ತಂತ್ರಜ್ಞಾನ ಕ್ಷೇತ್ರಕ್ಕೆ ಸೋಲಿನ ಕಹಿ ಉಣ್ಣಿಸಿದ 2015

By Shwetha
|

ಗೆಲುವು ಸೋಲು ಎಲ್ಲಾ ಕ್ಷೇತ್ರದಲ್ಲೂ ಸಮಾನವಾಗಿದ್ದು ಹೊಸ ಹೊಸ ಅನ್ವೇಷಣೆಗಳನ್ನು ನಡೆಸುವಾಗ ಸದಾ ಕಾಲ ಗೆಲುವು ದೊರಕಲೇಬೇಕೆಂಬುದೇನಿಲ್ಲ. ಈ ಗೆಲುವು ಸೋಲಿನ ಆಟವು ತಂತ್ರಜ್ಞಾನ ರಂಗದಲ್ಲೂ ಸಮಾನವಾಗಿದ್ದು ಅನ್ವೇಷಣೆಗಳ ಹೊಸ ಆವಿಷ್ಕಾರವೇ 2015 ರಲ್ಲಿ ಕಂಡುಬಂದಿದೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ಓದಿರಿ: ಸ್ಮಾರ್ಟ್‌ಫೋನ್‌ ದ್ವೇಷಿಸಲು ಕಾರಣವಾಗುವ ಕಿರಿಕಿರಿಗಳು

ಸೋಲು ಗೆಲುವಿನ ಹಾದಿಯನ್ನು ಕ್ರಮಿಸಿರುವ ಹೆಚ್ಚಿನ ಟಾಪ್ ಅನ್ವೇಷಣೆಗಳು ಮಾಹಿತಿ ನಿಜಕ್ಕೂ ನಿಮ್ಮಲ್ಲಿರುವ ಆಸಕ್ತಿಯನ್ನು ಇಮ್ಮಡಿಸಲಿದ್ದು ಸ್ಫೂರ್ತಿಯ ಹಾದಿ ಇದುವೇ ಎಂಬುದನ್ನು ನಿಮಗೆ ತೋರಿಸಿಕೊಡಲಿದೆ.

ಟಿಡಲ್

ಟಿಡಲ್

ಮಾರ್ಚ್‌ನಲ್ಲಿ ಟಿಡಲ್ ಮ್ಯೂಸಿಕ್ ಸೇವೆಯನ್ನು ಆರಂಭಿಸಲಾಗಿದ್ದು ಸಂಗೀತ ಕಲಾವಿದರಿಗೆ ಇದು ವರವಾಗಿ ಪರಿಣಮಿಸಿದೆ. ಈ ಸೇವೆ ಅಷ್ಟೊಂದು ಖ್ಯಾತಿಯನ್ನು ಪಡೆದುಕೊಂಡಿಲ್ಲ. ಇದು ಹೆಚ್ಚು ಗುಣಮಟ್ಟದ ಮ್ಯೂಸಿಕ್ ಫೈಲ್‌ಗಳನ್ನು ಒಳಗೊಂಡಿತ್ತು.

ಸ್ಲಿಂಗ್ ಟಿವಿ

ಸ್ಲಿಂಗ್ ಟಿವಿ

2015 ರ ಆರಂಭದಲ್ಲೇ ಸ್ಲಿಂಗ್ ಟಿವಿ ತನ್ನ ಆವಿಷ್ಕಾರವನ್ನು ಕಂಡುಕೊಂಡಿದ್ದು, ಸ್ಟ್ರೀಮಿಂಗ್ ಯುಗಕ್ಕೆ ವರವಾಗಿ ಪರಿಣಮಿಸಿದೆ. ಆಗಸ್ಟ್‌ನಲ್ಲಿ ಇದು ಸೋಲಿನ ಹಾದಿಯನ್ನು ಕಂಡುಕೊಂಡಿದೆ.

