ಈ ಆಪಲ್ ಸ್ಮಾರ್ಟ್ ಡಿವೈಸ್ ಬಳಕೆ ಮಾಡುವವರಿಗೆ ಬೇಸರದ ವಿಷಯ ಇದು ; ಯಾಕೆ ಗೊತ್ತಾ!?
ಆಪಲ್ ಡಿವೈಸ್‌ಗಳು ಉತ್ತಮ ಕಾರ್ಯಕ್ಷಮತೆ ಹಾಗೂ ದಕ್ಷ ಬಾಳಿಕೆ ಹೊಂದಿರುವುದರಿಂದ ಇವುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇದರ ನಡುವೆ ಆಪಲ್ ತನ್ನ ಐಫೋನ್‌ಗಳಲ್ಲಿ ಆಗಾಗ್ಗೆ ಭದ್ರತಾ ವಿಚಾರಕ್ಕೆ ಸಂಬಂಧಿಸಿದ ಕೆಲವು ನವೀಕರಣಗಳನ್ನು ನೀಡುತ್ತಿದೆ. ಆದರೆ, ಇನ್ಮುಂದೆ ಈ ಆಪಲ್‌ಫೋನ್ ಹೊಂದಿರುವವರು ಆಪಲ್‌ನ ಹೊಸ ಫೀಚರ್ಸ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಹೌದು, ಆಪಲ್‌ನ ಇತ್ತೀಚಿನ ಓಎಸ್ ಆಗಿರುವ ಐಓಎಸ್ 17 ಆವೃತ್ತಿ ಬಿಡುಗಡೆ ಮಾಡಲಾಗುತ್ತಿದ್ದು, ಇದರಿಂದ ಐಫೋನ್ ಹೊಂದಿರುವವರು ಬಹಳಷ್ಟು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಆದರೆ, ಆಪಲ್‌ನ 3 ಐಫೋನ್‌ಗಳು ಸೇರಿದಂತೆ ಒಟ್ಟು 6 ಆಪಲ್ ಡಿವೈಸ್‌ಗಳಲ್ಲಿ ಐಒಎಸ್‌ನ ಹೊಸ ಆವೃತ್ತಿಯನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಹಾಗಿದ್ರೆ, ಯಾವೆಲ್ಲಾ ಆಪಲ್ ಫೋನ್‌ಗಳಿಗೆ ಈ ಸೇವೆ ಲಭ್ಯ ಇರುವುದಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಯಾವೆಲ್ಲಾ ಡಿವೈಸ್‌ಗಳಿಗೆ ಈ ಸೇವೆ ಇಲ್ಲ: ಐಫೋನ್ 8, ಐಫೋನ್ 8 ಪ್ಲಸ್ ಹಾಗೂ ಐಫೋನ್ X ಐಓಎಸ್ 17 ನವೀಕರಣವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಮೊದಲ ತಲೆಮಾರಿನ ಐಪ್ಯಾಡ್ ಪ್ರೊ (9.7 ಇಂಚಿನ ಮಾಡೆಲ್) ಹಾಗೂ ಐಪ್ಯಾಡ್ ಪ್ರೊ (12.9 ಇಂಚಿನ ಮಾಡೆಲ್) ಮತ್ತು ಐದನೇ ತಲೆಮಾರಿನ ಐಪ್ಯಾಡ್‌ಈ ಹೊಸ ಓಎಸ್ ಅನ್ನು ಸ್ವೀಕರಿಸದಿರಬಹುದು ಎಂದು ಹೇಳಲಾಗುತ್ತಿದೆ.
ಈ ಡಿವೈಸ್‌ಗಳಿಗೆ ಓಎಸ್ ನವೀಕರಣ ಯಾಕಿಲ್ಲ?: ಈ 3 ಐಫೋನ್‌ಗಳು ಮತ್ತು 3 ಐಪ್ಯಾಡ್‌ಗಳು ಈ ಹೊಸ ಸಾಫ್ಟ್‌ವೇರ್ ನವೀಕರಣವನ್ನು ಕಳೆದುಕೊಳ್ಳಲು ಪ್ರಮುಖ ಕಾರಣ ಎಂದರೆ ಇವುಗಳಿಗೆ ವಯಸ್ಸಾಗಿದೆ. ಅಂದರೆ ಈ ಸ್ಮಾರ್ಟ್‌ಡಿವೈಸ್‌ಗಳು ತುಂಬಾ ಹಳೆಯ ಆವೃತ್ತಿಯ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿದ್ದು, ಇದರಿಂದ ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ಗೆ ಬೆಂಬಲವನ್ನು ಪಡೆಯುವುದಿಲ್ಲ.

