ವಿಜ್ಞಾನ ಲೋಕಕ್ಕೆ ಸವಾಲೆಸೆದಿರುವ 11 ಮಹಾನ್ ವ್ಯಕ್ತಿಗಳು

By Shwetha
|

ಈ ಸುಂದರ ವಿಶ್ವ ವಿಸ್ಮಯಗಳ ಖಜಾನೆಯನ್ನೇ ತನ್ನಲ್ಲಿ ಇರಿಸಿಕೊಂಡಿದೆ. ನೀವು ಆಳವಾಗಿ ಅಭ್ಯಸಿಸಿದಷ್ಟೂ ನಿಮಗೆ ನಿಗೂಢ ಜಗತ್ತೇ ತೆರೆದುಕೊಳ್ಳಬಹುದು. ಅಂತಹುದೇ ನಿಗೂಢತೆಯನ್ನೊಳಗೊಂಡ ಮಹಾನ್ ವ್ಯಕ್ತಿಗಳ ಬಗ್ಗೆ ನಾವಿಂದು ಇಂದಿನ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ತಮ್ಮ ಸಾಧನೆಯಿಂದ ಹೆಸರುವಾಸಿಯಾಗಿರುವ ಈ ಮಹಾನ್ ವ್ಯಕ್ತಿಗಳು ಅಸಾಧಾರಣರಾಗಿದ್ದು ತಮ್ಮ ಅದ್ಭುತ ಸಾಧನಗಳಿಂದ ಮಹಾನ್ ಎಂದೇ ಪ್ರಸಿದ್ಧರಾಗಿದ್ದಾರೆ.

ಓದಿರಿ: ಚಂದ್ರ ಗ್ರಹದಲ್ಲಿ ಯಾರೋ ಇದ್ದಾರೆ: ನಾಸಾ ಸಿಬ್ಬಂದಿ ಹೇಳಿಕೆ

ವಿಜ್ಞಾನ ಲೋಕಕ್ಕೆ ಸವಾಲೆಸೆದಿರುವ ಆ ವ್ಯಕ್ತಿಗಳು ಮತ್ತು ಅವರ ಸಾಧನೆಗಳನ್ನು ನಾವಿಲ್ಲಿ ತಿಳಿಸುತ್ತಿದ್ದು ನೀವು ಅವರ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ವಿಫ್ ಹಾಫ್

ವಿಫ್ ಹಾಫ್

ವಿಫ್ ಹಾಫ್ ಮಾಡಿದಂತೆ ಮಂಜುಗಡ್ಡೆಯ ಮೇಲೆ ನೀವು ಕುಳಿತುಕೊಳ್ಳಲು ಹೋದರೆ ನಿಮಗೆ ಸಾವು ಖಂಡಿತ. ಹೌದು ಈತ ಮಂಜುಗಡ್ಡೆಯ ಮೇಲೆ ಕುಳಿತುಕೊಳ್ಳುವ ಸಾಮರ್ಥ್ಯಕ್ಕೆ ಇಡಿಯ ವಿಜ್ಞಾನವೇ ಬೆರಗಾಗಿ ಹೋಗಿದೆ. ಆತನ ಸಾಮರ್ಥ್ಯಕ್ಕೆ ಖಂಡಿತ ಬೆರಗಾಗಲೇಬೇಕು.

ಪ್ರಹ್ಲಾದ ಜಾನಿ

ಪ್ರಹ್ಲಾದ ಜಾನಿ

ಅಂಬಾ ಮಠದ ಭಕ್ತನಾಗಿರುವ ಪ್ರಹ್ಲಾದ ಜಾನಿ 1940 ರಿಂದ ಆಹಾರವನ್ನು ಸೇವಿಸದೇ ಬದುಕಿತ್ತಿದ್ದಾನೆ ಎಂದು ತಿಳಿಸಿದ್ದಾನೆ. ಇವನು ಹೇಗೆ ಬದುಕುತ್ತಿದ್ದಾನೆ ಎಂಬುದು ನಿಗೂಢವಾಗಿದೆ. ನೀರು ಮತ್ತು ಆಹಾರವಿಲ್ಲದೆ ಈತ ಆರೋಗ್ಯವಂತನಾಗಿದ್ದಾನೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