ಸ್ಟೀವ್ ಜಾಬ್ ಕಹಾನಿ

ಸ್ಟೀವ್ ಜಾಬ್ ಕಹಾನಿ

ಐಫೋನ್ ಮತ್ತು ಐಪ್ಯಾಡ್‌ಗಳನ್ನು ಮಿಲಿಯಗಟ್ಟಲೆ ಜನರು ಇಷ್ಟಪಡುತ್ತಾರೆ ಇನ್ನು ಇದರ ಸ್ಥಾಪಕರನ್ನು ಮಾದರಿಯನ್ನಾಗಿಸಿ ಚಿತ್ರವನ್ನು ತೆಗೆದರೆ ಯಾರು ಇಷ್ಟಪಡುವುದಿಲ್ಲ ಹೇಳಿ? ಈ ಮಾದರಿಯಲ್ಲೇ ಹುಟ್ಟಿ ಬಂದಿರುವ ಚಲನಚಿತ್ರವಾಗಿದೆ ಸ್ಟೀವ್ ಜಾಬ್. ಆದರೆ ಚಿತ್ರ ಪ್ರೇಕ್ಷಕರನ್ನು ಗೆಲ್ಲುವಲ್ಲಿ ವಿಫಲಗೊಂಡಿತು.

ಬ್ಲಾಕರ್‌ಗಳನ್ನು ನಿರ್ಬಂಧಿಸುವುದು

ಬ್ಲಾಕರ್‌ಗಳನ್ನು ನಿರ್ಬಂಧಿಸುವುದು

ಬ್ರೌಸರ್ ಆಧಾರಿತ ಬ್ಲಾಕರ್‌ಗಳ ವಿಷಯದಲ್ಲಿ ವೆಬ್ ಪ್ರಕಟಣೆಗಾರರು ಗಂಭೀರ ಸಮಸ್ಯೆಗಳನ್ನು ಹೊಂದಿದ್ದಾರೆ. ಇದಕ್ಕಾಗಿಯೇ ಜರ್ಮನ್ ಟ್ಯಾಬ್ಲಾಯ್ಡ್ ಬಿಲ್ಡ್ ಏಡ್ ಬ್ಲಾಕರ್ ಬಳಸಿಕೊಂಡು ವೆಬ್‌ಸೈಟ್ ಪ್ರವೇಶವನ್ನು ಮಾಡುವುದನ್ನು ನಿರ್ಬಂಧಿಸಲು ಪ್ರಯತ್ನಿಸಿತು. ಯಾಹೂ ಕೂಡ ಇದೇ ಮಾದರಿಯನ್ನು ಹಿಂಬಾಲಿಸಿ ವೆಬ್‌ಸೈಟ್ ಬ್ಲಾಕ್ ಮಾಡಲು ಪ್ರಯತ್ನಿಸಿತು. ಆದರೆ ಸೋಲಿನ ಕಹಿಯನ್ನು ಇಲ್ಲೂ ಉಣ್ಣಬೇಕಾಯಿತು.

ಓಯ್‌ಸ್ಟರ್

ಓಯ್‌ಸ್ಟರ್

2015 ರಲ್ಲಿ, ಮೂಲ ನೆಟ್‌ಫ್ಲಿಕ್ಸ್ ಇಬುಕ್ಸ್ ಓಯ್‌ಸ್ಟರ್ ಅನ್ನು ಘೋಷಿಸಿತು. ಆದರೆ ಓಯ್‌ಸ್ಟರ್ ಕಂಪೆನಿಯನ್ನು ಕಾರಣವನ್ನು ತಿಳಿಸದೆಯೇ ಮುಚ್ಚಲಾಯಿತು.

ವಿಂಡೋಸ್ 10 ಡಿವಿಡಿ

ವಿಂಡೋಸ್ 10 ಡಿವಿಡಿ

ವಿಂಡೋಸ್ 10 ನಲ್ಲಿ ಡಿವಿಡಿ ಪ್ಲೇ ಮಾಡುವ ಸಮಸ್ಯೆಯನ್ನು ಬಗೆಹರಿಸದೇ ತೊಳಲಾಡುತ್ತಿದೆ. ವಿಂಡೋಸ್ ಸ್ಟೋರ್‌ನಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಡಿವಿಡಿ ಪ್ಲೇಯರ್ ಅಪ್ಲಿಕೇಶನ್‌ಗಾಗಿ ಬೆಲೆ ನಿಗದಿಪಡಿದ್ದು ಇಂತಹುದೇ ಪ್ರೊಗ್ರಾಮ್ ಆಗಿರುವ ವಿಎಲ್‌ಸಿ ಉಚಿತವಾಗಿ ದೊರೆಯುತ್ತಿದ್ದು ಮೈಕ್ರೋಸಾಫ್ಟ್‌ನ ಈ ಕ್ರಮ ನಿಜಕ್ಕೂ ಖೇದಕರ.