ಹಾಗಿದ್ರೆ ಯಾವೆಲ್ಲಾ ಡಿವೈಸ್‌ಗಳು ಈ ಓಎಸ್ ಬೆಂಬಲಿಸಲಿವೆ?: ಐಓಎಸ್ 17 ಅಪ್‌ಡೇಟ್‌ಗೆ ಅರ್ಹವಾಗಿರುವ ಐಫೋನ್‌ಗಳೆಂದರೆ, ಐಫೋನ್ XS, ಐಫೋನ್ XS ಮ್ಯಾಕ್ಸ್, ಐಫೋನ್ XR, ಐಫೋನ್ 11, ಐಫೋನ್ 11ಪ್ರೊ ಸರಣಿ, ಐಫೋನ್ 12ಸರಣಿ, ಐಫೋನ್ 12ಪ್ರೊ ಸರಣಿ, ಐಫೋನ್ 13ಸರಣಿ, ಐಫೋನ್ 14ಸರಣಿಯ ವೇರಿಯಂಟ್‌ನಲ್ಲಿ ಇದು ಲಭ್ಯ ಇರಲಿದೆ. ಹೀಗಾಗಿ ಈ ಎಲ್ಲಾ ಫೋನ್‌ಗಳು ಇನ್ಮುಂದೆ ಇನ್ನಷ್ಟು ಭದ್ರತೆ ಇರುವ ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡಲಿವೆ.
ಇದರೊಂದಿಗೆ ಐಓಎಸ್ 17 ಆವೃತ್ತಿಯಲ್ಲಿ ಕೆಲವು ಉಪಯುಕ್ತ ಹೊಸ ಫೀಚರ್ಸ್‌ಗಳು ಇರಲಿದ್ದು, ಅದರಲ್ಲಿ ಪ್ರಮುಖವಾಗಿ ಸ್ಥಿರತೆ ಮತ್ತು ಕಾರ್ಯಕ್ಷಮತೆಯ ಮೇಲೆ ಹೆಚ್ಚು ಗಮನಹರಿಸಲಾಗಿದೆ ಎಂದು ಹೇಳಲಾಗುತ್ತದೆ. ಅದಾಗ್ಯೂ ಏನೆಲ್ಲಾ ವಿಶೇಷ ಫೀಚರ್ಸ್‌ಗಳು ಇದರಲ್ಲಿ ಇರಲಿವೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಮುಂದಿನ ವಾರದೊಳಗೆ ಈ ಮಾಹಿತಿ ಬಹಿರಂಗ ಆಗಬಹುದು.

ಇನ್ನು ಆಪಲ್ ತನ್ನ ಇತ್ತೀಚಿನ ಐಓಎಸ್ 17 ಸಾಫ್ಟ್‌ವೇರ್ ಆವೃತ್ತಿಯನ್ನು ತನ್ನ ಮುಂಬರುವ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) ನಲ್ಲಿ ಪರಿಚಯಿಸಲಿದೆ. ಇದು ಜೂನ್ 5 ರಂದು ನಡೆಯಲಿದ್ದು, ಇದಾದ ನಂತರ ಆಪಲ್ ಫೋನ್‌ಗಳು ಹೊಸ ರೀತಿಯಲ್ಲಿ ಇನ್ನಷ್ಟು ಹೊಸ ಅನುಭವವನ್ನು ನೀಡಲಿವೆ.


Click it and Unblock the Notifications








