ವಾಟ್ಸಾಪ್‌ ಬಳಕೆದಾರರೇ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

|

ವಾಟ್ಸಾಪ್ ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಚಾಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ವಾಟ್ಸಾಪ್‌ ತನ್ನದೇ ಆದ ಅನುಕೂಲಗಳನ್ನು ಮತ್ತು ಸವಾಲುಗಳನ್ನು ಹೊಂದಿದೆ. ಸ್ಟೇಟಸ್‌ ಮೆಸೆಜ್‌ಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಗುಂಪು ಚಾಟ್‌ಗಳು ಮತ್ತು ವಾಯಿಸ್‌, ವಿಡಿಯೋ ಕರೆಗಳವರೆಗೆ, ವಾಟ್ಸಾಪ್‌ನಲ್ಲಿ ಹಲವು ಕೆಲಸಗಳನ್ನು ಮಾಡಬಹುದು. ಆದರೆ ವಾಟ್ಸಾಪ್‌ನಲ್ಲಿ ಗಮನಿಸಬಹುದಾದ ಸಮಸ್ಯೆ ಏನೆಂದರೆ, 'ಫ್ರೆಂಡ್‌ ರೀಕ್ವೆಸ್ಟ್‌ ಕಳುಹಿಸುವ ಅಥವಾ ಮೆಸೆಜ್ ಮಾಡುವ ಮುನ್ನ ಅನುಮತಿ ಪಡೆಯುವ ಯಾವುದೇ ಆಯ್ಕೆಗಳನ್ನು/ಪರಿಕಲ್ಪನೆ ಹೊಂದಿಲ್ಲ.

ವಾಟ್ಸಾಪ್‌ ಬಳಕೆದಾರರೇ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ನಿಮ್ಮ ಫೋನ್‌ನ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಯಾರಾದರೂ ಮತ್ತು ಎಲ್ಲರೂ ನಿಮ್ಮನ್ನು ವಾಟ್ಸಾಪ್‌ನಲ್ಲಿ ಹುಡುಕಬಹುದು ಎಂಬ ಅಂಶವು ವಿಷಯಗಳನ್ನು ಸ್ವಲ್ಪ ಟ್ರಿಕಿ ಮತ್ತು ಕೆಲವೊಮ್ಮೆ ಅಪಾಯಕಾರಿ ಮಾಡುತ್ತದೆ. ಹೀಗಾಗಿ ವಾಟ್ಸಾಪ್‌ನಲ್ಲಿ ಕೆಲವು ತಪ್ಪುಗಳನ್ನು ಮಾಡಲೇಬೇಡಿ. ಹಾಗಾದರೇ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್ ಖಾತೆಗೆ ಪ್ರವೇಶ ಪಡೆಯಲು ಎಲ್ಲರಿಗೂ ಅವಕಾಶ ನೀಡಬೇಡಿ
ನಿಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಎಲ್ಲರಿಗೂ ನಿಮ್ಮ ವಾಟ್ಸಾಪ್‌ ಖಾತೆ ವೀಕ್ಷಿಸುವುದು ಅಷ್ಟು ಸೂಕ್ತವಲ್ಲ. ಹೀಗಾಗಿ ನಿಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ ಅನ್ನು ಸ್ವಲ್ಪ ಕ್ಲಿನ್ ಮಾಡಿರಿ. ಅಂದರೇ ನಿಮ್ಮ ಮೊಬೈಲ್ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇರುವ ಅನಗತ್ಯ ಕಾಂಟ್ಯಾಕ್ಟ್‌ಗಳನ್ನು ತೆಗೆದು ಹಾಕಿರಿ.

ವಾಟ್ಸಾಪ್ ಪ್ರೊಫೈಲ್ ಫೋಟೋದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸದಿರಿ

ನಿಮ್ಮ ವಾಟ್ಸಾಪ್‌ ಖಾತೆಗೆ ಸರಳ ಪ್ರೊಫೈಲ್ ಫೋಟೋವನ್ನು ಇಡುವುದು ಒಳ್ಳೆಯದು. ನಿಮ್ಮ ಪ್ರೊಫೈಲ್ ಫೋಟೋ ನಿಮ್ಮ ಮತ್ತು ನಿಮ್ಮ ಕುಟುಂಬ ಸದಸ್ಯರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಗುಂಪು ಫೋಟೋಗಳು, ನಿಮ್ಮ ಅಪಾರ್ಟ್ಮೆಂಟ್ ಮುಂದೆ ಇರುವ ಫೋಟೋಗಳು ಅಥವಾ ನಿಮ್ಮ ಕಾರು ನೋಂದಣಿ ಸಂಖ್ಯೆಯನ್ನು ಬಹಿರಂಗಪಡಿಸುವ ಫೋಟೋಗಳನ್ನು ತಪ್ಪಿಸಬೇಕು.

