Home
ಸುದ್ದಿಜಾಲ

ಹೊಸ 5G ಫೋನ್‌ ಖರೀದಿಸಬೇಕೆ? 15,000ರೂ.ಒಳಗೆ ಲಭ್ಯ ಈ ಟಾಪ್ ಸ್ಮಾರ್ಟ್‌ಫೋನ್‌ಗಳು!

ಸ್ಮಾರ್ಟ್‌ಫೋನ್‌ಗಳು ಇಂದು ಕೈಗೆಟಕುವ ಬೆಲೆಯಿಂದ ದುಬಾರಿ ಬೆಲೆಯಲ್ಲೂ ಲಭ್ಯ ಇವೆ. ಅದಾಗ್ಯೂ ಈಗ 5G ಬಹಳ ಸದ್ದು ಮಾಡುತ್ತಿದ್ದು, ಬಹುಪಾಲು ಮಂದಿ ಇನ್ನೂ ಸಹ 5G ಗೆ ಅಪ್‌ಗ್ರೇಡ್‌ ಆಗಿಲ್ಲ. ಇದಕ್ಕೆ ಹಣಕಾಸಿನ ಸಮಸ್ಯೆ ಸೇರಿದಂತೆ ಅನೇಕ ಕಾರಣಗಳು ಇರಬಹುದು. ಆದರೆ, ನೀವು ಈ ಪ್ರಮುಖ ಕಂಪೆನಿಯ 5G ಫೋನ್‌ಗಳನ್ನು 15,000 ರೂ.ಒಳಗೆ ಖರೀದಿ ಮಾಡಬಹುದು.

ಹೌದು, 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್ ಖರೀದಿ ಮಾಡಲು ನೀವು ದೊಡ್ಡ ಮೊತ್ತವನ್ನು ವ್ಯಯಿಸಬೇಕಾಗಿಲ್ಲ. 15,000ರೂ.ಗಳಿಗಿಂತ ಕಡಿಮೆ ಬೆಲೆಯ ಹಲವಾರು 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳು ಕಳೆದ ಆರು ತಿಂಗಳಲ್ಲಿ ಲಾಂಚ್‌ ಆಗಿವೆ. ಇವುಗಳಲ್ಲಿ ಸ್ಯಾಮ್‌ಸಂಗ್‌, ಶಿಯೋಮಿ, ಐಕ್ಯೂ ಮತ್ತು ಹೆಚ್ಚಿನ ಬ್ರ್ಯಾಂಡ್‌ಗಳ ಫೋನ್‌ಗಳು ಸೇರಿವೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೋನ್‌ಗಳು ಈ ಬೆಲೆಯಲ್ಲಿ ಲಭ್ಯ ಇವೆ?, ಪ್ರಮುಖ ಫೀಚರ್ಸ್‌ ಏನು ಎಂಬ ಬಗ್ಗೆ ಮಾಹಿತಿ ತಿಳಿಯೋಣ.

ಹೊಸ 5G ಫೋನ್‌ ಖರೀದಿಸಬೇಕೆ? 15,000ರೂ.ಒಳಗೆ ಲಭ್ಯ ಈ ಟಾಪ್ ಸ್ಮಾರ್ಟ್‌ಫೋನ್‌ಗಳು!

