ಯೂಟ್ಯೂಬ್‌ನ ಈ ಅಚ್ಚರಿಯ ಫೀಚರ್ಸ್‌ಗಳ ಬಗ್ಗೆ ನಿಮಗೆ ಗೊತ್ತಾ?
ಗೂಗಲ್ ಒಡೆತನದ ಯೂಟ್ಯೂಬ್ ಈಗಾಗಲೇ ವಿಶ್ವದಾದ್ಯಂತ ಜನಪ್ರಿಯಗಳಿಸಿರುವ ವಿಡಿಯೊ ಪ್ಲಾಟ್‌ಫಾರ್ಮ್ ಆಗಿದೆ. ಲಾಕ್‌ಡೌನ್ ಅವಧಿಯಲ್ಲಿಯೂ ಸಹ ಯೂಟ್ಯೂಬ್ ವೀಕ್ಷಣೆ ಅಧಿಕವಾಗಿದೆ. ಮ್ಯೂಸಿಕ್ ಮತ್ತು ವಿಡಿಯೋ ಎರಡನ್ನು ಒಳಗೊಂಡಿರುವ ಯೂಟ್ಯೂಬ್ ಬಳಕೆದಾರರಿಗೆ ನೆಚ್ಚಿನ ಮನರಂಜನೆಯ ತಾಣವಾಗಿದೆ. ಹಾಗೆಯೇ ಯೂಟ್ಯೂಬ್‌ನಲ್ಲಿ ಎಲ್ಲ ವಿಷಯಗಳ ಮಾಹಿತಿಯ ವಿಡಿಯೊಗಳು ಸಹ ಲಭ್ಯ ಇರುವುದು ಮತ್ತೊಂದು ಆಕರ್ಷಣೆ ಆಗಿದೆ. ಜೊತೆಗೆ ಕೆಲವು ಉಪಯುಕ್ತ ಫೀಚರ್ಸ್‌ಗಳ ಅಡಕವಾಗಿವೆ.

ಹೌದು, ಯೂಟ್ಯೂಬ್ ತನ್ನ ಬಳಕೆದಾರರಿಗೆ ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇತ್ತೀಚಿಗೆ ಡಾರ್ಕ್‌ಮೋಡ್ ಸೌಲಭ್ಯ ಸಹ ನೀಡಿದ್ದು, ವಿಡಿಯೊ ವೀಕ್ಷಣೆಗೆ ಹಲವು ಕೆಟಗೇರಿ ನೀಡಿದೆ. ಬಳಕೆದಾರರು ತಮ್ಮ ಚಾನೆಲ್ ಮೂಲಕ ವಿಡಿಯೊ ಅಪ್‌ಲೋಡ್ ಸಹ ಮಾಡುವ ಅವಕಾಶ ಒದಗಿಸಿದೆ. ಸುರಕ್ಷತೆಯ ದೃಷ್ಠಿಯಿಂದಯೂ ಕೆಲವು ಫೀಚರ್ಸ್‌ಗಳನ್ನು ನೀಡಿದೆ. ಇವುಗಳೊಂದಿಗೆ ಇನ್ನು ಕೆಲವು ಫೀಚರ್ಸ್‌ಗಳು ಹೆಚ್ಚು ಅನುಕೂಲ ನೀಡುತ್ತವೆ. ಆ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

Incognito ಮೋಡ್
ಯೂಟ್ಯೂಬ್‌ನಲ್ಲಿ ಕೀ ವರ್ಡ್ ಎಂಟ್ರಿ ಮಾಡಿ ಸರ್ಚ್ ಮಾಡುವಾಗ ಎಂಟ್ರಿ ಮಾಡಿರುವ ಕೀ ವರ್ಡ್ / ಹುಡುಕಾಡಿದ ಪದಗಳು ಮತ್ತೆ ಕಾಣಿಸಬಾರದು ಎಂದು ನೀವು ಬಯಸದಿದ್ದರೆ ಅದಕ್ಕೆ ಈ ಆಯ್ಕೆ ಪೂರಕವಾಗಿದೆ. ಈ ಆಯ್ಕೆ ಬಳಸಿ ಗೌಪ್ಯ ಸರ್ಚ್ ಮಾಡಬಹುದಾಗಿದೆ. ಪ್ರೊಫೈಲ್ ಫೋಟೊ ಕ್ಲಿಕ್ ಮಾಡಿ ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ incognito mode ಆಯ್ಕೆ ಮಾಡಿಕೊಳ್ಳಿರಿ.