ರಥಾಕೃಷ್ಣನನ್

ರಥಾಕೃಷ್ಣನನ್

ಮಲೇಷಿಯಾದ ಈ ವ್ಯಕ್ತಿ ಎಲ್ಲಾ ಟೂತ್‌ಪೇಸ್ಟ್ ಜಾಹೀರಾತುಗಳಿಗೆ ಸಹಿ ಹಾಕಿದ್ದಾರೆ ಏಕೆಂದರೆ ಬಲಶಾಲಿ ಹಲ್ಲುಗಳನ್ನು ಈತ ಹೊಂದಿರುವುದಕ್ಕೆ. ಏಳು ಕೋಚ್ ರೈಲುಗಾಡಿಯನ್ನು ತನ್ನ ಹಲ್ಲಿನಿಂದ ಎಳೆದ ಸಾಧನೆಗೆ ರಥಾಕೃಷ್ಣನನ್ ಖ್ಯಾತರಾಗಿದ್ದಾರೆ.

ಕೆವಿನ್ ರಿಚರ್ಡ್ಸ್ ಸನ್

ಕೆವಿನ್ ರಿಚರ್ಡ್ಸ್ ಸನ್

ಸಿಂಹಗಳೊಂದಿಗೆ ಮಾತನಾಡಬಲ್ಲ ಅದ್ಭುತ ಸಿದ್ಧಿ ಕೆವಿನ್‌ಗೆ ಇದೆ. ಸಿಂಹಗಳನ್ನು ಪಳಗಿಸುವುದು ಅವುಗಳೊಂದಿಗೆ ಇರುವುದು, ನೃತ್ಯಮಾಡಿಸುವುದು, ಆಟವಾಡಿಸುವುದು ಮೊದಲಾದುವನ್ನು ಈತ ಕರಾತಲಮಲಕವಾಗಿ ಮಾಡಬಲ್ಲ.

ಬೆನ್ ಅಂಡರ್ ವುಡ್

ಬೆನ್ ಅಂಡರ್ ವುಡ್

ಡಾಲ್ಫಿನ್‌ಗಳಂತೆ ತನ್ನ ಕಣ್ಣುಗಳಿಲ್ಲದೆ ವಸ್ತುಗಳನ್ನು ನೋಡಬಲ್ಲವನು. ವಸ್ತು ಎಲ್ಲಿದೆ ಎಂಬುದನ್ನು ನಿಖರವಾಗಿ ಈತ ತಿಳಿಸಬಲ್ಲ. ಆದರೆ 2009 ರಲ್ಲಿ ಈತ ಕ್ಯಾನ್ಸರ್‌ನಿಂದ ಮರಣ ಹೊಂದಿದ.

ಡೇನಿಯಲ್ ಬ್ರೌನಿಂಗ್ ಸ್ಮಿತ್

ಡೇನಿಯಲ್ ಬ್ರೌನಿಂಗ್ ಸ್ಮಿತ್

ಭೂಮಿಯ ಮೇಲಿರುವ ರಬ್ಬರ್ ಹುಡುಗ ಡೇನಿಯಲ್. ಈತ ತನ್ನ ದೇಹವನ್ನು ಹೇಗೆ ಬೇಕಾದರೂ ಮಡಚಬಲ್ಲ. ಅವನ ದೇಹದಲ್ಲಿ ಮೂಳೆಗಳೇ ಇಲ್ಲವೇನೋ ಎಂಬಂತೆ ತನ್ನ ಸಾಧನೆಯನ್ನು ಈತ ಮಾಡಬಲ್ಲ.

