Just In
- 12 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 14 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 14 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 16 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
ಹೆಂಡತಿಗೆ ವಿಚ್ಛೇದನ ನೀಡಿ ಮಗನತ್ತ ಕಣ್ಣೆತ್ತಿಯೂ ನೋಡದ ಪತಿ!
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Movies
Chaitra Rai: 'ರಾಧಾ ಕಲ್ಯಾಣ'ದ ಚೈತ್ರಾ ರೈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದೇಕೆ?
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿಲಿಕಾನ್ ವ್ಯಾಲಿಯಲ್ಲಿ ಭಾರತದ ಪ್ರಬಲ ಟೆಕ್ ತಜ್ಞರು
ಸಿಲಿಕಾನ್ ವ್ಯಾಲಿ ಅಂದ್ರೆ ಬಹುಸಂಖ್ಯಾತರಿಗೆ ಬಹುಶಃ " ಅಯ್ಯೋ ಅದಾ ಮೊನ್ನೆ ಮೊನ್ನೆ ತಾನೆ ನಮ್ ನರೇಂದ್ರ ಮೋದಿಯವರು ಹೋಗಿ ಬಂದ್ರಲಾ ಅದು ತಾನೆ" ಅಂತಾರೆ. ಆದ್ರೆ ಸಿಲಿಕಾನ್ ವ್ಯಾಲಿ ನೂರಾರು ಟೆಕ್ ಸಂಸ್ಥೆಗಳಿಗೆ ತಾಯಿನಾಡು. ಅಲ್ಲದೇ ಗ್ಲೋಬಲ್ ಟೆಕ್ನಾಲಜಿ ಕಂಪನಿಗಳಿಗೂ ಸಹ. ಗೂಗಲ್, ಆಪಲ್, ಫೇಸ್‌ಬುಕ್ ನಂತಹ ಹಲವು ಪ್ರಮುಖ ಟೆಕ್ ಕಂಪನಿಗಳಿಗೆ ತಾಯಿ ಮನೆ. ದಕ್ಷಿಣ ಸ್ಯಾನ್‌ಫ್ರಾನ್ಸಿಸ್ಕೋದ ಕೊಲ್ಲಿ ಪ್ರದೇಶದಲ್ಲಿರುವ, ಕೇಳಲು ಇಂಪಾಗಿರುವ ಸಿಲಿಕಾನ್ ವ್ಯಾಲಿಯಲ್ಲಿ ಭಾರತದ ಪ್ರಬಲ ಹಲವು ಟೆಕ್ ತಂತ್ರಜ್ಞರು ಇದ್ದಾರೆ.
ಓದಿರಿ: ಆನ್‌ಲೈನ್‌ನಿಂದ ಹಣ ಸಂಪಾದಿಸಲು 10 ಸರಳ ವಿಧಾನಗಳು
ಹೆಚ್ಚು ಕಡಿಮೆ ಅಮೇರಿಕದ ದೊಡ್ಡ ದೊಡ್ಡ ಟೆಕ್ನಾಲಜಿ ಕಂಪನಿಗಳು ಭಾರತದ ಟೆಕ್ ಹಿರೋಗಳನ್ನು ಒಳಗೊಂಡಿವೆ. ಅಲ್ಲದೇ ಯುಎಸ್‌ಬಿ ಮತ್ತು ಟೆಕ್ನಾಲಜಿ ಬ್ಲಾಗಿಂಗ್ ಪಿತಾಮಹರನ್ನು ಒಳಗೊಡಂತೆ ಭಾರತೀಯ ತಂತ್ರಜ್ಞರನ್ನು ಪ್ರಬಲ ಟೆಕ್ ಕಂಪನಿಗಳು ಹೊಂದಿವೆ. ಹಾಗಾದರೆ ಭಾರತದ ಹಿರಿಮೆಯನ್ನು ಎತ್ತಿ ಹಿಡಿದ ಭಾರತದ ಹೆಮ್ಮೆಯ ಪ್ರಜೆಗಳು ಯಾರು ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ ಅಲ್ವೇ. ಹಾಗಾದರೆ ಸಿಲಿಕಾನ್ ವ್ಯಾಲಿಯಲ್ಲಿ ಇರುವ ಆ ಪ್ರಬಲ ಟೆಕ್ ತಂತ್ರಜ್ಞರು ಯಾರೂ ಎಂಬುದನ್ನು ಲೇಖನ ಓದಿ ತಿಳಿಯಿರಿ..

ಅಜಯ್ ಭಟ್
ಹೆಚ್ಚು ಜನರಿಗೆ ಹೆಸರೆ ತಿಳಿಯದ ಭಾರತದ ಟೆಕ್ ಹಿರೋ ಅಜಯ್ ಭಟ್. ಇವರು ಭಾರತೀಯ ಅಮೇರಿಕದ ಕಂಪ್ಯೂಟರ್ ವಾಸ್ತುಶಿಲ್ಪಿ. ಇವರು USB ಪಿತಾಮಹ. ಇವರು ಭಾರತದ ಬರೋಡಾದಲ್ಲಿನ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾನಿಲಯದಲ್ಲಿ ಪದವಿಪಡೆದರು. ನಂತರದಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರದಲ್ಲಿ ಇಂಟೆಲ್ ಕಂಪನಿಗೆ ಉದ್ಯೋಗಕ್ಕೆ 1990ರಲ್ಲಿ ಸೇರಿದರು.

ವಿನೋದ್ ಧಾಮ್
ಪ್ರಸಿದ್ಧ ಇಂಟೆಲ್ ಪೆಂಟಿಯಮ್ ಪ್ರೊಸೆಸರ್ಸ್‌ನ ಪಿತಾಮಹ ವಿನೋದ್ ಧಾಮ್ ಇವರು ಮೂಲತಃ ಭಾರತದ 'ಪುಣೆ'ಯವರು.

ವಿನೋದ್ ಖೋಸ್ಲಾ
1955 ರಲ್ಲಿ ದೆಹಲಿಯಲ್ಲಿ ವಿನೋದ್ ಖೋಸ್ಲಾ ರವರು ಜನಿಸಿದರು. ಇವರು ಇಂದು ಭಾರತೀಯ ಮೂಲದ ಅಮೇರಿಕನ್ ಬಿಲೇನಿಯರ್ ಆಗಿದ್ದಾರೆ. ಇವರು ಸನ್ ಮೈಕ್ರೋಸಿಸ್ಟಮ್‌ನ ಸಹ-ಸಂಸ್ಥಾಪಕರು.

ಸುಂದರ್ ಪಿಚೈ
ತಮಿಳುನಾಡಿನ ಚೆನ್ನೈ ಮೂಲದ ಸುಂದರ್ ಪಿಚೈ ಇಂದು ಅಮೇರಿಕನ್ ಆಗಿದ್ದಾರೆ. ಪ್ರಸ್ತುತದಲ್ಲಿ ಗೂಗಲ್‌ನ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ.

ಸಬೀರ್ ಭಟಿಯಾ
1980ರಲ್ಲಿ ಅಮೇರಿಕಕ್ಕೆ ತೆರಳಿದ "ಸಬೀರ್ ಭಟಿಯಾ ರವರು ಮೂಲತಃ ಚಂಡೀಘಢದವರು. ಅವರು ವೆಬ್ ಮೇಲ್ Hotmail.com ಸಂಸ್ಥಾಪಕರು.

