Home
ಸುದ್ದಿಜಾಲ

Dangerous Apps: ಈ 12 ಡೇಂಜರ್‌ ಆಪ್‌ಗಳು ನಿಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿವೆಯಂತೆ: ಅನ್‌ಇನ್‌ಸ್ಟಾಲ್‌ ಮಾಡಿ

ಸ್ಮಾರ್ಟ್‌ಫೋನ್‌ (Smartphone) ಬಳಕೆ ಹೆಚ್ಚಾದಂತೆ ಅದನ್ನು ಬಳಕೆ ಮಾಡಿಕೊಂಡು ಮೋಸ ಮಾಡುತ್ತಿರುವ ಅಥವಾ ಮೋಸ ಹೋಗುತ್ತಿರುವ ಜನರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಆಯಾ ಸರ್ಕಾರಗಳು ಕೆಲವು ನೀತಿ ನಿಯಮಗಳನ್ನು ಜಾರಿ ಮಾಡುವ ಮೂಲಕ ಮೋಸದ ವ್ಯವಹಾರಕ್ಕೆ ಕಡಿವಾಣ ಹಾಕುವ ಕೆಲಸ ಮಾಡುತ್ತಿವೆ. ಇದರ ಭಾಗವಾಗಿಯೇ ಈಗ 12 ಅಪಾಯಕಾರಿ ಆಪ್‌ಗಳ (Dangerous Apps) ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಹೌದು, ಯಾವುದೇ ಆಪ್‌ಗಳಿಲ್ಲದೆ ಸ್ಮಾರ್ಟ್‌ಫೋನ್‌ ಪರಿಪೂರ್ಣ ಆಗುವುದಿಲ್ಲ. ಆದರೆ, ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಸ್ಕ್ಯಾಮರ್‌ಗಳು ಆಪ್‌ಗಳ ಮೂಲಕ ತಮಗೆ ಬೇಕಾದದನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಈಗ 12 ಆಪ್‌ಗಳು ಭಾರತ ಹಾಗೂ ಪಾಕ್‌ನಲ್ಲಿ ಬೆಹುಗಾರಿಕೆ ನಡೆಸುತ್ತಿವೆ ಎಂದು ಕಂಡುಕೊಳ್ಳಲಾಗಿದೆ. ಹಾಗಿದ್ರೆ, ಯಾವುದು ಈ ಆಪ್‌ಗಳು?, ಇವುಗಳು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಹೇಗೆ ಮಾರಕ ಎಂಬ ಮಾಹಿತಿ ಇಲ್ಲಿದೆ ನೋಡಿ.

ಈ 12 ಡೇಂಜರ್‌ ಆಪ್‌ಗಳು ನಿಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿವೆಯಂತೆ..

12 ಬೇಹುಗಾರಿಕೆ ಆಪ್‌ಗಳು: ESET ನಲ್ಲಿನ ಭದ್ರತಾ ಸಂಶೋಧಕರು 12 ಆಂಡ್ರಾಯ್ಡ್ ಬೇಹುಗಾರಿಕೆ ಆಪ್‌ಗಳನ್ನು (12 Android Spy Apps) ಕಂಡುಕೊಂಡಿದ್ದಾರೆ. ಆ ಆಪ್‌ಗಳು ವಜ್ರಾಸ್ಪೈ(VajraSpy), ರಿಮೋಟ್ ಆಕ್ಸೆಸ್ ಟ್ರೋಜನ್ ಅನ್ನು ಕಾರ್ಯಗತಗೊಳಿಸಿಸುವ ಮೂಲಕ ಈ ಕೆಲಸ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ಆಪ್‌ಗಳು ಮೆಸೆಜ್‌ ಕಳುಹಿಸುವ ಟೂಲ್ಸ್ ಎಂದು ಹೇಳಿಕೊಂಡಿವೆಯಾದರೂ ಸಂಪರ್ಕಗಳು, ಫೈಲ್‌ಗಳು, ಕರೆ ಲಾಗ್‌ಗಳು ಮತ್ತು ಎಸ್‌ಎಮ್‌ಎಸ್‌ ಗಳನ್ನು ಕದಿಯುವ ಕೆಲಸ ಮಾಡುತ್ತಿವೆ ಎಂದು ತಿಳಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ, ESETನ ಭದ್ರತಾ ಸಂಶೋಧಕರು 12 ಆಂಡ್ರಾಯ್ಡ್ ಬೇಹುಗಾರಿಕೆ ಆಪ್‌ಗಳನ್ನು ಬಹಿರಂಗಪಡಿಸಿದ್ದಾರೆ. ಇವೆಲ್ಲವೂ ಒಂದೇ ರೀತಿಯ ದುರುದ್ದೇಶಪೂರಿತ ಕೋಡ್ ಅನ್ನು ಶೇರ್‌ ಮಾಡಿಕೊಳ್ಳುತ್ತವಂತೆ. ಈ ಆಪ್‌ಗಳು ಮೆಸೇಜಿಂಗ್ ಟೂಲ್‌ಗಳಂತೆ ಮಾಸ್ಕ್ವೆರೇಡ್ ಮಾಡುತ್ತವೆ. ಆದರೆ, ಬಳಕೆದಾರರಿಗೆ ತಿಳಿಯದಂತೆ ಈ ಆಪ್‌ಗಳು ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತವೆ.

ಈ 12 ಡೇಂಜರ್‌ ಆಪ್‌ಗಳು ನಿಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿವೆಯಂತೆ..

ಈ ಆಪ್‌ಗಳ ಮೂಲಕ ಸಂಪರ್ಕಗಳು, ಫೈಲ್‌ಗಳು, ಕರೆ ದಾಖಲೆಗಳು ಮತ್ತು ಎಸ್‌ಎಮ್‌ಎಸ್‌ಗಳನ್ನು (Contacts, files, call logs and SMS) ಕದಿಯಬಹುದಾಗಿದ್ದು, ಇದರೊಂದಿಗೆ ಕೆಲವು ವಾಟ್ಸಾಪ್‌ ಮತ್ತು ಸಿಗ್ನಲ್ ಮೆಸೆಜ್‌ಗಳನ್ನೂ ಸಹ ಹೊರತೆಗೆಯಬಹುದು, ಫೋನ್ ಕರೆಗಳನ್ನು ರೆಕಾರ್ಡ್ ಮಾಡಬಹುದು ಮತ್ತು ಕ್ಯಾಮೆರಾದೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಬಹುದು ಎಂದು ಎಚ್ಚರಿಸಲಾಗಿದೆ.

ಇವುಗಳಲ್ಲಿ 12 ಆಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿದ್ದರೆ(Google Play Store), ಇತರವು ಥರ್ಡ್‌ ಪಾರ್ಟಿ ಆಪ್‌ಗಳಾಗಿವೆ. ಗೂಗಲ್‌ ಎಲ್ಲಾ ಆಪ್‌ಗಳನ್ನು ಈಗಾಗಲೇ ತೆಗೆದುಹಾಕಿದ್ದರೂ, ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದರೆ, ಅವರು ಅವುಗಳನ್ನು ನೀವು ಅನ್‌ಇನ್‌ಸ್ಟಾಲ್‌ ಮಾಡಬೇಕಾದ ಅಗತ್ಯ ಈಗ ಇದೆ. ಹಾಗಿದ್ರೆ ಬನ್ನಿ ಯಾವೆಲ್ಲಾ ಆಪ್‌ಗಳು ಅನ್ನೋದನ್ನು ಈ ಲಿಸ್ಟ್‌ನಲ್ಲಿ ನೋಡೋಣ.

ಈ 12 ಡೇಂಜರ್‌ ಆಪ್‌ಗಳು ನಿಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿವೆಯಂತೆ..

  • ಹಲೋ ಚಾಟ್
  • ಚಿಟ್ ಚಾಟ್
  • ಮೀಟ್‌ ಮಿ
  • ನಿಡಸ್
  • ರಫಾಕತ್ ನ್ಯೂಸ್
  • ಟಿಕ್ ಟಾಕ್(tik talk)
  • ವೇವ್ ಚಾಟ್
  • ಪ್ರೈವೇಟ್‌ ಟಾಕ್‌
  • ಗ್ಲೋ ಗ್ಲೋ
  • ಲೆಟ್ಸ್‌ ಚಾಟ್‌
  • ನಿಯೋನಿಯೋ
  • ಕ್ಯುಕ್‌ ಚಾಟ್
  • ಯೋಹೋ ಟಾಕ್
ಈ 12 ಡೇಂಜರ್‌ ಆಪ್‌ಗಳು ನಿಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿವೆಯಂತೆ..

ಥರ್ಡ್‌ಪಾರ್ಟಿ ಆಪ್‌ಗಳು

  • ಎಸ್ಸೆನ್ಶಿಯಲ್ ಹಾರ್ಸ್‌ಕೋಪ್‌ ಫಾರ್‌ ಆಂಡ್ರಾಯ್ಡ್‌
  • 3ಡಿ ಸ್ಕಿನ್ ಎಡಿಟರ್ ಫಾರ್‌ ಪಿಇ ಮೈಕ್‌ಕ್ರಾಫ್ಟ್‌
  • ಲೋಗೋ ಮೇಕರ್ ಪ್ರೊ
  • ಆಟೋ ಕ್ಲಿಕ್ ರಿಪೀಟರ್
  • ಕೌಂಟ್‌ ಈಸಿ ಕ್ಯಾಲೋರಿ ಕ್ಯಾಲ್ಕುಲೇಟರ್
  • ಸೌಂಡ್ ವಾಲ್ಯೂಮ್ ಎಕ್ಸ್‌ಟೆಂಡರ್
  • ಲೆಟರ್ ಲಿಂಕ್
  • ನ್ಯೂಮೆರೊಲೊಜಿ: ಪರ್ಸನಲ್‌ ಹಾರ್ಸ್‌ಕೋಪ್‌ ಆಂಡ್‌ ನಂಬರ್‌ ಪ್ರೆಡಿಕ್ಷನ್‌
  • ಸ್ಟೆಪ್‌ ಕೀಪರ್: ಈಸಿ ಪೆಡೋಮೀಟರ್
  • ಟ್ರ್ಯಾಕ್‌ ಯುವರ್ ಸ್ಲೀಪ್‌
  • ಸೌಂಡ್ ವಾಲ್ಯೂಮ್ ಬೂಸ್ಟರ್
  • ಅಸ್ಟ್ರಾಲಜಿಕಲ್ ನ್ಯಾವಿಗೇಟರ್: ಡೈಲಿ ಹಾರ್ಸ್‌ಕೋಪ್‌ ಆಂಡ್‌ ಟ್ಯಾರೋಟ್
  • ಯುನಿವರ್ಸಲ್ ಕ್ಯಾಲ್ಕುಲೇಟರ್
Best Mobiles in India

English summary
12 apps found to be spying in India and Pakistan If you have these apps on your phone, uninstall them now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+