Home
ಸುದ್ದಿಜಾಲ

ಅಗ್ಗದ ಬೆಲೆಯ ಈ 5 ಏರ್‌ಟೆಲ್‌ ಪ್ಲ್ಯಾನ್‌ಗಳಲ್ಲಿ ರೀಚಾರ್ಜ್‌ಗೆ ಯಾವುದು ಸೂಕ್ತ?

ಭಾರ್ತಿ ಏರ್‌ಟೆಲ್‌ ಟೆಲಿಕಾಂ, ಜಿಯೋ ಟೆಲಿಕಾಂ ಅನ್ನು ಹಿಂದಿಕ್ಕೂವ ಪೈಪೋಟಿ ನಡೆಸಿದೆ. ಏರ್‌ಟೆಲ್‌ ಟೆಲಿಕಾಂನ ಹಲವು ಪ್ರೀಪೇಯ್ಡ್‌ ಯೋಜನೆಗಳು ಡೇಟಾ, ವಾಯಿಸ್ ಕರೆ ಹಾಗೂ ವ್ಯಾಲಿಡಿಟಿ ಸೌಲಭ್ಯಗಳನ್ನು ಪಡೆದಿದೆ. ಹಾಗೆಯೇ ಏರ್‌ಟೆಲ್ ಟೆಲಿಕಾಂ ತನ್ನ ಗ್ರಾಹಕರಿಗೆ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆಯನ್ನು ಒದಗಿಸಿದೆ. ಆ ಪೈಕಿ ಅಗ್ಗದ ಬೆಲೆಯ ಯೋಜನೆಗಳು ಅನೇಕ ಚಂದಾದಾರಿಗೆ ಹೆಚ್ಚು ಪ್ರಯೋಜನಕಾರಿ ಎನಿಸಿವೆ.

ಹಾಗೆಯೇ

ಹೌದು, ಏರ್‌ಟೆಲ್‌ ಟೆಲಿಕಾಂ ಅಗ್ಗದ ಪ್ರೈಸ್‌ಟ್ಯಾಗ್‌ನಿಂದ ದುಬಾರಿ ಬೆಲೆಯಲ್ಲಿ ಹಲವು ಭಿನ್ನ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿದೆ. ಅವುಗಳಲ್ಲಿ ಕೆಲವು ಅಲ್ಪಾವಧಿಯ ಯೋಜನೆಗಳಾಗಿದ್ದು, ಇನ್ನು ಕೆಲವು ದೀರ್ಘಾವಧಿಯ ವ್ಯಾಲಿಡಿಟಿ ಪ್ರಯೋಜನದ ಪ್ಲ್ಯಾನ್‌ಗಳಾಗಿವೆ. ಹಾಗೆಯೇ ಕೆಲವು ಬಜೆಟ್‌ ದರದ ಏರ್‌ಟೆಲ್‌ ಯೋಜನೆಗಳು ವಾಯಿಸ್‌ ಕರೆ ಹಾಗೂ ಡೈಲಿ ಡೇಟಾ ಪ್ರಯೋಜನಗಳ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿವೆ. ಹಾಗಾದರೇ ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಏರ್‌ಟೆಲ್‌ನ ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಪ್ರಯೋಜನಗಳ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಏರ್‌ಟೆಲ್‌ 199ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 199ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ನ 199ರೂ. ಪ್ರಿಪೇಯ್ಡ್ ಯೋಜನೆಯು ಸಹ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1GB ಡೇಟಾ, 100 ಎಸ್‌ಎಂಎಸ್ ಮತ್ತು ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಲಭ್ಯವಾಗಲಿದೆ. ಆದರೆ ಈ ಯೋಜನೆಯು ಇದೀಗ ಪರಿಷ್ಕರಣೆ ಆಗಿದ್ದು, ಕೆಲವು ಚಂದಾದಾರರಿಗೆ ಈ ಯೋಜನೆಯಲ್ಲಿ 1.5GB ಡೇಟಾ ಪ್ರಯೋಜನದ ಆಯ್ಕೆ ಇದೆ.

ಏರ್‌ಟೆಲ್‌ 219ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 219ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ನ 219ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ವೆಂಕ್ ಮ್ಯೂಸಿಕ್ ಹಾಗೂ ಹೆಲೊ ಟ್ಯೂನ್ ಸೇವೆ ಲಭ್ಯ.

ಏರ್‌ಟೆಲ್‌ 249ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 249ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ನ 249ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಸಹ ಸಿಗಲಿದೆ.

ಏರ್‌ಟೆಲ್‌ 289ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 289ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ನ 289ರೂ. ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪ್ರತಿದಿನ 1.5GB ಡೇಟಾ ಪ್ರಯೋಜನ ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ, ನ್ಯಾಶನಲ್, ಲೋಕಲ್ ಕರೆಗಳ ಸೌಲಭ್ಯ ಲಭ್ಯ. ಹಾಗೂ ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯವಾಗುವುದು. ಇದರೊಂದಿಗೆ zee 5 ಚಂದಾದಾರಿಕೆ ಸೌಲಭ್ಯವು ಸಹ ದೊರೆಯುವುದು.

ಏರ್‌ಟೆಲ್ 298ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್ 298ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ನ 298ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ಏರ್‌ಟೆಲ್‌ 598ರೂ. ಪ್ರೀಪೇಯ್ಡ್ ಯೋಜನೆ ಸೌಲಭ್ಯಗಳು

ಏರ್‌ಟೆಲ್‌ 598ರೂ. ಪ್ರೀಪೇಯ್ಡ್ ಯೋಜನೆ ಸೌಲಭ್ಯಗಳು

ಏರ್‌ಟೆಲ್‌ ಟೆಲಿಕಾಂನ 598ರೂ. ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ ಹಾಗೂ ರೋಮಿಂಗ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರೀ ಹೆಲೋ ಟ್ಯೂನ್‌ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.

ಏರ್‌ಟೆಲ್‌ 698ರೂ ಪ್ರೀಪೇಯ್ಡ್ ಯೋಜನೆ ಸೌಲಭ್ಯಗಳು

ಏರ್‌ಟೆಲ್‌ 698ರೂ ಪ್ರೀಪೇಯ್ಡ್ ಯೋಜನೆ ಸೌಲಭ್ಯಗಳು

ಏರ್‌ಟೆಲ್‌ ಟೆಲಿಕಾಂನ 698ರೂ ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಜೊತೆಗೆ ಈ ಪ್ಲ್ಯಾನ್‌ Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ. ಅದೇ ರೀತಿ ಏರ್‌ಟೆಲ್‌ ಟೆಲಿಕಾಂನ ಇತರೆ ಆಕರ್ಷಕ ಯೋಜನೆಗಳ ಬಗ್ಗೆ ಮುಂದೆ ಮಾಹಿತಿ ನೀಡಲಾಗಿದೆ.

Best Mobiles in India

English summary
These 5 Budget Price Airtel Plans Offer Data, Validity And Voice Call Benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+