕ ವಿಕೋಪಗಳ ಬಳಿ ನೀವಿದ್ದಲ್ಲಿ ನೀವು ಸುರಕ್ಷಿತರಾಗಿದ್ದೀರಿ ಮತ್ತು ನಿಮ್ಮ ಸ್ನೇಹಿತರು ಸುರಕ್ಷಿತರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಟೂಲ್

ಟೂಲ್

ನೀವು ಸುರಕ್ಷಿತರಾಗಿದ್ದೀರಾ ಎಂಬುದಾಗಿ ಈ ಟೂಲ್ ನಿಮ್ಮನ್ನು ಕೇಳುತ್ತದೆ.

ಐಯಾಮ್ ಸೇಫ್ ಬಟನ್

ಐಯಾಮ್ ಸೇಫ್ ಬಟನ್

ನೀವು ಸುರಕ್ಷಿತರಾಗಿರುವಿರಿ ಎಂದಾದಲ್ಲಿ ಐಯಾಮ್ ಸೇಫ್ ಬಟನ್ ಅನ್ನು ಕ್ಲಿಕ್ ಮಾಡಿ ನಿಮ್ಮ ಸ್ನೇಹಿತರಿಗೆ ಸಂದೇಶ ರವಾನಿಸಬಹುದಾಗಿದೆ. ಈ ಟೂಲ್ ಬಳಸಿಕೊಂಡು ನಿಮ್ಮ ಸ್ನೇಹಿತರ ಸುರಕ್ಷಾ ವಿವರಗಳನ್ನು ಕೂಡ ನಿಮಗೆ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Social networking giant Facebook has activated its Safety Check feature in Chennai. The website activated the feature early Thursday morning. The Safety Check feature allows people to mark themselves as "safe" from the floods.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+