ಸ್ಮಾರ್ಟ್‌ಫೋನ್‌ ದ್ವೇಷಿಸಲು ಕಾರಣವಾಗುವ ಕಿರಿಕಿರಿಗಳು

By Suneel
|

ಸ್ಮಾರ್ಟ್‌ಫೋನ್‌ಗಳು ಇಂದು ಎಷ್ಟು ಅವಶ್ಯಕತೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅವಶ್ಯಕತೆ ಅಲ್ಲದಿದ್ದರೂ ಸಹ ಅದರ ಉಪಯೋಗ ಸಂವಹನ ಕ್ಷೇತ್ರದಲ್ಲಿ ಅಪಾರ ಎಂಬುದಂತು ತಿಳಿದಿದೆ. ದಿನನಿತ್ಯ ಜೀವನದಲ್ಲಿ ನಮ್ಮ ಜೊತೆಗಿರುವ ಸ್ಮಾರ್ಟ್‌ಫೋನ್, ಅದು ಎಷ್ಟೇ ಉಪಯೋಗಕಾರಿಯಾದರೂ ಸಹ ನಾವು ಅದನ್ನು ದ್ವೇಷಿಸುವ ಹಾಗೂ ಅದರಿಂದ ಕಿರಿಕಿರಿ ಪಡೆಯುವ ಹಲವಾರು ಸಂಗತಿಗಳು ಇದ್ದೇ ಇವೆ. ಹೌದು, ಇದನ್ನ ಯಾರಾದರೂ ಒಪ್ಪಲು ಸಿದ್ದವಿಲ್ಲ ಎಂದರೇ ಈ ಲೇಖನ ಓದಿ ತಿಳಿಯರಿ.

ಓದಿರಿ:ಕಡಿಮೆ ಬೆಲೆಯ ಟಾಪ್‌ 4G ಸಂಪರ್ಕದ ಸ್ಮಾರ್ಟ್‌ಫೋನ್‌ಗಳು

ಸ್ಮಾರ್ಟ್‌ಫೋನ್‌ಗಳನ್ನು ಎಷ್ಟೇ ಹಣ ಕೊಟ್ಟು ಖರೀದಿಸಿದ್ದರೂ ಸಹ ಆ ಸ್ಮಾರ್ಟ್‌ಫೋನ್‌ಗಳನ್ನು ದ್ವೇಷಿಸುವ ಸಮಯಗಳು ಇವೆ. ಅಪಾರ ಪ್ರೀತಿ ಇದ್ದರೂ ಸಹ ಅವುಗಳಿಂದ ಕಿರಿಕಿರಿ ತಪ್ಪಿದ್ದಲ ಎಂಬುದನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ತಿಳಿಸುತ್ತಿದೆ. ಹಾಗಾದರೆ ಲೇಖನದ ಸ್ಲೈಡರ್‌ಗಳಿಂದ ಸ್ಮಾರ್ಟ್‌ಫೋನ್‌ ಅನ್ನು ಬಳಸುವ ನಾವು ಅವುಗಳನ್ನು ದ್ವೇಷಿಸುವ ಹಾಗೂ ಕಿರಿಕಿರಿ ಅನುಭವಿಸುವ ಸನ್ನಿವೇಶಗಳನ್ನು ತಿಳಿಯಿರಿ.

 ನೆಟ್‌ವರ್ಕ್‌

ನೆಟ್‌ವರ್ಕ್‌

ಕೆಲವೊಮ್ಮೆ ಅತಿ ಶೀಘ್ರವಾಗಿ ತುರ್ತುಪರಿಸ್ಥಿತಿಯಲ್ಲಿ ಯಾರಿಗಾದರೂ ಕರೆ ಮಾಡಬೇಕು ಎಂದಾಗ, ಸಂದೇಶ ಕಳುಹಿಸಬೇಕು ಎನಿಸಿದಾಗ, ಅಥವಾ ಇಮೇಲ್‌ ಮಾಡಬೇಕು ಎಂದಾಗ ನೆಟ್‌ವರ್ಕ್‌ ಸಂಪರ್ಕ ಇಲ್ಲದಿದ್ದರೇ ಮೊಬೈಲ್‌ನಿಂದ ಹೆಚ್ಚು ಕಿರಿಕಿರಿ ಅನುಭವಿಸುತ್ತೀರಿ.

