ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಆಯ್ತು ಈಗ ಸ್ಮಾರ್ಟ್‌ಮನೆ- ಸ್ಮಾರ್ಟ್ ರೋಡ್..!!
ಹೊಸ ಪ್ರಯತ್ನ ಅದೇ ಸ್ಮಾರ್ಟ್ ಮನೆ. ಜಿಯೋ ಈಗಾಗಲೇ ಈ ಸ್ಮಾರ್ಟ್‌ಮನೆ ಮಾಡುವ ಸಲುವಾಗಿ ಕಾರ್ಯಯೋಜನೆಯನ್ನು ರೂಪಿಸಿದ್ದು, ಇದಕ್ಕಾಗಿಯೇ ಅತೀ ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ಮಾಡಲಾಗಿದೆ.
ಬದಲಾಗುತ್ತಿರುವ ದಿನಗಳು ತುಂಬ ಸ್ಮಾರ್ಟ್ ಆಗುತ್ತಿವೆ. ಸ್ಮಾರ್ಟ್‌ಫೋನ್, ಸ್ಮಾರ್ಟ್ ವಾಚ್, ಸ್ಮಾರ್ಟ್ ಟಿವಿ ಹೀಗೆ ಸ್ಮಾರ್ಟ್‌ಗಳ ವಸ್ತುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಈ ಶುರುವಾಗಿದೆ ಹೊಸ ಪ್ರಯತ್ನ ಅದೇ ಸ್ಮಾರ್ಟ್ ಮನೆ. ಜಿಯೋ ಈಗಾಗಲೇ ಈ ಸ್ಮಾರ್ಟ್‌ಮನೆ ಮಾಡುವ ಸಲುವಾಗಿ ಕಾರ್ಯಯೋಜನೆಯನ್ನು ರೂಪಿಸಿದ್ದು, ಇದಕ್ಕಾಗಿಯೇ ಅತೀ ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ಮಾಡಲಾಗಿದೆ.

ಓದಿರಿ: ಆಪಲ್ ಫೇಸ್ ID ಫೇಲ್: ಹುವಾವೆಯಿಂದ 'ರಿಯಲ್ AI ಮೊಬೈಲ್'
ಸ್ಮಾರ್ಟ್ ವಸ್ತುಗಳಿರುವ ಸ್ಮಾರ್ಟ್ ಮನೆಗಳು ಶೀಘ್ರವೇ ನಮ್ಮದಾಗಲಿದ್ದು, ಅದುವೇ ಕೈಗೆಟುಕುವ ದರದಲ್ಲಿ, ಹೊಸದಾಗಿ ಯೋಚಿಸುವವರಿಗೆ, ಹೊಸತನ್ನು ಬಯಸುವವರಿಗೆ ಸ್ಮಾರ್ಟ್ ಮನೆಗಳು ಹೊಸ ಪ್ರಪಂಚವನ್ನು ಕಟ್ಟಿಕೊಡಲಿದ್ದು, ನಮ್ಮ ದಿನನಿತ್ಯದ ಜೀವನವನ್ನು ಸರಳ ಹಾಗೂ ಸುಕ್ಷಿತಗೊಳಿಸುವ ಕಾರ್ಯವನ್ನು ಮಾಡಲಿದೆ.

ಸ್ಮಾರ್ಟ್ ಮಾಡಲಿರುವ ಕಂಪನಿಗಳು:
ದೈತ್ಯ ಕಂಪನಿಗಳಾದ ಅಮೆಜಾನ್, ಗೂಗಲ್, ಆಪಲ್ ಸೇರಿದಂತೆ ಹಲವು ಕಂಪೆನಿಗಳು ಈಗಾಗಲೇ ನಮ್ಮ ಜೀವನವನ್ನು ಸ್ಮಾರ್ಟ್ ಮಾಡುವಂತಹ ಸೇವೆ ಮತ್ತು ಉಪಕರಣಗಳು ತಯಾರು ಮಾಡಲು ಮುಂದಾಗಿದ್ದು, ಶೀಘ್ರವೇ ಇವೆಲ್ಲವೂ ನಿಮ್ಮ ಮನೆ ಸೇರಲಿದೆ.

ಸ್ಮಾರ್ಟ್ ಮನೆಗಾಗಿ ಸ್ಮಾರ್ಟ್ ಆಪ್:
ಸ್ಮಾರ್ಟ್ ಮನೆಯ ನಿರ್ವಹಣೆಗೆ ಸ್ಮಾರ್ಟ್ ಆಪ್‌ಗಳು ಇರಲಿದ್ದು, ಇವು ನಿಮ್ಮ ಮನೆ ಪ್ರತಿ ವಸ್ತುಗಳನ್ನು ಆನ್‌ಲೈನಿನಲ್ಲಿ ನಿಯಂತ್ರಿಸುತ್ತದೆ. ಸ್ಮಾರ್ಟ್ ಲೈಟ್, ಸ್ಮಾರ್ಟ್ ಫ್ಯಾನ್, ಸ್ಮಾರ್ಟ್ ಎಸಿ ಹಾಗೇ ಮನೆಯಲ್ಲಿ ಎಲ್ಲಾ ವಸ್ತುಗಳು ಸ್ಮಾರ್ಟ್ ಉಪಕರಣಗಳೊಂದಿಗೆ ಸೇರಿ ಸ್ಮಾರ್ಟ್ ಆಗಲಿದೆ.

ಸ್ಮಾರ್ಟ್ ರೋಡ್‌ಗಳು:
ರೋಡ್‌ಗಳು ಸ್ಮಾರ್ಟ್ ಆಗಲಿದ್ದು, ನೀವು ಮನೆಯಿಂದ ಕಚೇರಿಗೆ ಹೋಗುವ ಸಂದರ್ಭದಲ್ಲಿ ನೀವು ಸಾಗುವ ದಾರಿಯ ಟ್ರಾಫಿಕ್ ಕುರಿತ ಮಾಹಿತಿಯೂ ನಿಮಗೆ ಮೊದಲು ದೊರೆಯಲಿದೆ. ಅಲ್ಲದೇ ಸಿಗ್ನಲ್‌ಗಳು ಸ್ಮಾರ್ಟ್ ಆಗಲಿದ್ದು, ಪಾದಚಾರಿಗಳಿಗೆ ರಸ್ತೆ ದಾಟವುದಕ್ಕೂ ಸ್ಮಾರ್ಟ್ ಆಪ್‌ಗಳು ಸಹಾಯ ಮಾಡಲಿದೆ.

ನೀವು ಸ್ಮಾರ್ಟ್:
ನೀವು ಸ್ಮಾರ್ಟ್ ಆಗುವಿರಿ ಎನ್ನಲಾಗಿದೆ. ನಿಮಗೆ ಯಾವಾಗ ಬಿಸಿ ನೀರು ಬೇಕು, ನೀವು ಯಾವಾಗ ಕಾಫಿ ಕುಡಿಯಬೇಕು, ನೀವು ಎಷ್ಟು ಹೊತ್ತಿಗೆ ಕಚೇರಿಗೆ ಹೊರಡಬೇಕು ಎಂಬುದರಿಂದ ಹಿಡಿದು ಎಲ್ಲಾವನ್ನು ಸ್ಮಾರ್ಟ್ ಆಪ್ ನಿಯಂತ್ರಿಸಿ ನಿಮ್ಮನ್ನು ಸ್ಮಾರ್ಟ್ ಮಾಡಲಿವೆ. ಇದಕ್ಕಾಗಿ ಅಮೆಜಾನ್ ಅಲೆಕ್ಸಾ, ಗೂಗಲ್ ‘ಅಸಿಸ್ಟಂಟ್' ಹಾಗೂ ಆಪಲ್ ‘ಸಿರಿ' ಇನ್ನು ಹೆಚ್ಚು ಅಭಿವೃದ್ಧಿ ಹೊಂದುತ್ತಿವೆ.


Click it and Unblock the Notifications








