ಪದೇ ಪದೇ ಡೇಟಾ ಸಮಸ್ಯೆ ಬೇಡಾ ಅಂದ್ರೆ, ಜಿಯೋದ ಈ ಪ್ಲ್ಯಾನ್‌ಗಳು ಬೆಸ್ಟ್!
ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿರುವ ಜಿಯೋ, ಗ್ರಾಹಕರನ್ನು ಸೆಳೆಯಲು ಹಲವು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಆ ಪೈಕಿ ಕೆಲವು ಪ್ರೀಪೇಯ್ಡ್ ಯೋಜನಗಳು ಭರ್ಜರಿ ಪ್ರಯೋಜನಗಳನ್ನು ಪಡೆದಿದ್ದು, ಮುಖ್ಯವಾಗಿ ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಪ್ಲ್ಯಾನ್‌ಗಳು ಗ್ರಾಹಕರಿಗೆ ಅತ್ಯುತ್ತಮ ಎನಿಸಿವೆ. ಈ ನಿಟ್ಟಿನಲ್ಲಿ ಜಿಯೋ ಟೆಲಿಕಾಂನ ಕೆಲವು ಪ್ರೀಪೇಯ್ಡ್ ಪ್ಲ್ಯಾನ್ ಹೆಚ್ಚಿನ ಗಮನ ಸೆಳೆದಿದೆ.

ಹೌದು, ಜಿಯೋ ಟೆಲಿಕಾಂ ಭಿನ್ನ ಬೆಲೆಯಲ್ಲಿ ಅತ್ಯುತ್ತಮ ಪ್ರೀಪೇಯ್ಡ್ ಯೋಜನೆಗಳ ಆಯ್ಕೆ ಒಳಗೊಂಡಿದೆ. ಅವುಗಳಲ್ಲಿ 783ರೂ. 799ರೂ. 1066ರೂ ಮತ್ತು 1199ರೂ. ಪ್ರೀಪೇಯ್ಡ್ ಪ್ಲ್ಯಾನ್‌ಗಳು ಜನಪ್ರಿಯ ಯೋಜನೆ ಆಗಿ ಕಾಣಿಸಿಕೊಂಡಿದೆ. ಈ ಪ್ಲ್ಯಾನ್ ಅಧಿಕ ದೈನಂದಿನ ಡೇಟಾ, ವಾಯಿಸ್ ಕರೆ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಪ್ರಯೋಜನಗಳನ್ನು ಒಳಗೊಂಡಿದೆ. ಹೀಗಾಗಿ ಅಧಿಕ ದೈನಂದಿನ ಡೇಟಾ ಬಯಸೋ ಗ್ರಾಹಕರಿಗೆ ಈ ಪ್ರೀಪೇಯ್ಡ್ ಯೋಜನೆ ಹೆಚ್ಚು ಸೂಕ್ತ ಎನಿಸುತ್ತದೆ. ಹಾಗಾದರೇ ಜಿಯೋದ 783ರೂ. 799ರೂ. 1066ರೂ ಮತ್ತು 1199ರೂ. ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಲು ಉತ್ತಮವೇ?..ಮುಂದೆ ಓದಿರಿ.

ಜಿಯೋ 1199ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 1199 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ ಜೊತೆಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಸಿಗುತ್ತದೆ. ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಇತರೆ ಕೆಲವು ಜಿಯೋ ಆಪ್ಸ್‌ಗಳು ಲಭ್ಯ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ 252 GB ಡೇಟಾ ಪ್ರಯೋಜನ ಸಿಗುತ್ತದೆ.

ಜಿಯೋದ 1066ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 1066 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 173 GB ಡೇಟಾ ದೊರೆಯಲಿದೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯ ಸಹ ದೊರೆಯಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 5GB ಡೇಟಾ ಲಭ್ಯವಾಗಲಿದೆ.

ಜಿಯೋ 783ರೂ. ಪ್ರಿಪೇಯ್ಡ್ ಪ್ಲಾನ್ ಯೋಜನೆ
ಜಿಯೋ ಟೆಲಿಕಾಂನ 783 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ 126 GB ಡೇಟಾ ಪ್ರಯೋಜನ ಸಿಗುತ್ತದೆ.

ಜಿಯೋದ 799ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 799 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ 112 GB ಡೇಟಾ ಪ್ರಯೋಜನ ಸಿಗುತ್ತದೆ.


Click it and Unblock the Notifications