ಸ್ಲೈಡರ್‌ ಸಮಸ್ಯೆಗಳು

ಸ್ಲೈಡರ್‌ ಸಮಸ್ಯೆಗಳು

ಬಾಸ್ ಅಥವಾ ನಿಮ್ಮ ಪ್ರೀತಿ ಪಾತ್ರರಿಂದಲೇ ಕರೆ ಬಂದಿದೆ. ಆದರೆ ಕರೆ ಸ್ವೀಕರಿಸಲು ಸ್ಲೈಡರ್ ವರ್ಕ್‌ ಆಗುತ್ತಿಲ್ಲ. ಅಂತಹ ಸಂದರ್ಭವನ್ನು ಒಮ್ಮೆ ಯೋಚಿಸಿ ನಿಮ್ಮ ಸಿಟ್ಟು ಹೇಗಿರುತ್ತದೆ.

ವಾಯ್ಸ್ ಕರೆಗಳು ಸಂಪೂರ್ಣವಾಗಿ ಕೇಳಿಸದಿದ್ದಾಗ:

ವಾಯ್ಸ್ ಕರೆಗಳು ಸಂಪೂರ್ಣವಾಗಿ ಕೇಳಿಸದಿದ್ದಾಗ:

ನೀವು ಕರೆ ಮಾಡುವುದು ವಿರಳ. ಆದರೂ ಅಂತಹ ಸಂದರ್ಭದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ನಿಮ್ಮ ಮಾತು ಅವರಿಗೆ ಅಥವಾ ಅವರ ಮಾತು ನಿಮಗೆ ಕೇಳಿಸದಿದ್ದಾಗ ನಿಮ್ಮ ಪೋನ್‌ ಅನ್ನು ಎಸೆದು ಬಿಡುವಷ್ಟು ಕೋಪ ಬರುತ್ತದೆ. ಅದರಲ್ಲೂ ಬಹುಮುಖ್ಯವಾದ ಕರೆ ಆಗಿದ್ದರಂತು ಸ್ಮಾರ್ಟ್‌ಫೋನ್‌ ನಿಂದ ಆಗುವ ಕಿರಿಕಿರಿ ತಾರಕಕ್ಕೇರಿರುತ್ತದೆ.

ಶೇಖರಣ ಸ್ಪೇಸ್‌ ಇಲ್ಲದಿದ್ದಾಗ:

ಶೇಖರಣ ಸ್ಪೇಸ್‌ ಇಲ್ಲದಿದ್ದಾಗ:

ನಿಮ್ಮ ಆಸಕ್ತಿಯ ಅಥವಾ ಮುಖ್ಯವಾದ ಯಾವುದಾದರೂ ಫೈಲ್‌ಗಳನ್ನು 30 ನಿಮಿಷಕ್ಕೂ ಮೀರಿ ಹೆಚ್ಚಿನ ಸಮಯದಿಂದ ಡೌನ್‌ಲೋಡ್‌ ಮಾಡಿದಾಗ ಕೊನೆಯ ವೇಳೆ ಡಿವೈಸ್‌ನಲ್ಲಿ ಶೇಖರಣಾ ಸಾಮರ್ಥ್ಯ ಇಲ್ಲದಿದ್ದರೆ ಅಥವಾ ಫೋನ್‌ ಹ್ಯಾಂಗ್‌ ಆದರೆ ಖಂಡಿತ ದ್ವೇಷಿಸುತ್ತೀರಿ.

ಆಕಸ್ಮಿಕ ಹ್ಯಾಂಗ್‌:

ಆಕಸ್ಮಿಕ ಹ್ಯಾಂಗ್‌:

ದಯವಿಟ್ಟು ನಿಮ್ಮ ಫೋನ್‌ ಎಸೆಯದಿರಿ. ಕೆಲವೊಮ್ಮೆ ಪ್ರಮುಖ ಚಾಟ್‌ ಮತ್ತು ಆಸಕ್ತಿಕರ ವಿಷಯಗಳಲ್ಲಿ ಸಂವಾದದಲ್ಲಿ ಮೊಬೈಲ್‌ ಮೂಲಕ ಗ್ರೂಪ್‌ಗಳಲ್ಲಿ ತೊಡಗಿದ್ದಾಗ ಫೋನ್‌ ಹ್ಯಾಂಗ್‌ ಆದರೆ ಫೋನ್‌ ಎಸೆಯುವಷ್ಟು ಕಿರಿಕಿರಿ ಅನುಭವ ಆಗುವುದು. ಕಾರಣ ಇದರಿಂದ ನೀವು ಆ ವಿಷಯಗಳಲ್ಲಿ ಸೋತ ಅನುಭವ ಆಗುತ್ತದೆ.

