ವಾಟ್ಸಾಪ್‌ನ ಈ 5 ಉಪಯುಕ್ತ ಫೀಚರ್ಸ್‌ಗಳು 'ಸಿಗ್ನಲ್‌' ಆಪ್‌ನಲ್ಲಿ ಸಿಗಲ್ಲ!

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಆಪ್ ಆಗಿದೆ. ಹಲವು ಉಪಯುಕ್ತ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಆಪ್ತವಾಗಿದ್ದ ವಾಟ್ಸಾಪ್‌ ಇತ್ತೀಚಿಗಷ್ಟೆ ಹೊಸ ರೂಲ್ಸ್‌ಗಳನ್ನು ಕಡ್ಡಾಯವಾಗಿ ಸ್ವೀಕರಿಸುವಂತೆ ತಿಳಿಸಿ ಇದೀಗ ತನ್ನ ಡಿಮ್ಯಾಂಡ್‌ ಕಡಿಮೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ವಾಟ್ಸಾಪ್‌ಗೆ ಪರ್ಯಾಯವಾಗ ಉತ್ತಮ ಮೆಸೆಜಿಂಗ್ ಆಪ್‌ಗಳತ್ತ ಬಳಕೆದಾರರು ಮುಖ ಮಾಡಿದ್ದು, ಆ ಪೈಕಿ ಸದ್ಯ ಸಿಗ್ನಲ್‌ ಆಪ್‌ ಮುನ್ನಲೆಗೆ ಬಂದಿದೆ.

ವಾಟ್ಸಾಪ್

ಹೌದು, ವಾಟ್ಸಾಪ್ ಹೊಸ ನೀತಿಯಿಂದಾಗಿ ಇದ್ದಕ್ಕಿದ್ದಂತೆ ಅನೇಕ ಬಳಕೆದಾರರನ್ನು ಬದಲಿ ಆಪ್‌ಗಳತ್ತ ಹೊರಳಿದ್ದು, ಹೀಗಾಗಿ ಸಿಗ್ನಲ್ ಅಪ್ಲಿಕೇಶನ್‌ ಹಠಾತ್ ಜನಪ್ರಿಯತೆಗೆ ಕಾರಣವಾಗಿದೆ. ಇನ್ನು ಈ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ ನಲ್ಲಿ ಗೌಪ್ಯತೆ ಕೇಂದ್ರೀಕೃತವೆಂದು ಕಂಪನಿ ಹೇಳಿಕೊಂಡಿದೆ. ಆದಾಗ್ಯೂ, ಸಿಗ್ನಲ್ ಹಾಗೂ ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ಗಳನ್ನು ಹೋಲಿಸಿ ನೋಡಿದಾಗ ವಾಟ್ಸಾಪ್‌ನಲ್ಲಿ ಲಭ್ಯವಿರುವ ಕೆಲವು ಆಕರ್ಷಕ ಫೀಚರ್ಸ್‌ಗಳು ಸಿಗ್ನಲ್‌ನಲ್ಲಿ ಇಲ್ಲ. ಹಾಗಾದರೇ ಆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಕಸ್ಟಮ್‌ ವಾಲ್‌ಪೇಪರ್‌

ಕಸ್ಟಮ್‌ ವಾಲ್‌ಪೇಪರ್‌

ವಾಟ್ಸಾಪ್‌ ಇತ್ತೀಚಿಗಷ್ಟೆ ಕಸ್ಟಮ್‌ ವಾಟ್ಸಾಪ್‌ ವಾಲ್‌ಪೇಪರ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಬಳಕೆದಾರರಿಗೆ ಪ್ರಮುಖ ಚಾಟ್‌ಗಳು ಅಥವಾ ನೆಚ್ಚಿನ ಸಂಪರ್ಕಗಳಿಗಾಗಿ ಕಸ್ಟಮ್ ವಾಲ್‌ಪೇಪರ್ ಬಳಸುವ ಮೂಲಕ ಚಾಟ್‌ಗಳನ್ನು ವೈಯಕ್ತಿಕ ಮತ್ತು ಪ್ರತ್ಯೇಕಿಸಲು ಅನುಮತಿಸುತ್ತದೆ.