ಟು-ಸ್ಟೇಪ್-ವೇರಿಫೀಕೇಶನ್ ಆಯ್ಕೆ ಸೇರಿಸುವುದನ್ನು ಮಿಸ್‌ ಮಾಡ್ಬೆಡಿ
ಈ ಆಯ್ಕೆಯು ಸಿಮ್ ಸ್ವಾಪ್ ವಂಚನೆಗೆ ಬಲಿಯಾಗುವುದನ್ನು ತಡೆಯುತ್ತದೆ. ಅಲ್ಲದೆ, ನಿಮ್ಮಿಂದ ಒಟಿಪಿಯನ್ನು ಕದಿಯುವ ಮೂಲಕ ಇತರ ಫೋನ್‌ನಲ್ಲಿ ನಿಮ್ಮ ವಾಟ್ಸಾಪ್ ಖಾತೆಯನ್ನು ಹೊಂದಿಸಲು ಇತರರಿಗೆ ಅನುಮತಿಸುವುದಿಲ್ಲ. ನಿಮ್ಮ ಖಾತೆಯಿಂದ ಬೇರೊಬ್ಬರು ನಿಮ್ಮನ್ನು ಲಾಕ್ ಮಾಡುವುದನ್ನು ತಡೆಯಲು ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು 'ಎರಡು-ಹಂತದ ಪರಿಶೀಲನೆ' ಸೇರಿಸಿ.

ವಾಟ್ಸಾಪ್‌ ಬಳಕೆದಾರರೇ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ಟಚ್ ಐಡಿ ಅಥವಾ ಫೇಸ್ ಐಡಿ ಸೆಕ್ಯುರಿಟಿ ಆಯ್ಕೆ ಬಳಿಸಿ
ವಾಟ್ಸಾಪ್ ತನ್ನ ಬಳಕೆದಾರರಿಗೆ ಟಚ್ ಐಡಿ ಮತ್ತು ಐಫೋನ್‌ಗಾಗಿ ಫೇಸ್ ಐಡಿ ಮತ್ತು ಆಂಡ್ರಾಯ್ಡ್ಗಾಗಿ ಫಿಂಗರ್‌ಪ್ರಿಂಟ್ ಲಾಕ್‌ನೊಂದಿಗೆ ತಮ್ಮ ಖಾತೆಗಳಿಗೆ ಹೆಚ್ಚುವರಿ ಭದ್ರತೆಯನ್ನು ಸೇರಿಸುವ ಸಾಮರ್ಥ್ಯವನ್ನು ನೀಡುತ್ತದೆ. ನೀವು ಅಪ್ಲಿಕೇಶನ್ ಅನ್ನು ಮುಚ್ಚಿದ ತಕ್ಷಣವೇ ಅಥವಾ ವಿವಿಧ ಅವಧಿಯ ನಿಷ್ಕ್ರಿಯತೆಯ ನಂತರ ವಾಟ್ಸಾಪ್ ನಿಮ್ಮನ್ನು ಅಪ್ಲಿಕೇಶನ್‌ನಿಂದ ಸ್ವಯಂಚಾಲಿತವಾಗಿ ಲಾಕ್ ಮಾಡಲು ಬಯಸುತ್ತೀರಾ ಎಂದು ಸಹ ನೀವು ನಿರ್ಧರಿಸಬಹುದು. ವಾಟ್ಸಾಪ್ ಸೆಟ್ಟಿಂಗ್‌ಗಳನ್ನು ತೆರೆಯಿರಿ.