ರೆಡ್ಮಿ 12 5G : ಈ ಸ್ಮಾರ್ಟ್‌ಫೋನ್ 14,999 ರೂ.ಗಳ ಬೆಲೆ ಹೊಂದಿದ್ದು, 6.79 ಇಂಚಿನ FHD+ LCD ಡಿಸ್‌ಪ್ಲೇ ಆಯ್ಕೆಯೊಂದಿಗೆ 90Hz ರಿಫ್ರೆಶ್ ರೇಟ್‌ ಮತ್ತು 550 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಜೊತೆಗೆ ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಈ ಫೋನ್ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ಗೆ ಬೆಂಬಲಿತವಾಗಿದೆ ಮತ್ತು 50MP ರಿಯರ್ ಕ್ಯಾಮೆರಾ ಸೇರಿದಂತೆ ಡ್ಯುಯಲ್ ಕ್ಯಾಮೆರಾ ಆಯ್ಕೆ ಇರುವ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಪೊಕೊ M6 ಪ್ರೊ 5G: ಈ ಸ್ಮಾರ್ಟ್‌ಫೋನ್‌ ನಿಮಗೆ ಕೇವಲ 10,999 ರೂಗಳಲ್ಲಿ ಲಭ್ಯವಿದೆ. ಇದನ್ನು ಕೆಲವು ದಿನಗಳ ಹಿಂದಷ್ಟೇ ಲಾಂಚ್‌ ಮಾಡಲಾಗಿದೆ. ಈ ಫೋನ್ 6.79 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, ಇತ್ತೀಚಿನ ಸ್ನಾಪ್‌ಡ್ರಾಗನ್ 4 ಜನ್ 2 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಉಳಿದಂತೆ 50MP ರಿಯರ್ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F23 5G: ಈ ಸ್ಮಾರ್ಟ್‌ಫೋನ್‌ ನಿಮಗೆ 14,449 ರೂ.ಗಳಲ್ಲಿ ಲಭ್ಯವಿದೆ ಇದು 120Hz ರಿಫ್ರೆಶ್ ರೇಟ್‌ನೊಂದಿಗೆ TFT ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಸ್ನಾಪ್‌ಡ್ರಾಗನ್ 750G ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ 50MP ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F14 5G: ಈ ಫೋನ್ 13,990ರೂ. ಗಳಲ್ಲಿ ಲಭ್ಯವಿದೆ. ಇದು 6.6 ಇಂಚಿನ FHD+ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಎಕ್ಸಿನೋಸ್ 1330 ಚಿಪ್ಸೆಟ್ನಿಂದ ಕಾರ್ಯನಿರ್ವಹಿಸಲಿದೆ. ಉಳಿದಂತೆ 50MP ರಿಯರ್ ಪ್ರಮುಖ ಕ್ಯಾಮೆರಾ ಮತ್ತು 13MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, 6000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಈ ಫೋನ್‌ ಖರೀದಿಯೊಂದಿಗೆ 4 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ 2 ವರ್ಷಗಳ ಓಎಸ್‌ ನವೀಕರಣ ಸಿಗಲಿದೆ.

ಪೊಕೊ X5 5G : ಈ ಮತ್ತೊಂದು ಪೊಕೊ ಫೋನ್‌ 14,999 ರೂ.ಗಳಲ್ಲಿ ಲಭ್ಯವಿದೆ. 6.67 ಇಂಚಿನ FHD+ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಸ್ನಾಪ್‌ಡ್ರಾಗನ್ 695 5G-ಸಕ್ರಿಯಗೊಳಿಸಿದ ಚಿಪ್‌ಸೆಟ್ ಅನ್ನು ಹೊಂದಿದೆ. ಹಾಗೆಯೇ 48 MPನ ಪ್ರಮುಖ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಇದ್ದು, 13MP ಸೆಲ್ಫಿ ಕ್ಯಾಮೆರಾ ಆಯ್ಕೆ ಈ ಫೋನ್‌ಗೆ ಮತ್ತಷ್ಟು ಮೆರಗು ನೀಡಿದೆ. ಉಳಿದಂತೆ 5000mAh ಸಾಮರ್ಥ್ಯ ಬ್ಯಾಟರಿ ಹೊಂದಿದೆ.

ಹೊಸ 5G ಫೋನ್‌ ಖರೀದಿಸಬೇಕೆ? 15,000ರೂ.ಒಳಗೆ ಲಭ್ಯ ಈ ಟಾಪ್ ಸ್ಮಾರ್ಟ್‌ಫೋನ್‌ಗಳು!

ರೆಡ್ಮಿ 11 ಪ್ರೈಮ್‌ 5G: ಈ ಫೋನ್‌ ನಿಮಗೆ 12,999 ರೂ.ಗಳಲ್ಲಿ ಲಭ್ಯವಿದೆ. 6.58 ಇಂಚಿನ FHD+ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 700 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 50MP ಪ್ರಮುಖ ಕ್ಯಾಮೆರಾದೊಂದಿಗೆ ಡ್ಯುಯಲ್‌ ರಿಯರ್ ಕ್ಯಾಮೆರಾ ರಚನೆ ಪಡೆದಿರುವ ಈ ಫೋನ್‌ 8MP ಸೆಲ್ಫಿ ಕ್ಯಾಮೆರಾದ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ಆಂಡ್ರಾಯ್ಡ್ 12 ಆಧಾರಿತ MIUI 13 ಅನ್ನು ರನ್ ಮಾಡುತ್ತದೆ.

Best Mobiles in India

English summary
You don't have to spend a more money to buy a 5G enabled smartphone. Several 5G enabled smartphones under Rs 15,000 have been launched in the last six months. These include phones from brands like Samsung, Xiaomi and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+