2016ರ ಅತ್ಯುತ್ತಮ ಭಾರತೀಯ ಸ್ಟಾರ್ಟ್ ಅಪ್ ಗಳು.

|

ಪ್ರಪಂಚದಾದ್ಯಂತ ಸ್ಟಾರ್ಟ್ ಅಪ್ ವಿಷಯದಲ್ಲಿ ಭಾರತ ಮುಂಚೂಣಿಯಲ್ಲಿದೆ. ನಾಸ್ಕಾಮ್ ವರದಿಗಳ ಪ್ರಕಾರ ಭಾರತ ಮೂರನೇ ಸ್ಥಾನದವರೆಗೆ ಏರಿದೆ ಮತ್ತು ಪ್ರಪಂಚದ ಮೊದಲ ಐದು ಬೃಹತ್ ಸ್ಟಾರ್ಟ್ ಅಪ್ ಸಮುದಾಯದಲ್ಲೊಂದಾಗಿದೆ.

2016ರ ಅತ್ಯುತ್ತಮ ಭಾರತೀಯ ಸ್ಟಾರ್ಟ್ ಅಪ್ ಗಳು.

ಓದಿರಿ: ಭಾರತದಲ್ಲಿ ಮೊಬೈಲ್ ಕೈಗಾರಿಕೆ ಸ್ಥಾಪಿಸಲು ರಿಯಾಯಿತಿ ನೀಡಿ...ಆಪಲ್ ಬೇಡಿಕೆ!!

ಯುವ ಟೆಕ್ಕಿಗಳು ತಮ್ಮ ಸ್ಥಿರ ಕೆಲಸಗಳನ್ನು ಬಿಟ್ಟು ಹೊಸ ಹೊಸ ಕ್ರಿಯಾತ್ಮಕ ಯೋಜನೆಗಳತ್ತ ವಾಲುತ್ತಿದ್ದಾರೆ, ಇವರಿಗೆ ಕೇಂದ್ರ ಸರಕಾರದ 'ಸ್ಟಾರ್ಟ್ ಅಪ್' ಯೋಜನೆಯೂ ಪೂರಕವಾಗಿದೆ.

ಬೋಲ್ಟ್.

ಬೋಲ್ಟ್.

ಹೈದರಾಬಾದಿನ ಬೋಲ್ಟ್ ಆಟೋ ತಂತ್ರಜ್ಞಾನ ಕಂಪನಿಯು ಸ್ಕೂಟರುಗಳಲ್ಲಿ ಪಯಣಿಸುವವರಿಗಾಗಿ 2ಎ ಮೊಬೈಲ್ ಚಾರ್ಜರ್ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಬೈಕಿನ ಹ್ಯಾಂಡಲ್ ಬಾರಿಗೆ ಕೂರಿಸಬಹುದು, ವಿಶೇಷ ಆ್ಯಪ್ ಮೂಲಕ ನಿಮ್ಮ ಚಲನವಲನದ ಕಡೆಗೂ ಗಮನವಿಡಬಹುದು. ರೆಡ್ ಸ್ಟ್ರೀಕ್ ಎಂದು ಕರೆಯಲಾಗುವ ಈ ಸಾಧನವು ಪ್ರಪಂಚದ ಮೊದಲ ಸ್ಮಾರ್ಟ್ ಮೊಬೈಲ್ ಬೈಕ್ ಚಾರ್ಜರ್. ಉಪಯೋಗಿಸದೇ ಇದ್ದಾಗ ತೆಗೆದಿಡಲೂಬಹುದು. ನೀವು ಪಯಣಿಸಿದ ಹಾದಿ, ಕ್ರಮಿಸಿದ ದೂರ, ವೇಗವನ್ನೆಲ್ಲ ಬೋಲ್ಟ್ ರೈಡರ್ಸ್ ಆ್ಯಪ್ ಸಂಗ್ರಹಿಸಿಟ್ಟುಕೊಳ್ಳಬಲ್ಲದು.

ಟ್ರ್ಯಾಕ್ ಅಂಡ್ ಟೆಲ್.