ಸ್ಟೀಫನ್ ವಿಲ್ಟ್‌ಶೈರ್

ಸ್ಟೀಫನ್ ವಿಲ್ಟ್‌ಶೈರ್

ಅತ್ಯುನ್ನತ ಕಲಾವಿದನಾಗಿರುವ ಸ್ಟೀಫನ್ ಮನಸ್ಸಿನಲ್ಲಿ ಮೂಡಿರುವುದನ್ನು ಹಾಳೆಯಲ್ಲಿ ಬಿಡಿಸುವ ಕಲೆಯನ್ನು ಹೊಂದಿರುವಾತ. ಅದ್ಭುತ ಫೋಟೋಗ್ರಾಫಿಕ್ ಜ್ಞಾನವನ್ನು ಈತ ಹೊಂದಿದ್ದಾನೆ

ನಾಗೊಕ್ ಥಾಯ್

ನಾಗೊಕ್ ಥಾಯ್

ವಿಯೆಟ್ನಾಮ್‌ನ ನಾಗೊಕ್ ಥಾಯ್ 1973 ರಿಂದ ನಿದ್ದೆಯೇ ಮಾಡಿಲ್ಲವಂತೆ. ಇನ್‌ಸೋಮ್ನಿಯಾ ಎಂದೇ ಕರೆಯಲಾಗಿರುವ ಈತನ ನಿದ್ದೆ ಮಾಡದ ಕಾಯಿಲೆಗೆ ಯಾವುದೇ ಮದ್ದೇ ಇಲ್ಲವಂತೆ ಹಾಗೂ ಈತ ಆರೋಗ್ಯವಂತನಾಗಿದ್ದಾನೆ ಕೂಡ. ಈತನಿಗೆ ಆಯಾಸವುಂಟಾಗುವುದೇ ಇಲ್ಲವಂತೆ.

ಟಿಬೇಟಿಯನ್ ಬೌದ್ಧ ಭಿಕ್ಷುಗಳು

ಟಿಬೇಟಿಯನ್ ಬೌದ್ಧ ಭಿಕ್ಷುಗಳು

ಟುಮೊ ಎಂಬ ಸಿದ್ಧಿಯಿಂದ ಈ ಬೌದ್ಧ ಭಿಕ್ಷುಗಳು ತಮ್ಮ ಕಾಲ್ಬೆರಳುಗಳ ತಾಪಮಾನವನ್ನು ಹೆಚ್ಚಿಸಿಕೊಳ್ಳುವವರಂತೆ. ಸಿಕ್ಕೀಮ್‌ನ ಈ ಭಿಕ್ಷುಗಳು ಮನಸ್ಸಿನ ಹತೋಟಿಯ ಮೇಲೆ ಚಯಾಪಚಯ ಕ್ರಿಯೆಯನ್ನು ಕಡಿಮೆಗೊಳಿಸುವ ತಾಕತ್ತುಳ್ಳವರು. ಯೋಗ ಮತ್ತು ಧ್ಯಾನದಿಂದ ಈ ಸಿದ್ಧಿಯನ್ನು ಇವರು ಪಡೆದುಕೊಂಡಿದ್ದಾರೆ.

ನತಾಶಾ ದೆಮ್‌ಕೀನ್

ನತಾಶಾ ದೆಮ್‌ಕೀನ್

ಈಕೆ ಎಕ್ಸರೇ ದೃಷ್ಟಿಯನ್ನು ಹೊಂದಿದ್ದು ಜನರ ತ್ವಚೆಯ ಮೂಲಕ ನೋಡಬಲ್ಲವಳಾಗಿದ್ದಾಳೆ. ಈ ರಷ್ಯಾದ ಹುಡುಗಿ ನಿಜಕ್ಕೂ ವಿಜ್ಞಾನ ಲೋಕಕ್ಕೆ ಸಡ್ಡುಹೊಡೆದಿದ್ದಾಳೆ.

ಡೇನಿಯಲ್ ತಮ್ಮೆಟ್

ಡೇನಿಯಲ್ ತಮ್ಮೆಟ್

ಈತ ಅದ್ಭುತ ಮೆದುಳಿನ ಶಕ್ತಿಯನ್ನು ಪಡೆದುಕೊಂಡಿರುವ ವ್ಯಕ್ತಿಯಾಗಿದ್ದು ಯಾವುದೇ ಕ್ಲಿಷ್ಟಕರ ಸಮಸ್ಯೆಯನ್ನು ಸರಳವಾಗಿ ಬಿಡಿಸಬಲ್ಲವನಾಗಿದ್ದಾನೆ. ಈತ ಇಂಗ್ಲೀಷ್, ಫ್ರೆಂಚ್, ಫಿನ್ನಿಶ್, ಜರ್ಮನ್, ಸ್ಪ್ಯಾನಿಶ್, ಲಿಥುಯಾನಿಯನ್, ರೊಮಾನಿಯನ್, ಇಸ್ಟೋನಿಯನ್ ಭಾಷೆಗಳನ್ನು ಮಾತನಾಡಬಲ್ಲವನು.

ಗಿಜ್‌ಬಾಟ್ ಕನ್ನಡ ಲೇಖನಗಳು

ಗಿಜ್‌ಬಾಟ್ ಕನ್ನಡ ಲೇಖನಗಳು

ಭೂಮಿಯ ಅಂತ್ಯ: ಭವಿಷ್ಯ ನುಡಿದ ಸ್ಟೀಫನ್ ಹಾಕಿಂಗ್</a></strong><br /><strong>ಓದಿರಿ</strong>:<strong><a href=ಸಿಲಿಕಾನ್ ನಗರಿ ಬೆಂಗಳೂರಿನಲ್ಲಿ ಅದೃಷ್ಟ ಖುಲಾಯಿಸಿದ ಟೆಕ್ ಕಂಪೆನಿಗಳು
ಓದಿರಿ:ರೈತರ ಅಭಿವೃದ್ದಿಗೆ 'ಫಾರ್ಮಿಲಿ' ವೆಬ್‌ಸೈಟ್‌, ಆಫ್‌: ಆನ್‌ಲೈನ್‌ ಮಾರುಕಟ್ಟೆ
ಓದಿರಿ:ಸ್ಮಾರ್ಟ್‌ಫೋನ್‌ ಕಳೆದುಹೋದಲ್ಲಿ ಹುಡುಕುವುದು ಹೇಗೆ.." title="ಭೂಮಿಯ ಅಂತ್ಯ: ಭವಿಷ್ಯ ನುಡಿದ ಸ್ಟೀಫನ್ ಹಾಕಿಂಗ್
ಓದಿರಿ:ಸಿಲಿಕಾನ್ ನಗರಿ ಬೆಂಗಳೂರಿನಲ್ಲಿ ಅದೃಷ್ಟ ಖುಲಾಯಿಸಿದ ಟೆಕ್ ಕಂಪೆನಿಗಳು
ಓದಿರಿ:ರೈತರ ಅಭಿವೃದ್ದಿಗೆ 'ಫಾರ್ಮಿಲಿ' ವೆಬ್‌ಸೈಟ್‌, ಆಫ್‌: ಆನ್‌ಲೈನ್‌ ಮಾರುಕಟ್ಟೆ
ಓದಿರಿ:ಸ್ಮಾರ್ಟ್‌ಫೋನ್‌ ಕಳೆದುಹೋದಲ್ಲಿ ಹುಡುಕುವುದು ಹೇಗೆ.." loading="lazy" width="100" height="56" />ಭೂಮಿಯ ಅಂತ್ಯ: ಭವಿಷ್ಯ ನುಡಿದ ಸ್ಟೀಫನ್ ಹಾಕಿಂಗ್

ಓದಿರಿ:ಸಿಲಿಕಾನ್ ನಗರಿ ಬೆಂಗಳೂರಿನಲ್ಲಿ ಅದೃಷ್ಟ ಖುಲಾಯಿಸಿದ ಟೆಕ್ ಕಂಪೆನಿಗಳು
ಓದಿರಿ:ರೈತರ ಅಭಿವೃದ್ದಿಗೆ 'ಫಾರ್ಮಿಲಿ' ವೆಬ್‌ಸೈಟ್‌, ಆಫ್‌: ಆನ್‌ಲೈನ್‌ ಮಾರುಕಟ್ಟೆ
ಓದಿರಿ:ಸ್ಮಾರ್ಟ್‌ಫೋನ್‌ ಕಳೆದುಹೋದಲ್ಲಿ ಹುಡುಕುವುದು ಹೇಗೆ..

Best Mobiles in India

English summary
Forget Spiderman and Superman, following are some real people who possess some extraordinary superhero abilities which can give the fictional superheroes a run for their money.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X