ಹೆಚ್ಚಿನ ಮೊಬೈಲ್ ಬಳಕೆ ಸ್ಥೂಲಕಾಯತೆ ಖಂಡಿತ

Written By:

ಹೆಚ್ಚಿನ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಿಂದ ಯುವಜನಾಂಗ ಎಷ್ಟೊಂದು ಅಪಾಯಗಳನ್ನು ಎದುರಿಸಬಹುದು ಎಂಬುದು ನಿಮಗೆ ಗೊತ್ತೇ? ಹೌದು ಅಪರಿಮಿತವಾಗಿ ಟಿವಿ ನೋಡುವುದು, ಅಧಿಕ ಇಂಟರ್ನೆಟ್ ಬಳಕೆ, ವೀಡಿಯೋ ಗೇಮ್ ಆಟ ಹೀಗೆ ಯುವಜನಾಂಗ ಮೋಜಿಗಾಗಿ ಕಂಡುಕೊಂಡಿರುವ ಇಲೆಕ್ಟ್ರಾನಿಕ್ ಉತ್ಪನ್ನಗಳು ಅವರ ದೇಹದಲ್ಲಿ ಉಂಟು ಮಾಡುವ ಪರಿಣಾಮಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ.

ಓದಿರಿ: ವಿಶಿಷ್ಟ ಸಂಶೋಧನೆ: ಕಸದ ತೊಟ್ಟಿಯಿಂದ ವೈಫೈ

ಶಿಕ್ಷಣದಲ್ಲಿ ಹಿನ್ನಡೆ ಸೇರಿದಂತೆ ಯುವಜನಾಂಗ ಅನುಭವಿಸುತ್ತಿರುವ ಮಾನಸಿಕ ಮತ್ತು ದೈಹಿಕ ಅಪಾಯಗಳನ್ನು ನಾವಿಲ್ಲಿ ಪಟ್ಟಿ ಮಾಡಲಿದ್ದೇವೆ ಬನ್ನಿ ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
33% ಬೊಜ್ಜಿನ ಸಮಸ್ಯೆ

ಬೊಜ್ಜು

ಇಲೆಕ್ಟ್ರಾನಿಕ್ ಪರಿಕರಗಳನ್ನು ಬಳಸುತ್ತಾ ಒಂದೇ ಕಡೆ ಕೂರುವುದರಿಂದ ಬೊಜ್ಜು ಅಪಾಯ ಖಂಡಿತ ನಿಮ್ಮನ್ನು ಸಮೀಪಿಸುತ್ತದೆ. ಇನ್ನು ಅಧ್ಯಯನಗಳ ಪ್ರಕಾರ 33% ಯುವಜನಾಂಗ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದೆ ಎಂಬುದು ತಿಳಿದು ಬಂದಿದೆ.

ಹೃದಯ ಸಂಬಂಧಿ ರೋಗ

ಹೃದಯ ಸಮಸ್ಯೆಗಳು

ಹೃದಯ ಸಂಬಂಧಿ ರೋಗಗಳು, ಮಧುಮೇಹ, ಸಂಧಿವಾತ ಮೊದಲಾದ ಸಮಸ್ಯೆಗಳನ್ನು ತಂದೊಡ್ಡಲಿದೆ.

ಶಕ್ತಿ ವೃದ್ಧಿ

ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಿ

ಇನ್ನು ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಿ ಯೋಗ, ದೈಹಿಕ ವ್ಯಾಯಾಮದಂತಹ ಕೆಲವೊಂದು ಚಟುವಟಿಕೆಗಳಿಂದ ನಿಮ್ಮಲ್ಲಿ ಶಕ್ತಿ ವೃದ್ಧಿಯಾಗುವುದು ಖಂಡಿತ.

ಋಣಾತ್ಮಕ ಚಿಂತನೆ

ಆಕ್ರಮಣಶೀಲತೆ

ಹೆಚ್ಚಿನ ಟಿವಿ ನೋಡುವಿಕೆ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಿಂದ ಆಕ್ರಮಣಶೀಲತೆ ಪ್ರವೃತ್ತಿ ಯುವಜನರಲ್ಲಿ ಹೆಚ್ಚು ಕಂಡುಬರುತ್ತಿದೆ. ಇನ್ನು ಟಿವಿಯಲ್ಲಿ ಬರುವ ಹಿಂಸಾತ್ಮಕ, ಅಂತೆಯೇ ಲೈಂಗಿಕ ದೃಶ್ಯಳಗಳು ಅವರನ್ನು ಋಣಾತ್ಮಕವಾಗಿ ಚಿಂತಿಸಲು ಪ್ರಚೋದಿಸುತ್ತವೆ.