ವಿಕ್ ಗುಂಡೊತ್ರ (Vic Gundotra)
ಗೂಗಲ್‌ನ ಇನ್ನೊಬ್ಬ ಉನ್ನತ ಪ್ರೊಫೈಲ್‌ನ ಇಂಜಿನಿಯರ್ ಭಾರತದ 'ವಿಕ್ ಗುಂಡೊತ್ರ' ರವರು. ಇವರು ಗೂಗಲ್ ನ tsar ಮತ್ತು ಗೂಗಲ್ ಪ್ಲಸ್ ಸಾಮಾಜಿಕ ನೆಟ್‌ವರ್ಕ್‌ನಿಂದ ಪ್ರಖ್ಯಾತರಾಗಿದ್ದಾರೆ. ಇವರು ಮೂಲತಃ ಮುಂಬೈ.

ಅಮಿತ್ ಸಿಂಘಾಲ್
ಅಮಿತ್ ಸಿಂಘಾಲ್ ಗೂಗಲ್ ಉನ್ನತ ಪ್ರೊಫೈಲ್‌ನ ಹಿರಿಯ ನಿರ್ವಹಣಾಧಿಕಾರಿ. ಇವರು 1968 ರಲ್ಲಿ ಝಾನ್ಸಿಯಲ್ಲಿ ಜನಿಸಿದರು.

ರುಚಿ ಸಾಂಘ್ವಿ
ರುಚಿ ಸಾಂಘ್ವಿಯವರು ಅಮೇರಿಕದ ದೊಡ್ಡ ಕಂಪನಿಯ ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞೆ. 1982 ರಲ್ಲಿ ಪುಣೆಯಲ್ಲಿ ಜನಿಸಿದರು. ರುಚಿ ಸಾಂಘ್ವಿಯವರು ಫೇಸ್‌ಬುಕ್‌ನ ಮೊದಲ ಮಹಿಳಾ ಇಂಜಿನಿಯರ್ ಆಗಿ 2005 ರಲ್ಲಿ ಸೇರ್ಪಡೆಗೊಂಡರು.

ಪದ್ಮಶ್ರೀ ವಾರಿಯರ್
ಪದ್ಮಶ್ರೀ ವಾರಿಯರ್ ಭಾರತದ ವಿಜಯವಾಡದವರು. ಇವರು ಅಮೇರಿಕದ ಇಲೆಕ್ಟ್ರಾನಿಕ್ ವಾಹನ ಕಂಪನಿ 'NextEV' ಸಿಇಓ. ಇವರನ್ನು "Queen of the Electric Car Biz" ಎಂದು Fortune ನಿಯತಕಾಲಿಕೆಯವರು ಕರೆದಿದ್ದಾರೆ.

ಶಂತನು ನಾರಾಯಣ್
ಶಂತನು ನಾರಾಯಣ್ ರವರು ಭಾರತೀಯ ಅಮೇರಿಕನ್ ಬ್ಯುಸಿನೆಸ್ ಕಾರ್ಯನಿರ್ವಹಕ ಮತ್ತು ಅಡೋಬ್ ಸಿಸ್ಟಮ್ ಕಂಪನಿಯ ಸಿಇಓ. ಇವರು ಮೂಲತಃ ಹೈದಾರಾಬಾದ್‌ನವರು.

ಓಂ ಮಲ್ಲಿಕ್
ಓಂ ಮಲ್ಲಿಕ್ ದೆಹಲಿಯಲ್ಲಿ 1966 ರಲ್ಲಿ ಜನಿಸಿದರು. ಭಾರತೀಯ ಮೂಲದ ಅಮೇರಿಕನ್ ವೆಬ್ ಮತ್ತು ಟೆಕ್ನಾಲಜಿ ಬರಹಗಾರರು. ಟೆಕ್ನಾಲಜಿ ನ್ಯೂಸ್ ಬ್ಲಾಗ್‌ನ ಪಿತಾಮಹರು ಹೌದು. GigaOM ನ ಸಂಸ್ಥಾಪಕರು ಮತ್ತು ಹಿರಿಯ ಪ್ರಖ್ಯಾತ ಬರಹಗಾರರು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470