ವಾಟ್ಸಾಪ್ ಪೇಮೆಂಟ್

ವಾಟ್ಸಾಪ್ ಪೇಮೆಂಟ್

ಇತ್ತೀಚಿಗಷ್ಟೆ ವಾಟ್ಸಾಪ್ ತನ್ನ ಬಹುನಿರೀಕ್ಷಿತ ವಾಟ್ಸಾಪ್‌ ಪೇ ಸೇವೆಯನ್ನು ಪರಿಚಯಿಸಿದೆ. ಈ ಆಯ್ಕೆ ಮೂಲಕ ಬಳಕೆದಾರರು ಚಾಟ್‌ ಮಾಡುವ ಜೊತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ ಹಾಗೂ ಹಣ ಸ್ವೀಕರಿಸಬಹುದಾಗಿದೆ. ಬಳಕೆದಾರರು ವಾಟ್ಸಾಪ್ನಲ್ಲಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಬ್ಯಾಂಕ್ ಖಾತೆಯನ್ನು ಸೇರಿಸಬಹುದು.

ಗ್ರೂಪ್‌ ಕಾಲಿಂಗ್ ಫೀಚರ್

ಗ್ರೂಪ್‌ ಕಾಲಿಂಗ್ ಫೀಚರ್

ವಾಟ್ಸಾಪ್ ತನ್ನ ಬಳಕೆದಾರರಿಗೆ ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಜನರ ಜೊತೆ ಸಂವಹನ ನಡೆಸಲು ಗ್ರೂಪ್‌ ಕಾಲಿಂಗ್ ಫೀಚರ್ ಅನುಮತಿಸುತ್ತದೆ. ಆದ್ರೆ ಗ್ರೂಪ್‌ ಕಾಲಿಂಗ್ ಫೀಚರ್ ಸಿಗ್ನಲ್‌ನಲ್ಲಿ ಇನ್ನೂ ಲಭ್ಯವಿಲ್ಲ. ಆದರೆ ಸದ್ಯ ಸಿಗ್ನಲ್ ಬೀಟಾ ಆವೃತ್ತಿಯಲ್ಲಿ ಪರೀಕ್ಷೆಯ ಹಂತದಲ್ಲಿದೆ.

ಲೈವ್‌ ಲೊಕೇಶನ್ ಶೇರ್‌

ಲೈವ್‌ ಲೊಕೇಶನ್ ಶೇರ್‌

ವಾಟ್ಸಾಪ್‌ನಲ್ಲಿನ ಈ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ನೈಜ ಸಮಯದ ಸ್ಥಳವನ್ನು ನಿರ್ದಿಷ್ಟ ಸಮಯದವರೆಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇನ್ನು ಸಿಗ್ನಲ್ ಅಪ್ಲಿಕೇಶನ್ ನಲ್ಲಿ ಬಳಕೆದಾರರು ಲೊಕೇಶನ್ ಶೇರ್ ಮಾಡಬಹುದಾಗಿದೆ. ಆದರೆ ಲೈವ್ ಲೊಕೇಶನ್ ಶೇರ್ ಮಾಡಲು ಅನುಮತಿಸುವುದಿಲ್ಲ.

QR ಕೋಡ್‌ ಶೇರ್

QR ಕೋಡ್‌ ಶೇರ್

ವಾಟ್ಸಾಪ್‌ನ ಈ ಫೀಚರ್‌ ಬಳಕೆದಾರರ ವೈಯಕ್ತಿಕ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸಂಪರ್ಕವನ್ನು ಸೇರಿಸಲು ಬಳಕೆದಾರರನ್ನು ಅನುಮತಿಸುತ್ತದೆ. ಈ QR ಕೋಡ್‌ಗಳು ಬಳಕೆದಾರರ ಹೆಸರಿನ ಪಕ್ಕದಲ್ಲಿ ವಾಟ್ಸಾಪ್‌ನಲ್ಲಿನ ಸೆಟ್ಟಿಂಗ್‌ಗಳ ಅಡಿಯಲ್ಲಿ ಗೋಚರಿಸುತ್ತವೆ.

Most Read Articles
Best Mobiles in India

English summary
Here are some extra features across all Two platforms. Here we look at WhatsApp features that are missing in Signal.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X