Home
ಸುದ್ದಿಜಾಲ

ನೀವು Airtel ಅನ್ನು ಎರಡನೇ ಸಿಮ್‌ ಆಗಿ ಬಳಕೆ ಮಾಡ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ!

ಭಾರ್ತಿ ಏರ್‌ಟೆಲ್‌ (Airtel) ಟೆಲಿಕಾಂ ಮುಂಚೂಣಿಯ ಜಿಯೋ ಟೆಲಿಕಾಂಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದ್ದು, ಕೆಲವು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆ ಸಹ ನೀಡಿದೆ. ಇನ್ನು ಸಂಸ್ಥೆಯ ಬಹುತೇಕ ಪ್ಲ್ಯಾನ್‌ಗಳು ಅನಿಯಮಿತ ವಾಯಿಸ್ ಕರೆ, ದೈನಂದಿನ ಡೇಟಾ ಸೌಲಭ್ಯ ಹೊಂದಿವೆ. ಅಲ್ಲದೇ ಏರ್‌ಟೆಲ್‌ ತನ್ನ ಚಂದಾದಾರರಿಗಾಗಿ ಗ್ರಾಹಕ ಸ್ನೇಹಿ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಆ ಪೈಕಿ ಏರ್‌ಟೆಲ್‌ ಟೆಲಿಕಾಂನ 489ರೂ. ಹಾಗೂ 509ರೂ. ರೀಚಾರ್ಜ್‌ ಪ್ಲ್ಯಾನ್‌ಗಳು ಗಮನ ಸೆಳೆದಿವೆ.

ಹೌದು, ಏರ್‌ಟೆಲ್‌ ಸಂಸ್ಥೆಯ 489ರೂ. ಹಾಗೂ 509ರೂ. ರೀಚಾರ್ಜ್‌ ಪ್ಲ್ಯಾನ್‌ಗಳು ಕ್ರಮವಾಗಿ 77 ಹಾಗೂ 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದ್ದು, ಗ್ರಾಹಕರ ಗಮನ ಸೆಳೆದಿದೆ. ಈ ಎರಡು ಪ್ರೀಪೇಯ್ಡ್‌ ಯೋಜನೆಗಳು ಕಡಿಮೆ ಬೆಲೆಯಲ್ಲಿ ದೀರ್ಘ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಬೊಂಬಾಟ್‌ ಎನಿಸಿವೆ. ಅದಾಗ್ಯೂ ಈ ಯೋಜನೆಗಳಲ್ಲಿ ಡೇಟಾ ಪ್ರಯೋಜನ, ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಕೂಡಾ ಪಡೆದಿದೆ. ಹಾಗಾದರೆ ಏರ್‌ಟೆಲ್‌ ಟೆಲಿಕಾಂನ 489ರೂ. ಹಾಗೂ 509ರೂ. ರೀಚಾರ್ಜ್‌ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

Airtel ಅನ್ನು ಎರಡನೇ ಸಿಮ್‌ ಆಗಿ ಬಳಕೆ ಮಾಡ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ

ಏರ್‌ಟೆಲ್‌ 489ರೂ. ರೀಚಾರ್ಜ್‌ ಯೋಜನೆ

ಏರ್‌ಟೆಲ್‌ ಸಂಸ್ಥೆಯ ಈ 489ರೂ. ರೀಚಾರ್ಜ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿ ಸಿಗಲಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 6GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿಗೆ ಒಟ್ಟು 600 ಎಸ್‌ಎಮ್‌ಎಸ್‌ ಪ್ರಯೋಜನದ ಸೌಲಭ್ಯ ಕೂಡಾ ದೊರೆಯುತ್ತದೆ. ಅಲ್ಲದೇ ಈ ರೀಚಾರ್ಜ್‌ ಪ್ಲ್ಯಾನಿನಲ್ಲಿ ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ.

ಇನ್ನು ಏರ್‌ಟೆಲ್‌ನ ಈ ಪ್ರೀಪೇಯ್ಡ್‌ ಯೋಜನೆಯಲ್ಲಿ ಒಟ್ಟು 6GB ಡೇಟಾ ಸೌಲಭ್ಯ ಇದ್ದು, ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ. ಹಾಗೆಯೇ ಒಟ್ಟು 600 ಎಸ್‌ಎಮ್‌ಎಸ್‌ ಲಭ್ಯ ಇದ್ದು, ಯಾವುದೇ ದೈನಂದಿನ ಮಿತಿ ನೀಡಿಲ್ಲ. ಇದರ ಜೊತೆಗೆ ಏರ್‌ಟೆಲ್‌ ಸಂಸ್ಥೆಯ ಆಪ್‌ಗಳ ಸೇವೆ ಸಹ ಸಿಗಲಿವೆ.

ಏರ್‌ಟೆಲ್‌ 509ರೂ. ರೀಚಾರ್ಜ್‌ ಯೋಜನೆ

ಏರ್‌ಟೆಲ್‌ ಸಂಸ್ಥೆಯ ಈ 509ರೂ. ರೀಚಾರ್ಜ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಸಿಗಲಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 6GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರ ಜೊತೆಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಪ್ರಯೋಜನದ ಸೌಲಭ್ಯ ಕೂಡಾ ದೊರೆಯುತ್ತದೆ. ಅಲ್ಲದೇ ಈ ರೀಚಾರ್ಜ್‌ ಪ್ಲ್ಯಾನಿನಲ್ಲಿ ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ.

ಅಂದಹಾಗೆ ಏರ್‌ಟೆಲ್‌ನ ಈ ಪ್ರೀಪೇಯ್ಡ್‌ ಯೋಜನೆಯಲ್ಲಿ ಸಹ ಒಟ್ಟು 6GB ಡೇಟಾ ಸೌಲಭ್ಯ ಇದ್ದು, ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ. ಆದರೆ ನಿತ್ಯ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಪ್ಲಸ್‌ ಪಾಯಿಂಟ್‌ ಎನಿಸಿದೆ. ಇದರ ಜೊತೆಗೆ ಫ್ರೀ ಹೆಲೋ ಟ್ಯೂನ್ಸ್‌, ಅಲ್ಲದೇ ಏರ್‌ಟೆಲ್‌ ಎಕ್ಸ್‌ಟ್ರೀಮ್‌ ಆಪ್‌ ಮೂಲಕ ಉಚಿತ ಟಿವಿ ಶೋ, ಸಿನಿಮಾ ವೀಕ್ಷಣೆ ಅವಕಾಶ ಸಿಗಲಿದೆ.

ಏರ್‌ಟೆಲ್‌ 219ರೂ. ರೀಚಾರ್ಜ್‌ ಯೋಜನೆ

ಏರ್‌ಟೆಲ್‌ ಸಂಸ್ಥೆಯ ಈ 219ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನಿನಲ್ಲಿ ಚಂದಾದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿ ಲಭ್ಯ ಆಗಲಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿಗೆ ಒಟ್ಟು 300 ಎಸ್‌ಎಮ್‌ಎಸ್‌ ಪ್ರಯೋಜನದ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಇದರೊಂದಿಗೆ ಈ ರೀಚಾರ್ಜ್‌ ಪ್ಲ್ಯಾನಿನಲ್ಲಿ ಸಹ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ.

Best Mobiles in India

English summary
These 3 Airtel Recharge plans offer Attractive benefits. Know Data, Validity and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+