ವಾಟ್ಸಾಪ್‌ ಸ್ಟೇಟಸ್‌ ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ನಿಲ್ಲಿಸಿ
ಸ್ಟೇಟಸ್‌ ಮೆಸಜೆ್‌ಗಳು/ಫೋಟೊಗಳು ಖಾಸಗಿಯಾಗಿರುತ್ತವೆ. ಅವುಗಳನ್ನು ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಮಾತ್ರ ಹಂಚಿಕೊಳ್ಳಬೇಕು/ವೀಕ್ಷಿಸುವಂತೆ ಸೆಟ್‌ ಮಾಡಬೇಕು. ಇವರನ್ನು ಹೊರತುಪಡಿಸಿ ಅನಗತ್ಯ ನಿಮ್ಮ ನಂಬರ್ ಇರುವ ಎಲ್ಲರೂ ನಿಮ್ಮ ಸ್ಟೇಟಸ್‌ ವೀಕ್ಷಿಸುವಂತೆ ಇಡಬೇಡಿ. ಹೀಗಾಗಿ ಸೆಟ್ಟಿಂಗ್‌ನಲ್ಲಿ ಈ ಆಯ್ಕೆಯನ್ನು ಬದಲಿಸಿರಿ.

ವಾಟ್ಸಾಪ್‌ ಬಳಕೆದಾರರೇ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ವಾಟ್ಸಾಪ್ ಗ್ರೂಪ್‌ಗೆ ಸೇರಿಸಲು ಎಲ್ಲರಿಗೂ ಅವಕಾಶ ನೀಡುವುದನ್ನು ನಿಲ್ಲಿಸಿ
ವಾಟ್ಸಾಪ್‌ ಗ್ರೂಪ್‌ ಮೆಸೆಜ್‌ಗಳಿಗೆ ಯಾರು ನಿಮ್ಮನ್ನು ಸೇರಿಸಬಹುದು ಎಂಬುದನ್ನು ನಿರ್ಬಂಧಿಸುವ ಆಯ್ಕೆ ಇದೆ. ಆಯ್ಕೆಗಳು ಹೀಗಿವೆ Everyone-ಎಲ್ಲರು(ವಾಟ್ಸಾಪ್‌ನಲ್ಲಿರುವ ಯಾರಾದರೂ ನಿಮ್ಮನ್ನು ಗುಂಪಿಗೆ ಸೇರಿಸಬಹುದು), My contacts(ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಜನರು ಮಾತ್ರ ನಿಮ್ಮನ್ನು ಗುಂಪುಗಳಿಗೆ ಸೇರಿಸಬಹುದು) ಮತ್ತು My contacts except (ಈ ಆಯ್ಕೆಯು ನಿಮ್ಮನ್ನು ಯಾರು ಸೇರಿಸಬಹುದು ಎಂಬುದನ್ನು ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ ಗುಂಪು).

ಎಲ್ಲಾ ವಾಟ್ಸಾಪ್ ಮೀಡಿಯಾ ಫೈಲ್‌ಗಳು ಫೋನ್‌ನ ಗ್ಯಾಲರಿ ಸೇರಿಸುವುದನ್ನು ನಿಲ್ಲಿಸಿ
ಫೋನ್‌ ಗ್ಯಾಲರಿ ಅನಗತ್ಯವಾಗಿ ಭರ್ತಿ ಆಗುವುದನ್ನು ತಡೆಯಲು ಹಾಗೂ ಅನಗತ್ಯ ಮೀಡಿಯಾ ಫೈಲ್‌ಗಳು ಸ್ಟೋರ್ ಆಗುವುದನ್ನು ನಿಲ್ಲಿಸಲು ಈ ಆಯ್ಕೆ ಉತ್ತಮ. ಆದ್ದರಿಂದ, ನಿಮ್ಮ ಫೋನ್ ಗ್ಯಾಲರಿಯಲ್ಲಿ ಅನಗತ್ಯ ಮೀಡಿಯಾ ಫೈಲ್‌ಗಳು ಸ್ಟೋರ್ ಆಗುವದನ್ನು ನಿಲ್ಲಿಸಲು ಸೆಟ್ಟಿಂಗ್‌ಗಳ ಮೆನುವಿನಲ್ಲಿ ಈ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

ಗೂಗಲ್ ಡ್ರೈವ್ ಅಥವಾ ಐ ಕ್ಲೌಡ್‌ನಲ್ಲಿ ಚಾಟ್‌ಗಳ ಸ್ವಯಂ-ಬ್ಯಾಕಪ್ ಅನ್ನು ನಿಲ್ಲಿಸಿ
ಐ ಕ್ಲೌಡ್ ಅಥವಾ ಗೂಗಲ್ ಡ್ರೈವ್‌ನಲ್ಲಿ ಉಳಿಸಲಾದ ವಾಟ್ಸಾಪ್ ಚಾಟ್ ಬ್ಯಾಕಪ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿಲ್ಲ. ಆದ್ದರಿಂದ, ಕೆಲವು ಚಾಟ್‌ಗಳು ಮುಖ್ಯವಾಗಿದ್ದರೆ ಮತ್ತು ಉಳಿಸಬೇಕಾದರೆ, ಅವುಗಳನ್ನು ರಫ್ತು ಮಾಡುವುದು ಮತ್ತು ಅದನ್ನು ಸುರಕ್ಷಿತವಾಗಿ ಬೇರೆಲ್ಲಿಯಾದರೂ ಉಳಿಸುವುದು ಒಳ್ಳೆಯದು. ಎಲ್ಲಾ ವಾಟ್ಸಾಪ್ ಚಾಟ್‌ಗಳನ್ನು ಅನಗತ್ಯವಾಗಿ ಬ್ಯಾಕಪ್ ಮಾಡುವುದು ಸುಮ್ಮನೇ ಸ್ಟೋರೇಜ್‌ ಅನ್ನು ಕಬಳಿಸುತ್ತದೆ.

ವಾಟ್ಸಾಪ್‌ ಬಳಕೆದಾರರೇ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ಅಶ್ಲೀಲ ತುಣುಕುಗಳನ್ನು ಶೇರ್ ಮಾಡುವುದುವನ್ನು ತಪ್ಪಿಸಿ
ಅಶ್ಲೀಲ ವಿಷಯವನ್ನು ಹಂಚಿಕೊಳ್ಳುವುದರ ವಿರುದ್ಧ ವಾಟ್ಸಾಪ್ ಕಠಿಣ ನೀತಿಗಳನ್ನು ಹೊಂದಿದೆ. ಕೆಲವು ವಯಸ್ಕರ ತುಣುಕುಗಳನ್ನು ಅಥವಾ ಫೋಟೋಗಳನ್ನು ಹಂಚಿಕೊಳ್ಳುವುದು ಸಾಕಷ್ಟು ಅಪಾಯಕಾರಿ. ನಿಮ್ಮ ಖಾತೆಯನ್ನು ಯಾರಾದರೂ ವಾಟ್ಸಾಪ್‌ಗೆ ವರದಿ ಮಾಡಿದರೆ ವಾಟ್ಸಾಪ್ ನಿಮ್ಮ ಖಾತೆಯನ್ನು ನಿಷೇಧಿಸಬಹುದು ಮತ್ತು ಅದರ ಬಳಕೆಯ ನಿಯಮಗಳ ಪ್ರಕಾರ ಪೊಲೀಸ್ ದೂರು ಕೂಡ ಸಲ್ಲಿಸಬಹುದು.

ವಾಟ್ಸಾಪ್ನಲ್ಲಿ ಸೂಕ್ಷ್ಮ ವಿಷಯಗಳ ಬಗ್ಗೆ ಪರಿಶೀಲಿಸದ ಸುದ್ದಿ ಅಥವಾ ವದಂತಿಗಳನ್ನು ಶೇರ್‌ ಮಾಡದಿರಿ
ಹಿಂಸಾಚಾರವನ್ನು ಪ್ರಚೋದಿಸಲು ನಕಲಿ ಸುದ್ದಿಗಳನ್ನು ಹಂಚಿಕೊಳ್ಳುವಂತಹ ಕೆಲಸವನ್ನು ಎಂದಿಗೂ ಮಾಡಬೇಡಿರಿ. ಈ ರೀತಿ ಮಾಡಿದರೇ ಕಾನೂನ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಸೂಕ್ಷ್ಮ ವಿಷಯಗಳ ಬಗ್ಗೆ ಪರಿಶೀಲಿಸದ ಸುದ್ದಿಗಳನ್ನು ಅಥವಾ ವದಂತಿಗಳನ್ನು ವಾಟ್ಸಾಪ್‌ನಲ್ಲಿ ಹರಡಬೇಡಿ.

Best Mobiles in India

English summary
These 10 Mistakes You should Stop Making On WhatsApp Right Now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X