ಏಡ್ ಒನ್ಸ್

ಏಡ್ ಒನ್ಸ್

ಪ್ರಮುಖ ವಿಶೇಷತೆಗಳಿಗಾಗಿ ತನ್ನ ಬಳಕೆದಾರರನ್ನು ಕಾಯಿಸುವ ಕೆಟ್ಟ ಪ್ರವೃತ್ತಿಯನ್ನು ಮೈಕ್ರೋಸಾಫ್ಟ್ ಹೊಂದಿದೆ. ವಿಂಡೋಸ್ 10 ಬಳಕೆದಾರರು ಪ್ರಸ್ತುತ ಎಡ್ಜ್‌ಗಾಗಿ ಕಾಯುತ್ತಿದ್ದು, ವಿಸ್ತರಣಾ ವಿಶೇಷತೆಯನ್ನು ಇದು ಒಳಗೊಂಡಿದೆ. ಇನ್ನೂ ಎಡ್ಜ್ ಎಕ್ಸ್‌ಟೆನ್ಶನ್ ಅನ್ನು ಮೈಕ್ರೋಸಾಫ್ಟ್ ಬಿಡುಗಡೆ ಮಾಡಿಲ್ಲ.

4ಜಿಬಿಯಲ್ಲಿರುವುದು ಕೇವಲ 3.5 ಜಿಬಿ

4ಜಿಬಿಯಲ್ಲಿರುವುದು ಕೇವಲ 3.5 ಜಿಬಿ

ನಿವಿಡಿಯಾ ತನ್ನ ಗೇಫೋರ್ಸ್ GTX 970 ಗ್ರಾಫಿಕ್ಸ್ ಕಾರ್ಡ್‌ಗಳಲ್ಲಿ ಬಳಕೆದಾರರ ದೋಷವನ್ನು ಎದುರಿಸಿದೆ. ಇದು 4ಜಿಬಿRAM ಹೊಂದಿದ್ದರೂ ಲಭ್ಯವಿರುವುದು 3.5 ಜಿಬಿಯಾಗಿದೆ.

ಎಮ್‌ಡಿ ಗೇಮಿಂಗ್ ಕಂಪೆನಿ ಸಂಕಷ್ಟ

ಎಮ್‌ಡಿ ಗೇಮಿಂಗ್ ಕಂಪೆನಿ ಸಂಕಷ್ಟ

ನಿವಿಡಿಯಾ ಮಾತ್ರವೇ ಸಮಸ್ಯೆಯನ್ನು ಎದುರಿಸುತ್ತಿರುವುದಲ್ಲದೆ ಎಮ್‌ಡಿ ಗೇಮಿಂಗ್ ಕಂಪೆನಿ ಕೂಡ 2015 ರಲ್ಲಿ ಸೋಲನ್ನು ಅನುಭವಿಸಿದೆ. ಕೆಲವು ಗ್ರಾಫಿಕ್ ಕಾರ್ಡ್‌ಗಳಲ್ಲಿ 20 ಶೇಕಡಾದಷ್ಟು ಫ್ಯಾನ್ ವೇಗವನ್ನು ಲಾಕ್ ಮಾಡುವ ಸಮಸ್ಯೆಯನ್ನು ಕಂಡುಕೊಂಡಿದೆ.

ಏಷ್ಲೇ ಮೆಡಿಸನ್ ರಾದ್ಧಾಂತ

ಏಷ್ಲೇ ಮೆಡಿಸನ್ ರಾದ್ಧಾಂತ

ಏಷ್ಲೇ ಮೆಡಿಸನ್ ಡೇಟಿಂಗ್ ಸೈಟ್ ತನ್ನ ಬಳಕೆದಾರರ ಮಾಹಿತಿಗಳನ್ನು ಹೊರಹಾಕಿದ್ದು ಅವರುಗಳ ಹೆಸರು, ವಿಳಾಸ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ತಿಳಿಯುವಂತೆ ಮಾಡಿದೆ.

Best Mobiles in India

English summary
The worst fails always start with good intentions. Maybe you want to improve the status of artists on streaming music services, find a DVD player solution for Windows 10 users, or create a great TV service for cord cutters.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X