ಡಾಟಾ ಕಳೆದುಕೊಳ್ಳುವುದು:

ಡಾಟಾ ಕಳೆದುಕೊಳ್ಳುವುದು:

ನೀವು ನಿರೀಕ್ಷಿಸದೇ ಕೆಲವು ಮುಖ್ಯವಾದ ಡಾಟಾವನ್ನು ಡಿವೈಸ್‌ನ ದೋಷ ಮತ್ತು ವೈರಸ್‌ನಿಂದ ಕಳೆದುಕೊಳ್ಳುವುದು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ನೀವೆ ದ್ವೇಷಿಸುವಂತೆ ಮಾಡುತ್ತದೆ.

ಬ್ಯಾಟರಿ ಸಮಸ್ಯೆಗಳು:

ಬ್ಯಾಟರಿ ಸಮಸ್ಯೆಗಳು:

ಬ್ಯಾಟರಿ ಸಮಸ್ಯೆ ಕೆಲವು ಸಂದರ್ಭಗಳಲ್ಲಿ ಕೈಕೊಡುವುದು. ಉದಾಹರಣೆಗೆ ಹೊರವಲಯಗಳಲ್ಲಿ ನಿಮ್ಮ ಸ್ಮೇಹಿತರನ್ನು ಭೇಟಿ ಮಾಡಲು ಹೊರಟಾಗ ಮೊಬೈಲ್‌ ಬ್ಯಾಟರಿ ಖಾಲಿಯಾಗುವುದು.

ಜೋರಾದ ರಿಂಗ್ಟೋನ್ಗಳು:

ಜೋರಾದ ರಿಂಗ್ಟೋನ್ಗಳು:

ಕೆಲವೊಮ್ಮೆ ಆಶ್ಚರ್ಯಕರ ಕರೆಗಳು ಬರುವುದು ಮತ್ತು ಗಂಭೀರ ಸಂದರ್ಭಗಳಲ್ಲಿ ಜೋರಾದ ರಿಂಗ್ಟೋನ್ಗಳು ಕೇಳಿಸುವುದು.

ಕ್ಯಾಮೆರಾ ಹ್ಯಾಂಗ್ಸ್‌:

ಕ್ಯಾಮೆರಾ ಹ್ಯಾಂಗ್ಸ್‌:

ಶೀಘ್ರವಾಗಿ ಫೋಟೋ ತೆಗೆಯಲು ಕ್ಯಾಮೆರಾ ಆನ್‌ಮಾಡಿದಾಗ ಲಾಂಚ್‌ ಆಗದಿದ್ದಲ್ಲಿ ಅಥವಾ ಕ್ಯಾಪ್ಚರ್ ಬಹುಬೇಗ ಆಗದಿದ್ದಲ್ಲಿ ಕಿರಿಕಿರಿ ಉಂಟಾಗಬಹುದು.

ಗೇಮ್‌ಗಳು ಕಾರ್ಯ ನಿರ್ವಹಿಸದಿದ್ದಲ್ಲಿ:

ಗೇಮ್‌ಗಳು ಕಾರ್ಯ ನಿರ್ವಹಿಸದಿದ್ದಲ್ಲಿ:

ಕೆಲವೊಂದು ಮೊಬೈಲ್‌ ಗೇಮ್‌ಗಳಲ್ಲಿ ನೀವು ಅಂತ್ಯ ಸಂದರ್ಭ ತಲುಪಿದಾಗ ಗೇಮ್‌ ಸ್ಟಾಪ್‌ಆಗುವುದು.

Best Mobiles in India

English summary
We believe that we all share a love-and-hate kind of a relationship with our smartphones, and can prove it. Here we pick up 11 such situations when your phone seems highly irritating to you and feel like giving away with it (even if the feeling lasts briefly).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X