ವಿಶ್ವ ಟೆಕ್ ಕ್ಷೇತ್ರವನ್ನು ಆಳುತ್ತಿರುವ ಭಾರತೀಯ ಅಧಿಕಾರಿಗಳು!

|

ಮೈಕ್ರೋಸಾಫ್ಟ್, ಐಬಿಎಂ, ಅಡೋಬ್ ಮತ್ತು ಗೂಗಲ್ ನಂತಹ ಟೆಕ್ ದೈತ್ಯ ಕಂಪನಿಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಆದರೆ ಆ ದೈತ್ಯ ಟೆಕ್ ಕಂಪನಿಗಳ ಪ್ರಮುಖ ಹುದ್ದೆಗಳನ್ನು ಭಾರತೀಯ ಮೂಲದ ಹಲವಾರು ಟೆಕ್ ಕಾರ್ಯನಿರ್ವಾಹಕರು ಹೊಂದಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ.

ಮೈಕ್ರೋಸಾಫ್ಟ್‌

ಗೂಗಲ್, ಮೈಕ್ರೋಸಾಫ್ಟ್‌, ಅಡೊಬ್ ಸೇರಿದಂತೆ ದೊಡ್ಡ ಕಂಪನಿಗಳು ಸ್ಮಾರ್ಟ್‌ಫೋನ್‌, ತಂತ್ರಜ್ಞಾನ ವಲಯದಲ್ಲಿ ದೊಡ್ಡಣ್ಣ ಅನಿಸಿಕೊಂಡಿವೆ. ಹಾಗೆಯೇ ಫೇಸ್‌ಬುಕ್, ಟ್ವಿಟ್ಟರ್ ಈ ಸೋಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್ಗಳು ಸದ್ಯ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಅಚ್ಚರಿಯ ಸಂಗತಿಯೆಂದರೇ ಈ ಎಲ್ಲ ಟೆಕ್‌ ಕಂಪನಿಗಳ ಭಾರತೀಯರ ಕೊಡುಗೆ ಇರುವುದು ಹೆಮ್ಮೆಯ ಸಂಗತಿ ಆಗಿದೆ. ವಿಶ್ವ ಟೆಕ್ ಕ್ಷೇತ್ರದಲ್ಲಿರುವ ಪ್ರಮುಖ ಭಾರತೀಯರ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಸುಂದರ್ ಪಿಚೈ (Sundar Pichai)

ಸುಂದರ್ ಪಿಚೈ (Sundar Pichai)

ಆಲ್ಫಾಬೆಟ್ ಮತ್ತು ಗೂಗಲ್ ದೈತ್ಯ ಕಂಪನಿಯ ಸಿಇಒ ತಮಿಳುನಾಡಿನ ಸುಂದರ್ ಪಿಚ್ಚೈ. 1972 ಜುಲೈ 12 ರಂದು ಚೆನ್ನೈನಲ್ಲಿ ಜನಿಸಿದ ಪಿಚ್ಚೈ ಆಗಸ್ಟ್ 10, 2015ರಲ್ಲಿ ಗೂಗಲ್ ಸಿಇಒ ಆಗಿ ನೇಮಕಗೊಂಡರು. IIT ಕಾನ್ಪುರದಲ್ಲಿ B.Tech ಪದವಿ ಪಡೆದಿರುವ ಇವರು, ಸ್ಟಾನ್ ಪೋರ್ಡ್ ವಿಶ್ವವಿದ್ಯಾಲಯದಲ್ಲಿ MS, ವಾರ್ಟಾನ್ ವಿಶ್ವವಿದ್ಯಾಲಯದಲ್ಲಿ MBA ಪದವಿ ಪಡೆದಿದ್ದಾರೆ.

ಸತ್ಯ ನಡೆಲ್ಲಾ ​(Satya Nadella)

ಸತ್ಯ ನಡೆಲ್ಲಾ ​(Satya Nadella)

ಪ್ರಸ್ತುತ ದೈತ್ಯ ಟೆಕ್ ಸಂಸ್ಥೆ ಆಗಿರುವ ಮೈಕ್ರೋಸಾಫ್ಟ್‌ನ CEO ಆಗಿ ಕಾರ್ಯನಿರ್ವಹಿಸುತ್ತಿರುವ ಸತ್ಯ ನಡೆಲ್ಲಾ ಅವರು ಹುಟ್ಟಿ ಬೆಳೆದಿದ್ದು, ಹೈದ್ರಾಬಾದ್‌ನಲ್ಲಿ. 52 ವರ್ಷ ವಯಸ್ಸಿನ ಇವರು 1992ರಿಂದ ಮೈಕ್ರೋಸಾಫ್ಟ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 2014ರಿಂದ ಸಂಸ್ಥೆಯ CEO ಆಗಿ ನೇಮಕವಾಗಿದ್ದಾರೆ. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯಲ್ಲಿ BE ಶಿಕ್ಷಣವನ್ನು ಮುಗಿಸಿದ್ದಾರೆ. University of Wisconsin-Milwaukee ನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ MS ಪದವಿ, University of Chicago ದಿಂದ MBA ಪದವಿ ಪಡೆದಿದ್ದಾರೆ.

ಶಾಂತನು ನಾರಾಯಣ (​Shantanu Narayen)

ಶಾಂತನು ನಾರಾಯಣ (​Shantanu Narayen)

ಶಾಂತನು ನಾರಾಯಣ ಅವರು ಮೂಲತ ಹೈದ್ರಾಬಾದ್‌ನವರಾಗಿದ್ದು, ಸದ್ಯ ಇವರು ಅಮೆರಿಕಾದ ಪ್ರತಿಷ್ಠಿತ ಅಡೊಬ್ ಸಾಫ್ಟ್‌ವೇರ್ ಸಂಸ್ಥೆಯ CEO ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಪಲ್‌ ಸಂಸ್ಥೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಇವರು 1998ರಲ್ಲಿ ಅಡೊಬ್ ಸಂಸ್ಥೆ ಸೇರಿಕೊಂಡರು. 2007ರಿಂದ ಸಂಸ್ಥೆಯ ಸಿಒಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾಲಿಫೊರ್ನಿಯದಲ್ಲಿ MBA ಯನ್ನು ಪೂರೈಸಿದ್ದಾರೆ.

