3 ದಶಕಗಳ ಹಿಂದೆ ಫೋಟೊಗ್ರಫಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಕ್ಯಾಮೆರಾ ಮತ್ತೆ ಮಾರುಕಟ್ಟೆಗೆ!!
ಯಶಿಕಾ ಕಂಪನಿ ಇಲೆಕ್ಟ್ರಾ 35 ಕ್ಯಾಮೆರಾದಲ್ಲಿ ಫೋಟೊ ತೆಗೆದ ಭಾವನೆ ಬರುವಂತಹ ಡಿಜಿಟಲ್ ಕ್ಯಾಮೆರಾ ತಯಾರಿಸಿದೆ.!!
ಮೊಬೈಲ್ ಲೋಕದಲ್ಲಿ ಒಂದೊಮ್ಮೆ ಕ್ರಾಂತಿ ಮಾಡಿದ ನೋಕಿಯಾ 1100 ಫೋನ್ ಮತ್ತೆ ರೂಪುಗೊಂಡು ಜನರ ಹತ್ತಿರ ಬಂದಂತೆ, ಸುಮಾರು ಮೂರು ದಶಕಗಳ ಹಿಂದೆ ಫೋಟೊಗ್ರಫಿ ಕ್ಷೇತ್ರದಲ್ಲಿಯೇ ಒಂದು ಕ್ರಾಂತಿ ಮಾಡಿದ ಕ್ಯಾಮೆರಾವೊಂದು ಇದೀಗ ಅದೇ ರೂಪದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಹೊತ್ತು ಬಂದಿದೆ.!!
ಹೌದು, ಮೂರು ದಶಕಗಳ ಹಿಂದೆ ಫಿಲ್ಮ್ ಕ್ಯಾಮೆರಾ ಬಳಸಿ ಛಾಯಾಗ್ರಹಣ ಮಾಡುತ್ತಿದ್ದವರ ಫೇವರೇಟ್ 'ಯಶಿಕಾ ಇಲೆಕ್ಟ್ರಾ 35' ಕ್ಯಾಮೆರಾದ ತದ್ರೂಪಿ 'ಯಶಿಕಾ ವೈ 35' ಎಂಬ ಕ್ಯಾಮೆರಾಇದೀಗ ಮತ್ತೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ.! ಯಶಿಕಾ ಕಂಪನಿ ಇಲೆಕ್ಟ್ರಾ 35 ಕ್ಯಾಮೆರಾದಲ್ಲಿ ಫೋಟೊ ತೆಗೆದ ಭಾವನೆ ಬರುವಂತಹ ಡಿಜಿಟಲ್ ಕ್ಯಾಮೆರಾ ತಯಾರಿಸಿದೆ.!!

ಯಶಿಕಾ ವೈ 35 ಕ್ಯಾಮೆರಾ ನೋಡಲು ಹಳೆಯ ಯಶಿಕಾ ಇಲೆಕ್ಟ್ರಾ 35 ಕ್ಯಾಮೆರಾದಂತೆಯೇ ಕಾಣಿಸುತ್ತಿದ್ದು, ಫೋಟೊ ತೆಗೆಯುವ ವಿಧಾನ ಕೂಡ ಅದೇ ರೀತಿಯಲ್ಲಿದೆ ಎಂದು ಯಶಿಕಾ ಕಂಪನಿ ಹೇಳಿದ್ದು, ಒಂದು ಫೋಟೊ ತೆಗೆದ ನಂತರ ಲಿವರ್ ತಿರುಗಿಸಿದ ನಂತರವೇ ಇನ್ನೊಂದು ಫೋಟೊ ತೆಗೆಯಬಹುದು ಎಂದು ತಿಳಿಸಿದೆ.!!

ಅಂದರೆ 'ಯಶಿಕಾ ವೈ 35' ಕ್ಯಾಮೆರಾ ಡಿಜಿಟಲ್ ಕ್ಯಾಮೆರಾ ಆಗಿದ್ದರೂ ಸಹ ಹಳೆಯ ಕ್ಯಾಮೆರಾದಂತೆ ಇದರಲ್ಲೂ ಕ್ಯಾಸೆಟ್ ಹಾಕಿಯೇ ಫೋಟೊ ತೆಗೆಯಬೇಕು! ಇನ್ನು ಫೋಟೊ ತೆಗೆದ ಕೂಡಲೇ ಅದನ್ನು ನೋಡಲು ಸಹ ಆಗುವುದಿಲ್ಲ.ಎಸ್‌ಡಿ ಕಾರ್ಡಿನಲ್ಲಿ ಸಂಗ್ರಹವಾಗುವ ಫೋಟೊಗಳನ್ನು ಲ್ಯಾಪ್‌ಟಾಪ್ ಮುಖಾಂತರ ನೋಡಬೇಕು.!!
ಓದಿರಿ: 6,499 ರೂ.ಗೆ ಲಾಂಚ್ ಆದ 'ಎಲುಗಾ ಐ5'!..ರೆಡ್ಮಿ 4, ಮೊಟೊ ಸಿ ಪ್ಲಸ್ ಫೋನ್‌ಗಳಿಗೆ ಸ್ಪರ್ಧಿ!!


Click it and Unblock the Notifications