ಡೇಟಾ ಬಳಕೆ ಮಿತಿಗೊಳಿಸಿ
ಯೂಟ್ಯೂಬ್ ವಿಡಿಯೊಗಳನ್ನು ನೋಡುತ್ತಿದ್ದರೇ ಬಹುಬೇಗನೆ ಡೇಟಾ ಖಾಲಿಯಾಗುತ್ತದೆ ಎನ್ನುವವರು ಇದ್ದಾರೆ. ಹೀಗೆ ಮೊಬೈಲ್‌ನಲ್ಲಿ ಯೂಟ್ಯೂಬ್ ವಿಡಿಯೊ ವೀಕ್ಷಿಸುವಾಗ ಬಳಕೆ ಮಿತಿಗೊಳಿಸುವ ಆಯ್ಕೆಯನ್ನು ಬಳಸಬಹುದಾಗಿದೆ. ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡುವುದು> ಸೆಟ್ಟಿಂಗ್‌ಗಳು> ಸಾಮಾನ್ಯ> ಮೊಬೈಲ್ ಡೇಟಾ ಬಳಕೆಯನ್ನು ಮಿತಿಗೊಳಿಸಿ. ಇದು Wi-Fi ಗೆ ಸಂಪರ್ಕಗೊಂಡಾಗ ಮಾತ್ರ HD ವೀಡಿಯೊವನ್ನು ಸ್ಟ್ರೀಮ್ ಮಾಡುತ್ತದೆ.

ಡಬಲ್-ಟ್ಯಾಪ್ ಟೈಮರ್
ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಿಸುವಾಗ ವಿಡಿಯೊ ಫಾರ್ವರ್ಡ್ ಮಾಡಲು/ಮುಂದಕ್ಕೆ ಹೋಗಲು ಈ ಆಯ್ಕೆ ಬಳಕೆ ಮಾಡಬಹುದಾಗಿದೆ. ಬಳಕೆದಾರರು 10 ಸೆಕೆಂಡುಗಳವರೆಗೆ ಫಾರ್ವರ್ಡ್ ಅಥವಾ ಬ್ಯಾಕ್‌ವರ್ಡ್ ಮಾಡಬಹುದಾಗಿದೆ. ಎರಡು ಬಾರಿ ಟ್ಯಾಪ್ ಮಾಡಬೇಕಿರುತ್ತದೆ. ಈ ಆಯ್ಕೆಯನ್ನು ಬೇಕಿದ್ದರೇ 5, 15, 20, 30 ಅಥವಾ 60 ಸೆಕೆಂಡುಗಳಿಗೆ ಬದಲಾಯಿಸಬಹುದು.

ವಿಡಿಯೊ ಲಿಂಕ್ ಶೇರ್
ಯೂಟ್ಯೂಬ್‌ನಲ್ಲಿನ ವಿಡಿಯೊ ಲಿಂಕ್‌ಗಳನ್ನು ಬಳಕೆದಾರರು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರಿಗೆ ಶೇರ್ ಮಾಡುವ ಆಯ್ಕೆ ಇದೆ. ಹಾಗೆಯೇ ವಿಡಿಯೊದಲ್ಲಿ ನಿರ್ದಿಷ್ಟ ಭಾಗವನ್ನು ವೀಕ್ಷಿಸಲು ಅನುವು ಮಾಡಲು URLನಲ್ಲಿ ಸೆಟ್ ಮಾಡಬಹುದಾದ ಆಯ್ಕೆ ಇದೆ. ಉದಾಹರಣೆ: URL ಕೊನೆಯಲ್ಲಿ t = 1m45s (ವಿಡಿಯೊದ ನಿರ್ದಿಷ್ಟ ಭಾಗದ ಸಮಯ/ಸೆಕೆಂಡ) ನಮೂದಿಸುವುದು.

ಹಿಸ್ಟರಿ ಕ್ಲಿಯರ್ ಮಾಡಿ
ಯೂಟ್ಯೂಬ್ ಸರ್ಚ್‌ನಲ್ಲಿ ಏನೇ ಹುಡುಕಿದರೂ, ಅದು ಬೇರೊಬ್ಬರು ಸೋಡಿದಾಗ ಕಾಣದಂತೆ ಇಡಲು ಆಗಾಗಾ ಹಿಸ್ಟರಿ ಕ್ಲಿಯರ್ ಮಾಡುತ್ತಿರಿ. ಹಿಸ್ಟರಿ ಕ್ಲಿಯರ್ ಮಾಡಲು ಸರಳ ಆಯ್ಕೆಗಳು ಇವೆ. ಪ್ರೊಫೈಲ್ ಚಿತ್ರ> ಸೆಟ್ಟಿಂಗ್‌ಗಳು> ಇತಿಹಾಸ ಮತ್ತು ಗೌಪ್ಯತೆ> ಮತ್ತು ವಾಚ್ ಹಿಸ್ಟರಿ ಕ್ಲಿಯರ್ ನ್ಯಾವಿಗೇಟ್ ಮಾಡುವ ಮೂಲಕ ಹುಡುಕಾಟ ಹಿಸ್ಟರಿ ಅಳಿಸಬಹುದು.


Click it and Unblock the Notifications