ಟ್ರ್ಯಾಕ್ ಅಂಡ್ ಟೆಲ್.

ಗುರಗಾವಿನ ಟ್ರ್ಯಾಕ್ ಅಂಡ್ ಟೆಲ್ ಸ್ಟಾರ್ಟ್ ಅಪ್ ನಲ್ಲಿ ವಾಟ್ಸಪ್ಪಿನ ಸಹ ಸಂಸ್ಥಾಪಕ ಬ್ರಿಯಾನ್ ಆ್ಯಕ್ಷನ್ ಇತ್ತೀಚೆಗೆ ಹೂಡಿಕೆ ಮಾಡಿದ್ದಾರೆ. ಇದು ನಿಮ್ಮ ವಾಹನಕ್ಕೊಂದು ಬುದ್ಧಿವಂತ ಸಾಧನವನ್ನು ನಿರ್ಮಿಸುತ್ತದೆ. ಇಂಟೆಲಿ7 ಹೆಸರಿನ ಜಿಪಿಎಸ್ ಸಾಧನವನ್ನು ಕಾರಿನಲ್ಲಿ ಕೂರಿಸಿದರೆ ಕಾರಿನ ಮಾಲೀಕರಿಗೆ ವಾಹನ ಯಾವ ಪ್ರದೇಶದಲ್ಲಿದೆ ಎನ್ನುವುದರ ಕುರಿತು ಮಾಹಿತಿ ನೀಡುತ್ತದೆ. ವಾಹನ ಕಳುವಾದ ಸಂದರ್ಭದಲ್ಲಿ, ಮಾಲೀಕರು ಸ್ಮಾರ್ಟ್ ಫೋನ್ ಆ್ಯಪ್ ಮೂಲಕ ವಾಹನ ಚಲಿಸದಂತೆ ನಿರ್ದೇಶನ ಕಳಿಸಬಹುದು.

ಇದರ ಬೆಲೆ 5,999 ರುಪಾಯಿ. ಈ ಬೆಲೆಗೆ ಹಾರ್ಡ್ ವೇರ್, ಸಿಮ್ ಮತ್ತು ಮೂರು ವರುಷಗಳ ಕಾಲ ಕ್ಲೌಡ್ ಆಧಾರಿತ ಸೇವೆಗಳು ಲಭಿಸುತ್ತದೆ.

ಇನ್ಸ್ಪಿರಾಕ್.

ಇನ್ಸ್ಪಿರಾಕ್.

ಪ್ರತಿಯೊಬ್ಬರಿಗೂ ಪ್ರವಾಸ ಹೋಗಲು ಇಷ್ಟ, ಆದರೆ ಪ್ರವಾಸದ ಸಮಯಕ್ಕೆ ಬೇಕಾದ ಮಾರ್ಗದರ್ಶನವನ್ನು ಹುಡುಕಲು ಬೇಸರ. ಇನ್ಸ್ಪಿರಾಕ್ ನಿಮಗಾಗಿ ಇದನ್ನು ಸ್ವಯಂಚಾಲಿತವಾಗಿ ಮಾಡಿಕೊಡುತ್ತದೆ. ಒಂದೇ ಸ್ಥಳಕ್ಕೆ ಅಥವಾ ವಿವಿಧ ದೇಶಗಳ ಪ್ರವಾಸಕ್ಕೆ ಬೇಕಾದ ಮಾರ್ಗದರ್ಶನವನ್ನು ಇನ್ಸ್ಪಿರಾಕ್ ಮಾಡಿಕೊಡುತ್ತದೆ, ನೀವು ಅಂತರ್ಜಾಲದಲ್ಲಿ ಹಲವು ಘಂಟೆಗಳನ್ನು ಕಳೆಯುವುದು ಇದರಿಂದಾಗಿ ತಪ್ಪುತ್ತದೆ.

ಮೇಕ್ ಮೈ ಟ್ರಿಪ್ ಈ ಹೊಸ ಯೋಜನೆಗೆ 3 ಮಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಿದೆ.