ಅರವಿಂದ ಕೃಷ್ಣ (Arvind Krishna)

ಅರವಿಂದ ಕೃಷ್ಣ (Arvind Krishna)

ಕಾನ್ಪುರದ ಐಐಟಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರ್, ಅರವಿಂದ ಕೃಷ್ಣ ಅವರು ಏಪ್ರಿಲ್ 2020 ರಲ್ಲಿ ಐಬಿಎಂನ ಸಿಇಒ ಆದರು. ಅವರು ಸುಮಾರು 30 ವರ್ಷಗಳ ಕಾಲ ಐಬಿಎಂನಲ್ಲಿದ್ದರು. ಇವರು ಕಂಪನಿಯೊಂದಿಗೆ ಹಲವಾರು ಹಿರಿಯ ಮಟ್ಟದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕೃಷ್ಣ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ಅರ್ಬಾನಾ-ಚಾಂಪೇನ್‌ನಲ್ಲಿ ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.

ರೇವತಿ ಅದ್ವೈತಿ (Revathi Advaithi)

ರೇವತಿ ಅದ್ವೈತಿ (Revathi Advaithi)

ರೇವತಿ ಅದ್ವೈತಿ ಫ್ಲೆಕ್ಸ್ ಲಿಮಿಟೆಡ್ ನ ಸಿಇಒ ಆಗಿದ್ದು, ಅಮೆರಿಕದ ಸಿಂಗಾಪುರದ ನಿವಾಸಿ ಬಹುರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಗುತ್ತಿಗೆ ತಯಾರಕರು. ಅದ್ವೈತಿಯನ್ನು 2019 ರಲ್ಲಿ ಫ್ಲೆಕ್ಸ್ ನ ಸಿಇಒ ಎಂದು ಹೆಸರಿಸಲಾಯಿತು. ಈ ಹಿಂದೆ ಅವರು ಈಟನ್ ನ ಎಲೆಕ್ಟ್ರಿಕಲ್ ಸೆಕ್ಟರ್ ವ್ಯವಹಾರದ ಅಧ್ಯಕ್ಷರಾಗಿ ಮತ್ತು ಸಿಒಒ ಆಗಿ ಸೇವೆ ಸಲ್ಲಿಸಿದ್ದಾರೆ. 2019. ಅವರು ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಪಿಲಾನಿ ಮತ್ತು ಥಂಡರ್ ಬರ್ಡ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದರು.

ನಿಕೇಶ್ ಅರೋರಾ (Nikesh Arora)

ನಿಕೇಶ್ ಅರೋರಾ (Nikesh Arora)

ನಿಕೇಶ್ ಅರೋರಾ 2018 ರಲ್ಲಿ ಸಿಇಒ ಆಗಿ ಪಾಲೊ ಆಲ್ಟೊ ನೆಟ್ವರ್ಕ್ಸ್ ಸೇರಿಕೊಂಡರು. ಇದಕ್ಕೂ ಮೊದಲು ಅವರು ಗೂಗಲ್ ಮತ್ತು ಸಾಫ್ಟ್ ಬ್ಯಾಂಕ್ ನಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ಅರೋರಾ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿ, ಈಶಾನ್ಯ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಬೋಸ್ಟನ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಜಯಶ್ರೀ ಉಲ್ಲಾಳ್ (​Jayashree Ullal)

ಜಯಶ್ರೀ ಉಲ್ಲಾಳ್ (​Jayashree Ullal)

ಜಯಶ್ರೀ ಉಲ್ಲಾಳ್ ಅವರು ಯುಎಸ್‌ಎ ನಲ್ಲಿರುವ ಪ್ರತಿಷ್ಠಿತ ಕಂಪ್ಯೂಟರ್ ನೆಟವರ್ಕ ಸಂಸ್ಥೆಯಾದ 'ಅರಿಷ್ಟಾ ನೆಟವರ್ಕ (Arista Network)'ನ ಅಧ್ಯಕ್ಷೆ ಮತ್ತು ಸಿಒಓ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಯಶ್ರೀ ಅವರು ತಮ್ಮ ವೃತ್ತಿ ಜೀವನವನ್ನು AMD ಸಂಸ್ಥೆಯಲ್ಲಿ ಆರಂಭಿಸಿದ್ದರು. ಫೋರ್ಬ್ಸ್ ಮ್ಯಾಗಜೀನ್ ಗುರುತಿಸುವ ವಿಶ್ವದ ಪ್ರಭಾವಿ ಗಣ್ಯವ್ಯಕ್ತಿಗಳ ಟಾಪ್ 5ರ ಪಟ್ಟಿಯಲ್ಲಿ ಇವರು ಒಬ್ಬರಾಗಿದ್ದಾರೆ.

ಪರಾಗ್ ಅಗರ್ವಾಲ್ (Parag Agrawal)

ಪರಾಗ್ ಅಗರ್ವಾಲ್ (Parag Agrawal)

ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿರುವ ಪರಾಗ್ ಅಗರ್ವಾಲ್ ಅವರು ಸದ್ಯ ಟ್ವಿಟ್ಟರ್ ತಾಂತ್ರಿಕ ಅಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Best Mobiles in India

English summary
These 8 Indian Origin Top Executives That Are Ruling World Tech Industry.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X