ಏರ್‌ಟೆಲ್‌ನ ಈ 4 ಪ್ಲ್ಯಾನ್‌ಗಳಲ್ಲಿ ಡೇಟಾ ಹೊರತಾಗಿ ವಿಶೇಷ ಪ್ರಯೋಜಗಳು ಲಭ್ಯ!
ದೇಶದ ಟೆಲಿಕಾಂ ವಲಯದಲ್ಲಿ ಏರ್‌ಟೆಲ್ ಸಂಸ್ಥೆಯು ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹಲವು ವಿಶಿಷ್ಟ ಕೊಡುಗೆಗಳನ್ನು ನೀಡಿದೆ. ಪ್ರಿಪೇಯ್ಡ್ ಯೋಜನೆಯೊಂದಿಗೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಒದಗಿಸುತ್ತಿರುವ ಏಕೈಕ ಟೆಲಿಕಾಂ ಆಪರೇಟರ್ ಆಗಿ ಏರ್‌ಟೆಲ್ ಗುರುತಿಸಿಕೊಂಡಿದೆ. ಹಾಗೆಯೇ ತನ್ನ ಕೆಲವು ಪ್ರೀಪೇಯ್ಡ್ ಯೋಜನೆಗಳೊಂದಿಗೆ ಉಚಿತ ಜೀವ ವಿಮಾ ಸೌಲಭ್ಯವನ್ನು ಏರ್‌ಟೆಲ್ ಒದಗಿಸುತ್ತಿದೆ. ಅದೇ ಹಾದಿಯಲ್ಲಿ ನಡೆದಿರುವ ಏರ್‌ಟೆಲ್ ಇದೀಗ ಮತ್ತೊಂದು ಕೊಡುಗೆ ತಿಳಿಸಿದೆ.

ಹೌದು, ಏರ್‌ಟೆಲ್ ಸಂಸ್ಥೆಯು ಕೆಲವು ವಿಶೇಷ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಹೊಂದಿದೆ. ಈ ಪ್ಲ್ಯಾನ್‌ಗಳಲ್ಲಿ ಉಚಿತ ಕರೆ ಹಾಗೂ ಡೇಟಾ ಪ್ರಯೋಜನಗಳಷ್ಟೇ ಅಲ್ಲದೇ ಮತ್ತಷ್ಟು ಆಕರ್ಷಕ ಕೊಡುಗೆಗಳು ಲಭ್ಯ ಇವೆ. ಹೀಗೆ ವಿಶೇಷ ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಏರ್‌ಟೆಲ್ ಟೆಲಿಕಾಂ ಜಿಯೋ ಹಾಗೂ ವೊಡಾಫೋನ್ ಟೆಲಿಕಾಂಗಳಿಂಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಏರ್‌ಟೆಲ್ ಇಂತಹ ಕೆಲವು ವಿಶೇಷ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಏರ್‌ಟೆಲ್ 179ರೂ. ಪ್ಲ್ಯಾನ್
ಏರ್‌ಟೆಲ್‌ನ ನೂತನ 179ರೂ. ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಭಾರತದಾದ್ಯಂತ ಅನಿಯಮಿತ ಕರೆಗಳ ಸೌಲಭ್ಯ ಇದೆ. ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 300 ಎಸ್ಎಮ್ಎಸ್ ಹಾಗೂ 2GB ಡಾಟಾ 4G/3G/2G ಪ್ರಯೋಜನವನ್ನು ಒಳಗೊಂಡಿದೆ. ಈ ಪ್ರಯೋಜನಗಳೊಂದಿಗೆ ಭಾರ್ತಿ ಆಕ್ಸಾ ಲೈಫ್ ಇನ್ಶೂರೆನ್ಸ್‌ನಿಂದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಹ ಪಡೆದಿದೆ.

ಏರ್‌ಟೆಲ್‌ನ 349ರೂ. ಪ್ಲ್ಯಾನ್
ಏರ್‌ಟೆಲ್‌ನ 349ರೂ. ಪ್ರೀಪೇಡ್ ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ 129.ರೂ ಮೌಲ್ಯದ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ. ಅಮೆಜಾನ್ ಪ್ರೈಮ್ ಸದಸ್ಯತ್ವದ ಅವಧಿಯು ಒಂದು ತಿಂಗಳು ಆಗಿರುತ್ತದೆ. ಹಾಗೆಯೇ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್ ಪ್ರೀಮಿಯಂ ಸದಸ್ಯತ್ವ, ಉಚಿತ ಹೆಲೋಟೂನ್ಸ್, ವಿಂಕ್ ಮ್ಯೂಸಿಕ್ ಸದಸ್ಯತ್ವ, ಶಾ ಅಕಾಡೆಮಿ ಮೂಲಕ ಉಚಿತ ಆನ್‌ಲೈನ್ ಕೋರ್ಸ್‌ಗಳು, ಫಾಸ್ಟ್‌ಟ್ಯಾಗ್‌ನಲ್ಲಿ 150 ರೂ ಕ್ಯಾಶ್‌ಬ್ಯಾಕ್ ಮತ್ತು ನಿಮ್ಮ ಫೋನ್‌ಗಾಗಿ ಆಂಟಿ-ವೈರಸ್ ಸಾಫ್ಟ್‌ವೇರ್ ಪ್ರಯೋಜನಗಳು ಲಭ್ಯವಾಗಲಿವೆ.

ಏರ್‌ಟೆಲ್ 401ರೂ. ಪ್ಲ್ಯಾನ್
ಏರ್‌ಟೆಲ್‌ನ ಹೊಸ 401ರೂ. ಪ್ಲ್ಯಾನ್ ಪ್ರಿಪೇಯ್ಡ್ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ. ಶುಲ್ಕದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಆದರೆ ಈ ಪ್ಲ್ಯಾನಿನಲ್ಲಿ ಯಾವುದೇ ಉಚಿತ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಿರುವುದಿಲ್ಲ. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಅಥವಾ ರೀಚಾರ್ಜ್ ಮಾಡಿದ ನಂತರ ಗ್ರಾಹಕರ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಲಿಂಕ್ ಮೂಲಕ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವವನ್ನು ಸಕ್ರಿಯಗೊಳಿಸಬಹುದು.

ಏರ್‌ಟೆಲ್ 279ರೂ. ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 279ರೂ. ಪ್ಲ್ಯಾನ್ ಸಹ ಲೈಫ್ ಇನ್ಶೂರೆನ್ಸ್ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 6GB (4G/3G/2G ) ಡಾಟಾ ಹಾಗೂ 900 ಎಸ್‌ಎಮ್‌ಎಸ್‌ಗಳು ಸಿಗುತ್ತವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಈ ಎಲ್ಲ ಪ್ರಯೋಜನಗಳೊಂದಿಗೆ 4ಲಕ್ಷದ ಟರ್ಮ್ ಲೈಫ್ ಇನ್ಶೂರೆನ್ಸ್ ಸೌಲಭ್ಯ ಸಿಗಲಿದೆ.


Click it and Unblock the Notifications