ಕಾರ್ಡಿಯಾಕ್ ಡಿಸೈನ್ ಲ್ಯಾಬ್ಸ್.

ಕಾರ್ಡಿಯಾಕ್ ಡಿಸೈನ್ ಲ್ಯಾಬ್ಸ್.

ಬೆಂಗಳೂರಿನ ಈ ಸ್ಟಾರ್ಟ್ ಅಪ್, ಸ್ಟಾರ್ಟ್ ಅಪ್ ಇಂಡಿಯಾ ಲಾಂಚ್ ಪ್ಯಾಡಿನಲ್ಲಿ ಗೂಗಲ್ಲಿನ ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿಯನ್ನು ಪಡೆದಿದೆ, ಕಾರಣ ಇದು ಜೀವ ಉಳಿಸುವ ಉತ್ಪನ್ನ, ತೀವ್ರ ತರದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಮೊಬೈಲ್ ಇಂಟಲಿಜೆಂಟ್ ರಿಮೋಟ್ ಕಾರ್ಡಿಯಾಕ್ ಮಾನಿಟರ್ ಅನ್ನು ಈ ಸ್ಟಾರ್ಟ್ ಅಪ್ ಸಂಸ್ಥೆ ತಯಾರಿಸಿದೆ, ಇದರಲ್ಲಿ ಬಾಡಿ ಯೂನಿಟ್, ರೋಗಿಯ ಹಾಸಿಗೆಯ ಪಕ್ಕ ಇಡುವ ಯೂನಿಟ್, ವೈದ್ಯರ ಟರ್ಮಿನಲ್ ಮತ್ತು ವೈದ್ಯರಿಗೊಂದು ಮೊಬೈಲ್ ಆ್ಯಪ್ ಇದರಲ್ಲಿದೆ. ಈ ಸಾಧನದ ಮೂಲಕ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ತಮ್ಮ ಮೊಬೈಲಿನಲ್ಲೇ ರೋಗಿಯ ದೇಹಸ್ಥಿತಿಯನ್ನು ನಿರಂತರವಾಗಿ ಗಮನಿಸಬಹುದು.

ಆಪರೇಷನ್ ಆದ ನಂತರ ಮನೆಯಲ್ಲಿದ್ದಾಗ ರೋಗಿಯ ಸ್ಥಿತಿ ಗತಿ ತಿಳಿಯಲೂ ಇದು ಸಹಾಯಕ.

ನೆಸ್ಟ್ ಅವೇ.

ನೆಸ್ಟ್ ಅವೇ.

2015ರಲ್ಲಿ ಪ್ರಾರಂಭವಾದ ನೆಸ್ಟ್ ಅವೇ 2016ರಲ್ಲಿ ಜನಪ್ರಿಯವಾಗಿದೆ, ಅದರಲ್ಲೂ ಯುವಕರಲ್ಲಿ. ರತನ್ ಟಾಟಾರವರ ಬೆಂಬಲವಿರುವ ಈ ಸ್ಟಾರ್ಟ್ ಅಪ್ ಬಾಡಿಗೆಗಿರುವ ಮನೆಗಳ ಪಟ್ಟಿಯನ್ನು ನೀಡುತ್ತದೆ - ಕುಟುಂಬಸ್ಥರಿಗೆ, ಅವಿವಾಹಿತರಿಗೆ. ನೆಸ್ಟ್ ಅವೇಯ ಅಂತರ್ಜಾಲ ಪುಟದಲ್ಲಿ ಮನೆಯ ಫೋಟೋಗಳು, ಬಾಡಿಗೆ ಮತ್ತು ಇತರೆ ಸೌಕರ್ಯಗಳ ವಿವರಗಳು ಲಭ್ಯವಿದೆ. ಸದ್ಯಕ್ಕೆ ನೆಸ್ಟ್ ಅವೇ ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
You can plan your vacation, charge a phone while commuting on a two-wheeler or easily rent a villa across the country with these startups. Here"s a list of top startups in the year 2016

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X