ನಿದ್ರಾಹೀನತೆ ಸಮಸ್ಯೆ

ನಿದ್ದೆಯ ಕೊರತೆ

ನಿದ್ರಾಹೀನತೆ ಸಮಸ್ಯೆಯನ್ನು ಹದಿಹರೆಯದ ಮಕ್ಕಳು ಅನುಭವಿಸುವುದು ಖಂಡಿತವಾಗಿದ್ದು ನಿದ್ದೆಯಲ್ಲಿ ವ್ಯತ್ಯಾಸವುಂಟಾಗುವಂತೆ ಇವು ಮಾಡುತ್ತವೆ.

ಕಡಿಮೆ ಮಾಡಿಸಿ

ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆ

ನಿಮ್ಮ ಮಕ್ಕಳು ಆದಷ್ಟು ನಿದ್ದೆ ಮಾಡುವ ಸಮಯದಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಸಿ. ಅವರು ಟಿವಿ ಅಥವಾ ಮೊಬೈಲ್ ಅನ್ನು ನೋಡುತ್ತಿದ್ದಾರೆ ಎಂದಾದಲ್ಲಿ ಅದನ್ನು ಆಫ್ ಮಾಡಿ ನಿದ್ದೆ ಮಾಡಲು ಅವರನ್ನು ಕಳುಹಿಸಿ.

ಏರುಪೇರಾಗುವುದು ಖಂಡಿತ

ಮಾನಸಿಕ ಸಮಸ್ಯೆ

ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಾಗ ಮಾನಸಿಕ ಸಮಸ್ಯೆಗಳು ಹೆಚ್ಚು ಉಂಟಾಗುತ್ತಿದ್ದು ಇದರಿಂದ ಮಕ್ಕಳ ಮಾನಸಿಕ ವ್ಯವಸ್ಥೆಯಲ್ಲಿ ಏರುಪೇರಾಗುವುದು ಖಂಡಿತವಾಗಿದೆ.

ಮಾನಸಿಕ ಸಮಸ್ಯೆ

ಖಿನ್ನತೆ

ಹೆಚ್ಚು ಫೋನ್, ಕಂಪ್ಯೂಟರ್ ಬಳಸುವವರಲ್ಲಿ ಖಿನ್ನತೆ ಸಮಸ್ಯೆ ಹೆಚ್ಚು ಉಂಟಾಗುತ್ತಿದ್ದು ಇದು ಮಕ್ಕಳಲ್ಲಿ ಮಾನಸಿಕ ಸಮಸ್ಯೆಯನ್ನು ತಂದೊಡ್ಡುತ್ತಿದೆ ಎನ್ನಲಾಗಿದೆ.

ದೊಡ್ಡ ರೋಗ

ಆತಂಕ

ಹದಿಹರೆಯದವರಲ್ಲಿ ಆತಂಕ ಕೂಡ ದೊಡ್ಡ ರೋಗವಾಗಿ ಪತ್ತೆಯಾಗುತ್ತಿದ್ದು ಹೆಚ್ಚಿನ ಇಲೆಕ್ಟ್ರಾನಿಕ್ ಉತ್ಪನ್ನಗಳ ಬಳಕೆ ಆತಂಕವನ್ನು ಸೃಷ್ಟಿಸುತ್ತಿದೆ ಎನ್ನಲಾಗಿದೆ.

ಆರೋಗ್ಯದ ಮೇಲೆ ಅಡ್ಡ ಪರಿಣಾಮ

ದ್ವೇಷ

ಹೆಚ್ಚಿನ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಇದನ್ನು ಬಳಸುವವರಲ್ಲಿ ದ್ವೇಷವನ್ನು ಉಂಟು ಮಾಡಲಿದ್ದು ವ್ಯತಿರಿಕ್ತಚಾಗಿ ಅವರ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Children and teenagers spend an average of four hours a day just on television time, according to the Palo Alto Medical Foundation. can cause problems if they're overused.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot