Subscribe to Gizbot

ಹೊಸ ವರ್ಷಕ್ಕಾಗಿ ಟಾಪ್ 10 ಟೆಕ್ ಉದ್ಯೋಗಳು

Written By:

ಹೊಸ ಹೊಸ ಉದ್ಯೋಗಗಳನ್ನು ಹುಡುಕುವುದು ಮತ್ತು ಹೊಸ ಕಚೇರಿಯ ವಾತಾವರಣದಲ್ಲಿ ನವವಿಧದಲ್ಲಿ ಕೆಲಸ ಮಾಡುವುದು 2016 ರನ್ನು ಜನಸಾಮಾನ್ಯರು ಸ್ವಾಗತಿಸುವ ಪರಿಯಾಗಿದೆ. ಹಳೆಯ ವರ್ಷದ ಎಲ್ಲಾ ದುಃಖವನ್ನು ಮರೆತು ಹೊಸ ವರ್ಷದ ಸಂಭ್ರಮವನ್ನು ತುಂಬಿಕೊಳ್ಳುವ ಕೆಲಸವನ್ನು ನಾವು ಮಾಡುವುದು ಸಾಮಾನ್ಯ. ಇನ್ನು ಟೆಕ್ ಜನರು ಇನ್ನಷ್ಟು ಉತ್ತಮ ಸಂಬಳ ಮತ್ತು ಸೌಲಭ್ಯಗಳುಳ್ಳ ಉದ್ಯೋಗಗಳನ್ನು ಹುಡುಕುತ್ತಾ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ತಯಾರಿಯನ್ನು ಮಾಡುತ್ತಾರೆ.

ಓದಿರಿ: ಟ್ವಿಟರ್‌ನ ಹೊಸ ಫೋಟೋ ಫೀಚರ್‌ನಿಂದ ಬಳಕೆದಾರನಿಗೆ ರೋಮಾಂಚನ

ಹಾಗಿದ್ದರೆ ಇಂದಿನ ನಮ್ಮ ಲೇಖನ ನಿಮ್ಮ 2016 ರ ಉತ್ತಮ ವೃತ್ತಿ ಜೀವನವನ್ನು ಆರಂಭಿಸುವುದಕ್ಕೆ ಹೊಸ ಮಾರ್ಗವನ್ನು ಕಲ್ಪಿಸಲಿದೆ ಬನ್ನಿ ಹಾಗಿದ್ದರೆ ಆ ಕಂಪೆನಿಗಳು ಯಾವುವು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೇಟಿಂಗ್ 5 ರಲ್ಲಿ 4.3

ಜಿಲ್ಲೊ

ಜಿಲ್ಲೊ ಕಂಪೆನಿ ಉದ್ಯೋಗಿಗಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಾಗಿಸಿ ಅವರ ಅಭಿವೃದ್ಧಿಗೆ ಕಾರಣವಾಗಿದೆ. ಉಚಿತ ಆಹಾರಗಳನ್ನು ನೀಡುವುದು ಒತ್ತಡವಿಲ್ಲದ ಉದ್ಯೋಗವನ್ನು ಈ ಕಂಪೆನಿ ಸೃಷ್ಟಿಸುತ್ತಿದೆ.

ರೇಟಿಂಗ್ 5 ರಲ್ಲಿ 4.3

ನೆಸ್ಲೆ ಪ್ಯುರೀನಾ ಪೆಟ್ ಕೇರ್

ಸೇಂಟ್ ಲೂಯೀಸ್ ಮೂಲದ ಪೆಟ್ ಫುಟ್ ಮೇಕರ್ ನೆಸ್ಲೆ ಉದ್ಯೋಗಿಗಳ ಪ್ರಕಾರ ಅದ್ಭುತ ಕಂಪೆನಿಯಾಗಿದೆ. ಸಾಕು ಪ್ರಾಣಿಗಳಿಗೆ ಆಹಾರ ತಯಾರಿಸುವ ಕಂಪೆನಿಯಾಗಿದೆ.

ರೇಟಿಂಗ್ 5 ರಲ್ಲಿ 4.3

ಗೂಗಲ್

ಗೂಗಲ್ ಅಂತೂ ಟೆಕ್ ಕ್ಷೇತ್ರದಲ್ಲಿ ಹೊಸ ಹವಾವನ್ನು ಸೃಷ್ಟಿಸಿದೆ. ಉದ್ಯೋಗಿಗಳು ಹೇಳುವಂತೆ ಗೂಗಲ್‌ನಲ್ಲಿ ಕೆಲಸ ಮಾಡುವುದು ಎಂದರೆ ಅದೊಂದು ಅದ್ಭುತ ಅನುಭವವಾಗಿದೆ.

ರೇಟಿಂಗ್ 5 ರಲ್ಲಿ 4.3

ಬೋಸ್ಟನ್ ಕನ್‌ಸಲ್ಟಿಂಗ್ ಕಂಪೆನಿ

ಈ ಕಂಪೆನಿಯ ವಾತಾವರಣ ಕೆಲಸ ಮಾಡಲು ಪೂರಕವಾಗಿದ್ದು ಸಹೋದ್ಯೋಗಿಗಳಲ್ಲಿ ಉತ್ತಮ ಬಾಂಧವ್ಯವನ್ನು ಸೃಷ್ಟಿಸುತ್ತದೆ.

ರೇಟಿಂಗ್ 5 ರಲ್ಲಿ 4.4

ಲಿಂಕ್‌ಡ್‌ಇನ್

ಮೌಂಟನ್ ವ್ಯೂ ಕ್ಯಾಲಿಫೋರ್ನಿಯಾ ಮೂಲದ ನೆಟ್‌ವರ್ಕಿಂಗ್ ಕಂಪೆನಿಯಾಗಿರುವ ಲಿಂಕ್‌ಡ್‌ಇನ್ ಉತ್ತಮ ನಾಯಕತ್ವ ಗುಣ ಮತ್ತು ಅತ್ಯುತ್ತಮ ಉದ್ಯೋಗ ಪರಿಸರವನ್ನು ಹೊಂದಿದೆ.

ರೇಟಿಂಗ್ 5 ರಲ್ಲಿ 4.4

ಫೇಸ್‌ಬುಕ್

ಕೈತುಂಬಾ ಸಂಬಳ ಮತ್ತು ಒತ್ತಡರಹಿತವಾಗಿ ಕೆಲಸ ಮಾಡುವ ಅವಕಾಶವನ್ನು ಫೇಸ್‌ಬುಕ್ ಉದ್ಯೋಗಿಗಳಿಗೆ ನೀಡುತ್ತಿದೆ. ಸ್ನೇಹಿ ಕಂಪೆನಿ ಎಂಬ ಖ್ಯಾತಿಗೆ ಫೇಸ್‌ಬುಕ್ ಪಾತ್ರವಾಗಿದೆ.

ರೇಟಿಂಗ್ 5 ರಲ್ಲಿ 4.4

ಹಬ್ ಸ್ಪಾಟ್

ಹಬ್ ಸ್ಪಾಟ್‌ನಲ್ಲಿರುವ ನಾಯಕತ್ವ ಗುಣ ಉದ್ಯೋಗಿಗಳಿಗೆ ಕೆಲಸ ಮಾಡಲು ಸ್ಫೂರ್ತಿಯನ್ನು ಒದಗಿಸುವಂತಿದ್ದು ಉದ್ಯೋಗಿಗಳ ಕಾಳಜಿಯನ್ನು ಚೆನ್ನಾಗಿ ನಿರ್ವಹಿಸುತ್ತದೆ ಎಂಬುದು ವಿಮರ್ಶಕರೊಬ್ಬರ ಮಾತಾಗಿದೆ.

ರೇಟಿಂಗ್ 5 ರಲ್ಲಿ 4.5

ಗೈಡ್ ವಯರ್

ಸಾಫ್ಟ್‌ವೇರ್ ಪಬ್ಲಿಶರ್ ಗೈಡ್ ವಯರ್ ಉದ್ಯೋಗಿಗಳಿಗೆ ಬೆಳವಣಿಗೆಯನ್ನು ಹೊಂದಲು ಅದ್ಭುತ ಅವಕಾಶವನ್ನು ಒದಗಿಸುತ್ತದೆ. ಉತ್ತಮ ಸಂಬಳ ಮತ್ತು ಉದ್ಯೋಗಿಗಳಿಗೆ ಕ್ರಿಯಾತ್ಮಕ ವಿಚಾರಗಳನ್ನು ನೀಡುತ್ತದೆ.

ರೇಟಿಂಗ್ 5 ರಲ್ಲಿ 4.6

ಬೇನ್ ಏಂಡ್ ಕಂಪೆನಿ

ಬೇನ್ ಏಂಡ್ ಕಂಪೆನಿಯನ್ನು ಅದರ ಉದ್ಯೋಗಿಗಳು ಎಂದಿಗೂ ಹೊಗಳುತ್ತಿರುತ್ತಾರೆ. ಉತ್ತಮ ಬೆಂಬಲವನ್ನು ಒದಗಿಸುವ ಸ್ವಭಾವವನ್ನು ಈ ಕಂಪೆನಿ ಉದ್ಯೋಗಿಗಳಿಗೆ ನೀಡುತ್ತಿದೆ.

ರೇಟಿಂಗ್ 5 ರಲ್ಲಿ 4.6

ಏರ್ಬ್ ನ್ಯಾಬ್

ನ್ಯೂಬಿ ಏರ್ಬ್ ನ್ಯಾಬ್ ಉದ್ಯೋಗಿಗಳಿಗೆ ಕ್ರಿಯಾತ್ಮಕವಾಗಿ ಕೆಲಸ ಮಾಡುವ ಪರಿಸರವನ್ನು ಒದಗಿಸುವುದರ ಜೊತೆಗೆ ಅವರ ಬೆಳವಣಿಗೆಗೆ ಸ್ಪರ್ಧಾತ್ಮಕ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Top 10 Companies to Work for in 2016.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot