6,499 ರೂ.ಗೆ ಲಾಂಚ್ ಆದ 'ಎಲುಗಾ ಐ5'!..ರೆಡ್ಮಿ 4, ಮೊಟೊ ಸಿ ಪ್ಲಸ್‌ ಫೋನ್‌ಗಳಿಗೆ ಸ್ಪರ್ಧಿ!!

ಕೇವಲ 6,499 ರೂಪಾಯಿಗಳಿಗೆ ಪ್ಯಾನಸೋನಿಕ್ ಎಲುಗಾ ಐ5 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಬಜೆಟ್‌ ಬೆಲೆಯ ಪೋನ್‌ಗಳಿಗೆ ಸೆಡ್ಡು ಹೊಡೆಯುವ ಎಲ್ಲಾ ಫೀಚರ್ಸ್‌ಗಳು ಈ ಫೋನ್‌ನಲ್ಲಿವೆ.!

|

ಒಂದು ವರ್ಷದೊಳಗಾಗಿ ಭಾರತದ ಮೊಬೈಲ್ ಮಾರುಕಟ್ಟೆಯ ಶೇ.5 ರಷ್ಟು ಪಾಲನ್ನು ತನ್ನ ಬುಟ್ಟಿಗೆಹಾಕಿಕೊಳ್ಳಬೇಕು ಎನ್ನುವ ಗುರಿ ಹೊಂದಿರುವ ಜಪಾನ್ ಮೂಲದ ಎಲೆಕ್ಟ್ರಾನಿಕ್ ದೈತ್ಯ ಸಂಸ್ಥೆ ಪ್ಯಾನಸೋನಿಕ್ ಕಡಿಮೆ ಬಜೆಟ್ ಬೆಲೆಯ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಮೊಬೈಲ್ ಮಾರುಕಟ್ಟೆಯ ಗಮನ ಸೆಳೆದಿದೆ.!!

ಹೌದು, ಕೇವಲ 6,499 ರೂಪಾಯಿಗಳಿಗೆ ಪ್ಯಾನಸೋನಿಕ್ ಎಲುಗಾ ಐ5 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಬಜೆಟ್‌ ಬೆಲೆಯ ಪೋನ್‌ಗಳಿಗೆ ಸೆಡ್ಡು ಹೊಡೆಯುವ ಎಲ್ಲಾ ಫೀಚರ್ಸ್‌ಗಳು ಈ ಫೋನ್‌ನಲ್ಲಿವೆ.! ಹಾಗಾದರೆ, ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣಗಳಲ್ಲಿ ಮಾರುಕಟ್ಟೆಗೆ ಕಾಲಿಟಿರುವ ಎಲುಗಾ ಐ5 ಫೋನ್ ಬೇರೆ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!!

ಪ್ಯಾನಸೋನಿಕ್ ಎಲುಗಾ ಐ5 ಸ್ಮಾರ್ಟ್‌ಫೋನ್ 5 ಇಂಚುಗಳ 720x1280 ಪಿಕ್ಸೆಲ್ ರೆಸೊಲ್ಯೂಷನ್ HD ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ ಅಸಾಹಿ ಡ್ರಾಗನ್ ಟ್ರೈಲ್ ಗ್ಲಾಸ್ ರಕ್ಷಣೆ ಹೊಂದಿದ್ದು, ಫೋನ್ ಸ್ಕ್ರೀನ್ ಗುಣಮಟ್ಟ ಅತ್ಯುತ್ತಮ ಎಂದು ಪ್ಯಾನಸೋನಿಕ್ ಕಂಪೆನಿ ಹೇಳಿದೆ.!!

ಪ್ರೊಸೆಸರ್ ಮತ್ತು ಒಎಸ್?

ಪ್ರೊಸೆಸರ್ ಮತ್ತು ಒಎಸ್?

1.25 GHz ಕ್ವಾಡ್ ಕೋರ್ ಮೀಡಿಯಾಟೆಕ್ MT6737 ಪ್ರೊಸೆಸರ್ ಅನ್ನು ಪ್ಯಾನಸೋನಿಕ್ ಎಲುಗಾ ಐ5 ಫೋನ್‌ನಲ್ಲಿ ಅಳವಡಿಸಲಾಗಿದೆ. ಇನ್ನು ಹೈಬ್ರಿಡ್ ಡ್ಯುಯಲ್ ಸಿಮ್ ಹೊಂದಿರುವ ಈ ಫೋನ್ ಆಂಡ್ರಾಯ್ಡ್ 7.0 ನೌಗಾಟ್ ಮೂಲಕ ಕಾರ್ಯನಿರ್ವಹಿಸಲಿದೆ.!!

RAM ಮತ್ತು ಸ್ಟೋರೆಜ್!!

RAM ಮತ್ತು ಸ್ಟೋರೆಜ್!!

ಇದೀಗಷ್ಟೆ ಬಿಡುಗಡೆಯಾಗಿರುವ ಪ್ಯಾನಸೋನಿಕ್ ಎಲುಗಾ ಐ5 ಒಂದೇ ಒಂದು ಕಡಿಮೆ ಫೀಚರ್ ಹೊಂದಿದೆ ಎಂದರೆ ಅದು RAM.!! ಎಲುಗಾ ಐ5 ಫೋನ್ 2GB RAM ಹೊಂದಿದ್ದು, 16GB ಆಂತರಿಕ ಮೆಮೊರಿ ಒಳಗೊಂಡಿದೆ.!! ಎಸ್‌ಡಿ ಕಾರ್ಡ್ ಮೆಮೊರಿಯನ್ನು 128GB ವರೆಗೂ ವಿಸ್ತರಿಸಬಹುದಾಗಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಪ್ಯಾನಸೋನಿಕ್ ಎಲುಗಾ ಐ5 ಪೋನ್ 13MP ರಿಯರ್ ಕ್ಯಾಮೆರಾ ಜತೆ LED ಫ್ಲ್ಯಾಶ್ ಮತ್ತು ಸೆಲ್ಫಿಗಾಗಿ 5MP ಫ್ರಂಟ್ ಕ್ಯಾಮೆರಾ ಹೊಂದಿದೆ. ಹಾಗಾಗಿ, ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಮಾದರಿಯಲ್ಲಿ ಕ್ಯಾಮೆರಾ ಫೀಚರ್ ಬಂದಿದೆ ಎನ್ನಬಹುದು.!!

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ಎಲುಗಾ ಐ5 2500mAh ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಫಿಂಗರ್ ಪ್ರಿಂಟ್ ಸೆನ್ಸಾರ್ 4G, VoLTE,, Wi-Fi, Bluetooth ಮತ್ತು GPS ನಂತಹ ಎಲ್ಲಾ ಫೀಚರ್ಸ್ ಹೊಂದಿದೆ. ಹಾಗಾಗಿ, ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂದಿರುವ ಈ ಪೋನ್ ಶಿಯೋಮಿ ರೆಡ್ಮಿ 4, ಮೊಟೊ ಸಿ ಪ್ಲಸ್‌ಗೆ ಸ್ಪರ್ಧಿ ಎನ್ನಬಹುದು.!!

ಜಿಯೋವಿನ 2599 ರೂ. ಕ್ಯಾಶ್‌ಬ್ಯಾಕ್ ಆಫರ್ ಹಿಂದಿದೆ ಕರಾಳ ಸತ್ಯ!!..ಈ ಆಫರ್ ಬೇಕಾ ನಿಮಗೆ?ಜಿಯೋವಿನ 2599 ರೂ. ಕ್ಯಾಶ್‌ಬ್ಯಾಕ್ ಆಫರ್ ಹಿಂದಿದೆ ಕರಾಳ ಸತ್ಯ!!..ಈ ಆಫರ್ ಬೇಕಾ ನಿಮಗೆ?

Best Mobiles in India

English summary
Panasonic has expanded its smartphone portfolio with the launch of Eluga I5.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X